ಭಾರತದಿಂದ ರಫ್ತು ನಿಷೇಧದ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ದಾಖಲೆ ಏರಿಕೆ

ನವದೆಹಲಿ: ತೀವ್ರ ತಾಪಮಾನದಿಂದಾಗಿ ಗೋಧಿ ಉತ್ಪನ್ನದ ಮೇಲೆ ಪರಿಣಾಮದಿಂದ ಗೋಧಿ ರಫ್ತು ನಿಷೇಧಿಸಲು ಭಾರತ ನಿರ್ಧರಿಸಿದ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಸೋಮವಾರ ಗೋಧಿ ಬೆಲೆ ದಾಖಲೆಯ ಮಟ್ಟಕ್ಕೆ ಏರಿದೆ. ಯುರೋಪ್ ಮಾರುಕಟ್ಟೆ ಸೋಮವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ ಗೋಧಿ ಬೆಲೆ ಪ್ರತಿ ಟನ್‌ಗೆ 435 ಯುರೋಗಳಿಗೆ ($453) ಜಿಗಿದಿದೆ. ಈ ಹಿಂದೆ ಜಾಗತಿಕ ರಫ್ತಿನ ಶೇಕಡ … Continued

ಕಾಶ್ಮೀರ್ ಫೈಲ್ಸ್ ಸಿನಿಮಾದಿಂದ ಜಮ್ಮು -ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಪ್ರಚೋದನೆ: ಮೆಹಬೂಬಾ ಮುಫ್ತಿ

ಜಮ್ಮು: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರ್ ಫೈಲ್ಸ್ ಸಿನಿಮಾ ಭಯೋತ್ಪಾದನೆಗೆ ಪ್ರಚೋದನೆ ನೀಡಿದೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಾಬೂಬಾ ಮುಫ್ತಿ ಆರೋಪಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ವಾಸ್ತವ ಸಂಗತಿಯನ್ನು ಮುಚ್ಚಿಡುವ ಮೂಲಕ ಹಿಂದೂ-ಮುಸ್ಲಿಂರ ವಿವಾದವನ್ನಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಜಮ್ಮು ಮತ್ತು ಕಅಶ್ಮೀರದಲ್ಲಿ ನಾವು ಕಾಶ್ಮೀರಿ ಪಂಡಿತರಿಗೆ ಸುರಕ್ಷಿತ … Continued

ಜ್ಞಾನವಾಪಿ ಮಸೀದಿ ವೀಡಿಯೊಗ್ರಫಿ ಸಮೀಕ್ಷೆ: ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಅರ್ಜಿದಾರರ ಹೇಳಿಕೆ; ಪ್ರದೇಶ ಸೀಲ್‌ ಮಾಡಲು ಕೋರ್ಟ್‌ ಆದೇಶ

ವಾರಾಣಸಿ: ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಅರ್ಜಿದಾರರು ನೀಡಿದ ಹೇಳಿಕೆಯ ನಂತರ, ನ್ಯಾಯಾಲಯವು ಅದನ್ನು ಸಾರ್ವಜನಿಕರಿಗೆ ನಿರ್ಬಂಧಿಸಿ ಸೀಲ್‌ ಮಾಡುವಂತೆ ಇಂದು, ಸೋಮವಾರ ಆದೇಶಿಸಿದೆ. ಮಸೀದಿಯ ಹಿಂದಿರುವ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ಪ್ರವೇಶ ಕೋರಿ ಅರ್ಜಿ ಸಲ್ಲಿಸಿದ ನಂತರ ಮಸೀದಿ ಸಂಕೀರ್ಣದ ನ್ಯಾಯಾಲಯದ ಆದೇಶದ ಪ್ರಕಾರ … Continued

49 ಡಿಗ್ರಿ ಸೆಲ್ಸಿಯಸ್ ದಾಟಿದ ದೆಹಲಿಯ ತಾಪಮಾನ: ಮನೆಯಿಂದ ಹೊರಬರದಂತೆ ಮನವಿ

ನವದೆಹಲಿ: ಉತ್ತರ ಭಾರತದ ಕೆಲವು ಭಾಗಗಳು ಭಾನುವಾರ ತೀವ್ರ ಶಾಖದ ಅಲೆಯಿಂದ ಬೇಯುತ್ತಿದ್ದು, ದೆಹಲಿ ಮತ್ತು ಉತ್ತರ ಪ್ರದೇಶದ ಸ್ಥಳಗಳಲ್ಲಿ 49 ಡಿಗ್ರಿ ಸೆಲ್ಸಿಯಸ್ ಮತ್ತು ಅದಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ.ಕೇರಳದಾದ್ಯಂತ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಮತ್ತು ಐದು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ದೆಹಲಿಯಲ್ಲಿ, ಸಫ್ದರ್‌ಜಂಗ್ ವೀಕ್ಷಣಾಲಯವು 45.6 … Continued

