ಕೋವಿಡ್-19ಕ್ಕೂ ಹೆಚ್ಚುತ್ತಿರುವ ಹೃದಯಾಘಾತಕ್ಕೂ ಸಂಬಂಧವಿದೆಯೇ…ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರು ಹೇಳಿದ್ದೇನು..?

ನವದೆಹಲಿ: ಕೋವಿಡ್-19 ವೈರಸ್ ರೂಪಾಂತರಗೊಳ್ಳುತ್ತಲೇ ಇರುತ್ತದೆ ಮತ್ತು ಭಾರತದಲ್ಲಿ ಇದುವರೆಗೆ ಕೋವಿಡ್‌ನ 214 ವಿಭಿನ್ನ ರೂಪಾಂತರಗಳು ಕಂಡುಬಂದಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಇತ್ತೀಚಿನ ಕಂಡುಬಂದ ಸೋಂಕುಗಳ ಉಲ್ಬಣ ಎದುರಿಸಲು ಸರ್ಕಾರ ಸಿದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ. ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಐಸಿಯು ಬೆಡ್‌ಗಳು, ಆಮ್ಲಜನಕ ಪೂರೈಕೆ … Continued

ಟ್ವಿಟರ್ ಲೋಗೋ ಬದಲಾಯಿಸಿದ ಎಲಾನ್ ಮಸ್ಕ್…! ನೀಲಿ ಹಕ್ಕಿ ಬದಲು ಈಗ ನಾಯಿ ಚಿತ್ರ

ಟ್ವಿಟರ್ ಲೋಗೋ ಬದಲಾಗಿದೆ…! ಸ್ಪೇಸ್‌ ಎಕ್ಸ್ ಮತ್ತು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಪ್ರಮುಖ ಹೆಜ್ಜೆ ಇಟ್ಟಿದ್ದಾರೆ ಮತ್ತು ಹಳೆಯ ಟ್ವಿಟರ್ ನೀಲಿ ಹಕ್ಕಿಯ ಲೋಗೋವನ್ನು ಬದಲಾಯಿಸಿದ್ದಾರೆ. ನೀಲಿ ಹಕ್ಕಿಯ ಬದಲಿಗೆ, ಈಗ ಸಾಮಾಜಿಕ ಮಾಧ್ಯಮ ವೇದಿಕೆಯ ಐಕಾನ್/ಲೋಗೋದಂತೆ ಡಾಗ್‌ಕಾಯಿನ್‌ (Dogecoin) ಕ್ರಿಪ್ಟೋ ಕರೆನ್ಸಿಯ ಕುಖ್ಯಾತ ‘ನಾಯಿ (Doge)’ ಮೆಮೆ ನೋಡಬಹುದು. ಹಕ್ಕಿಯ ಜಾಗಕ್ಕೆ … Continued

ಭಾರತದ ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ‘ದಕ್ಷಿಣ ಟಿಬೆಟ್’ ಎಂದು ಮರುನಾಮಕರಣ ಮಾಡಿದ ಚೀನಾ

ನವದೆಹಲಿ: ಚೀನಾವು ಭಾರತದ ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರುನಾಮಕರಣ ಮಾಡಿದೆ, ಅದು ದಕ್ಷಿಣ ಟಿಬೆಟ್ ಎಂದು ಹೇಳಿಕೊಂಡಿದೆ, ಇದು ದಶಕಗಳಲ್ಲಿ ಹದಗೆಟ್ಟ ದ್ವಿಪಕ್ಷೀಯ ಸಂಬಂಧದ ಮಧ್ಯದಲ್ಲಿರುವಾಗ ನವದೆಹಲಿ ಮತ್ತು ಬೀಜಿಂಗ್ ನಡುವಿನ ಅಪನಂಬಿಕೆಯನ್ನು ಇನ್ನಷ್ಟು ಹೆಚ್ಚಿಸುವಂತಹ ಕ್ರಮಕ್ಕೆ ಮುಂದಾಗಿದೆ. ಇದು ಮೂರನೇ ಬಾರಿಗೆ ಚೀನಾ ಅರುಣಾಚಲ ಪ್ರದೇಶದ ಸ್ಥಳಗಳಿಗೆ ಏಕಪಕ್ಷೀಯವಾಗಿ ಮರುನಾಮಕರಣ ಮಾಡಿದ್ದು, ಏಪ್ರಿಲ್, … Continued

