ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಾಲಿಗೆ ಕತ್ತರಿಸ್ತೇನೆ: ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಕಾಂಗ್ರೆಸ್ ಮುಖಂಡ…!

ಚೆನ್ನೈ: ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಾಗ 2019ರ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಧೀಶರ ನಾಲಿಗೆಯನ್ನು ಕತ್ತರಿಸುವುದಾಗಿ ತಮಿಳುನಾಡಿನ ಕಾಂಗ್ರೆಸ್ ನಾಯಕರೊಬ್ಬರು ಬೆದರಿಕೆ ಹಾಕಿದ್ದಾರೆ. ಅವರ ಹೇಳಿಕೆಗಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್‌ನ ಎಸ್‌ಸಿ/ಎಸ್‌ಟಿ ವಿಭಾಗವು ತಮಿಳುನಾಡಿನ ದಿಂಡಿಗಲ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಅನರ್ಹತೆ … Continued

ವೀಡಿಯೊ : ಮದುವೆ ಸಮಾರಂಭದಲ್ಲಿ ಗಾಳಿಯಲ್ಲಿ 150 ಗುಂಡು ಹಾರಿಸಿದ ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್ ಪುತ್ರ, ಸಹೋದರ

ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ವೈರಲ್ ಆಗಿದ್ದು, ಜೈಲಿನಲ್ಲಿರುವ ಗ್ಯಾಂಗ್‌ ಸ್ಟರ್‌-ರಾಜಕಾರಣಿ ಅತಿಕ್ ಅಹ್ಮದ್ ಕುಟುಂಬ ಸದಸ್ಯರು, ಹಾಗೂ ಕೆಲವು ಜನರು ಮದುವೆ ಸಮಾರಂಭದಲ್ಲಿ ಗಾಳಿಯಲ್ಲಿ 150 ಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸುತ್ತಿರುವುದು ಕಂಡುಬಂದಿದೆ. ದಿನಾಂಕ ನಿಗದಿ ಮಾಡದ ಎರಡೂವರೆ ನಿಮಿಷದ ವೀಡಿಯೊದಲ್ಲಿ, ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿದ್ದ ಸಮಾರಂಭದಲ್ಲಿ ಕೆಲವರು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವುದನ್ನು … Continued

ದೇವಸ್ಥಾನದ ಆಸ್ತಿಗಳನ್ನು ಅಕ್ರಮವಾಗಿ ಭೋಗ್ಯಕ್ಕೆ ಪಡೆದ ಆರೋಪದ ಬಗ್ಗೆ ಎಸ್‌ಐಟಿ ತನಿಖೆಗೆ ಆದೇಶಿಸಿದ ಜಮ್ಮು-ಕಾಶ್ಮೀರ ಸರ್ಕಾರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಕಣಿವೆಯಲ್ಲಿನ ದೇವಸ್ಥಾನದ ಆಸ್ತಿಗಳನ್ನು ಅಕ್ರಮವಾಗಿ ಭೋಗ್ಯಕ್ಕೆ ಪಡೆದಿರುವ ಆರೋಪದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವಾರದೊಳಗೆ ನವೀಕರಿಸಿದ ಮಾಹಿತಿ ಒದಗಿಸುವಂತೆ ಅಧಿಕಾರಿಗಳು ಡೆಪ್ಯೂಟಿ ಕಮಿಷನರ್‌ಗಳಿಗೆ (ಡಿಸಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಶ್ಮೀರ ವಿಭಾಗೀಯ ಆಯುಕ್ತರ ಕಚೇರಿಯು ಕಾಶ್ಮೀರದ ಎಲ್ಲಾ … Continued

ʼಟಾರ್ಗೆಟ್‌ ಮಾಡಿದಂತೆ ತೋರುತ್ತಿದೆ ‘: ಅದಾನಿ ಬಗ್ಗೆ ಹಿಂಡೆನ್‌ಬರ್ಗ್‌ ವರದಿ ಕುರಿತು ಜೆಪಿಸಿ ಬೇಡಿಕೆಗೆ ಶರದ್ ಪವಾರ್ ಅಸಮ್ಮತಿ

