ಪಿಒಕೆ ಚುನಾವಣೆ: ಪಾಕ್‌ ಪ್ರಧಾನಿ ಇಮ್ರಾನ್ ಖಾನ್‌ ಪಕ್ಷಕ್ಕೆ ಗೆಲುವು

ಇಸ್ಲಾಮಾಬಾದ್‌: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಚುನಾವಣೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಭರ್ಜರಿ ಜಯಭೇರಿ ಭಾರಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈಗ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದೆ. ಸ್ಥಳೀಯ ಸುದ್ದಿವಾಹಿನಿಗಳ ವರದಿಯಂತೆ, ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಿಟಿಐ ಪಕ್ಷವು 23 ಸ್ಥಾನಗಳನ್ನು ಗೆದ್ದಿದೆ, ಪಾಕಿಸ್ತಾನ … Continued

ಅಮೆರಿಕ-ಮಿತ್ರ ರಾಷ್ಟ್ರಗಳ 1400 ಸರ್ಕಾರಿ ಅಧಿಕಾರಿಗಳ ಮೇಲೆ 2019ರಲ್ಲಿ ಎನ್ಎಸ್ಒ ಸ್ಪೈವೇರ್ ಬಳಸಿ ದಾಳಿ:ವಾಟ್ಸಾಪ್

ಪ್ರಪಂಚದಾದ್ಯಂತದ ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಗಳು ವಿಶೇಷವಾಗಿ ‘ಅಮೆರಿಕ ಮಿತ್ರರಾಷ್ಟ್ರಗಳ ಉನ್ನತ ಮಟ್ಟದ ರಾಷ್ಟ್ರೀಯ ಭದ್ರತಾ ಸ್ಥಾನಗಳಲ್ಲಿರುವವರು 2019 ರಲ್ಲಿ ಇಸ್ರೇಲಿ ಎನ್‌ಎಸ್‌ಒ ಗ್ರೂಪ್‌ನ ಸ್ಪೈವೇರ್ ಪೆಗಾಸಸ್ ಅನ್ನು ಬಳಸುವ ಸರ್ಕಾರಗಳ ಗುರಿಗಳಾದರು. ವಾಟ್ಸಾಪ್ ಸಿಇಒ ಪ್ರಕಾರ, ವರ್ಷದಲ್ಲಿ ಅಂತಹ 1,400 ಜನರನ್ನು ಗುರಿಯಾಗಿಸಲಾಗಿದೆ ಎಂದು ಬ್ರಿಟನ್‌ ದೈನಿಕ ದಿ ಗಾರ್ಡಿಯನ್ ವರದಿ ಮಾಡಿದೆ. ಎನ್‌ಎಸ್‌ಒ … Continued

ಅಮೆರಿಕ ಸೈನ್ಯದ ಹಿಂತೆಗೆದುಕೊಳ್ಳುವಿಕೆ-ತಾಲಿಬಾನ್‌ ಮುನ್ನಡೆ ಮಧ್ಯೆ ಅಫ್ಘಾನಿಸ್ತಾನದ ಅಬ್ದುಲ್ಲಾ-ಅಬ್ದುಲ್ಲಾ ದೆಹಲಿ ಭೇಟಿ

