ಅಫ್ಘಾನಿಸ್ತಾನದಲ್ಲಿ ಬದುಕುಳಿಯಲು ಕುಟುಂಬಗಳಿಂದ ಮಕ್ಕಳು, ಅಂಗಾಂಗಳ ಮಾರಾಟ: ಒಂದು ಮಗುವಿನ ಬೆಲೆ 70 ಸಾವಿರ ರೂ.ಗಳಿಂದ ಆರಂಭ..!

ಕಾಬೂಲ್(ಅಫ್ಘಾನಿಸ್ತಾನ): ತಾಲಿಬಾನ್ ಆಡಳಿತಕ್ಕೆ ಬಂದ ನಂತರ ಅಫ್ಘಾನಿಸ್ತಾನದ ಜನರ ಬದುಕು ತೀರಾ ಸಂಕಷ್ಟಕ್ಕೀಡಾಗಿದೆ. ಹೇಗೋ ಜೀವನ ಸಾಗಿಸುತ್ತಿದ್ದ ಅಲ್ಲಿನ ನಾಗರಿಕರು ತಮ್ಮ ಕುಟುಂಬಗಳನ್ನು ರಕ್ಷಿಸಿಕೊಳ್ಳಲು ಈಗ ತಮ್ಮ ಮಕ್ಕಳನ್ನು ಮಾರಲು ಮತ್ತು ಅಂಗಾಂಗಗಳನ್ನು ಮಾರಲು ಮುಂದಾಗಿದ್ದಾರೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ…! ತಾಲಿಬಾನ್ ಅಧಿಕಾರ ಹಿಡಿಯುವುದಕ್ಕಾಗಿ ಆಫ್ಘನ್ ಪ್ರಜಾಪ್ರಭುತ್ವ ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿದಾಗ, ಬದುಕುಳಿಯಲು … Continued

ಈ ರೋಬೋಟ್ ಮಾನವನ ಭಾವನೆಗಳು-ಮುಖದ ಅಭಿವ್ಯಕ್ತಿಗಳನ್ನು ಅನುಕರಿಸಬಲ್ಲದು..!-ವೀಕ್ಷಿಸಿ

ನವದೆಹಲಿ: ಆಂಡ್ರಾಯ್ಡ್‌ಗಳು ಮತ್ತು ಹುಮನಾಯ್ಡ್‌ಗಳನ್ನು ತೋರಿಸಿದ ಟೋಟಲ್ ರೀಕಾಲ್ ಮತ್ತು ಏಲಿಯನ್ಸ್‌ನಂತಹ ವೈಜ್ಞಾನಿಕ ಫಿಲ್ಮ್‌ಗಳಿಂದ ನೀವು ಆಶ್ಚರ್ಯಚಕಿತರಾಗಿದ್ದರೆ, ಈಗ ಈ ಸುದ್ದಿಯೂ ಕುತೂಹಲವನ್ನುಂಟು ಮಾಡುತ್ತದೆ. ಮಾನವನ ಭಾವನೆಗಳು ಮತ್ತು ಮುಖಭಾವಗಳನ್ನು ಪುನರಾವರ್ತಿಸಿ ತೊರಿಸಲು ಪ್ರಯತ್ನಿಸುತ್ತಿರುವ ರೋಬೋಟ್ ಅನ್ನು ತೋರಿಸುವ ಕ್ಲಿಪ್ ವೈರಲ್ ಆಗಿದೆ. ಈ ರೋಬೋಟ್‌ಗೆ ಮಾನವನಂತಿರುವ ಕಣ್ಣುಗಳು, ಕೂದಲು, ಹುಬ್ಬುಗಳು, ಮೂಗು ಮತ್ತು ತುಟಿಗಳನ್ನು … Continued

ಆಘಾತಕಾರಿ… ಪ್ಲಾಸ್ಟಿಕ್‌ ತಾಜ್ಯ ತಿಂದು ಈವರೆಗೆ 20 ಆನೆಗಳು ಸಾವು..!

