ರೈಲ್ವೆ ನೇಮಕಾತಿ: ಮಾರ್ಚ್ ಒಳಗೆ 35,000 ಹುದ್ದೆಗಳಿಗೆ ನೇಮಕಾತಿ ಅಭಿಯಾನ ಪೂರ್ಣ

ನವದೆಹಲಿ: ಭಾರತೀಯ ರೈಲ್ವೆಯು 35,000 ಕ್ಕೂ ಹೆಚ್ಚು ಅರ್ಜಿದಾರರಿಗೆ ನೇಮಕಾತಿ ಪತ್ರಗಳನ್ನು ನೀಡುವ ಮೂಲಕ ಮಾರ್ಚ್ 2023 ರ ಅಂತ್ಯದ ವೇಳೆಗೆ ಸಾಮೂಹಿಕ ನೇಮಕಾತಿ ಅಭಿಯಾನವನ್ನು ಪೂರ್ಣಗೊಳಿಸಲು ಸಿದ್ಧವಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಮಾರ್ಚ್ 2023ರ ವೇಳೆಗೆ, ಭಾರತೀಯ ರೈಲ್ವೇಯು ಎಲ್ಲಾ 35,281 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ, ಈ ಎಲ್ಲಾ ನೇಮಕಾತಿಗಳು CEN … Continued

ಶ್ರದ್ಧಾ ಕೊಲೆ ಪ್ರಕರಣ: ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅಫ್ತಾಬ್ ಬ್ಯಾಗ್‌ನೊಂದಿಗೆ ಹೋಗುತ್ತಿರುವ ದೃಶ್ಯ ಸೆರೆ, ಶ್ರದ್ಧಾಳ ದೇಹದ ಭಾಗವಾಗಿರಬಹುದು ಎಂದು ಪೊಲೀಸರಿಗೆ ಶಂಕೆ

ನವದೆಹಲಿ: ಶ್ರದ್ಧಾ ವಾಲ್ಕರ್‌ ಅವರ ಕೊಲೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಕಳೆದ ತಿಂಗಳು ಮುಂಜಾನೆ ತನ್ನ ಮನೆಯ ಹೊರಗೆ ಬ್ಯಾಗ್ ಹಿಡಿದುಕೊಂಡು ಹೋಗುತ್ತಿದ್ದ ದೃಶ್ಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿರುವುದು ಹೊರಬಿದ್ದಿದೆ. ಈ ಬ್ಯಾಗ್‌ನಲ್ಲಿ ಈತ ಶ್ರದ್ಧಾಳ ತುಂಡರಿಸಿದ ದೇಹದ ಭಾಗಗಳನ್ನು ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ದೃಶ್ಯಾವಳಿಗಳನ್ನು ಪರಿಶೀಲಿಸಲು ಯತ್ನಿಸುತ್ತಿದ್ದಾರೆ. 26 ವರ್ಷದ ಮಹಿಳೆ … Continued

ಬೆನ್ನು ಹುರಿ ನೋವಿನ ಕಾರಣ ಜೈಲಿನಲ್ಲಿ ಸತ್ಯೇಂದ್ರ ಜೈನ್​ಗೆ ಮಸಾಜ್ ಮಾಡಲು ವೈದ್ಯರೇ ಹೇಳಿದ್ದರು; ವೈರಲ್ ವೀಡಿಯೊಕ್ಕೆ ಆಪ್‌ ಪಕ್ಷದ ನಾಯಕರ ಸಮರ್ಥನೆ

ನವದೆಹಲಿ: ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ (ಎಎಪಿ) ಅವರ ರಕ್ಷಣೆಗೆ ಮುಂದಾಗಿದೆ. ಸತ್ಯೇಂದ್ರ ಜೈನ್ ವಿರುದ್ಧದ ಆರೋಪಗಳನ್ನು ನಿರಾಕರಿಸಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ ಸಿಸೋಡಿಯಾ ಅವರು, ಸತ್ಯೇಂದ್ರ ಜೈನ್‌ ಅವರಿಗೆ ಪೆಟ್ಟಾಗಿದ್ದಕ್ಕೆ ಚಿಕಿತ್ಸೆ ನೀಡಿದ್ದರ ವೀಡಿಯೊ … Continued