ನವದೆಹಲಿ: ಅಫ್ಘಾನಿಸ್ತಾನದ ಶಾಂತಿ ಮತ್ತು ಸಾಮರಸ್ಯ ಮುಖ್ಯಸ್ಥ ಅಬ್ದುಲ್ಲಾ-ಅಬ್ದುಲ್ಲಾ ಅವರು ದೆಹಲಿಯಲ್ಲಿ ಒಂದು ಸಣ್ಣ ಭೇಟಿಯಲ್ಲಿದ್ದಾರೆ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಭೇಟಿಯಾದರು. ಅವರ ಸಂಭಾಷಣೆಯ ವಿವರಗಳು ತಿಳಿದಿಲ್ಲ ಆದರೆ ಅವರು ಅಫ್ಘಾನಿಸ್ತಾನದ ಒಟ್ಟಾರೆ ಭದ್ರತಾ ಪರಿಸ್ಥಿತಿ ಮತ್ತು ಕಳೆದ ವಾರಾಂತ್ಯದಲ್ಲಿ ದೋಹಾದಲ್ಲಿ ತಾಲಿಬಾನ್ ಜೊತೆಗಿನ ಭೇಟಿಯ ವಿವರಗಳನ್ನು ಭಾರತಕ್ಕೆ ತಿಳಿಸಿರಬೇಕು. ಶೀಘ್ರದಲ್ಲೇ ಎರಡೂ … Continued

ರಷ್ಯಾದಲ್ಲಿ ಕೊರೊನಾ ವೈರಸ್ಸಿನ ಗಾಮಾ ರೂಪಾಂತರ ಪತ್ತೆ

ರಷ್ಯಾ : ಬ್ರೆಜಿಲ್ ನಲ್ಲಿ ಮೊದಲು ಪತ್ತೆಯಾದ ಕೊರೊನಾ ವೈರಸ್ ಗಾಮಾ ರೂಪಾಂತರವು ರಷ್ಯಾದಲ್ಲಿ ಸಣ್ಣ ಪ್ರಮಾಣದಲ್ಲಿ ಪತ್ತೆಯಾಗಿದೆ ಎಂದು ಇಂಟರ್ ಫ್ಯಾಕ್ಸ್ ಸುದ್ದಿ ಸಂಸ್ಥೆ ರಷ್ಯಾದ ಎಪಿವ್ಯಾಕ್ಕೊರೊನಾ ಲಸಿಕೆಯ ಹಿಂದಿನ ಡೆವಲಪರ್ ಗುರುವಾರ ತಿಳಿಸಿದೆ. ಡೆಲ್ಟಾ ರೂಪಾಂತರ (Delta variant ) ಮತ್ತು ಲಸಿಕೆಗಳ ನಿಧಾನಗತಿಯ ದರವನ್ನು ದೂಷಿಸಿದ ಅಧಿಕಾರಿಗಳು ಕೊರೊನಾ ವೈರಸ್ ಪ್ರಕರಣಗಳಲ್ಲಿ … Continued

ಭೂಮಿಯತ್ತ ಬರುತ್ತಿದೆ ಬೃಹತ್ ಕ್ಷುದ್ರಗ್ರಹ: ಜುಲೈ ೨೪ಕ್ಕೆ ಭೂಮಿ ಬಳಿಯೇ ಹಾದು ಹೋಗಲಿದೆ

ಬೆಂಗಳೂರು: ಪ್ರತಿ ಸೆಕೆಂಡ್‌ಗೆ ೮. ಕಿ.ಮೀ ವೇಗದಲ್ಲಿ ಅಂದರೆ ಗಂಟೆಗೆ ೨೮,೦೦೦ ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ಬ್ರಹದಾಕಾರದ ಕ್ಷುದ್ರ ಗ್ರಹವೊಂದು ಭೂಮಿಯತ್ತ ಧಾವಿಸಿ ಬರುತ್ತಿದೆ. ಇದು ಸ್ಟೇಡಿಯಂ ಗಾತ್ರದ ಬೃಹತ್ ಕ್ಷುದ್ರಗ್ರಹವಾಗಿದೆ. ೨೦೦೮ಜಿಒ೨೦ ಹೆಸರಿನ ಕ್ಷುದ್ರಗ್ರಹ ಜು.೨೪ ರಂದು ಭೂಮಿಯ ಸಮೀಪ ಸುರಕ್ಷಿತವಾಗಿ ಹಾದು ಹೋಗಲಿದೆ. ಕ್ಷುದ್ರಗ್ರಹ ಪ್ರತಿ ಗಂಟೆಗೆ ೨೮,೦೦೦ ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದು,  … Continued