ಕಳೆದ ವಾರಾಂತ್ಯದಲ್ಲಿ ಇನ್ನೂ ಎರಡು ಆನೆಗಳು ಸತ್ತ ನಂತರ ಪೂರ್ವ ಶ್ರೀಲಂಕಾದಲ್ಲಿ ತೆರೆದ ಭೂ ಪ್ರದೇಶದ ಪ್ಲಾಸ್ಟಿಕ್ ತ್ಯಾಜ್ಯವು ಆನೆಗಳನ್ನು ಕೊಲ್ಲುತ್ತಿದೆ ಎಂದು ಸಂರಕ್ಷಣಾ ತಜ್ಞರು ಮತ್ತು ಪಶುವೈದ್ಯರು ಎಚ್ಚರಿಸಿದ್ದಾರೆ. ರಾಜಧಾನಿ ಕೊಲಂಬೊದಿಂದ ಪೂರ್ವಕ್ಕೆ 210 ಕಿಲೋಮೀಟರ್ (130 ಮೈಲುಗಳು) ದೂರದಲ್ಲಿರುವ ಅಂಪಾರಾ ಜಿಲ್ಲೆಯ ಪಲ್ಲಕ್ಕಾಡು ಗ್ರಾಮದ ಡಂಪ್‌ನಲ್ಲಿ ಪ್ಲಾಸ್ಟಿಕ್ ಕಸವನ್ನು ಸೇವಿಸಿದ ನಂತರ ಕಳೆದ … Continued

190 ವರ್ಷದ ಆಮೆ ವಿಶ್ವದ ಅತ್ಯಂತ ಹೆಚ್ಚು ಕಾಲ ಬದುಕಿದ ಭೂಮಿ ಮೇಲಿನ ಪ್ರಾಣಿಯಾಗಿ ಗಿನ್ನೆಸ್ ದಾಖಲೆಗೆ ಸೇರ್ಪಡೆ

ಸೇಂಟ್ ದ್ವೀಪದಲ್ಲಿ ಜೊನಾಥನ್ ಎಂಬ ಹೆಸರಿನ ಆಮೆ ಈಗ ವಿಶ್ವದ ಅತ್ಯಂತ ಹಿರಿಯ ಜೀವಂತ ಭೂ ಪ್ರಾಣಿ ಎಂಬ ಗಿನ್ನೆಸ್ ವಿಶ್ವ ದಾಖಲೆ ಸೇರಿದೆ. ಈಗ ಈ 190ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿದೆ. ಹಿಂದಿನ ಅತಿ ಹಿರಿಯ ಆಮೆ ತುಯಿ ಮಲಿಲಾ ಇದು 188 ವರ್ಷಗಳ ಕಾಲ ಬದುಕಿದೆ ಎಂದು ನಂಬಲಾಗಿದೆ. ಜೊನಾಥನ್ ಆಮೆ 1832ರಲ್ಲಿ … Continued

ಗಂಭೀರ ಕೋವಿಡ್‌-19 ಅಪಾಯ ದ್ವಿಗುಣಗೊಳಿಸುವ ಜೀನ್ ಪತ್ತೆ ಹಚ್ಚಿದ ಪೋಲಿಷ್ ವಿಜ್ಞಾನಿಗಳು..! ಭಾರತದಲ್ಲಿ 27%ರಷ್ಟು ಜನರಲ್ಲಿದೆ ಎಂದ ಸಂಶೋಧಕರು..!!

ಪೋಲಿಷ್ ವಿಜ್ಞಾನಿಗಳು ಕೋವಿಡ್ -19 ಸೋಂಕಿನಿಂದ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನು ದ್ವಿಗುಣಗೊಳಿಸುತ್ತದೆ ಎಂದು ಹೇಳುವ ಜೀನ್ ಅನ್ನು ಕಂಡುಹಿಡಿದಿರುವುದಾಗಿ ತಿಳಿಸಿದ್ದಾರೆ. ಈ ಆವಿಷ್ಕಾರವು ರೋಗದಿಂದ ಹೆಚ್ಚು ಅಪಾಯದಲ್ಲಿರುವ ಜನರನ್ನು ಗುರುತಿಸಲು ವೈದ್ಯರಿಗೆ ಸಹಾಯ ಮಾಡುತ್ತದೆ ಎಂದು ಅವರು ಭಾವಿಸುತ್ತಾರೆ. ಮಧ್ಯ ಮತ್ತು ಪೂರ್ವ ಯುರೋಪ್‌ನಲ್ಲಿ ಹೆಚ್ಚಿನ ಕೊರೊನಾ ವೈರಸ್ ಸಾವಿನ ಪ್ರಮಾಣಗಳ ಹಿಂದೆ ಲಸಿಕೆ … Continued

ಹೃದಯಸ್ಪರ್ಶಿ ಘಟನೆ…ವ್ಯಕ್ತಿ ಸತ್ತು 2 ತಿಂಗಳ ನಂತರವೂ ತನ್ನ ಮಾಲೀಕನ ಸಮಾಧಿ ಬಿಟ್ಟು ಬರದ ಬೆಕ್ಕು..!.

