ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕದಲ್ಲಿ ಐಐಎಸ್‌ಸಿ ಬೆಂಗಳೂರು ಭಾರತದಲ್ಲೇ ನಂ.1 ವಿಶ್ವ ವಿದ್ಯಾಲಯ

ನವದೆಹಲಿ: ಗುರುವಾರ ಬಿಡುಗಡೆಯಾದ ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕಗಳು 2023 ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು ಭಾರತದಲ್ಲೇ ನಂಬರ್‌ 1 ಎಂದು ರ್ಯಾಂಕ್‌ ಪಡೆದಿದ್ದು, ಜಾಗತಿಕವಾಗಿ 155ನೇ ರ್ಯಾಂಕ್‌ ಪಡೆದಿದೆ., ಇದು ಎಲ್ಲಾ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿಗಳು) ತಮ್ಮ ಸ್ಥಿತಿಯನ್ನು ಸುಧಾರಿಸಿದೆ ಎಂಬುದನ್ನು ತೋರಿಸುತ್ತದೆ. QS ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕಗಳ ಇತ್ತೀಚಿನ … Continued

ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳ: ಕರ್ನಾಟಕ ಸೇರಿ 4 ರಾಜ್ಯಗಳ ಮೇಲೆ ಕೇಂದ್ರದ ನಿಗಾ

ನವದೆಹಲಿ: ಕೊರೊನಾ ವೈರಸ್ ಸೋಂಕು ಪ್ರಕರಣಗಳು ದೇಶಾದ್ಯಂತ ದಿನೇ ದಿನೇ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಕರ್ನಾಟಕ, ಮಹಾರಾಷ್ಟ್ರ, ಕೇರಳ ಹಾಗೂ ದೆಹಲಿ ರಾಜ್ಯಗಳ ಮೇಲೆ ನಿಗಾ ವಹಿಸಿದೆ. ನಾಲ್ಕೂ ರಾಜ್ಯಗಳಲ್ಲಿ 5 ಹಂತದ ಕೊರೊನಾ ವೈರಸ್ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ಹೆಚ್ಚಳ ಮಾಡುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳಿಗೆ ಸೂಚಿಸಿದೆ. … Continued

ಇರಾನ್ ವಿದೇಶಾಂಗ ಸಚಿವರೊಂದಿಗಿನ ಭೇಟಿಯಲ್ಲಿ ಪ್ರವಾದಿ ಹೇಳಿಕೆ ವಿಚಾರ ಪ್ರಸ್ತಾಪವಾಗಿಲ್ಲ: ಭಾರತ

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದುಲ್ಲಾಹಿಯಾನ್ ನಡುವಿನ ಭೇಟಿಯ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ ಕುರಿತು ಕೆಲವು ಬಿಜೆಪಿ ನಾಯಕರು ಮಾಡಿದ ವಿವಾದಾತ್ಮಕ ಹೇಳಿಕೆಗಳ ವಿಷಯವನ್ನು ಪ್ರಸ್ತಾಪಿಸಲಾಗಿಲ್ಲ ಎಂದು ಕೇಂದ್ರ ಹೇಳಿದೆ. ಆ ಸಂಭಾಷಣೆಯ ಸಮಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿಲ್ಲ ಎಂಬುದು ನನ್ನ ತಿಳಿವಳಿಕೆ, ”ಎಂದು ವಿದೇಶಾಂಗ … Continued

ಪ್ರವಾದಿ ವಿವಾದ: ಅಜಿತ್ ದೋವಲ್ ಜೊತೆಗಿನ ಸಭೆಯ ತನ್ನ ದೃಷ್ಟಿಕೋನದ ಹೇಳಿಕೆ ಅಳಿಸಿದ ಇರಾನ್‌ ವಿದೇಶಾಂಗ ಸಚಿವ

