ಯುಗಾದಿ ಮೆರವಣಿಗೆ ವೇಳೆ ಕಲ್ಲು ತೂರಾಟ: ನಾಲ್ವರು ಪೊಲೀಸ್‌ ಅಧಿಕಾರಿಗಳು ಸೇರಿ 42 ಜನರಿಗೆ ಗಾಯ

ಏಪ್ರಿಲ್ 2, ಶನಿವಾರದಂದು ರಾಜಸ್ಥಾನದ ಕರೌಲಿಯಲ್ಲಿ ಧಾರ್ಮಿಕ ಮೆರವಣಿಗೆಯ ಭಾಗವಾಗಿ ನಡೆದ ಮೋಟಾರ್‌ ಸೈಕಲ್ ರ್ಯಾಲಿಯ ಮೇಲೆ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರಿಂದ ನಾಲ್ವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 42 ಜನರು ಗಾಯಗೊಂಡಿದ್ದಾರೆ. ಹಿಂದೂ ಹೊಸ ವರ್ಷದ ಮೊದಲ ದಿನವಾದ ‘ನವ ಸಂವತ್ಸರ’ ಯುಗಾದಿ ಸಂದರ್ಭದಲ್ಲಿ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಘಟನೆಯ ನಂತರ ಪೊಲೀಸರು … Continued

ಭಾರತದಲ್ಲಿ ಈ ವರ್ಷದ ಮಾರ್ಚ್‌ನಲ್ಲಿ 122 ವರ್ಷಗಳಲ್ಲೇ ಅತಿ ಹೆಚ್ಚು ಉಷ್ಣತೆ ದಾಖಲು…!

ನವದೆಹಲಿ: ಭಾರತದಲ್ಲಿ ದಾಖಲೆಯ ಸರಾಸರಿ ಉಷ್ಣಾಂಶ ದಾಖಲಾಗಿದ್ದು, ಅದರ ಪರಿಣಾಮ ಏಪ್ರಿಲ್​ನಲ್ಲೂ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ. ಏಪ್ರಿಲ್​ನ ಮೊದಲ 10-15 ದಿನಗಳಲ್ಲಿ ಅತ್ಯಂತ ಉಷ್ಣಹವಾಮಾನ ಇರಲಿದ್ದು, ತೀವ್ರವಾದ ಶಾಖದ ಅಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. 2022ರ ಈ ಮಾರ್ಚ್​ನಲ್ಲಿ ಮಾಸಿಕ ಸರಾಸರಿ ಉಷ್ಣಾಂಶ 122 ವರ್ಷಗಳಲ್ಲೇ … Continued

ಬಿಜೆಪಿಗೆ ದುರಹಂಕಾರ ಬಂದಿದೆ… ಗುಜರಾತ್‌ನಲ್ಲಿ ಆಪ್ ಗೆ ಅವಕಾಶ ಕೊಡಿ: ಅರವಿಂದ್ ಕೇಜ್ರಿವಾಲ್

ನವದೆಹಲಿ: ‘ಮಿಷನ್ ಗುಜರಾತ್’ ಅನ್ನು ಗಮನದಲ್ಲಿಟ್ಟುಕೊಂಡು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) “ಒಂದು ಅವಕಾಶ” ಕೋರಿ ಅಹಮದಾಬಾದ್ ನಗರದಲ್ಲಿ ಮೆಗಾ ರೋಡ್‌ ಶೋ ನಡೆಸಿದರು. ಈ ವರ್ಷದ ಕೊನೆಯಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಹಮದಾಬಾದ್‌ನಲ್ಲಿ ಎಎಪಿ ನಾಯಕರು ಎರಡು … Continued

ಕಣಿವೆಗೆ ಉರುಳಿ ಬಿದ್ದ ಟ್ರಕ್: 7 ಸಾವು, 14 ಮಂದಿಗೆ ಗಾಯ

ತಿರುಪತ್ತೂರ: ದೇವಸ್ಥಾನಕ್ಕೆ ತೆರಳುತ್ತಿದ್ದ ಟ್ರಕ್ ಕಣಿವೆಗೆ ಬಿದ್ದ ಪರಿಣಾಮ 7 ಮಂದಿ ಮೃತಪಟ್ಟು, 14 ಮಂದಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ಸೆಂಬರೈ ಗ್ರಾಮದಲ್ಲಿ ನಡೆದಿದೆ. ದೇವಾಲಯವು ಸೆಂಬರೈ ಗ್ರಾಮದ ಬೆಟ್ಟದ ಮೇಲಿದೆ. ಈ ದೇವಾಲಯಕ್ಕೆ ತೆರಳುವಾಗ ವಾಹನದ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಮಹಿಳೆಯರೂ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡ 14 … Continued