ಪೋಪ್‌ರಿಂದ ಸಂತ ಎಂದು ಘೋಷಿಸಲ್ಪಟ್ಟ ಮೊದಲನೇ ಭಾರತೀಯ ದೇವಸಹಾಯಂ ಪಿಳ್ಳೈ

ವ್ಯಾಟಿಕನ್ ಸಿಟಿ: 18ನೇ ಶತಮಾನದಲ್ಲಿ ಕ್ರೈಸ್ತ ಧರ್ಮ ಸ್ವೀಕರಿಸಿದ ದೇವಸಹಾಯಂ ಪಿಳ್ಳೈ ಅವರನ್ನು ಭಾನುವಾರ ವ್ಯಾಟಿಕನ್‌ನಲ್ಲಿ ಪೋಪ್ ಫ್ರಾನ್ಸಿಸ್ ಅವರು ಸಂತ ಎಂದು ಘೋಷಿಸಿದ್ದಾರೆ ಹಾಗೂ ಅವರು ಸಂತ ಪದವಿ ಪಡೆದ ಮೊದಲ ಭಾರತೀಯರಾಗಿದ್ದಾರೆ. ಕೊಟ್ಟಾರ್ ಡಯಾಸಿಸ್, ತಮಿಳುನಾಡು ಬಿಷಪ್ಸ್ ಕೌನ್ಸಿಲ್ ಮತ್ತು ಕಾನ್ಫರೆನ್ಸ್ ಆಫ್ ಕ್ಯಾಥೋಲಿಕ್ ಬಿಷಪ್ಸ್ ಆಫ್ ಇಂಡಿಯಾದ ಕೋರಿಕೆಯ ಮೇರೆಗೆ 2004 … Continued

ತೊರೆಯಿರಿ ಅಥವಾ ಸಾವನ್ನು ಎದುರಿಸಿ: ಪುಲ್ವಾಮಾದಲ್ಲಿ ಕಾಶ್ಮೀರಿ ಪಂಡಿತರಿಗೆ ಬೆದರಿಕೆ ಹಾಕಿದ ಭಯೋತ್ಪಾದಕರ ಗುಂಪು..!

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಹವಾಲ್ ಟ್ರಾನ್ಸಿಟ್ ವಸತಿಗೃಹದಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರಿಗೆ ಲಷ್ಕರ್-ಎ-ಇಸ್ಲಾಂ ಎಂಬ ಭಯೋತ್ಪಾದಕ ಸಂಘಟನೆ ಬೆದರಿಕೆ ಹಾಕಿದೆ. ವಲಸಿಗರ ಕಾಲೋನಿ ಅಧ್ಯಕ್ಷರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ಗುಂಪು ಎಲ್ಲಾ ‘ವಲಸಿಗರು ಮತ್ತು ಆರ್‌ಎಸ್‌ಎಸ್ ಏಜೆಂಟರಿಗೆ’ “ತೊರೆಯಿರಿ ಅಥವಾ ಸಾವನ್ನು ಎದುರಿಸಿ” ಎಂದು ಹೇಳಲಾಗಿದೆ. ಅಲ್ಲದೆ, ಭಯೋತ್ಪಾದಕ ಗುಂಪು “ಕಾಶ್ಮೀರಿ … Continued

ಎನ್‌ಸಿಡಿಆರ್‌ಸಿ ಎಂಬುದು ನ್ಯಾಯಮಂಡಳಿ; ಅದರ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ನಿರ್ವಹಿಸಬಹುದು: ಸುಪ್ರೀಂಕೋರ್ಟ್‌

