ಸೊಳ್ಳೆ ಬತ್ತಿಯಿಂದ ಹೊತ್ತಿಕೊಂಡ ಬೆಂಕಿ: ಒಂದೇ ಕುಟುಂಬದ ಆರು ಮಂದಿ ಸಾವು

ನವದೆಹಲಿ: ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ರಾತ್ರಿಯಲ್ಲಿ ಉರಿಯುತ್ತಿದ್ದ ಸೊಳ್ಳೆ ಬತ್ತಿಗೆ ಬೆಂಕಿಹೊತ್ತಿಕೊಂಡ ನಂತರ ಬಿಡುಗಡೆಯಾದ ವಿಷಕಾರಿ ಅನಿಲ ಉಸಿರಾಡಿದ ಕುಟುಂಬದ ಆರು ಸದಸ್ಯರು ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ರಾತ್ರಿ ವೇಳೆ ಹಚ್ಚಿದ್ದ ಸೊಳ್ಳೆ ಕಾಯಿಲ್‌ ಮನೆಯೊಳಗಿನ ಹಾಸಿಗೆಯ ಮೇಲೆ ಬಿದ್ದಿದೆ, ಹಾಗೂ ಬೆಂಕಿ ಹೊತ್ತಿಕೊಂಡಿದೆ, ಇದರಿಂದ ಬಿಡುಗಡೆಯಾದ ವಿಷಕಾರಿ ಅನಿಲದಿಂದ ಸಾವು ಸಂಭವಿಸಿದೆ … Continued

ಇಂದೋರ್ ದೇವಸ್ಥಾನದ ಮೆಟ್ಟಿಲುಬಾವಿ ಮೇಲ್ಛಾವಣಿ ಕುಸಿತ: ಸಾವಿನ ಸಂಖ್ಯೆ 35 ಕ್ಕೆ ಏರಿಕೆ

ಇಂದೋರ್‌ : ಗುರುವಾರ ಬೆಳಗ್ಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ರಾಮನವಮಿ ಬೆಳಗಿನ ಜಾವದಂದು ನಡೆದ ಧಾರ್ಮಿಕ ವಿಧಿವಿಧಾನದ ವೇಳೆ ‘ಬಾವಡಿ’ (ಬಾವಿ)ಯನ್ನು ಮುಚ್ಚುವ ಚಪ್ಪಡಿ ಒಡೆದು ಸಂಭವಿಸಿದ ದುರ್ಘಟನೆಯಲ್ಲಿ ಸಾವಿನ ಸಂಖ್ಯೆ 35ಕ್ಕೆ ಏರಿದೆ. ಬಾವಿಯ ಮೇಲ್ಛಾವಣಿಯನ್ನು ಕಾಂಕ್ರೀಟ್ ಚಪ್ಪಡಿ ಹಾಕಿ, ಕಬ್ಬಿಣದ ರಾಡ್‌ಗಳಿಂದ ಆಸರೆಯಾಗಿ, ಬಾವಡಿಯನ್ನು ಮುಚ್ಚಲು ಮೇಲ್ಛಾವಣಿ ನಿರ್ಮಿಸಲಾಗಿತ್ತು. ಇಂದೋರ್ ವಿಭಾಗದ ಕಮಿಷನರ್ ಪವನ್ … Continued

ನಾನು ಶರಣಾಗುತ್ತಿಲ್ಲ : ಯೂ ಟ್ಯೂಬ್‌ ಲೈವ್ ನಲ್ಲಿ ಪರಾರಿಯಾದ ಅಮೃತಪಾಲ್ ಸಿಂಗ್ ಹೇಳಿಕೆ

ನವದೆಹಲಿ: ಕಳೆದ 13 ದಿನಗಳಿಂದ ಪೊಲೀಸರಿಂದ ತಪ್ಪಿಸಿಕೊಂಡಿರುವ ಖಾಲಿಸ್ತಾನೀ ಪ್ರತಿಪಾದಕ ಅಮೃತಪಾಲ್ ಸಿಂಗ್ ಸತತ ಎರಡನೇ ದಿನವೂ ಯೂಟ್ಯೂಬ್‌ನಲ್ಲಿ ವೀಡಿಯೋ ಬಿಡುಗಡೆ ಮಾಡಿದ್ದು, ತಾನು ಶರಣಾಗುವುದಿಲ್ಲ ಎಂದು ಹೇಳಿದ್ದಾರೆ. 30 ವರ್ಷದ ಅಮೃತಪಾಲ್ ಸಿಂಗ್, ಸಿ ಮಾರ್ಚ್ 18 ರಂದು ಆತನ ಖಾಲಿಸ್ತಾನ್ ಪರ ‘ವಾರಿಸ್ ಪಂಜಾಬ್ ದೇ’ ಸಂಘಟನೆಯ ಸದಸ್ಯರ ವಿರುದ್ಧ ಪೊಲೀಸ್ ಕ್ರಮದ … Continued

ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಗುಂಡಿಕ್ಕಿ ಹತ್ಯೆ: ಒಂದು ತಿಂಗಳಲ್ಲಿ ಎರಡನೇ ಟಾರ್ಗೆಟೆಡ್‌ ಹತ್ಯೆ

ಕರಾಚಿ ಮುನ್ಸಿಪಲ್ ಕಾರ್ಪೊರೇಶನ್‌ನ ನಿವೃತ್ತ ನಿರ್ದೇಶಕ ಮತ್ತು ನೇತ್ರತಜ್ಞ ಡಾ ಬೀರಬಲ್ ಗೆನಾನಿ ಅವರನ್ನು ಗುರುವಾರ ಲಿಯಾರಿ ಎಕ್ಸ್‌ಪ್ರೆಸ್‌ವೇ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ದಾಳಿಯಲ್ಲಿ ಅವರ ಸಹಾಯಕ ಡಾ.ಕುರಾತ್-ಉಲ್-ಐನ್ ಸಹ ಗಾಯಗೊಂಡಿದ್ದಾರೆ. ಇವರಿಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ದಾಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಇದು … Continued

ಏಷ್ಯಾ ಕಪ್ ಬೆಳವಣಿಗೆ ಬಗ್ಗೆ ಅತೃಪ್ತಿ : ಭಾರತದಲ್ಲಿ ನಡೆಯುವ ವಿಶ್ವಕಪ್ ಕ್ರಿಕೆಟ್‌ ಪಂದ್ಯಗಳಲ್ಲಿ ಪಾಕಿಸ್ತಾನ ಆಡುವುದು ಡೌಟು-ವರದಿ

ನವದೆಹಲಿ: ಒಂದು ಮೂಲದ ಪ್ರಕಾರ, ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾ ಕಪ್ 2023 ರಲ್ಲಿ ಭಾರತದ ತಂಡಕ್ಕೆ ಪಾಲ್ಗೊಳ್ಳಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಅವಕಾಶ ನೀಡದಿದ್ದರೆ ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಭಾಗವಹಿಸುವುದಿಲ್ಲ ಎಂದು ಪಾಕಿಸ್ತಾನ ಬೆದರಿಕೆ ಹಾಕಿದೆ. ಮೂಲವೊಂದರ ಪ್ರಕಾರ ಪಾಕಿಸ್ತಾನವು ಪಂದ್ಯಗಳನ್ನು ಬಾಂಗ್ಲಾದೇಶ … Continued

ಹಣ್ಣಿನ ಮಾರ್ಕೆಟಲ್ಲಿ ಮಾರಾಟಗಾರರ ನಡುವೆ ಮಾರಾಮಾರಿ: ಟ್ರೇ-ದೊಣ್ಣೆಗಳಿಂದ ಬಡಿದಾಟ | ಮಾರಾಮಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆ

2021ರಲ್ಲಿ, ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಇಬ್ಬರು ಚಾಟ್ ಮಾರಾಟಗಾರರ ನಡುವಿನ ಜಗಳದ ವೀಡಿಯೊವು ವೈರಲ್ ಆಗಿತ್ತು, ಈಗ, ಶಿಮ್ಲಾದಲ್ಲಿ ಹಣ್ಣಿನ ಮಾರಾಟಗಾರರ ಗುಂಪುಗಳ ನಡುವಿನ ಕಾದಾಟದ ಇದೇ ರೀತಿಯ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವಾದ-ವಿವಾದ ನಡೆದ ನಂತರ ಹಿಂಸಾತ್ಮಕ ಹೊಡೆದಾಟ ನಡೆಯಿತು. ವೀಡಿಯೊದಲ್ಲಿ ಖಾಲಿ ತರಕಾರಿ ಟ್ರೇಗಳು ಮತ್ತು ದೊಣ್ಣೆಗಳಿಂದ ವ್ಯಾಪಾರಿಗಳು … Continued

