ಶರದ್ ಪವಾರ್ ವಿರುದ್ಧ ಟ್ವೀಟ್: ಎರಡು ಎಫ್ಐಆರ್‌ಗಳಲ್ಲಿ ನಿಖಿಲ್ ಭಾಮ್ರೆಗೆ ಬಾಂಬೆ ಹೈಕೋರ್ಟ್ ಮಧ್ಯಂತರ ಜಾಮೀನು

ಮುಂಬೈ: ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರ ವಿರುದ್ಧ ಆಕ್ಷೇಪಾರ್ಹ ಟ್ವೀಟ್‌ ಮಾಡಿ ಬಂಧನದಲ್ಲಿರುವ 21 ವರ್ಷದ ವಿದ್ಯಾರ್ಥಿ ನಿಖಿಲ್ ಭಾಮ್ರೆಗೆ ಎರಡು ಎಫ್‌ಐಆರ್‌ಗಳಲ್ಲಿ ಬಾಂಬೆ ಹೈಕೋರ್ಟ್‌ ಮಂಗಳವಾರ ಮಧ್ಯಂತರ ಜಾಮೀನು ನೀಡಿದೆ. ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ವಿದ್ಯಾರ್ಥಿ ಜೈಲಿನಲ್ಲಿದ್ದಾನೆ. ಇನ್ನು ಇದಕ್ಕೆ ಅನುಮತಿಸಲಾಗದು. ಪ್ರಕರಣ ಸಾರ್ವಜನಿಕ ಹಿತಾಸಕ್ತಿಯ ಕೆಲ … Continued

ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿಯಾಗಿ ರುಚಿರಾ ಕಾಂಬೋಜ್ ನೇಮಕ

ನವದೆಹಲಿ: ಭೂತಾನ್‌ಗೆ ಭಾರತದ ರಾಯಭಾರಿ ರುಚಿರಾ ಕಾಂಬೋಜ್, 1987ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) ಅಧಿಕಾರಿ ಮಂಗಳವಾರ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿಯಾಗಿ ನೇಮಕಗೊಂಡಿದ್ದಾರೆ. ಕಾಂಬೋಜ್ ಅವರು ಟಿಎಸ್ ತಿರುಮೂರ್ತಿ ನಂತರ ವಿಶವಸಂಸ್ಥೆಗೆ ಭಾರತೀಯ ರಾಯಭಾರಿಯಾಗಲಿದ್ದಾರೆ.. ಪ್ರಸ್ತುತ ಭೂತಾನ್‌ಗೆ ಭಾರತದ ರಾಯಭಾರಿಯಾಗಿರುವ ರುಚಿರಾ ಕಾಂಬೋಜ್ (IFS: 1987), ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಗೆ ಭಾರತದ ಮುಂದಿನ … Continued

ಬಿಜೆಪಿ ಜೊತೆ ಶಿವಸೇನೆ ಮೈತ್ರಿ ಮಾಡಿಕೊಂಡರೆ ಬಿರುಕು ಉಂಟಾಗುವುದಿಲ್ಲ: ಉದ್ಧವ್ ಠಾಕ್ರೆಗೆ ಹೇಳಿದ ಏಕನಾಥ್ ಶಿಂಧೆ

ಮುಂಬೈ: ಶಿವಸೇನೆ ನಾಯಕ ಮಿಲಿಂದ್ ನಾರ್ವೇಕರ್ ಅವರು ಮಂಗಳವಾರ ಗುಜರಾತ್‌ನ ಸೂರತ್‌ನಲ್ಲಿ ಬೀಡುಬಿಟ್ಟಿರುವ ಏಕನಾಥ್ ಶಿಂಧೆ ಮತ್ತು ಇತರ ಬಂಡಾಯ ಶಾಸಕರನ್ನು ಭೇಟಿಯಾದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ, ಮಿಲಿಂದ್ ನಾರ್ವೇಕರ್ ಅವರು ಏಕನಾಥ್ ಶಿಂಧೆ ಅವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುವಂತೆ ಮಾಡಿದರು … Continued

ರಾಷ್ಟ್ರಪತಿ ಚುನಾವಣೆಗೆ ಜಂಟಿ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಆಯ್ಕೆ

ನವದೆಹಲಿ: ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಜಂಟಿ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ಆಯ್ಕೆ ಮಾಡಲಾಗಿದೆ. ಸಿನ್ಹಾ ಅವರು ಜೂನ್ 27ರಂದು ಬೆಳಿಗ್ಗೆ 11:30ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಮಂಗಳವಾರ, ಟಿಎಂಸಿ ನಾಯಕ ಸಿನ್ಹಾ ಅವರು ದೊಡ್ಡ ರಾಷ್ಟ್ರೀಯ ಹಿತಾಸಕ್ತಿಗಾಗಿ ಕೆಲಸ ಮಾಡುವ ಸಮಯ ಬಂದಿದೆ ಎಂದು ಹೇಳಿದರು. ಉನ್ನತ ಹುದ್ದೆಗೆ … Continued

