ಓಡಿಹೋಗದಂತೆ ಮದರಸಾದಲ್ಲಿ ಇಬ್ಬರು ಹುಡುಗರನ್ನು ಸರಪಳಿಯಲ್ಲಿ ಕಟ್ಟಿದ ಮೌಲಾನಾ

ಲಕ್ನೋ: ಉತ್ತರ ಪ್ರದೇಶದ ಲಕ್ನೋದ ಮದರಸಾದಲ್ಲಿ ಓಡಿಹೋಗದಂತೆ ತಡೆಯಲು ಮೌಲಾನಾ ಇಬ್ಬರು ಹುಡುಗರ ಕಾಲುಗಳನ್ನು ಸರಪಳಿಯಲ್ಲಿ ಕಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಳೀಯರೊಬ್ಬರು ವಿಡಿಯೋ ಮಾಡಿ ಪೊಲೀಸರಿಗೆ ಕಳುಹಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಗಳನ್ನು ಮಕ್ಕಳನ್ನು ಬಿಡುಗಡೆಗೊಳಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಏತನ್ಮಧ್ಯೆ, ಮೌಲಾನಾ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ಬಯಸುವುದಿಲ್ಲ ಎಂದು ಬಾಲಕರ … Continued

ಜೂನ್ 1ರ ಮೊದಲು ಕೇರಳಕ್ಕೆ ಮುಂಗಾರು ಆಗಮನ : ಹವಾಮಾನ ಇಲಾಖೆ

ನವದೆಹಲಿ: ಮೇ 15 ರಂದು ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಮುಂಗಾರು ಅಪ್ಪಳಿಸಿದ ನಂತರ ಹವಾಮಾನ ಇಲಾಖೆಯು ಮೇ 27 ರಂದು ಮುಂಗಾರು ಕೇರಳವನ್ನು ತಲುಪುತ್ತದೆ ಎಂದು ಹೇಳಿತ್ತು. ಸಾಮಾನ್ಯವಾಗಿ ಇದು ಜೂನ್ 1 ರಂದು ಕೇರಳವನ್ನು ತಲುಪುತ್ತದೆ. ಆದರೆ ಈಗ ಜೂನ್ 1 ರ ಮೊದಲು ಕೇರಳದಲ್ಲಿ ಮುಂಗಾರು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತನ್ನ … Continued

ಭಾರತದ ಮೇಲೆ ಮಹಾ ಚಂಡಮಾರುತಗಳು ಅಪ್ಪಳಿಸಬಹುದು, ಹೆಚ್ಚು ವಿನಾಶಕಾರಿ ಪರಿಣಾಮ ಬೀರಬಹುದು: ಅಧ್ಯಯನ

ಲಂಡನ್: ಭಾರತ ದೇಶವು ಭವಿಷ್ಯದಲ್ಲಿ ಹಲವು ಸೂಪರ್ ಸೈಕ್ಲೋನ್ (ಮಹಾ ಚಂಡಮಾರುತ) ಎದುರಿಸಬೇಕಾದ ಸನ್ನಿವೇಶ ಬರಬಹುದು ಎಂದು ಲಂಡನ್‌ ತಜ್ಞರು ಎಚ್ಚರಿಸಿದ್ದಾರೆ. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ಸೇರಿದಂತೆ ಹಲವು ಮಾನವ ನಿರ್ಮಿತ ಅವಾಂತರಗಳಿಂದ ಇದು ಸಂಭವಿಸಬಹುದು ಎಂದು ತಜ್ಞರ ಸಂಶೋಧನಾ ವರದಿ ಎಚ್ಚರಿಸಿದೆ. ಬ್ರಿಟನ್‌ನ ಬ್ರಿಸ್ಟಾಲ್ ವಿದ್ಯಾಲಯದ ತಜ್ಞರು ಈ ಸಂಶೋಧನೆ ನಡೆಸಿದ್ದು, … Continued

