ಕರ್ನಾಟಕದಲ್ಲಿ ಆರು ಸಾವಿರಕ್ಕಿಂತ ಕಡಿಮೆಯಾದ ದೈನಂದಿನ ಕೋವಿಡ್‌ ಸೋಂಕು

ಬೆಂಗಳೂರು:ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸತತವಾಗಿ ಇಳಿಯುತ್ತಿದೆ. ರಾಜ್ಯದಲ್ಲಿ ಗುರುವಾರ 5,983 ಜನರಿಗೆ ಸೋಂಕು ದೃಢಪಟ್ಟಿದೆ. 138 ಜನರು ಮೃತಪಟ್ಟಿದ್ದಾರೆ ಹಾಗೂ ಇದೇ ಸಮಸಯದಲ್ಲಿ 10,685 ಮಂದಿ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ 1,209 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 17 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 27,90,338 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 26,101,57 ಮಂದಿ … Continued

ಯಾರೋ ನನ್ನ ಫೋನ್‌ ಕದ್ದಾಲಿಕೆ ಮಾಡ್ತಿದ್ದಾರೆ: ಶಾಸಕ ಬೆಲ್ಲದ ಆರೋಪ

ಬೆಂಗಳೂರು: ಶಾಸಕ ಅರವಿಂದ್​ ಬೆಲ್ಲದ್​ ಇದೀಗ ಫೋನ್ ಕದ್ಧಾಲಿಕೆಯ ಆರೋಪ ಮಾಡಿದ್ದಾರೆ. ನನ್ನ ಫೋನ್ ಟ್ಯಾಪ್ ಆಗಿದೆ. ನನ್ನನ್ನ ಫಾಲೋ ಮಾಡುತ್ತಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ಆರೋಪಿಸಿದ್ದಾರೆ. ಹತ್ತು ದಿನಗಳ ಹಿಂದೆ ಯುವರಾಜ ಸ್ವಾಮಿ ಕರೆ ಮಾಡಿದ್ದ. ಕರೆ ಮಾಡಿದ್ದರ ಹಿಂದೆ ದೊಡ್ಡ ಪಿತೂರಿ ಇದೆ ಅನಿಸುತ್ತಿದೆ ಎಂದು ಕುಮಾರಕೃಪಾ ಗೆಸ್ಟ್​ಹೌಸ್​ ಬಳಿ ಹುಬ್ಬಳ್ಳಿ-ಧಾರವಾಡ … Continued

ತಜ್ಞರ ಸಮಿತಿ ತೀರ್ಮಾನಿಸುವ ವರೆಗೆ ದ್ವಿತೀಯ ಪಿಯು ಫಲಿತಾಂಶ ಪ್ರಕಟ ಬೇಡ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ರಾಜ್ಯ ಸರ್ಕಾರವು ರಚಿಸಿದ ತಜ್ಞರ ಸಮಿತಿಯು ಸಮಗ್ರ ನಿರ್ಧಾರವನ್ನು ತೆಗೆದುಕೊಳ್ಳುವ ವರೆಗೆ ಈ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸದಂತೆ ಕರ್ನಾಟಕ ಹೈಕೋರ್ಟ್ ಗುರುವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ರಿಪೀಟರ್ಸ್‌ ಸೇರಿದಂತೆ ಎಲ್ಲ ವರ್ಗದ ವಿದ್ಯಾರ್ಥಿಗಳನ್ನು ಮನಸ್ಸಿನಲ್ಲಿಟ್ಟು ಈ ಆದೇಶ ಹೊರಡಿಸಲಾಗಿದೆ. ನ್ಯಾಯಮೂರ್ತಿ ಬಿ.ವಿ ನಾಗರತ್ನ ಮತ್ತು ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ … Continued