ನೆಗೆಟಿವ್‌ ಟ್ವೀಟ್‌ಗಳನ್ನು ಡೀಬೂಸ್ಟ್ ಮಾಡ್ತೇವೆ, ಡಿಮಾನಿಟೈಸ್ ಮಾಡ್ತೇವೆ : ಹೊಸ ಟ್ವಿಟರ್ ನೀತಿ ಪ್ರಕಟಿಸಿದ ಎಲೋನ್ ಮಸ್ಕ್

ವಾಷಿಂಗ್ಟನ್ (ಅಮೆರಿಕ): ಎಲೋನ್ ಮಸ್ಕ್ ಟ್ವಿಟರ್‌ನ ನಿಯಂತ್ರಣವನ್ನು ತೆಗೆದುಕೊಂಡಾಗಿನಿಂದ, ಅವರು ಮೈಕ್ರೋಬ್ಲಾಗಿಂಗ್ ಸೈಟ್ ಅನ್ನು ನವೀಕರಿಸಲು ವಿಭಿನ್ನ ಆಯ್ಕೆಗಳನ್ನು ಪ್ರಯತ್ನಿಸುತ್ತಿದ್ದಾರೆ. ಶುಕ್ರವಾರ, ನವೆಂಬರ್ 18 ರಂದು, ಅವರು ಟ್ವಿಟರ್ ಡೀಬೂಸ್ಟ್ ಮಾಡುತ್ತದೆ, ಡಿಮಾನಿಟೈಸ್ ಮಾಡುತ್ತದೆ ಮತ್ತು ದ್ವೇಷದ ಭಾಷಣ ಅಥವಾ ನಕಾರಾತ್ಮಕ ವಿಷಯ ಹೊಂದಿರುವ ಟ್ವೀಟ್‌ಗಳನ್ನು ಪ್ರಚಾರ ಮಾಡುವುದಿಲ್ಲ ಎಂದು ಹೇಳುವ ಹೊಸ ನೀತಿ ಬಗ್ಗೆ … Continued

ತಿಹಾರ್ ಜೈಲಿನಲ್ಲಿ ಆಪ್ ಸಚಿವ ಸತ್ಯೇಂದ್ರ ಜೈನ್‌ಗೆ ವಿಐಪಿ ಟ್ರೀಟ್‌ಮೆಂಟ್‌ : ಜೈಲಿನೊಳಗೆ ಮಸಾಜ್‌ ಮಾಡಿಸಿಕೊಳ್ಳುತ್ತಿರುವ ವೀಡಿಯೊ ವೈರಲ್‌ : ವೀಕ್ಷಿಸಿ

ನವದೆಹಲಿ: ದೆಹಲಿ ಆಮ್ ಆದ್ಮಿ ಪಾರ್ಟಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ತಿಹಾರ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ಹಳೆಯ ವೀಡಿಯೊವೊಂದನ್ನು ಬಿಜೆಪಿ ಶನಿವಾರ ಬಿಡುಗಡೆ ಮಾಡಿದೆ. ತಿಹಾರ್ ದೆಹಲಿ ಸರ್ಕಾರದ ಅಡಿಯಲ್ಲಿದೆ ಮತ್ತು ಸತ್ಯೇಂದ್ರ ಜೈನ್ ಅರವಿಂದ್ ಕೇಜ್ರಿವಾಲ್ ಸಂಪುಟದಲ್ಲಿ ಜೈಲು ಸಚಿವರಾಗಿದ್ದರು ಎಂಬುದು ಉಲ್ಲೇಖನೀಯ. ಜೈನ್ ಅವರನ್ನು ಜೈಲಿನಲ್ಲಿ ವಿಐಪಿ ರೀತಿಯಲ್ಲಿ ನಡೆಸಿಕೊಂಡ ಆರೋಪದ … Continued

