ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ 8 ಭಾರತದ ನೌಕಾಪಡೆ ಮಾಜಿ ಅಧಿಕಾರಿಗಳ ಕುಟುಂಬದವರನ್ನು ಭೇಟಿಯಾದ ಜೈಶಂಕರ

ನವದೆಹಲಿ: ಕತಾರ್‌ನ ನ್ಯಾಯಾಲಯವು ಎಂಟು ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿಗಳಿಗೆ ಮರಣದಂಡನೆಯನ್ನು ಪ್ರಕಟಿಸಿದ ಕೆಲವು ದಿನಗಳ ನಂತರ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ ಅವರು ಸೋಮವಾರ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದಾರೆ ಹಾಗೂ ಈ ಪ್ರಕರಣವು ಸರ್ಕಾರಕ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ. ಭಾರತೀಯರ ಬಿಡುಗಡೆಗೆ ಸರ್ಕಾರ ಎಲ್ಲ ಪ್ರಯತ್ನವನ್ನೂ ಮಾಡಲಿದೆ ಎಂದು … Continued

ಎಸ್‌ಸಿಒ ಪ್ರಾದೇಶಿಕ ಸಭೆಯಲ್ಲಿ ಪಾಕ್ ಸಚಿವ ಉಪಸ್ಥಿತಿಯಲ್ಲೇ ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಪ್ರಬಲ ಹೇಳಿಕೆ ನೀಡಿದ ಭಾರತ

ನವದೆಹಲಿ : ಗೋವಾದಲ್ಲಿ ನಡೆದ ಶಾಂಘೈ  ಸಹಕಾರ ಸಂಘಟನೆ ( SCO) ವಿದೇಶಾಂಗ ಸಚಿವರ ಕೌನ್ಸಿಲ್‌ (ಸಿಎಫ್‌ಎಂ) ಸಭೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೊ-ಜರ್ದಾರಿ ಅವರನ್ನು ಸ್ವಾಗತಿಸಿದ ಕೆಲವೇ ನಿಮಿಷಗಳಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌ ಜೈಶಂಕರ್‌ ಗಡಿಯಾಚೆಗಿನ ‘ಭಯೋತ್ಪಾದನೆಯ ಬೆದರಿಕೆ’ಯ ಕುರಿತು ಪ್ರಬಲ ಹೇಳಿಕೆ ನೀಡಿದ್ದಾರೆ. ಭಯೋತ್ಪಾದನೆಯನ್ನು ಎದುರಿಸುವುದು ಎಸ್‌ಸಿಒ (SCO)ದ ಮೂಲ … Continued

ನಮ್ಮ ದೇಶದ ನಾಗರಿಕರಿಗೆ ಉತ್ತಮವಾದದ್ದನ್ನು ಖಚಿತಪಡಿಸುವುದು ನನ್ನ ನೈತಿಕ ಕರ್ತವ್ಯ: ರಷ್ಯಾದಿಂದ ತೈಲ ಖರೀದಿಗೆ ಜೈಶಂಕರ ಪ್ರತಿಕ್ರಿಯೆ

ನವದೆಹಲಿ: ಭಾರತೀಯರಿಗೆ ತೈಲಕ್ಕೆ ಹೆಚ್ಚಿನ ಬೆಲೆಯನ್ನು ಪಾವತಿಸಲು ಸಾಧ್ಯವಾಗುವುದಿಲ್ಲ, ಆದ್ದರಿಂದ ದೇಶವು ರಷ್ಯಾದೊಂದಿಗೆ ಕಚ್ಚಾ ತೈಲ ಒಪ್ಪಂದಗಳನ್ನು ಮುಂದುವರೆಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಹೇಳಿದ್ದಾರೆ. ನಾವು ನಮ್ಮ ಹಿತಾಸಕ್ತಿಗಳ ಬಗ್ಗೆ ತುಂಬಾ ಮುಕ್ತವಾಗಿದ್ದೇವೆ ಮತ್ತು ಪ್ರಾಮಾಣಿಕರಾಗಿದ್ದೇವೆ. ನಾನು 2000 ಅಮೆರಿಕನ್‌ ಡಾಲರ್‌ ತಲಾ ಆದಾಯ ಹೊಂದಿರುವ ದೇಶವನ್ನು ಪ್ರತಿನಿಧಿಸಿದ್ದೇನೆ. ಇವರು ಹೆಚ್ಚಿನ … Continued

ಗ್ರೆಟ್ಟಾ ಟೂಲ್‌ಕಿಟ್‌ ಟ್ವೀಟ್‌ ಮಾಡಿದ್ದು ಬಹಳಷ್ಟನ್ನು ಬಹಿರಂಗ ಪಡಿಸಿದೆ:ಜೈಶಂಕರ

  ಟೂಲ್ಕಿಟ್ ಬಗ್ಗೆ ವಿಶೇಶಾಂಗ ಸಚಿವ ಜೈಶಂಕರ ಅವರು ಶನಿವಾರ ಪ್ರತಿಕ್ರಿಯಿಸಿದ್ದಾರೆ. ಸ್ವೀಡನ್‌ನ ಹವಾಮಾನ ಕಾರ್ಯಕರ್ತೆ ಗ್ರೆಟ್ಟಾ ಥನ್‌ಬರ್ಗ್ ಅವರು ‘ಟೂಲ್‌ಕಿಟ್’ ಅನ್ನು ಟ್ವೀಟ್ ಮಾಡಿದ ನಂತರ ಇದು ಬಹಳಷ್ಟನ್ನು ಬಹಿರಂಗಪಡಿಸಿದೆ ಎಂದು ನಾನು ಭಾವಿಸುತ್ತೇನೆ. ಇನ್ನೇನು ಹೊರಬರುತ್ತದೆ ಎಂಬುದನ್ನು ನಾವು ನೋಡಬೇಕಾಗಿದೆ” ಎಂದು ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ. ರೈತರ ಪ್ರತಿಭಟನೆಯು ಅಂತಾರರಾಷ್ಟ್ರೀಯ … Continued

ಭಾರತದ ಕೊವಿಡ್‌ ಲಸಿಕೆಗೆ ೨೫ ದೇಶಗಳು ಕ್ಯೂನಲ್ಲಿ

ಅಮರಾವತಿ: ಭಾರತವು ಈವರೆಗೆ 15 ದೇಶಗಳಿಗೆ ಕೊವಿಡ್‌-19 ಲಸಿಕೆ ಪೂರೈಸಿದೆ ಮತ್ತು ಇನ್ನೂ 25 ರಾಷ್ಟ್ರಗಳು ಔಷಧಕ್ಕಾಗಿ ವಿವಿಧ ಹಂತಗಳಲ್ಲಿ ಸರದಿಯಲ್ಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಶನಿವಾರ ತಿಳಿಸಿದ್ದಾರೆ. ಭಾರತದಿಂದ ಲಸಿಕೆ ಪಡೆಯಲು ಉತ್ಸುಕರಾಗಿರುವ ಮೂರು ವರ್ಗಗಳ ದೇಶಗಳಿವೆ- ಬಡ, ಬೆಲೆ ಸೂಕ್ಷ್ಮ ರಾಷ್ಟ್ರಗಳು ಮತ್ತು ಇತರ ದೇಶಗಳು ನೇರವಾಗಿ ಔಷಧೀಯ … Continued