ಕರ್ನಾಟಕ ಅನ್ಲಾಕ್‌ 2.0: ಮಾಲ್, ಹೊಟೇಲ್‌, ಕಲ್ಯಾಣಮಂಟಪ ಆರಂಭಕ್ಕೆ ಹಸಿರು ನಿಶಾನೆ.. ಷರತ್ತುಗಳು ಅನ್ವಯಿಸುತ್ತವೆ..?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಕೆಯಾಗುತ್ತಿದ್ದು, ಮಾಲ್, ರೆಸ್ಟೋರೆಂಟ್, ಮದುವೆ ಮಂಟಪಗಳು, ಶಾಪಿಂಗ್ ಕಾಂಪ್ಲೆಕ್ಸ್ ಸೇರಿದಂತೆ ಕೆಲವೊಂದು ಆರ್ಥಿಕ ಚಟುವಟಿಕೆಗಳನ್ನು ಜೂ.21ರಿಂದ ಹಂತಹಂತವಾಗಿ ಪುನರಾರಂಭಿಸಬಹುದು. ನಿಯಂತ್ರಿತ ಸಂಖ್ಯೆಯ ಜನರು ಸೇರುವಂತೆ ನೋಡಿಕೊಳ್ಳಬೇಕು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. ಜೂನ್ ಅಂತ್ಯದವರೆಗೂ ರಾತ್ರಿ ಕರ್ಫ್ಯೂ ಮುಂದುವರೆಸಬೇಕು. ಸಾರ್ವಜನಿಕ ಜಾಥಾ. ಸಮಾವೇಶ, ಧರಣಿ, … Continued

ಜೂನ್​ 21ರಿಂದ ಬೆಂಗಳೂರಲ್ಲಿ ಬಿಎಂಟಿಸಿ ಬಸ್​ ಸಂಚಾರ ಆರಂಭ..?

ಬೆಂಗಳೂರು: ಸದ್ಯ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ. ಜೂನ್ 21ರಿಂದ 2ನೇ ಹಂತದ ಅನ್​ಲಾಕ್​ ಪ್ರಕ್ರಿಯೆ ಆರಂಭವಾಗಲಿದೆ. ​ ಆಗ ಇನ್ನೂ ಹೆಚ್ಚಿನ ವಿನಾಯಿಯಿ ಸಿಗುವ ಸುಳಿವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೀಡಿದ್ದಾರೆ.. ಬೆಂಗಲೂರಿನಲ್ಲಿ ದೈನಂದಿನ ಕೊರೊನಾ ಸೋಂಕು ಗಣನೀಯವಾಗಿ ಇಳಿಕೆಯಾಗುತ್ತಿರುವುದರಿಂದ ಬಿಎಂಟಿಸಿ ಬಸ್​ಗಳು ಜೂನ್​ 21ರಿಂದ ನಿರ್ದಿಷ್ಟ ಸಂಖ್ಯೆಯಲ್ಲಿ ಕಾರ್ಯಾಚರಣೆ ಆರಂಭಿಸಲಿವೆ ಎಂದು … Continued

ಕುಮಟಾ ಸರ್ಕಾರಿ ಆಸ್ಪತ್ರೆ ಡಯಾಲಿಸಿಸ್ ಕೇಂದ್ರಕ್ಕೆ ಮಾಜಿ ಶಾಸಕಿ ಶಾರದಾ ಶೆಟ್ಟಿ 50 ಸಾವಿರ ರೂ.ದೇಣಿಗೆ 

ಕುಮಟಾ :ದಿ.ಶಾಸಕ ಮೋಹನ ಶೆಟ್ಟಿಯವರ ಜನ್ಮ ದಿನದ ಪ್ರಯುಕ್ತ ದಿ. ಮೋಹನ ಕೆ. ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಮಾಜಿ ಶಾಸಕಿ ಶಾರದ ಶೆಟ್ಟಿ ಕುಮಟಾದ ಸರಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ 50 ಸಾವಿರ ರೂ.ಗಳ ದೇಣಿಗೆ ನೀಡಿದ್ದಾರೆ. ಆಸ್ಪತ್ರೆಯಲ್ಲಿರುವ ಒಳ ರೋಗಿಗಳು ಮತ್ತು ಕೋವಿಡ್ ಸೋಂಕಿತರಿಗೆ ಹಣ್ಣು ಮತ್ತು ಆಹಾರದ ಕಿಟ್ ವಿತರಿಸಿದರು.   ಈ … Continued