ಇರಾಕ್ ನಲ್ಲಿ ಬಾಂಬ್ ಸ್ಫೋಟ: ೩೦ಕ್ಕೂ ಅಧಿಕ ಮಂದಿ ಸಾವು

ಬಾಗ್ದಾದ್: ಈದ್ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚು ಜನರು ಸೇರಿದ್ದ ಮಾರುಕಟ್ಟೆಯಲ್ಲಿ ಬಾಂಬ್ ಸ್ಪೋಟಗೊಂಡು ೩೦ಕ್ಕೂ ಅಧಿಕ ಜನರು ಮೃತಪಟ್ಟು ನೂರಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡ ಘಟನೆ ಇರಾಕ್ ರಾಜಧಾನಿ ಬಾಗ್ದಾದ್ ನ ಉಪನಗರ ಸದರ್ ಸಿಟಿಯಲ್ಲಿನ ಮಾರುಕಟ್ಟೆಯಲ್ಲಿ ಮಂಗಳವಾರ ಸಂಭವಿಸಿದೆ. ಈ ಬಾಂಬ್ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತಿದ್ದು, ಅಬು ಹಮ್ಜಾ ಅಲ್-ಇರಾಕಿ … Continued

ಕೊರೊನಾ ವೈರಸ್ಸಿನ ಡೆಲ್ಟಾ ರೂಪಾಂತರವು ಶೀಘ್ರದಲ್ಲೇ ಜಾಗತಿಕವಾಗಿ ಹೆಚ್ಚು ಪ್ರಬಲ ಸ್ಟ್ರೈನ್ ಆಗಲಿದೆ :ಡಬ್ಲ್ಯುಎಚ್‌ಒ

ಕೊರೊನಾ ವೈರಸ್ಸಿನ ಡೆಲ್ಟಾ ರೂಪಾಂತರವು ಶೀಘ್ರದಲ್ಲೇ ವಿಶ್ವದಾದ್ಯಂತ ಕೋವಿಡ್ -19 ರ ಅತ್ಯಂತ ಪ್ರಬಲವಾದ ಸ್ಟ್ರೈನ್ ಆಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ – ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕ ಪೂನಂ ಖೇತ್ರಪಾಲ್ ಸಿಂಗ್ ಸೋಮವಾರ ಹೇಳಿದ್ದಾರೆ. ಕೊರೊನಾ ವೈರಸ್ಸಿನ ಡೆಲ್ಟಾ ರೂಪಾಂತರವು ಈಗ ನೂರಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ. ಇದು ಹರಡುತ್ತಿರುವ ರೀತಿ, ಇದು … Continued

ಮಂಗೋಲಿಯಾ, ತಜಿಕಿಸ್ತಾನ ಮತ್ತು ಸ್ವಿಡ್ಜರ್ಲೆಂಡ್ ಕ್ರಿಕೆಟ್ ಜಗತ್ತಿಗೆ ಸೇರ್ಪಡೆ

ದುಬೈ: ಮಂಗೋಲಿಯಾ, ತಜಿಕಿಸ್ತಾನ ಮತ್ತು ಸ್ವಿಡ್ಜರ್ಲೆಂಡ್ ದೇಶಗಳನ್ನು ಹೊಸ ಸದಸ್ಯ ರಾಷ್ಟ್ರಗಳಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ೭೮ನೇ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಆಂಗೀಕರಿಸಿದೆ. ವರ್ಚುವಲ್ ಸಭೆಯಲ್ಲಿ ಮಂಗೋಲಿಯಾ ಹಾಗೂ ತಜಿಕಿಸ್ತಾನವನ್ನು ಏಷ್ಯಾ ಪ್ರದೇಶದ ೨೨ ಹಾಗೂ ೨೩ನೇ ಸದಸ್ಯರಾಷ್ಟ್ರಗಳಾಗಿ ಸೇರಿಸಿಕೊಳ್ಳಲಾಗಿದೆ. ಯೂರೋಪ್ ನ ೩೫ನೇ ಸದಸ್ಯ ದೇಶವಾಗಿ ಸ್ವಿಡ್ಜರ್ಲೆಂಡ್ ಸೇರ್ಪಡೆಯಾಗಿದೆ. ಇದೀಗ ಐಸಿಸಿ ೯೪ … Continued