ನವದೆಹಲಿ: ಅಮೆರಿಕ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್‌ ವರದಿಯಲ್ಲಿ ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಯ ಬೇಡಿಕೆಯ ಬಗ್ಗೆ ತಮ್ಮ ಮಿತ್ರಪಕ್ಷ ಕಾಂಗ್ರೆಸ್‌ನ ಅಭಿಪ್ರಾಯಗಳನ್ನು ಬೆಂಬಲಿಸುವುದಿಲ್ಲ ಎಂದು ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಶರದ್ ಪವಾರ್ ಶುಕ್ರವಾರ ಹೇಳಿದ್ದಾರೆ. ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) … Continued

ಮೊಬೈಲ್‌ ಸ್ಕ್ರೋಲ್‌ ಮಾಡಿ ವೀಡಿಯೊ ನೋಡಿ ಆನಂದಿಸುವ ಮಂಗ | ವೀಕ್ಷಿಸಿ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಮಂಗವೊಂದು ಮೊಬೈಲ್ ಫೋನ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕಿರು ಕ್ಲಿಪ್ ಅನ್ನು ಆರಂಭದಲ್ಲಿ CanvasM ಸಿಇಒ ಜಗದೀಶ್ ಮಿತ್ರ ಅವರು ಹಂಚಿಕೊಂಡಿದ್ದಾರೆ. ಇದು ಸಾಕಿದ ಮಂಗವನ್ನು ತೋರಿಸುತ್ತದೆ. ಬಟ್ಟೆಗಳನ್ನು ಧರಿಸಿದ ಮಂಗವೊಂದು, ಹಾಸಿಗೆಯ ಮೇಲೆ ಮಹಿಳೆಯೊಂದಿಗೆ ಕುಳಿತು ಫೋನ್‌ನಲ್ಲಿ ವೀಡಿಯೊಗಳನ್ನು ಸ್ಕ್ರೋಲ್ ಮಾಡುತ್ತಿರುವುದು ಕಂಡುಬಂದಿದೆ “ಇಸ್ಸ್ ಬೆಚಾರೆ ಕೊ … Continued

ನಟಿ ಖುಷ್ಬೂ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬು ಸುಂದರ್ ಅವರು ಅನಾರೋಗ್ಯದಿಂದಾಗಿ ಶುಕ್ರವಾರ ಜ್ವರದಿಂದ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜ್ವರ, ಮೈ ಕೈ ನೋವು ಮತ್ತು ದೌರ್ಬಲ್ಯದಿಂದ ಆಸ್ಪತ್ರೆಗೆ ದಾಖಲಾಗಿರುವುದಾಗಿ ಅವರು ಏಪ್ರಿಲ್ 7ರಂದು ಸುದ್ದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಖುಷ್ಬು ಅವರು ಆಸ್ಪತ್ರೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಾನು ಅಡೆನೊ ವೈರಸ್ … Continued

ರಾಹುಲ್ ಗಾಂಧಿ ಭಾರತದ ಪ್ರಧಾನಿಯಾಗ್ತಾರಾ..? ಎಂಬ ಪ್ರಶ್ನೆಗೆ ‘ನಾನು ಇಂಗ್ಲೆಂಡ್ ರಾಣಿಯಾದಾಗ ರಾಹುಲ್ ಗಾಂಧಿ ಪ್ರಧಾನಿಯಾಗ್ತಾರೆ’ ಎಂದು ಉತ್ತರಿಸಿದ ಚಾಟ್‌ ಜಿಪಿಟಿ…!

ನವದೆಹಲಿ: ಕಾಂಗ್ರೆಸ್‌ ವರಿಷ್ಠ ನಾಯಕ, ನೆಹರು-ಗಾಂಧಿ ಮನೆತನದ ಕುಡಿ ರಾಹುಲ್‌ ಗಾಂಧಿ ಅವರು ದೇಶದ ಪ್ರಧಾನಿಯಾಗಲು ಸಾಧ್ಯ ಇಲ್ಲ ಎಂದು ಕೃತಕ ಬುದ್ಧಿಮತ್ತೆ ಭಾವಿಸಿದೆ. ಓಪನ್‌ ಎಐ(OpenAI)ನ ಚಾಟ್‌ ಜಿಪಿಟಿ (ChatGPT) ಮತ್ತು ಮೈಕ್ರೋಸಾಫ್ಟ್‌ (Microsoft)ನ ಬಿಂಗ್‌ ಎಐ (BingAI) ಇವೆರಡೂ ಓಪನ್‌ ಎಐನ ಜಿಪಿಟಿ (GPT)ಯ ದೊಡ್ಡ ಭಾಷಾ ಮಾದರಿಗಳನ್ನು ಆಧರಿಸಿವೆ, ಅವುಗಳನ್ನು ಅಭಿವೃದ್ಧಿಪಡಿಸಿದ … Continued