ಬೇರೆಯವರಿಗೆ ಸಿಎಂ ಬಿಎಸ್‌ವೈ ನಾಯಕತ್ವ ಬಿಟ್ಟುಕೊಡಲಿ ಎಂದ ಎಚ್‌ ವಿಶ್ವನಾಥ

ಬೆಂಗಳೂರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ, ಅವರಿಗೆ ಮೊದಲಿನಂತೆ ಕೆಲಸ ಮಾಡಲು ಆಗುತ್ತಿಲ್ಲ, ಹೀಗಾಗಿ ತಮ್ಮ ವಯಸ್ಸಿನ ಇತಿಮಿತಿ, ಆರೋಗ್ಯವನ್ನು ಮನಗಂಡು ಬೇರೆಯವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಮತ್ತೆ ಹೇಳಿದ್ದಾರೆ. ಬಿಜೆಪಿಯ ಕರ್ನಾಟಕದ ಉಸ್ತುವಾರಿ ಅರುಣ ಸಿಂಗ್‌ ಅವರ ಜೊತೆ ಒನ್‌ ಟು ಒನ್‌ ಸಭೆ ಮಾಡಿದ … Continued

ಕರ್ನಾಟಕದ ಕರಾವಳಿ -ಮಲೆನಾಡು ಜಿಲ್ಲೆಗಳಲ್ಲಿ ಎರಡು ದಿನ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ 2 ದಿನ ಭಾರಿ ಮಳೆಯಾಗಲಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ … Continued

ನಾಯಕತ್ವ ಬದಲಾವಣೆ ವಿಷಯ ಇಂದಿನ ಸಭೆಯಲ್ಲಿ ಬಂದಿಲ್ಲ: ಕಟೀಲು

ಬೆಂಗಳೂರು: ಜನರಿಗೆ ಉತ್ತಮ ಆಡಳಿತ ನೀಡುವುದು ಹೇಗೆ, ಸರ್ಕಾರದ ಆಡಳಿತವನ್ನು ಜನಸಾಮಾನ್ಯ ಬಳಿಗೆ ಕೊಂಡೊಯ್ಯುವುದು ಹೇಗೆ ಎಂಬುದರ ಕುರಿತು ಇಂದಿನ ನನ್ನ ಭೇಟಿಯ ಮೊದಲ ದಿನದ ಸಭೆಯಲ್ಲಿ ಚರ್ಚಿಸಲಾಯಿತು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಇಂದು (ಬುಧವಾರ) ರಾಜ್ಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಅಧಿಕೃತ ಸಭೆಯ ನಂತರ ಸುದ್ದಿಗಾರರೊಂದಿಗೆ , … Continued

300 ಚೀಲ ನಕಲಿ ರಸಗೊಬ್ಬರ ಪತ್ತೆ

ಕೊಪ್ಪಳ: ಗಂಗಾವತಿ ನಗರದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 300 ಚೀಲಗಳ ನಕಲಿ ರಸಗೊಬ್ಬರ ಪತ್ತೆಯಾಗಿದ್ದು, ಕೃಷಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ನಗರದ ಎಪಿಎಂಸಿ ಆವರಣದಲ್ಲಿರುವ ಮಳಿಗೆಯಲ್ಲಿ ಅಂಗಡಿ ಆರಂಭ ಮಾಡಿಕೊಂಡು ಕೆಲ ವ್ಯಕ್ತಿಗಳು ನಕಲಿ ರಸಗೊಬ್ಬರಗಳನ್ನು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ನಾನಾ ಬಗೆಯ ಬ್ರಾಂಡ್‍ಗಳ ಚೀಲಗಳಲ್ಲಿ ನಕಲಿ ರಸಗೊಬ್ಬರವನ್ನು ತುಂಬಿಕೊಂಡು ಸಿಂಧನೂರ, … Continued