ಕುಪ್ವಾರ ಎನ್ ಕೌಂಟರ್: ಇಬ್ಬರು ಉಗ್ರರನ್ನು ಹೊಡೆದುರಳಿಸಿದ ಭದ್ರತಾ ಪಡೆಗಳು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾನುವಾರ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರಲ್ಲಿ ಒಬ್ಬಾತ ನಿಷೇಧಿತ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ನೊಂದಿಗೆ ಸಂಬಂಧ ಹೊಂದಿರುವ ಪಾಕಿಸ್ತಾನಿ ಎಂದು ಹೇಳಲಾಗಿದೆ. ಎರಡನೆಯವನ ಗುರುತು ಪತ್ತೆಹಚ್ಚಲಾಗುತ್ತಿದೆ ಎಂ ಪೊಲೀಸರು ಹೇಳಿದ್ದಾರೆ.ಅಲ್ಲದೆ, ಕುಲ್ಗಾಮ್ ಜಿಲ್ಲೆಯಲ್ಲಿ ಮತ್ತೊಂದು ಎನ್‌ಕೌಂಟರ್‌ ನಡೆಯುತ್ತಿದೆ ಎಂದು ಪೊಲೀಸರು … Continued

ಅಗ್ನಿಪಥ ಯೋಜನೆ ಬಗ್ಗೆ ಸುಳ್ಳು ಸುದ್ದಿ ಹರಡಿದ 35 ವಾಟ್ಸಾಪ್ ಗುಂಪುಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ

ನವದೆಹಲಿ: ಹೊಸ ಸೇನಾ ನೇಮಕಾತಿ ಯೋಜನೆ-ಅಗ್ನಿಪಥ್ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುವ ಆರೋಪದ ಮೇರೆಗೆ ಕೇಂದ್ರ ಸರ್ಕಾರವು ಭಾನುವಾರ 35 ವಾಟ್ಸಾಪ್ ಗುಂಪುಗಳನ್ನು ನಿಷೇಧಿಸಿದೆ. ತಪ್ಪು ಮಾಹಿತಿ ಹರಡುವ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡುವಲ್ಲಿ ತೊಡಗಿರುವ ಜನರನ್ನು ಸರ್ಕಾರ ಪತ್ತೆಹಚ್ಚುತ್ತಿದೆ ಎಂದು ಅದು ಹೇಳಿದೆ. ಅಗ್ನಿಪಥ ನೇಮಕಾತಿ ಯೋಜನೆ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿ ಯುವಕರನ್ನು … Continued

ರಿಯಲ್‌ ಸಿಂಗಂ…: ದೊಡ್ಡ ಮಚ್ಚು ಕೈಯಲ್ಲಿ ಹಿಡಿದುಕೊಂಡಿದ್ದ ದಾಳಿಕೋರನನ್ನು ಹೆಡೆಮುರಿ ಕಟ್ಟಿದ ಈ ನಿರಾಯುಧ ಪೋಲೀಸ್ ಅಧಿಕಾರಿ | ವೀಕ್ಷಿಸಿ

ನವದೆಹಲಿ: ದೊಡ್ಡ ಮಚ್ಚು ಹಿಡಿದುಕೊಂಡಿದ್ದ ದಾಳಿಕೋರನೊಬ್ಬನ್ನು ಆಯುಧವಿಲ್ಲದ ಪೊಲೀಸ್ ಅಧಿಕಾರಿಯೊಬ್ಬರು ಧೈರ್ಯದಿಂದ ಎದುರಿಸಿ ಬಗ್ಗುಬಡಿಯುತ್ತಿರುವ ವೀಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಕೇರಳದ ಕಾಯಂಕುಲಂ ಬಳಿಯ ಪಾರಾ ಜಂಕ್ಷನ್ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಪೊಲೀಸ್ ವಾಹನವು ಮಚ್ಚು ಬೀದಿ ಬದಿಯಲ್ಲಿ ನಿಂತಿರುವ ವ್ಯಕ್ತಿಯ ಪಕ್ಕದಲ್ಲಿ ನಿಲ್ಲುತ್ತಿರುವಾಗ ವೇಳೆ ವೀಡಿಯೊ ಸೆರೆಹಿಡಿದಿದೆ. ಪೊಲೀಸ್‌ ಅಧಿಕಾರಿ … Continued

ರಾಷ್ಟ್ರಪತಿ ಚುನಾವಣೆ: ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಲು ನಿರಾಕರಿಸಿದ ಫಾರೂಕ್ ಅಬ್ದುಲ್ಲಾ