ಚೀನಾದಲ್ಲಿ ಕೊರೊನಾ ವೈರಸ್‌, ಡಾಗ್‌ ವೈರಸ್‌ ಆಯ್ತು: ಈಗ ಮಂಕಿ ವೈರಸ್‌ ಪತ್ತೆ, ಪಶು ವೈದ್ಯನ ಸಾವು

ಬೀಜಿಂಗ್: ಕೊರೊನಾ ವೈರಸ್ ಈಗ ತನ್ನ ಮೂರನೇ ಅಲೆ ತೋರಿಸುತ್ತಿರುವ ಬೆನ್ನಲ್ಲೇ ಈಗ ಚೀನಾದಲ್ಲಿ ಮಂಕಿ ವೈರಸ್ ಪತ್ತೆಯಾಗಿದೆ. ಮಾರ್ಚ್ ಆರಂಭದಲ್ಲಿ ಮೃತಪಟ್ಟ ಎರಡು ಕೋತಿಗಳನ್ನು ಅಧ್ಯಯನ ನಡೆಸಿದ್ದ ಬೀಜಿಂಗ್ ಮೂಲದ ಪಶುವೈದ್ಯನೇ ಈ ಮಂಕಿ ಬಿ ವೈರಸ್ ಸೋಂಕಿಗೆ ತುತ್ತಾಗಿ ಸಾವಿಗೀಡಾಗಿದ್ದಾನೆ ಎಂದು ಚೀನಾದ ಸಿಡಿಸಿ ವೀಕ್ಲಿ ವರದಿ ಮಾಡಿದೆ. ಸಿಡಿಸಿ ವೀಕ್ಲಿ ವರದಿ … Continued

ಟೋಕಿಯೊ ಒಲಿಂಪಿಕ್ಸ್ ಗ್ರಾಮದಲ್ಲಿ ಇಬ್ಬರು ಅಥ್ಲೀಟುಗಳಿಗೆ ಕೊರೊನಾ ಪಾಸಿಟಿವ್..!

ಟೊಕಿಯೋ : ಟೋಕಿಯೊ ಒಲಿಂಪಿಕ್ಸ್ ಸಂಘಟಕರು ಭಾನುವಾರ ಇಬ್ಬರು ಆಥ್ಲೀಟ್‌ ಗಳು ಕೋವಿಡ್-19 ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ. ಒಲಿಂಪಿಕ್ ಹಿನ್ನೆಲೆಯಲ್ಲಿ ಕ್ರೀಡಾಗ್ರಾಮದಲ್ಲಿ ಜನಸಂಖ್ಯೆ ಹೆಚ್ಚಾಗಿರುವುದರಿಂದ ಕೊರೋನಾ ಪ್ರಕರಣವೂ ಹೆಚ್ಚುತ್ತಿದೆ. ಒಲಿಂಪಿಕ್ ವಿಲೇಜ್ ನಲ್ಲಿ ಉಳಿದಿರುವ ಇಬ್ಬರು ಕ್ರೀಡಾಪಟುಗಳಲ್ಲಿ ಕೊರೋನಾ ಸೋಂಕು ಕಂಡು ಬಂದಿದೆ. ಇನ್ನೊಬ್ಬ ಹೆಸರಿಸದ ಕ್ರೀಡಾಪಟು ಜಪಾನಿನ ರಾಜಧಾನಿ ಟೋಕಿಯೊಕ್ಕೆ ಆಗಮಿಸಿದ ನಂತರ … Continued