ಕಾರ್ಮಿಕ ಆಯುಕ್ತರೊಂದಿಗೆ ನಡೆದ ಸಭೆಯ ನಂತರ ಇಂದಿನ ಬ್ಯಾಂಕ್ ಮುಷ್ಕರ ಮುಂದೂಡಿದ ಎಐಬಿಇಎ

ನವದೆಹಲಿ: ಅಖಿಲ ಭಾರತ ಬ್ಯಾಂಕ್‌ಗಳ ನೌಕರರ ಸಂಘ (ಎಐಬಿಇಎ) ನವೆಂಬರ್ 19 ರಂದು ಕರೆ ನೀಡಿದ್ದ ರಾಷ್ಟ್ರವ್ಯಾಪಿ ಒಂದು ದಿನದ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ. ಕಾರ್ಮಿಕ ಸಚಿವಾಲಯದ ಮುಖ್ಯ ಕಾರ್ಮಿಕ ಕಮಿಷನರ್ (ಸಿಎಲ್‌ಸಿ), ಭಾರತೀಯ ಬ್ಯಾಂಕ್‌ಗಳ ಸಂಘದೊಂದಿಗೆ ಸಭೆ ನಡೆಸಿದ ನಂತರ ಒಕ್ಕೂಟವು ಮುಷ್ಕರವನ್ನು ಮುಂದೂಡಲಾಗಿದೆ ಎಂದು ತಿಳಿಸಿದೆ. ಭಾರತೀಯ ಬ್ಯಾಂಕ್‌ಗಳ ಸಂಘ (IBA) ಮತ್ತು … Continued

ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ವಜಾಗೊಳಿಸಿದ ಬಿಸಿಸಿಐ: ಹೊಸದಾಗಿ ಅರ್ಜಿ ಆಹ್ವಾನ

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ ಹಿರಿಯರ ಪುರುಷರ ತಂಡಕ್ಕೆ ರಾಷ್ಟ್ರೀಯ ಆಯ್ಕೆಗಾರರ ​​ಸ್ಥಾನಕ್ಕೆ ಹೊಸ ಅರ್ಜಿಗಳನ್ನು ಆಹ್ವಾನಿದೆ. ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 28ರಂದು ಸಂಜೆ 6 ಗಂಟೆ ಕೊನೆಯ ಸಮಯವಾಗಿದೆ ಎಂದು ಬಿಸಿಸಿಐ ಹೇಳಿದೆ. ಮಾಜಿ ಕ್ರಿಕೆಟಿಗ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ಮಂಡಳಿಯು ರದ್ದುಗೊಳಿಸಿದೆ. ಸಮಿತಿಯ ಇತರ ಸದಸ್ಯರು … Continued

ತೆಲಂಗಾಣ: ತಾನು ಕಾಂಗ್ರೆಸ್‌ಗೆ ಸೇರುವುದಾಗಿ ಆರೋಪಿಸಿದ ಬಿಜೆಪಿ ಸಂಸದನಿಗೆ ಚಪ್ಪಲಿಯಿಂದ ಹೊಡೆಯುವುದಾಗಿ ಬೆದರಿಕೆ ಹಾಕಿದ ಕೆಸಿಆರ್ ಪುತ್ರಿ

ಹೈದರಾಬಾದ್‌ : ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಮತ್ತು ನಿಜಾಮಾಬಾದ್ ವಿಧಾನ ಪರಿಷತ್‌ ಸದಸ್ಯೆ ಕಲ್ವಕುಂಟ್ಲ ಕವಿತಾ ಅವರು ತಮ್ಮ ಮೊದಲಿನ ಪಕ್ಷವಾದ ಕಾಂಗ್ರೆಸ್‌ಗೆ ಸೇರಲು ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂಪರ್ಕದಲ್ಲಿದ್ದಾರೆ ಎಂದು ತಮ್ಮ ವಿರುದ್ಧ ಆರೋಪಿಸಿರುವ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಮತ್ತು ತಮ್ಮ … Continued