ನವದೆಹಲಿ:ಸಂವಿಧಾನದ 227 ಮತ್ತು 136 ನೇ ವಿಧಿಯ ಪ್ರಕಾರ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ‘ನ್ಯಾಯಮಂಡಳಿ’ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. . ಸಂವಿಧಾನದ 227ನೇವಿಧಿಯಡಿ ಸಲ್ಲಿಸಲಾದ ರಿಟ್ ಅರ್ಜಿ ವಿಚಾರಣೆ ವೇಳೆ ಎನ್‌ಸಿಡಿಆರ್‌ಸಿಯ ಆದೇಶಕ್ಕೆ ಈ ಹಿಂದೆ ದೆಹಲಿ ಹೈಕೋರ್ಟ್‌ ತಡೆಹಿಡಿದಿತ್ತು. ಈ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯೊಂದರ ವಿಚಾರಣೆ … Continued

ಕೃಷಿ ಕಾನೂನು ವಿರೋಧಿ ಹೋರಾಟದ ಮಂಚೂಣಿಯಲ್ಲಿದ್ದ ಭಾರತೀಯ ಕಿಸಾನ್ ಯೂನಿಯನ್ ಎರಡು ಹೋಳು; ಬಿಕೆಯು (ಎ) ಎಂಬ ಹೊಸ ಸಂಘಟನೆ ರಚನೆ

ನವದೆಹಲಿ: ಸುಮಾರು ಒಂದು ವರ್ಷಗಳ ಕಾಲ ಮೂರು ಕೃಷಿ ಕಾನೂನುಗಳ ವಿರುದ್ಧ ಹೋರಾಡುವ ಜವಾಬ್ದಾರಿಯನ್ನು ಹೊತ್ತಿದ್ದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು)  ಈಗ ಎರಡು ಹೋಳಾಗಿದೆ. ರಾಕೇಶ ಟಿಕಾಯತ್‌ ಅವರು ಸಂಘಟನೆಯನ್ನು ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ ಎಂದು ಆರೋಪಿಸಿ ಬಿಕೆಯು (ಎ) ಎಂಬ ಹೊಸ ರೈತ ಸಂಘಟನೆ ರಚನೆ ಮಾಡಲಾಗಿದ್ದು, ರೈತ ನಾಯಕ … Continued

ರಷ್ಯಾ ಅಧ್ಯಕ್ಷ ಪುತಿನ್‌ಗೆ “ಗಂಭೀರ ಆರೋಗ್ಯ ಸಮಸ್ಯೆ ಎಂದ ಮಾಜಿ ಸ್ಪೈ, ಬ್ಲಡ್ ಕ್ಯಾನ್ಸರ್ ಎನ್ನುತ್ತವೆ ಕೆಲ ವರದಿಗಳು

ಉಕ್ರೇನ್-ರಷ್ಯಾ ಯುದ್ಧ ಮುಂದುವರಿದ ಬೆನ್ನಿಗೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ( Vladimir Putin) ಅವರ ಆರೋಗ್ಯದ ಬಗ್ಗೆ ವದಂತಿಗಳು ಹೊರಬರುತ್ತಲೇ ಇವೆ. ಈಗ ಪುತಿನ್​​ ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಉಕ್ರೇನ್‌ನ ಮಿಲಿಟರಿ ಗುಪ್ತಚರ ಮುಖ್ಯಸ್ಥರು ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ವರದಿಗಳ … Continued

ಕೇರಳದ ಟ್ವೆಂಟಿ-20 ಪಾರ್ಟಿಯೊಂದಿಗೆ ಎಎಪಿ ಮೈತ್ರಿ ಘೋಷಿಸಿದ ಕೇಜ್ರಿವಾಲ್, ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ಭರವಸೆ

ಕೊಚ್ಚಿ: ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೇರಳದ ಟ್ವೆಂಟಿ-20 ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಭಾನುವಾರ ಘೋಷಿಸಿದ್ದಾರೆ. ಈ ಮೈತ್ರಿಗೆ ಜನ ಕಲ್ಯಾಣ ಮೈತ್ರಿ ಎಂದು ಹೆಸರಿಡಲಾಗುವುದು ಎಂದು ಅವರು ಹೇಳಿದ್ದಾರೆ. ಕೇರಳ ಇಲ್ಲಿಯವರೆಗೆ ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವಿನ ದ್ವಿಧ್ರುವಿ ಸ್ಪರ್ಧೆಗೆ ಸಾಕ್ಷಿಯಾಗಿದೆ. ಭಾರತೀಯ … Continued