ನಾನೂ ಸಿಎಂ ಹುದ್ದೆ ಆಕಾಂಕ್ಷಿ, ಪ್ರಜಾಸತ್ತಾತ್ಮಕ ಪ್ರಕ್ರಿಯೆ ಮೂಲಕ ಆಯ್ಕೆ ನಡೆಯಬೇಕಲ್ಲ, ಡಿಕೆ ಶಿವಕುಮಾರಗೆ ಸಿಎಂ ಹುದ್ದೆ ವಿಚಾರವಾಗಿ ಸೂಚ್ಯವಾಗಿ ಹೇಳಿದ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದಲ್ಲಿ ರಾಜ್ಯ ಚುನಾವಣೆಗೂ ಮುನ್ನ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಿದ್ದು, ಈಗ ಕೆಪಿಸಿಸಿ ಅಧ್ಯಕ್ಷರಾಗಿರುವ ಬಹುಕಾಲದ ಪ್ರತಿಸ್ಪರ್ಧಿ ಡಿಕೆ ಶಿವಕುಮಾರ್ ವಿರುದ್ಧ ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ. ತಾವು ಮತ್ತು ಶಿವಕುಮಾರ ಇಬ್ಬರೂ ಉನ್ನತ ಹುದ್ದೆಗೆ ಸ್ಪರ್ಧಿಗಳು ಎಂದು ಒಪ್ಪಿಕೊಂಡ ಸಿದ್ದರಾಮಯ್ಯ, ತಮ್ಮ ಪ್ರತಿಸ್ಪರ್ಧಿಗೆ ಅವಕಾಶವಿಲ್ಲ ಎಂದು … Continued

ಮಾರ್ಚ್‌ನಲ್ಲಿ ಯುಪಿಐ ವಹಿವಾಟಿನಲ್ಲಿ 14 ಲಕ್ಷ ಕೋಟಿ ರೂ.ವರ್ಗಾವಣೆ: ಇದು ಹೊಸ ದಾಖಲೆ

ನವದೆಹಲಿ : ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಸಿಪಿಐ) ಮಾಹಿತಿ ಪ್ರಕಾರ, ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಮೂಲಕ ವಹಿವಾಟುಗಳು ವರ್ಷದಿಂದ ವರ್ಷಕ್ಕೆ 60% ನಷ್ಟು ಹೆಚ್ಚಳವಾಗಿ ವಹಿವಾಟು ದಾಖಲೆಯ 8.7 ಶತಕೋಟಿಗೆ ಏರಿದೆ. ಮಾರ್ಚ್ 2023 ರಲ್ಲಿ 14.05 ಲಕ್ಷ ಕೋಟಿ ಮೌಲ್ಯದ ಅತ್ಯಧಿಕ ವಹಿವಾಟು ನಡೆದಿದೆ ಎಂದು ಹೇಳಿದೆ. ಮಾರ್ಚ್ 2022 … Continued

12ನೇ ತರಗತಿ ಇತಿಹಾಸ ಪಠ್ಯಪುಸ್ತಕ ಪರಿಷ್ಕರಣೆ : ಮೊಘಲ್ ಸಾಮ್ರಾಜ್ಯದ ಅಧ್ಯಾಯ ತೆಗೆದುಹಾಕಿದ ಎನ್‌ಸಿಇಆರ್‌ಟಿ

ನವದೆಹಲಿ: ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಮೊಘಲ್ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಅಧ್ಯಾಯಗಳನ್ನು ತೆಗೆದುಹಾಕುವ ಮೂಲಕ 12 ನೇ ತರಗತಿಯ ಇತಿಹಾಸ ಪಠ್ಯಕ್ರಮವನ್ನು ಪರಿಷ್ಕರಿಸಿದೆ. ಪಠ್ಯಕ್ರಮದಲ್ಲಿನ ಬದಲಾವಣೆಗಳು ಸಿಬಿಎಸ್‌ಇ (CBSE), ಉತ್ತರ ಪ್ರದೇಶ ಮತ್ತು ಎನ್‌ಸಿಇಆರ್‌ಟಿ (NCERT) ಪಠ್ಯಕ್ರಮವನ್ನು ಅನುಸರಿಸುವ ಇತರ ರಾಜ್ಯ ಮಂಡಳಿಗಳು ಸೇರಿದಂತೆ ಎಲ್ಲಾ ಬೋರ್ಡ್‌ಗಳಿಗೆ ಅನ್ವಯಿಸುತ್ತವೆ. ಹೊಸ … Continued

ಮೋದಿ ಉಪನಾಮ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಜಾಮೀನು : ಮುಂದಿನ ವಿಚಾರಣೆ ಏಪ್ರಿಲ್ 13ಕ್ಕೆ

ಸೂರತ್: 2019ರ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಇಂದು, ಸೋಮವಾರ ಜಾಮೀನು ಮಂಜೂರಾಗಿದ್ದು, ಅವರ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ತೀರ್ಪಿನವರೆಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಪೌಸ್‌ (Pauses) ಮಾಡಲಾಗಿದೆ. ಗುಜರಾತ್ ನ್ಯಾಯಾಲಯವು ಏಪ್ರಿಲ್ 13 ರಂದು ರಾಹುಲ್‌ ಗಾಂಧಿಯವರ ಮನವಿಯನ್ನು ಕೈಗೆತ್ತಿಕೊಳ್ಳಲಿದೆ. ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ತೀರ್ಪನ್ನು ಪ್ರಶ್ನಿಸಿ ರಾಹುಲ್ … Continued