ಭಾರತ ಜೋಡೋ ಯಾತ್ರೆಯಲ್ಲಿ ರಾಹುಲ್ ಜೊತೆ ಹೆಜ್ಜೆ ಹಾಕಿದ ಮಹಾತ್ಮಾ ಗಾಂಧೀಜಿ ಮರಿ ಮೊಮ್ಮಗ : ‘ಐತಿಹಾಸಿಕ’ ಎಂದ ಕಾಂಗ್ರೆಸ್

ಭಾರತ ಜೋಡೋ ಯಾತ್ರೆಯು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಬಾಲಾಪುರದಿಂದ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಪುನರಾರಂಭವಾಯಿತು ಹಾಗೂ ಆರಂಭವಾದ ಕೆಲವು ಗಂಟೆಗಳ ನಂತರ ಶೆಗಾಂವ್‌ನಲ್ಲಿ ಮಹಾತ್ಮಾ ಗಾಂಧೀಜಿ ಮರಿಮೊಮ್ಮಗ ತುಷಾರ್ ಗಾಂಧಿ ಯಾತ್ರೆಯನ್ನು ಸೇರಿಕೊಂಡರು. ಗುರುವಾರ ಟ್ವೀಟ್ ನಲ್ಲಿ ತುಷಾರ್ ಗಾಂಧಿ ಶೇಗಾಂವ್ ತನ್ನ ಜನ್ಮಸ್ಥಳ ಎಂದು ಹೇಳಿದ್ದರು. ನವೆಂಬರ್‌ 18 ರಂದು ಶೇಗಾಂವ್‌ನಲ್ಲಿ ಭಾರತ್ … Continued

ಪ್ರಯಾಣಿಕರೊಂದಿಗೆ ನಿರರ್ಗಳವಾಗಿ ಸಂಸ್ಕೃತದಲ್ಲಿ ಮಾತನಾಡುವ ದೆಹಲಿ ಕಾರು ಚಾಲಕ: ಬೆರಗಾದ ಇಂಟರ್ನೆಟ್‌…ವೀಕ್ಷಿಸಿ

ದೊಡ್ಡ ದೊಡ್ಡ ನಗರಗಳಲ್ಲಿ ಕಾರು ಓಡಿಸುವ ಚಾಲಕರು ವಿಮಾನ ನಿಲ್ದಾಣಗಳಲ್ಲಿ ಬಂದಿಳಿದ ವಿದೇಶಿಗರ ಜೊತೆಗೆ ಇಂಗ್ಲೀಷ್ ನಲ್ಲಿ ಮಾತಾಡುವುದನ್ನು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಆದರೆ ದೆಹಲಿಯ ಕ್ಯಾಬ್ ಚಾಲಕನೊಬ್ಬ ಉಳಿದವರಿಗಿಂತ ತೀರ ವಿಭಿನ್ನವಾಗಿದ್ದಾನೆ. ಈತ ತನ್ನ ಪ್ರಯಾಣಿಕನೊಂದಿಗೆ ನಿರರ್ಗಳವಾಗಿ ಸಂಸ್ಕೃತದಲ್ಲಿ ಮಾತನಾಡುತ್ತಾರೆ. ವ್ಯಕ್ತಿಯೊಬ್ಬರು ಕ್ಯಾಬ್ ನಲ್ಲಿ ಚಾಲಕನ ಜೊತೆ ನಿರರ್ಗಳವಾಗಿ ಸಂಸ್ಕೃತದಲ್ಲಿ ಮಾತನಾಡಿದ ಸಂಭಾಷಣೆಯ ವೀಡಿಯೊವನ್ನು … Continued