ಕ್ಲೌಡ್‌ಫ್ಲೇರ್ ಸ್ಥಗಿತದಿಂದ ಜಗತ್ತಿನಾದ್ಯಂತ ಅನೇಕ ವೆಬ್‌ಸೈಟ್‌ಗಳ ಪ್ರವೇಶಕ್ಕೆ ಕೆಲಕಾಲ ತೊಂದರೆ

ನವದೆಹಲಿ: ಜನಪ್ರಿಯ CDN ಆಯ್ಕೆ ಕ್ಲೌಡ್‌ಫ್ಲೇರ್‌ನಲ್ಲಿ ಕೆಲಕಾಲದ ಸ್ಥಗಿತವು- ಇಂದು ಪ್ರಪಂಚದಾದ್ಯಂತ ಹಲವು ಕಂಪನಿಗಳ ಅನೇಕ ವೆಬ್‌ಸೈಟ್‌ಗಳಿಗೆ ತೊಂದರೆಯಾಗಿದೆ. ಅನೇಕ ವೆಬ್‌ಸೈಟ್‌ಗಳಿಗೆ ಲಕ್ಷಾಂತರ ಜನರಿಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಇವುಗಳು ಡಿಸ್ಕಾರ್ಡ್, ಕ್ಯಾನ್ವಾ, ಸ್ಟ್ರೀಮ್ಯಾರ್ಡ್‌ನಂತಹ ವೆಬ್‌ಸೈಟ್‌ಗಳನ್ನು ಒಳಗೊಂಡಿವೆ ಮತ್ತು ಲಂಡನ್-ಆಧಾರಿತ ಸ್ಟಾರ್ಟ್ಅಪ್ ನಥಿಂಗ್‌ನ ಅಧಿಕೃತ ವೆಬ್‌ಸೈಟ್ ಅನ್ನು ಸಹ ಒಳಗೊಂಡಿವೆ. ಕ್ಲೌಡ್‌ಫ್ಲೇರ್ ಸ್ಥಗಿತವನ್ನು ಟ್ವೀಟ್ ಮೂಲಕ ಒಪ್ಪಿಕೊಂಡಿತು … Continued

ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಏಕನಾಥ್ ಶಿಂಧೆ ವಜಾ ಮಾಡಿದ ಶಿವಸೇನೆ: ಬಾಳಾಸಾಹೇಬರ ಚಿಂತನೆಗಳಿಗೆ ಎಂದಿಗೂ ಮೋಸ ಮಾಡಿಲ್ಲ ಎಂದ ಶಿಂಧೆ

ಮುಂಬೈ: ಏಕನಾಥ ಶಿಂಧೆ ಮತ್ತು ಅವರ ಪಕ್ಷದ ಕೆಲವು ಶಾಸಕರು ಸೂರತ್‌ನಲ್ಲಿ ಮೊಕ್ಕಾಂ ಹೂಡಿರುವ ಹಿನ್ನೆಲೆಯಲ್ಲಿ ಏಕನಾಥ್ ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ವಜಾ ಮಾಡಲು ಶಿವಸೇನೆ ಮಂಗಳವಾರ ನಿರ್ಧರಿಸಿದ್ದು, ಸೆವ್ರಿ ಶಾಸಕ ಅಜಯ್ ಚೌಧರಿ ಅವರು ಶಿವಸೇನೆಯ ನೂತನ ಶಾಸಕಾಂಗ ಪಕ್ಷದ ನಾಯಕರಾಗಲಿದ್ದಾರೆ. ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರದ ಕಾರ್ಯನಿರ್ವಹಣೆ ಹಾಗೂ … Continued

ಹೆರಿಗೆಯ ಸಮಯದಲ್ಲಿ ನವಜಾತ ಕತ್ತರಿಸಿ ಹೋದ ಶಿಶುವಿನ ತಲೆಯನ್ನು ಮಹಿಳೆಯ ಗರ್ಭದೊಳಗೆ ಹಾಗೆಯೇ ಬಿಟ್ಟ ವೈದ್ಯಕೀಯ ಸಿಬ್ಬಂದಿ…!

ಕರಾಚಿ: ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವೊಂದರಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗ್ರಾಮೀಣ ಆರೋಗ್ಯ ಕೇಂದ್ರದ ಅನನುಭವಿ ವೈದ್ಯಕೀಯ ಸಿಬ್ಬಂದಿ ಹೆರಿಗೆಯ ಸಮಯದಲ್ಲಿ ತಾಯಿಯ ಗರ್ಭದೊಳಗೆ ಜನಿಸಲಿರುವ ಮಗುವಿನ ಶಿರಚ್ಛೇದನ ಮಾಡಿ ಮಹಿಳೆಯ ಹೊಟ್ಟೆಯೊಳಗೆ ಬಿಟ್ಟ ನಂತರ ಮಹಿಳೆ ಜೀವಕ್ಕೆ ಅಪಾಯ ಎದುರಾದ ಘಟನೆ ವರದಿಯಾಗಿದೆ. ಈ ದುರಂತ ಘಟನೆಯನ್ನು ತನಿಖೆ ಮಾಡಲು ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲು ವೈದ್ಯಕೀಯ … Continued

ಶಿವಸೇನೆಯಲ್ಲಿ ಬಂಡಾಯ?: ಮಹಾರಾಷ್ಟ್ರ ಪರಿಷತ್‌ ಚುನಾವಣೆ ನಂತರ ಯಾರ ಸಂಪರ್ಕಕ್ಕೂ ಸಿಗದ ಸಚಿವ ಏಕನಾಥ್ ಶಿಂಧೆ, ಇತರ 15 ಶಾಸಕರು…!