ತನಗಿಂತ ಹತ್ತಿಪ್ಪತ್ತು ಪಟ್ಟು ದೊಡ್ಡ ಹಾವಿನ ಜೊತೆ ಹೋರಾಡಿ ಜೀವ ಉಳಿಸಿಕೊಂಡ ಪುಟ್ಟ ಕಪ್ಪೆಯ ರೋಚಕ ವೀಡಿಯೋ ನೋಡಿ

ವಿಶ್ವಾಸ, ಧೈರ್ಯ ಹಾಗೂ ಪ್ರಯತ್ನದಿಂದ ಎಂಥ ಸವಾಲನ್ನೂ ಎದುರಿಸಬಹುದು ಎಂಬುದನ್ನು ಪುಟ್ಟ ಕಪ್ಪೆಯೊಂದು ಮಾಡಿ ತೋರಿಸಿದೆ. ಈ ಪುಟ್ಟ ಕಪ್ಪೆ ಮಾರುದ್ದ ಹಾವಿನ ವಿರುದ್ಧ ಸತತ ಹೋರಾಟದ ಫಲವಾಗಿ ಸಾವಿನ ದವಡೆಯಲ್ಲಿದ್ದ ತನ್ನ ಪ್ರಾಣ ಉಳಿಸಿಕೊಂಡಿದೆ. ಆ ವೀಡಿಯೊದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನಗಿಂತ ಹತ್ತಿಪ್ಪತ್ತು ಪಟ್ಟು ದೊಡ್ಡದಾದ ಮತ್ತು ಬಲಶಾಲಿಯಾದ ಹಾವಿನ ಬಾಯಿಗೆ … Continued

ಐತಿಹಾಸಿಕ ಸುಂಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ-ಆಸ್ಟ್ರೇಲಿಯಾ ಸಹಿ

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ಶನಿವಾರ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಕ್ಯಾನ್‌ಬೆರಾ ತನ್ನ ಮಾರುಕಟ್ಟೆಯಲ್ಲಿ ಜವಳಿ, ಚರ್ಮ, ಆಭರಣ ಮತ್ತು ಕ್ರೀಡಾ ಉತ್ಪನ್ನಗಳಂತಹ 95 ಪ್ರತಿಶತಕ್ಕೂ ಹೆಚ್ಚು ಭಾರತೀಯ ಸರಕುಗಳಿಗೆ ಸುಂಕ ಮುಕ್ತ ಪ್ರವೇಶ ಒದಗಿಸಲಿದೆ. ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ … Continued

ಮಾತುಕತೆಯ ಮೂಲಕವೇ ಭಾರತದ ಜೊತೆ ಎಲ್ಲ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಸಿದ್ಧ; ಪಾಕ್ ಸೇನಾ ಮುಖ್ಯಸ್ಥ ಬಜ್ವಾ

ಇಸ್ಲಾಮಾಬಾದ್: ಭಾರತದೊಂದಿಗಿನ ಎಲ್ಲ ವಿವಾದಗಳನ್ನು ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಲು ಪಾಕಿಸ್ತಾನ ಸಿದ್ಧವಿದೆ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್‌ ಜಾವೇದ್‌ ಬಾಜ್ವಾ ಹೇಳಿದ್ದಾರೆ. ಇಸ್ಲಾಮಾಬಾದ್ ಭದ್ರತಾ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ವಿಷಯ ಪ್ರಸ್ತಾಪಿಸಿದ್ದಾರೆ. ಸಮಗ್ರ ಭದ್ರತೆ: ಅಂತಾರಾಷ್ಟ್ರೀಯ ಸಹಕಾರ ಪುನರ್ ರಚನೆ’ ಎಂಬ ವಿಷಯದ ಅಡಿಯಲ್ಲಿ ಎದುರಾಗುತ್ತಿರುವ ಭದ್ರತಾ ಸವಾಲುಗಳ ಬಗ್ಗೆ … Continued

ಟ್ವಿಟರ್‌ನಲ್ಲಿ ಪ್ರಧಾನಿ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಅನುಸರಿಸಲು ಪ್ರಾರಂಭಿಸಿದ ಅಖಿಲೇಶ್ ಯಾದವ್ ಚಿಕ್ಕಪ್ಪ ಶಿವಪಾಲ…ಮುಂದಿನ ನಡೆ..?