ನವದೆಹಲಿ: ಆಡಳಿತಾರೂಢ ಬಿಜೆಪಿಯ ಸದಸ್ಯರು ಪ್ರವಾದಿ ಮುಹಮ್ಮದ್ ಕುರಿತು ಮಾಡಿದ ವಿವಾದಾತ್ಮಕ ಕುರಿತು ಭಾರೀ ರಾಜತಾಂತ್ರಿಕ ಗದ್ದಲದ ಮಧ್ಯದಲ್ಲಿ, ಇರಾನ್ ತನ್ನ ವಿದೇಶಾಂಗ ಸಚಿವರು ದೆಹಲಿಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗಿನ ಭೇಟಿಯ ಹಿಂದಿನ ಪತ್ರಿಕಾ ಹೇಳಿಕೆಯನ್ನು ಬದಲಾಯಿಸಿದೆ. ಪ್ರವಾದಿ ವಿರುದ್ಧ ವಿವಾದಾತ್ಮಕ ಟೀಕೆಗಳನ್ನು ಮಾಡಿದವರಿಗೆ “ಪಾಠ ಕಲಿಸಲಾಗುವುದು” ಎಂದು ರಾಷ್ಟ್ರೀಯ … Continued

ಇವಿ ಚಾರ್ಜಿಂಗ್‌ – ಸ್ವ್ಯಾಪಿಂಗ್‌ ಮೂಲಸೌಕರ್ಯಕ್ಕಾಗಿ ಜಿಯೋ-ಬಿಪಿ ಜೊತೆಗೆ ಒಮ್ಯಾಕ್ಸ್‌ ಪಾಲುದಾರಿಕೆ

ನವದೆಹಲಿ/ಮುಂಬೈ: ಭಾರತದ ಪ್ರಮುಖ ರಿಯಲ್ ಎಸ್ಟೇಟ್‌ ಡೆವಲಪರ್‌ಗಳಾದ ಒಮ್ಯಾಕ್ಸ್‌ ಗುರುವಾರ ಜಿಯೋ-ಬಿಪಿ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಇದರ ಅಡಿಯಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಬ್ಯಾಟರಿ ಚಾರ್ಜಿಂಗ್‌ ವ್ಯವಸ್ಥೆಯನ್ನು ಸ್ಥಾಪಿಸಲಾಗುತ್ತದೆ. ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ, ಫರಿದಾಬಾದ್‌, ಘಾಜಿಯಾಬಾದ್, ನ್ಯೂ ಚಂಡೀಗಢ, ಲೂಧಿಯಾನ, ಪಟಿಯಾಲ, ಅಮೃತಸರ, ಜೈಪುರ, ಸೋನಿಪತ್ತ ಮತ್ತು ಬಹಾದುರ್‌ಗಢದಲ್ಲಿ ಹಂತ ಹಂತವಾಗಿ ಒಮ್ಯಾಕ್ಸ್‌ ಸ್ಥಳದಲ್ಲಿ ಇವಿ … Continued

ಕೊನೆಗೂ ತನ್ನನ್ನು ತಾನೇ ಮದುವೆ ಮಾಡಿಕೊಂಡ ಯುವತಿ ಕ್ಷಮಾ ಬಿಂದು…! ಇದು ಭಾರತದಲ್ಲಿ ಮೊದಲ ಪ್ರಕರಣ

ಗುಜರಾತ್ ವಡೋದ್ರಾ ಯುವತಿ ಕ್ಷಮಾ ಬಿಂದು ಎಂಬ ಯುವತಿಯ ಸ್ವಯಂ ವಿವಾಹ ಗುರುವಾರ ನಿರ್ವಿಘ್ನವಾಗಿ ನೆರವೇರಿದೆ. ಆ ಮೂಲಕ ಭಾರತದಲ್ಲಿ ಇದೇ ಮೊದಲ ಸಲ ತಮ್ಮನ್ನೇ ತಾವು ವಿವಾಹ ಮಾಡಿಕೊಂಡ ವಿದ್ಯಾಮಾನ ನಡೆದಂತಾಗಿದೆ. ಕಳೆದ ಕೆಲವು ದಿನಗಳ ಹಿಂದಷ್ಟೇ ತನ್ನನ್ನು ತಾನೇ ಸಂಪ್ರದಾಯಬದ್ಧವಾಗಿ ವಿವಾಹ ಮಾಡಿಕೊಳ್ಳುವುದಾಗಿ ಘೋಷಿಸಿದ ಕ್ಷಮಾ ಬಿಂದು ದೇಶಾದ್ಯಂತ ಸಂಚಲನ ಉಂಟು ಮಾಡಿದ್ದಳು. … Continued