ಮುಂಬೈ: ವಿಧಾನ ಪರಿಷತ್ತಿನ ಚುನಾವಣೆ ನಂತರ ಶಿವಸೇನಾ ನಾಯಕ ಮತ್ತು ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ, 10-12 ಶಾಸಕರ ಜೊತೆಗೆ ಸೋಮವಾರದಿಂದ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಹೇಳಲಾಗಿದ್ದು, ಇದು ಪಕ್ಷದೊಳಗೆ ಬಂಡಾಯದ ವದಂತಿಗಳನ್ನು ಹೆಚ್ಚಿಸಿದೆ. ಶಿವಸೇನೆಯ ಕೆಲವು ಶಾಸಕರ ಅಡ್ಡ ಮತದಾನದ ಆರೋಪದ ನಡುವೆಯೇ ಈ ಬೆಳವಣಿಗೆ ನಡೆದಿದೆ. ‘ಕಾಣೆಯಾದ’ ಶಿವಸೇನೆ ಶಾಸಕರು … Continued

ಕುಡಿದ ಅಮಲಿನಲ್ಲಿ ಯುವತಿಯರ ಬೀದಿ ರಂಪಾಟ; ಪೊಲೀಸನ ಕಾಲರ್‌ ಹಿಡಿದು ಒದ್ದ ಯುವತಿ | ವೀಕ್ಷಿಸಿ

ಸೋಷಿಯಲ್‌ ಮೀಡಿಯಾದಲ್ಲಿ ಕುಡಿದ ಮತ್ತಿನಲ್ಲಿದ್ದ ಯುವತಿಯರು ನೈಟ್‌ ಡ್ಯೂಟಿಯಲ್ಲಿರುವ ಪೊಲೀಸನಿಗೆ ಕಿಕ್‌ ಕೊಟ್ಟ ವೀಡಿಯೊ ವೈರಲ್‌ ಆಗಿದೆ. ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ರಾತ್ರಿ ವೇಳೆ ಪಾಳಿಯಲ್ಲಿದ್ದ ಪೊಲೀಸ್‌ ವಾಹನ ಚಲಾಯಿಸುವವರನ್ನು ತಡೆದು ಮದ್ಯಪಾನ ಮಾಡಿದ್ದಾರೆಯೇ ಎಂಬುದನ್ನು ಪರೀಕ್ಷಿಸುತ್ತಿದ್ದಾರೆ. ಈ ವೇಳೆ ಯುವತಿಯರಿದ್ದ ಕಾರನ್ನು ಪೊಲೀಸ್‌ ತಡೆದಿದ್ದಾರೆ. ಮದ್ಯಪಾನದ ಬಗ್ಗೆ ಪರೀಕ್ಷೆ ನಡೆಸುವುದಕ್ಕೂ … Continued

ಒಂದೇ ಸಮಾರಂಭದಲ್ಲಿ ಇಬ್ಬರು ಯುವತಿಯರನ್ನು ವಿವಾಹವಾದ ಜಾರ್ಖಂಡ್ ವರ

ಲೋಹರ್ದಗಾ (ಜಾರ್ಖಂಡ್‌): ಜಾರ್ಖಂಡದ ಲೋಹರ್ದಗಾ ಎಂಬ ಹಳ್ಳಿಯೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಗೆಳತಿಯರನ್ನು ಏಕಕಾಲದಲ್ಲಿ ವಿವಾಹವಾಗಿದ್ದಾನೆ. ಅಸಾಮಾನ್ಯ ವಿವಾಹವು ಮೂವರು ನವವಿವಾಹಿತರಿಗೂ ಒಪ್ಪಿಗೆಯಾಗಿತ್ತು. ಕುಸುಮ್ ಲಾಕ್ರಾ ಮತ್ತು ಸ್ವಾತಿ ಕುಮಾರಿ ಇಬ್ಬರೂ ಯುವತಿಯರು ವರ ಸಂದೀಪ್ ಓರಾನ್ ಅವರನ್ನು ಪ್ರೀತಿಸುತ್ತಿದ್ದರು ಮತ್ತು ಲೋಹರ್ದಗಾದ ಭಾಂದ್ರಾ ಬ್ಲಾಕ್‌ನ ಬಂಡಾ ಗ್ರಾಮದಲ್ಲಿ ಒಂದೇ ಸಮಯದಲ್ಲಿ ಮದುವೆಯಾಗಿದ್ದಾರೆ. ಸಂದೀಪ್ ಮತ್ತು … Continued