ಬಿಜೆಪಿ ಸೇರಿದ ಆಂಧ್ರದ ಮಾಜಿ ಸಿಎಂ ಕಿರಣಕುಮಾರ ರೆಡ್ಡಿ

ನವದೆಹಲಿ: ಅವಿಭಜಿತ ಆಂಧ್ರಪ್ರದೇಶದ ಕೊನೆಯ ಮುಖ್ಯಮಂತ್ರಿ ಕಿರಣಕುಮಾರ ರೆಡ್ಡಿ ಅವರು ಶುಕ್ರವಾರ ಬಿಜೆಪಿ ಸೇರಿದ್ದಾರೆ. ಅವರು ಕಾಂಗ್ರೆಸ್ ತೊರೆದ ಕೆಲವು ವಾರಗಳ ನಂತರ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಂದು ಸಾಲಿನ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ. ಅವರ ಸೇರ್ಪಡೆ ಸಮಾರಂಭವು ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆಯಿತು, ಅಲ್ಲಿ ಪಕ್ಷದ ನಾಯಕ ಮತ್ತು ಸಂಸದೀಯ … Continued

ಕರ್ನಾಟಕ ವಿಧಾನಸಭೆ ಚುನಾವಣೆ 2023 : ಜೆಡಿಎಸ್-ಎಐಎಂಐಎಂ ಚುನಾವಣಾ ಪೂರ್ವ ಮೈತ್ರಿ ಮಾತುಕತೆ-ಮೈತ್ರಿ ಕಾಂಗ್ರೆಸ್‌ ಆತಂಕ ಹೆಚ್ಚಿಸಲಿದೆಯೇ..?

ಬೆಂಗಳೂರು : ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ, ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಚುನಾವಣಾ ಪೂರ್ವ ಮೈತ್ರಿ ಕುರಿತು ಜೆಡಿಎಸ್‌ ಜೊತೆ ಮಾತುಕತೆ ನಡೆಸುತ್ತಿದೆ. ಒಟ್ಟು 224 ಸ್ಥಾನಗಳಲ್ಲಿ ಕನಿಷ್ಠ 25 ಸ್ಥಾನಗಳಲ್ಲಿ ಎಐಎಂಐಎಂ ಸ್ಪರ್ಧಿಸಲು ಬಯಸುತ್ತಿದೆ ಎಂದು ಹೇಳಲಾಗಿದೆ. ಇದು ಮುಸ್ಲಿಂ ಬಾಹುಳ್ಯದ ವಿಧಾನಸಭೆ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು … Continued

ಭಾರತದಲ್ಲಿ 6000ದ ಗಡಿದ ದಾಟಿದ ದೈನಂದಿನ ಕೋವಿಡ್-19 ಪ್ರಕರಣ, ಇದು 203 ದಿನಗಳಲ್ಲಿ ಅತಿ ಹೆಚ್ಚು

ನವದೆಹಲಿ: ಭಾರತದಲ್ಲಿ ಶುಕ್ರವಾರ 6.050 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ದೇಶವು ನಿನ್ನೆಗಿಂತ ಕೊರೊನಾವೈರಸ್ ಪ್ರಕರಣಗಳಲ್ಲಿ ಶೇಕಡಾ 13 ರಷ್ಟು ಏರಿಕೆ ಕಂಡಿದೆ. ಇದು 203 ದಿನಗಳಲ್ಲಿ ಅತಿ ಹೆಚ್ಚು, ಕಳೆದ ವರ್ಷ ಸೆಪ್ಟೆಂಬರ್ 16 ರಂದು 6,298 ಪ್ರಕರಣಗಳು ದಾಖಲಾಗಿತ್ತು. ಶುಕ್ರವಾರ ನವೀಕರಿಸಿದ ಕೇಂದ್ರ … Continued