ಸಾಕುಪ್ರಾಣಿಗಳೊಂದಿಗಿನ ವ್ಯಕ್ತಿಯ ಬಾಂಧವ್ಯದ ಬಗ್ಗೆ ಹೆಚ್ಚಿನ ಹೃದಯಸ್ಪರ್ಶಿ ಕಥೆಗಳು ನಾಯಿಗಳನ್ನು ಒಳಗೊಂಡಿರುತ್ತವೆ, ಏಕೆಂದರೆ ನಾಯಿ ಅತ್ಯಂತ ನಿಷ್ಠಾವಂತ ಸಹಚರರಲ್ಲಿ ಒಂದು. ಆದರೆ ಇಲ್ಲಿ ಬೆಕ್ಕಿ ತನ್ನ ಒಡೆಯನ ಮೇಲೆ ತೋರಿದ ಪ್ರೀತಿ ಹಾಗೂ ನಿಷ್ಠೆ ಮೂಲಕ ಸುದ್ದಿಯಲ್ಲಿದೆ. ಸೆರ್ಬಿಯಾದ ಶೇಖ್ ಮುಅಮರ್ ಝುಕೋರ್ಲಿಯ ಮುದ್ದಿನ ಬೆಕ್ಕು ಈಗ ತನ್ನ ಒಡೆಯನಿಗೆ ತೋರಿದೆ ನಿಷ್ಠೆಯ ಮೂಲಕ ಸುದ್ದಿಯಲ್ಲಿದೆ. … Continued

ಚೀನಾದಲ್ಲಿ ಕೋವಿಡ್‌-19 ಸೋಂಕಿತರಿಗೆ ಕಠಿಣ ನಿರ್ಬಂಧ: ಲೋಹದ ಪೆಟ್ಟಿಗೆಗಳಲ್ಲಿ ಸೋಂಕಿತರ ವಾಸ..! ವೀಕ್ಷಿಸಿ

ಪ್ರಪಂಚದಾದ್ಯಂತ ಕೋವಿಡ್‌-19 ಪ್ರಕರಣಗಳ ಪ್ರಸ್ತುತ ಉಲ್ಬಣವು ವೈರಸ್ ಹರಡುವುದನ್ನು ತಡೆಯಲು ಕಟ್ಟುನಿಟ್ಟಾದ ನಿರ್ಬಂಧಗಳನ್ನು ವಿಧಿಸಲು ಹಲವಾರು ದೇಶಗಳನ್ನು ಪ್ರೇರೇಪಿಸಿದೆ, ಆದರೆ ಸಾಮಾಜಿಕ ಮಾಧ್ಯಮದಲ್ಲಿ ರೌಂಡ್ ಮಾಡುತ್ತಿರುವ ಕೆಲವು ಚೀನಾದ ವಿಡಿಯೊಗಳು ಚೀನಾ ಕೋವಿಡ್‌-19 ನಿಗ್ರಹಗಳನ್ನು ಸಂಪೂರ್ಣವಾಗಿ ಮತ್ತೊಂದು ಹಂತಕ್ಕೆ ತೆಗೆದುಕೊಂಡಿದೆ ಎಂಬುದನ್ನು ತೋರಿಸುತ್ತದೆ. ಅಲ್ಲಿನ ನಿವಾಸಿಗಳು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುತ್ತಿರುವ ವಿಡಿಯೊಗಳ ಸರಣಿಯಲ್ಲಿ, ಚೀನಾದಲ್ಲಿ … Continued

ಕೋವಿಡ್‌ ಲಸಿಕೆ ಹಾಕಿಸಿಕೊಳ್ಳದವರಿಗೆ ಓಮಿಕ್ರಾನ್‌ ಅಪಾಯಕಾರಿ ವೈರಸ್‌: ವೈರಸ್, ಉಲ್ಬಣದ ಮಧ್ಯೆ ಡಬ್ಲ್ಯುಎಚ್‌ಒ ಮುಖ್ಯಸ್ಥರ ಎಚ್ಚರಿಕೆ