ಇಂದು ಸಪ್ತಪದಿ ತುಳಿದ ಖ್ಯಾತ ನಟಿ ನಯನತಾರಾ-ವಿಘ್ನೇಶ್ ಶಿವನ್‌

ಚೆನ್ನೈ: ಕಾಲಿವುಡ್‌ ನಟಿ ನಯನತಾರಾ ತಮ್ಮ ಬಹುಕಾಲದ ಗೆಳೆಯ ಚಿತ್ರ ನಿರ್ಮಾಪಕ, ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗೆ ಇಂದು, ಗುರುವಾರ ಸಪ್ತಪದಿ ತುಳಿದಿದ್ದಾರೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ವಿವಾಹ ಮಹಾಬಲಿಪುರಂ ಖಾಸಗಿ ರೆಸಾರ್ಟ್‌ನಲ್ಲಿ ಅದ್ದೂರಿಯಾಗಿ ನಡೆದಿದ್ದು, ಮದುವೆ ಕಾರ್ಯಕ್ರಮಕ್ಕೆ ಸಿನಿಮಾರಂಗದ ಗಣ್ಯರು ಆಗಮಿಸಿ ವಧುವರರನ್ನು ಹರಸಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್, ಬಾಲಿವುಡ್ ಸ್ಟಾರ್ ಶಾರುಖ್ … Continued

ರಾಜ್ಯಸಭಾ ಚುನಾವಣೆ: ಮತ ಚಲಾಯಿಸಲು ನವಾಬ್ ಮಲಿಕ್, ಅನಿಲ್ ದೇಶಮುಖ್‌ ಮನವಿ ತಿರಸ್ಕರಿಸಿದ ಮುಂಬೈ ಕೋರ್ಟ್

ಮುಂಬೈ: ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಅನುಮತಿ ಕೋರಿ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಮತ್ತು ರಾಜ್ಯದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಸಲ್ಲಿಸಿದ್ದ ಅರ್ಜಿಯನ್ನು ಮುಂಬೈ ನ್ಯಾಯಾಲಯ ತಿರಸ್ಕರಿಸಿದೆ. ಕಳೆದ ವರ್ಷ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ದೇಶಮುಖ್ ಅವರನ್ನು ಬಂಧಿಸಲಾಗಿತ್ತು, ಪರಾರಿಯಾಗಿರುವ ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ … Continued

ನೂತನ ರಾಷ್ಟ್ರಪತಿ ಚುನಾವಣೆಗೆ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರ ಅಧಿಕಾರವಧಿ ಜುಲೈ 24ರಂದು ಅಂತ್ಯಗೊಳ್ಳಲಿದ್ದು ನೂತನ ರಾಷ್ಟ್ರಪತಿ ಆಯ್ಕೆಗೆ ಕೇಂದ್ರ ಚುನಾವಣಾ ಆಯೋಗ ಇಂದು, ಗುರುವಾರ ವೇಳಾಪಟ್ಟಿ ಪ್ರಕಟಿಸಿದೆ. ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಜುಲೈ 21ರಂದು ಮತಗಳ ಎಣಿಕೆ ನಡೆಯಲಿದೆ. ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವಕುಮಾರ್‌ ತಿಳಿಸಿದ್ದಾರೆ. ಸಂವಿಧಾನದ 62ನೇ ವಿಧಿ ಪ್ರಕಾರ, ಮುಂದಿನ … Continued

ಆಳವಾದ ಬೋರ್‌ವೆಲ್‌ನಲ್ಲಿ ಬಿದ್ದಿದ್ದ 2 ವರ್ಷದ ಮಗುವನ್ನು ರಕ್ಷಿಸಲು ಸಹಾಯ ಮಾಡಿದ ಸೇನೆ; ವೀಕ್ಷಿಸಿ

ಸುರೇಂದ್ರನಗರ (ಗುಜರಾತ್): ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯ ಜಮೀನಿನಲ್ಲಿ ಆಳವಾದ ಕೊಳವೆಬಾವಿಯಲ್ಲಿಎರಡು ವರ್ಷದ ಬಾಲಕ ಬಿದ್ದಿದ್ದು, ನಂತರ ಸೇನೆ, ಅಗ್ನಿಶಾಮಕ ದಳ, ಪೊಲೀಸರು ಮತ್ತು ಆರೋಗ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಆತನನ್ನು ರಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಬಾಲಕ ಶಿವಂ ಎಂದು ಗುರುತಿಸಲಾಗಿದೆ. ಆತನ ಪೋಷಕರು ಕೂಲಿ … Continued