40 ದಿನದ ಶಿಶುವಿನ ಹೊಟ್ಟೆಯೊಳಗೆ ಭ್ರೂಣ ಪತ್ತೆ…! ಇದು ವೈದ್ಯಕೀಯ ಅಚ್ಚರಿ ಎಂದ ವೈದ್ಯರು

ಮೋತಿಹರಿ (ಬಿಹಾರ): ಅಚ್ಚರಿಯ ವಿದ್ಯಮಾನವೊಂದರಲ್ಲಿ ಬಿಹಾರದ ಮೀತಿಹರಿಯ ರಹ್ಮಾನಿಯಾ ಆಸ್ಪತ್ರೆಯಲ್ಲಿ 40 ದಿನಗಳ ಶಿಶುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆಯಾಗಿದ್ದು, ಎಲ್ಲರನ್ನೂ ಬೆರಗಾಗಿಸಿದೆ..!. ಈ ವಿಶೇಷ ಪ್ರಕರಣವನ್ನು ಭ್ರೂಣದಲ್ಲಿಯೇ ಭ್ರೂಣ (fetus in fetu) ಎಂದು ವೈದ್ಯರು ಕರೆದಿದ್ದಾರೆ, ಕೆಲ ದಿನಗಳಿಂದ 40 ದಿನದ ಶಿಶುವಿಗೆ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ಮೂತ್ರ ಮಾಡದ ಕಾರಣ ಮಗುವಿನ ಹೊಟ್ಟೆ ಉಬ್ಬಿಕೊಂಡಿತ್ತು. … Continued

ಸೊಸೆ ತಮ್ಮ ವಿರುದ್ಧ ದೂರು ದಾಖಲಿಸಿದ ಮೂರು ದಿನಗಳ ನಂತರ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡ ಮಾಜಿ ಸಚಿವ

ನವದೆಹಲಿ: ಉತ್ತರಾಖಂಡದ ರಾಜಕಾರಣಿ ರಾಜೇಂದ್ರ ಬಹುಗುಣ ಅವರು ತಮ್ಮ ಮೊಮ್ಮಗಳಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಅವರ ಸೊಸೆ ಮೊಕದ್ದಮೆ ದಾಖಲಿಸಿದ ಮೂರು ದಿನಗಳ ನಂತರ, ಬುಧವಾರದಂದು ನೀರಿನ ಟ್ಯಾಂಕ್ ಹತ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಹುಗುಣ, 59, ವರದಿಯ ಪ್ರಕಾರ ಹಲ್ದ್ವಾನಿಯಲ್ಲಿರುವ ತನ್ನ ಮನೆಯಿಂದ ತುರ್ತು ಸಂಖ್ಯೆ 112ಕ್ಕೆ ಪೋಲಿಸ್‌ಗೆ ಕರೆ ಮಾಡಿ ತನ್ನ ಆತ್ಮಹತ್ಯೆಯ … Continued

ಲಡಾಖ್‌ನ ಶ್ಯೋಕ್ ನದಿಗೆ ಸೇನಾ ವಾಹನ ಉರುಳಿ 7 ಯೋಧರ ಸಾವು

ಶ್ರೀನಗರ: ಲಡಾಖ್‌ನ ಶ್ಯೋಕ್ ನದಿಯ ಬಳಿ ಶುಕ್ರವಾರ ಸೈನಿಕರನ್ನು ಒಯ್ಯುತ್ತಿದ್ದ ವಾಹನವೊಂದು ಸ್ಕಿಡ್ ಆಗಿ ಕಮರಿಗೆ ಉರುಳಿ ಏಳು ಯೋಧರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “26 ಸೈನಿಕರ ತಂಡವು ಪಾರ್ತಾಪುರದ ಟ್ರಾನ್ಸಿಟ್ ಕ್ಯಾಂಪ್‌ನಿಂದ ಸಬ್ ಸೆಕ್ಟರ್ ಹನೀಫ್‌ನ ಮುಂದಿನ ಸ್ಥಳಕ್ಕೆ ಹೋಗುತ್ತಿತ್ತು. ಸುಮಾರು ಬೆಳಿಗ್ಗೆ 9 ಗಂಟೆಗೆ, ಥೋಯಿಸ್‌ನಿಂದ 25 ಕಿಮೀ ದೂರದಲ್ಲಿ, ವಾಹನವು … Continued

ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಮಾಜಿ ಸಿಎಂ ಓಂ ಪ್ರಕಾಶ್ ಚೌತಾಲಾಗೆ 4 ವರ್ಷ ಜೈಲು ಶಿಕ್ಷೆ

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ ಅವರಿಗೆ ಶುಕ್ರವಾರ ದೆಹಲಿಯ ನ್ಯಾಯಾಲಯವು ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು 50 ಲಕ್ಷ ರೂ. ದಂಡದ ಶಿಕ್ಷೆ ಪ್ರಕಟಿಸಿದೆ. 87ರ ಹರೆಯದ ಚೌತಾಲಾ ಅವರನ್ನು ಕಳೆದ ಶನಿವಾರ ಮೇ 21ರಂದು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೆಹಲಿಯ ರೂಸ್ … Continued