ಇಂದೋರ್ ದೇವಾಲಯದ ಮೆಟ್ಟಿಲು ಬಾವಿ ಕುಸಿತ: 13 ಭಕ್ತರು ಸಾವು

ಇಂದೋರ್ : ಮಧ್ಯಪ್ರದೇಶದ ಇಂದೋರ್ ದೇವಾಲಯದ ಮೆಟ್ಟಿಲುಬಾವಿ ಕುಸಿತದ ಘಟನೆಯಲ್ಲಿ ಸಾವಿನ ಸಂಖ್ಯೆ 13ಕ್ಕೆ ಏರಿದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಗುರುವಾರ ಮಾಹಿತಿ ನೀಡಿದ್ದಾರೆ. ಹತ್ತೊಂಬತ್ತು ಜನರನ್ನು ರಕ್ಷಿಸಲಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, 11 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ – ಅದರಲ್ಲಿ 10 ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದ್ದಾರೆ. ರಕ್ಷಿಸಲ್ಪಟ್ಟ 19 … Continued

ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಣಕ್ಕೆ..? : ಸುಳಿವು ನೀಡಿದ ಯಡಿಯೂರಪ್ಪ

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರದ ನೇತೃತ್ವ ವಹಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ವಿರುದ್ಧ ತಮ್ಮ ಮಗ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಸಿದ್ದರಾಮಯ್ಯ ಅವರು ಪ್ರಸ್ತುತ ತಮ್ಮ ಪುತ್ರ ಯತೀಂದ್ರ ಶಾಸಕರಾಗಿರುವ ಮೈಸೂರಿನ ವರುಣಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಬಿ.ವೈ. ವಿಜಯೇಂದ್ರ ಅವರನ್ನು ವರುಣಾದಿಂದ ಕಣಕ್ಕಿಳಿಸುವ ಬಗ್ಗೆ … Continued

ಭಾರತದಲ್ಲಿ 3000 ದಾಟಿದ ದೈನಂದಿನ ಕೋವಿಡ್ -19 ಪ್ರಕರಣ : ಇದು ಆರು ತಿಂಗಳಲ್ಲಿ ಅತಿ ಹೆಚ್ಚು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,016 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಇದು ಸುಮಾರು ಆರು ತಿಂಗಳಲ್ಲಿ ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣಗಳಾಗಿವೆ. ಇದೇ ವೇಳೆ 14 ಸಾವುಗಳು ವರದಿಯಾಗಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 13,509 ಕ್ಕೆ ಏರಿದೆ. ದೇಶದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 5,30,862 ರಷ್ಟಿದೆ. ಕಳೆದ 24 … Continued

ಏಪ್ರಿಲ್ 1ರಿಂದ ಅಗತ್ಯ ಔಷಧಿಗಳು ದುಬಾರಿ

ನವದೆಹಲಿ: ಏಪ್ರಿಲ್‌ನಿಂದ, ಭಾರತದಲ್ಲಿನ ನೋವು ನಿವಾರಕಗಳು, ಸೋಂಕುನಿವಾರಕಗಳು, ಹೃದಯ ಸಂಬಂಧಿ ಔಷಧಿಗಳು ಮತ್ತು ಪ್ರತಿಜೀವಕಗಳು (antibiotics) ಸೇರಿದಂತೆ ಅಗತ್ಯ ಔಷಧಿಗಳಿಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ವಾರ್ಷಿಕ ಸಗಟು ಬೆಲೆ ಸೂಚ್ಯಂಕದಲ್ಲಿ (ಡಬ್ಲ್ಯುಪಿಐ) ಬದಲಾವಣೆಗೆ ಅನುಗುಣವಾಗಿ ಬೆಲೆಗಳನ್ನು ಹೆಚ್ಚಿಸಲು ಔಷಧ ಕಂಪನಿಗಳಿಗೆ ಸರ್ಕಾರ ಅನುಮತಿ ನೀಡಿದೆ. 2022 ರಲ್ಲಿ ಸರ್ಕಾರವು ಸೂಚಿಸಿದಂತೆ ಡಬ್ಲ್ಯುಪಿಐ(WPI)ನಲ್ಲಿನ ವಾರ್ಷಿಕ ಬದಲಾವಣೆಯು 12.12% … Continued