ನವದೆಹಲಿ: ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಶನಿವಾರ ತಮ್ಮ ಹೆಸರನ್ನು ರಾಷ್ಟ್ರಪತಿ ಚುನಾವಣೆಗೆ ಒಮ್ಮತದ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಪರಿಗಣಿಸುವುದನ್ನು ತಾವು ನಿರಾಕರಿಸುವುದಾಗಿ ಹೇಳಿದ್ದಾರೆ. ನಿರ್ಣಾಯಕ ಘಟ್ಟವನ್ನು ದಾಟುತ್ತಿರುವ” ಜಮ್ಮು ಮತ್ತು ಕಾಶ್ಮೀರಕ್ಕೆ ಕೊಡುಗೆ ನೀಡಲು ನಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಮುಂದಿನ ತಿಂಗಳು ನಡೆಯುವ ಚುನಾವಣೆಗೆ ತಮ್ಮ ಹೆಸರನ್ನು ತಮ್ಮ … Continued

ಪ್ರಪಂಚದ ಅತ್ಯಂತ ತೇವಾಂಶದ ಸ್ಥಳದಲ್ಲಿರುವ ಜಲಪಾತವು ಈ ರೀತಿ ಕಾಣುತ್ತದೆ…ಈ ರಮಣೀಯ ದೃಶ್ಯ ವೀಕ್ಷಿಸಿ

ವಿಶ್ವದ ಅತ್ಯಂತ ತೇವಾಂಶದ ಸ್ಥಳದ ವೀಡಿಯೊವೊಂದನ್ನು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿದ್ದಾರೆ. ಈ ಕ್ಲಿಪ್‌ ಮೇಘಾಲಯದ ಮೌಸಿನ್ರಾಮ್‌ನಿಂದ ಬಂದಿದೆ. ಆನಂದ ಮಹೀಂದ್ರಾ ಅವರು ಟ್ವಿಟರ್ ಪೋಸ್ಟ್‌ನಲ್ಲಿ, ಮೌಸಿನ್ರಾಮ್ ಭೂಮಿಯ ಮೇಲಿನ ಅತ್ಯಂತ ತೇವವಾದ ಸ್ಥಳ ಎಂದು ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಅವರ ಜ್ಞಾನದ ಪ್ರಕಾರ, ಇದು ಚಿರಾಪುಂಜಿ, ಇದು ಮೌಸಿನ್ರಾಮ್‌ನಿಂದ 10 ಕಿಲೋಮೀಟರ್ … Continued

ಕೇವಲ 10 ರೂಪಾಯಿ ನಾಣ್ಯಗಳನ್ನು ನೀಡಿಯೇ 6 ಲಕ್ಷ ರೂಪಾಯಿ ಮೌಲ್ಯದ ಕಾರು ಖರೀದಿಸಿದ ವ್ಯಕ್ತಿ…!

ಜನರು 10 ರೂಪಾಯಿ ನಾಣ್ಯಗಳನ್ನು ಸ್ವೀಕರಿಸದ ಕಾರಣ ನಿರಾಶೆಗೊಂಡ ವ್ಯಕ್ತಿಯೊಬ್ಬರು ಕೇವಲ ನಾಣ್ಯಗಳನ್ನು ಬಳಸಿ ಕಾರು ಖರೀದಿಸಲು ನಿರ್ಧರಿಸಿ ನಂತರ ಕೇಔಲ 10 ರೂಪಾಯಿ ನಾಣ್ಯಗಳನ್ನು ಒಟ್ಟುಗೂಡಿಸಿ ನೀಡಿ ಕಾರು ಖರೀಸಿದ್ದಾರೆ…! ಧರ್ಮಪುರಿಯಲ್ಲಿ ಕಾರು ಖರೀದಿಸಲು 10 ರೂಪಾಯಿ ನಾಣ್ಯ ತುಂಬಿದ ವಾಹನದೊಂದಿಗೆ ಶೋರೂಮ್‌ಗೆ ಬಂದಾಗ ಪ್ರಮುಖ ವಾಹನ ಡೀಲರ್‌ನ ಉದ್ಯೋಗಿಗಳಿಗೆ ಭಾರಿ ಆಶ್ಚರ್ಯವಾಯಿತು. ಆರೂರ್‌ನ … Continued

ಅಗ್ನಿಪಥ’ ನೇಮಕಾತಿಗೆ ಅರ್ಜಿ ಸಲ್ಲಿಸುವವರು ಬೆಂಕಿ ಹಚ್ಚುವ ಘಟನೆಯ ಭಾಗವಾಗಿಲ್ಲ ಎಂದು ಪ್ರಮಾಣಪತ್ರ ನೀಡಬೇಕು

ನವದೆಹಲಿ: ಕೇಂದ್ರದ ಹೊಸ ಸೇನಾ ನೇಮಕಾತಿ ಯೋಜನೆ ‘ಅಗ್ನಿಪಥ’ ನೇಮಕಾತಿಗೆ ಅರ್ಜಿ ಸಲ್ಲಿಸುವವರು ದೇಶಾದ್ಯಂತ ಭುಗಿಲೆದ್ದ ಯಾವುದೇ ಹಿಂಸಾತ್ಮಕ ಪ್ರತಿಭಟನೆ ಅಥವಾ ಬೆಂಕಿ ಹಚ್ಚುವ ಘಟನೆಯ ಭಾಗವಾಗಿಲ್ಲ ಎಂದು ಪ್ರಮಾಣಪತ್ರ ಎಂದು ಉನ್ನತ ರಕ್ಷಣಾ ಅಧಿಕಾರಿಗಳು ಇಂದು, ಭಾನುವಾರ ತಿಳಿಸಿದ್ದಾರೆ. ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಉನ್ನತ ಅಧಿಕಾರಿಗಳ ಬ್ರೀಫಿಂಗ್‌ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮಿಲಿಟರಿ … Continued

ಅಸ್ಸಾಂ-ಮೇಘಾಲಯದಲ್ಲಿ ಪ್ರವಾಹದಿಂದ 42 ಮಂದಿ ಸಾವು: 35 ಲಕ್ಷಕ್ಕೂ ಹೆಚ್ಚು ಜನರು ಬಾಧಿತ

ಗುವಾಹತಿ: ಅಸ್ಸಾಂ ಮತ್ತು ಮೇಘಾಲಯದಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿ ಗೋಚರಿಸುತ್ತಿದೆ. ಎರಡೂ ರಾಜ್ಯಗಳಲ್ಲಿ ಕನಿಷ್ಠ 42 ಜನರು ಸಾವಿಗೀಡಾಗಿದ್ದಾರೆ ಮತ್ತು ಸುಮಾರು 40 ಲಕ್ಷ ಜನರು ಬಾಧಿತರಾಗಿದ್ದಾರೆ. ಅಸ್ಸಾಂರಾಜ್ಯದ 33 ಜಿಲ್ಲೆಗಳಲ್ಲಿ 32 ಈಗ ವಿನಾಶಕಾರಿ ಪ್ರವಾಹದಲ್ಲಿ ತತ್ತರಿಸಿದೆ. ಕಳೆದ 24 ಗಂಟೆಗಳಲ್ಲಿ ಕನಿಷ್ಠ ಎಂಟು ಮಂದಿ ಸಾವಿಗೀಡಾಗಿದ್ದಾರೆ. ರಾಜ್ಯದ 32 ಜಿಲ್ಲೆಗಳಲ್ಲಿ ಕನಿಷ್ಠ 30 … Continued

ಅಗ್ನಿಪಥ’ ಪ್ರತಿಭಟನೆ: ಸಿಕಂದರಾಬಾದ್ ಹಿಂಸಾಚಾರದ ‘ಮಾಸ್ಟರ್ ಮೈಂಡ್’ ಬಂಧನ

ಸಿಕಂದರಾಬಾದ್: ‘ಅಗ್ನಿಪಥ’ ನೇಮಕಾತಿ ಯೋಜನೆಗೆ ಸಂಬಂಧಿಸಿದಂತೆ ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಶುಕ್ರವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸೈನಿಕನೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನಾಕಾರರು ಹಲವಾರು ರೈಲುಗಳಿಗೆ ಬೆಂಕಿ ಹಚ್ಚಿದ ಹಿಂಸಾಚಾರದ ಹಿಂದಿನ ಮಾಸ್ಟರ್‌ಮೈಂಡ್ ಆವುಲಾ ಸುಬ್ಬಾ ರಾವ್ ಎಂದು ಹೇಳಲಾಗಿದೆ, ಹಿಂಸಾಚಾರದ ವೇಳೆ ಗುಂಪು ಚದುರಿಸಲು ಪೊಲೀಸರು ಗುಂಡು ಹಾರಿಸಿದಾಗ ಒಬ್ಬರು … Continued

ನನ್ನ ಮನದಾಳದ ಮಾತು ಆಡುವ ಮುನ್ನ ಎರಡು ಬಾರಿ ಯೋಚಿಸುತ್ತೇನೆ”: ವಿವಾದದ ನಂತರ ತನ್ನ ಹೇಳಿಕೆಗೆ ಸ್ಪಷ್ಟನೆ ನೀಡಿದ ನಟಿ ಸಾಯಿ ಪಲ್ಲವಿ

ನವದೆಹಲಿ: 90 ರ ದಶಕದಲ್ಲಿ ಕಾಶ್ಮೀರಿ ಪಂಡಿತರ ವಲಸೆಯ ಕುರಿತು ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ವಿವಾದಕ್ಕೆ ಕಾರಣವಾದ ನಂತರ ನಟಿ ಸಾಯಿ ಪಲ್ಲವಿ ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದ್ದಾರೆ. ಗ್ರೇಟ್ ಆಂಧ್ರದ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ನಟಿ ಧರ್ಮದ ಹೆಸರಿನಲ್ಲಿ ಹಿಂಸಾಚಾರವನ್ನು ಖಂಡಿಸಿದರು ಮತ್ತು ಕಾಶ್ಮೀರಿ ಪಂಡಿತರ ವಲಸೆ ತಪ್ಪಾದರೆ ಗೋವಿನ … Continued