ಲಕ್ನೋ: ಸಮಾಜವಾದಿ ನಾಯಕ ಶಿವಪಾಲ್ ಸಿಂಗ್ ಯಾದವ್ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಅವರನ್ನು ಟ್ವಿಟರ್‌ನಲ್ಲಿ ಅನುಸರಿಸಲು ಪ್ರಾರಂಭಿಸಿದ್ದು, ಸಮಾಜವಾದಿ ಪಕ್ಷದ ನೇತೃತ್ವದ ವಿರೋಧ ಪಕ್ಷದ ಮೈತ್ರಿಯಲ್ಲಿನ ಊಹಾಪೋಹಗಳಿಗೆ ಮತ್ತಷ್ಟು ರೆಕ್ಕೆಪುಕ್ಕಗಳಿಗೆ ಕಾರಣವಾಗಿದೆ. ಇತ್ತೀಚಿನ ಸೇರ್ಪಡೆಗಳೊಂದಿಗೆ, ಯಾದವ್ ಈಗ … Continued

ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಶ್ರೀಲಂಕಾಕ್ಕೆ 40,000 ಟನ್ ಅಕ್ಕಿ ಕಳುಹಿಸುತ್ತಿರುವ ಭಾರತ

ನವದೆಹಲಿ: ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ಶನಿವಾರ ದ್ವೀಪ ದೇಶದಲ್ಲಿ ಅತ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ದೇಶದಲ್ಲಿನ ಇತ್ತೀಚಿನ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಅವರ ರಾಜೀನಾಮೆಗೆ ಒತ್ತಾಯಿಸಿ ಆಕ್ರಮಣಕಾರಿ ಪ್ರತಿಭಟನಾಕಾರರು ಅವರ ಮನೆಯ ಬಳಿ ಪ್ರತಿಭಟನೆ ನಡೆಸಿದ ಒಂದು ದಿನದ ನಂತರ ಈ ಘೋಷಣೆ ಹೊರಬಿದ್ದಿದೆ. ಇಂಧನ ಸೇರಿದಂತೆ ವಿವಿಧ ಉತ್ಪನ್ನಗಳ ಕೊರತೆಯನ್ನು ಪ್ರೇರೇಪಿಸುವ … Continued

ಮೊಬೈಲ್ ಫೋನ್‌ಗಳಲ್ಲಿ ಅಶ್ಲೀಲ ವೀಡಿಯೊಗಳು ಸುಲಭವಾಗಿ ಸಿಗುವುದೇ ಅತ್ಯಾಚಾರಕ್ಕೆ ಮುಖ್ಯ ಕಾರಣ : ಗುಜರಾತ್ ಗೃಹ ಸಚಿವ

ಅಹಮದಾಬಾದ್ : “ಅಶ್ಲೀಲ ವಿಡಿಯೋಗಳು ( ಪೋರ್ನ್ ವಿಡಿಯೋಗಳು) ಸುಲಭವಾಗಿ ಫೋನ್ ನಲ್ಲಿ ಸಿಗುವುದರಿಂದ ಭಾರತದಲ್ಲಿ ಅತ್ಯಾಚಾರಗಳಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಹೇಳಿದ್ದಾರೆ. ಅತ್ಯಾಚಾರದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ “ದೇಶದಲ್ಲಿ ಅತ್ಯಾಚಾರದಂತಹ ಪ್ರಕರಣಗಳು ನಡೆಯಲು ಮತ್ತೊಂದು ಪ್ರಮುಖ ಕಾರಣ, ನೆರೆ ಹೊರೆಯವರು, ಸಬಂಧಿಕರು ಅಪರಾಧಿಗಳಾಗುತ್ತಿದ್ದಾರೆ. ಯುವತಿಯರ … Continued