ಮುಂಬೈ ಕ್ರೂಸ್‌ ಡ್ರಗ್ಸ್‌ ಪ್ರಕರಣ: ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್- ಸಮೀರ್ ವಾಂಖೆಡೆ ತಂಡದಿಂದ ತಪ್ಪಾಗಿದೆ ಎಂದ ಎನ್‌ಸಿಬಿ; ಕ್ಷಮಿಸಿ ನೋ ಕಾಮೆಂಟ್ಸ್‌ ಎಂದು ಸಮೀರ್‌ ವಾಂಖೆಡೆ

ನವದೆಹಲಿ: ಕಾರ್ಡೆಲಿಯಾ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್‌ಗೆ ತನಿಖಾ ಸಂಸ್ಥೆ ಕ್ಲೀನ್ ಚಿಟ್ ನೀಡಿದ ನಂತರ ಸಮೀರ್ ವಾಂಖೆಡೆ ನೇತೃತ್ವದ ಮೊದಲ ತನಿಖಾ ತಂಡದಲ್ಲಿ ದೋಷವಿತ್ತು ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಉಪ ಮಹಾನಿರ್ದೇಶಕರು ಹೇಳಿದ್ದಾರೆ. ಕಾರ್ಡೆಲಿಯಾ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್‌ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕ್ಲೀನ್ ಚಿಟ್ ನೀಡಿದೆ. ಈ … Continued

ದೆಹಲಿ ಗಲಭೆ ಆರೋಪಿ, ಪೊಲೀಸರತ್ತ ಗನ್ ತೋರಿಸಿದವನಿಗೆ ಹೀರೊ ರೀತಿ ಸ್ವಾಗತ….! ವೀಕ್ಷಿಸಿ

ನವದೆಹಲಿ: ಫೆಬ್ರವರಿ 2020ರ ಹಿಂಸಾಚಾರದ ವೇಳೆ ಪೊಲೀಸರತ್ತ ಬಂದೂಕು ತೋರಿಸಿ ಜೈಲು ಪಾಲಾದ ದೆಹಲಿ ಗಲಭೆ ಆರೋಪಿಯನ್ನು ನಾಲ್ಕು ಗಂಟೆಗಳ ಪೆರೋಲ್ ನೀಡಿದ ನಂತರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನೆರೆಹೊರೆಯವರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಅಸ್ವಸ್ಥರಾಗಿರುವ ತನ್ನ ತಂದೆಯನ್ನು ಭೇಟಿ ಮಾಡಲು ನಾಲ್ಕು ಗಂಟೆಗಳ ಪೆರೋಲ್ ಮಂಜೂರು ಮಾಡಿದ ನಂತರ ಶಾರುಖ್ ಪಠಾಣ್ ಸೋಮವಾರ ಮನೆಗೆ … Continued

ನನ್ನನ್ನು ಸಚಿವ ಸ್ಥಾನದಿಂದ ಮುಕ್ತಗೊಳಿಸಿ: ರಾಜಸ್ಥಾನ ಸಚಿವರ ಟ್ವೀಟ್‌, ಕಾಂಗ್ರೆಸ್ ಸಂಕಷ್ಟಕ್ಕೆ ಮುನ್ಸೂಚನೆ

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಆಪ್ತ ಸಚಿವರೊಬ್ಬರು ರಾಜ್ಯದ ಅಧಿಕಾರಶಾಹಿಯ ವಿರುದ್ಧ ತಮ್ಮ ಕೋಪವನ್ನು ಹೊರಹಾಕಿದ್ದಾರೆ ಮತ್ತು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಟ್ವೀಟ್‌ನಲ್ಲಿ, ರಾಜಸ್ಥಾನ ಸಚಿವ ಅಶೋಕ್ ಚಂದ್ನಾ ಅವರು ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರಿಗೆ ತಮ್ಮನ್ನು ಸಚಿವ ಸ್ಥಾನದಿಂದ ಬಿಡುಗಡೆ ಮಾಡುವಂತೆ ಮತ್ತು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಕುಲದೀಪ್ ರಾಂಕಾ ಅವರಿಗೆ … Continued