ಅತ್ಯಂತ ಜನಪ್ರಿಯ ಜಾಗತಿಕ ನಾಯಕರ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿಗೆ ಮತ್ತೆ ಅಗ್ರಸ್ಥಾನ: ಜಾಗತಿಕ ನಾಯಕರ ಪಟ್ಟಿ ಇಲ್ಲಿದೆ

ನವದೆಹಲಿ: ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಅವರನ್ನು ಹಿಂದಿಕ್ಕಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಜಾಗತಿಕ ನಾಯಕರ ಪ್ರಮುಖ ನಿರ್ಧಾರಗಳನ್ನು ಟ್ರ್ಯಾಕ್ ಮಾಡುವ ಸಂಸ್ಥೆಯಾದ ಮಾರ್ನಿಂಗ್ ಕನ್ಸಲ್ಟ್ ಈ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಟ್ವಿಟರ್‌ನಲ್ಲಿ … Continued

ವೀಡಿಯೊ: ಕಾಂಗ್ರೆಸ್‌ ಪ್ರತಿಭಟನೆ ವೇಳೆ ವೇದಿಕೆ ಕುಸಿತ: ಇಬ್ಬರು ಮುಖಂಡರಿಗೆ ಗಾಯ | ದೃಶ್ಯ ಕ್ಯಾಮರಾದಲ್ಲಿ ಸೆರೆ

ಬಿಲಾಸಪುರ : ಛತ್ತೀಸ್‌ಗಢದ ಬಿಲಾಸಪುರದಲ್ಲಿ ಪಂಜಿನ ಪ್ರತಿಭಟನೆ ವೇಳೆ ವೇದಿಕೆ ಮುರಿದು ಬಿದ್ದು ವೇದಿಕೆ ಮೇಲಿದ್ದ ಹಲವರು ಕೆಳಗೆ ಬಿದ್ದಿದ್ದಾರೆ. ಲೋಕಸಭೆಯಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿರುವುದನ್ನು ಖಂಡಿಸಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ನಗರದಲ್ಲಿ ಪಂಜಿನ ರ್ಯಾಲಿಯನ್ನು ಆಯೋಜಿಸಿದ್ದರು, ಆದರೆ ಈ ವೇಳೆ ವೇದಿಕೆ ಮೇಲೆ ಜನದಟ್ಟಣೆಯಿಂದಾಗಿ ವೇದಿಕೆ ಕುಸಿದುಬಿದ್ದಿದೆ. ಕಾಂಗ್ರೆಸ್ ಪಕ್ಷದ … Continued

2030ರ ವೇಳೆಗೆ ಮಾನವ ಅಮರತ್ವ ಸಾಧಿಸಬಹುದು: ಮಾಜಿ ಗೂಗಲ್ ವಿಜ್ಞಾನಿ-ಪ್ರಖ್ಯಾತ ಫ್ಯೂಚರಿಸ್ಟ್ ಕುರ್ಜ್‌ವೀಲ್ ಭವಿಷ್ಯ…!

ಕೇವಲ ಏಳು ವರ್ಷಗಳಲ್ಲಿ ನ್ಯಾನೊರೊಬೋಟ್‌ಗಳ ಸಹಾಯದಿಂದ ಮಾನವರು ಅಮರತ್ವವನ್ನು ಸಾಧಿಸುತ್ತಾರೆ ಎಂದು ಮಾಜಿ ಗೂಗಲ್ ಎಂಜಿನಿಯರ್ ಮತ್ತು ಪ್ರಖ್ಯಾತ ಫ್ಯೂಚರಿಸ್ಟ್ ರೇ ಕುರ್ಜ್‌ವೀಲ್ ಭವಿಷ್ಯ ನುಡಿದಿದ್ದಾರೆ. 1999ರಲ್ಲಿ ರಾಷ್ಟ್ರೀಯ ತಂತ್ರಜ್ಞಾನದ ಪದಕ ಮತ್ತು 2022 ರಲ್ಲಿ ನ್ಯಾಷನಲ್ ಇನ್ವೆಂಟರ್ಸ್ ಹಾಲ್ ಆಫ್ ಫೇಮ್‌ ಗೌರವ ಸೇರಿದಂತೆ ತಂತ್ರಜ್ಞಾನಕ್ಕೆ ನೀಡಿದ ಕೊಡುಗೆಗಳಿಗಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿರುವ 75 … Continued