ಜಿನೀವಾ: ಭಾರತ ಸೇರಿದಂತೆ ಪ್ರಪಂಚದಾದ್ಯಂತ ಕೋವಿಡ್-19 ಪ್ರಕರಣಗಳ ಬೃಹತ್ ಉಲ್ಬಣದ ಮಧ್ಯೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು, ಓಮಿಕ್ರಾನ್ ರೂಪಾಂತರವು ವಿಶೇಷವಾಗಿ ಲಸಿಕೆ ಹಾಕಿಸಿಕೊಳ್ಳದವರಿಗೆ “ಅಪಾಯಕಾರಿ ವೈರಸ್” ಎಂದು ಎಚ್ಚರಿಸಿದ್ದಾರೆ. ಓಮಿಕ್ರಾನ್ ಡೆಲ್ಟಾಕ್ಕಿಂತ ಕಡಿಮೆ ತೀವ್ರವಾದ ರೋಗವನ್ನು ಉಂಟುಮಾಡುತ್ತದೆ, ಆದರೆ ಇದು ಅಪಾಯಕಾರಿ ವೈರಸ್ ಆಗಿ ಉಳಿದಿದೆ, ವಿಶೇಷವಾಗಿ … Continued

ಡಿಎನ್​ಎ ಟೆಸ್ಟ್​ನಲ್ಲಿ ನಿಜಾಂಶ ಬಯಲಾಯ್ತು…14 ವರ್ಷಗಳಲ್ಲಿ ಹಾಲು ಮಾರಾಟಗಾರ 800 ಮಕ್ಕಳಿಗೆ ತಂದೆ..!

ದಕ್ಷಿಣ ಕ್ಯಾಲಿಫೋರ್ನಿಯಾದ ಹಾಲು ಮಾರಾಟಗಾರನೊಬ್ಬ 800 ಮಕ್ಕಳ ತಂದೆ ಎನ್ನುವ ಸತ್ಯವೊಂದು ಡಿಎನ್​ಎ ಪರೀಕ್ಷೆಯಲ್ಲಿ ಬಯಲಾಗಿದೆ ಎಂದು ಡೈಲಿ ಮೇಲ್​ ಸುದ್ದಿ ಸಂಸ್ಥೆ ವರದಿ ಮಾಡಿದೆ. 1950 ರಿಂದ 1964ರ ಅವಧಿಯಲ್ಲಿ ರಾಂಡಾಲ್​ ಎನ್ನುವ ವ್ಯಕ್ತಿ ಮನೆಮನೆಗೆ ಹಾಲು ಮಾರಾಟ ಮಾಡುತ್ತಿದ್ದ. ಆಗಿನ ಸಂದರ್ಭದಲ್ಲಿ ಹಾಲಿನ ಪ್ಯಾಕೆಟ್‌ಗಳು ಇಲ್ಲದ ಕಾರಣ ರಾಂಡಾಲ್​ ಸಾನ್​ ಡಿಗಿಯೋ ಸುತ್ತಮುತ್ತಲಿನ … Continued

ಬೆನ್ನಟ್ಟಿಕೊಂಡು ಬಂದ ಬೇಟೆಗಾರ ಕಾಡುಹಂದಿ ರೋಶಕ್ಕೆ ಇಂಗು ತಿಂದ ಮಂಗ..!: ರೋಚಕ ದೃಶ್ಯ ವೀಕ್ಷಿಸಿ

ಕಷ್ಟದ ಸಂದರ್ಭದಲ್ಲಿ ಸಮಯಪ್ರಜ್ಞೆ ಎಷ್ಟು ಮುಖ್ಯ ಎಂಬುದನ್ನು ಕಾಡುಹಂದಿಯೊಂದು ತೋರಿಸುತ್ತದೆ. ಈ ದೃಶ್ಯ ರೋಚಕವಾಗಿದೆಯೆಂದರೆ ಇಲ್ಲಿ ಕೊಲ್ಲುವ ಪ್ರಾಣಿಯೇ ಒದೆ ತಿನ್ನುತ್ತದೆ, ಆಹಾರವಾಗುವ ಪ್ರಾಣಿಯೇ ಕೊಲ್ಲುವ ಪ್ರಾಣಿಗೆ ಹೆದರಿಸುತ್ತದೆ. ಕೆಲವೊಂದು ಬೇಟೆಗಾರ ಎಷ್ಟೇ ಪಳಗಿದರೂ ಬೇಟೆಗಾರನೇ ತಬ್ಬಿಬ್ಬಾಗುವ ಪ್ರಸಂಗ ಎದುರಾಗುತ್ತದೆ ಎಂಬುದುಕ್ಕೆ ಈ ವಿಡಿಯೊ ಸಾಕ್ಷಿ. ವಿಡಿಯೊದಲ್ಲಿ ಚಿರತೆಗೆ ಆಹಾರವಾಗಬೇಕಿದ್ದ ಕಾಡುಹಂದಿಯೇ ಚಿರತೆಯನ್ನು ಅಟ್ಟಾಡಿಸುತ್ತದೆ. . … Continued