ಅಖಂಡ ವಿರುದ್ಧ ಡಿಕೆಶಿ ಶಿಸ್ತುಕ್ರಮದ ಎಚ್ಚರಿಕೆ

ಬೆಂಗಳೂರು: ಡಿಜೆ ಹಳ್ಳಿ ಕೆಜೆಹಳ್ಳಿ ಪ್ರಕರಣ ಕುರಿತು ತಮ್ಮ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವ ಪುಲಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ. ಡಿಜೆಹಳ್ಳಿ-ಕೆಜೆಹಳ್ಳಿ ಪ್ರಕರಣದ ಆರೋಪಿ ಮಾಜಿ ಮೇಯರ್ ಸಂಪತ್ ಕುಮಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸದೇ ಡಿಕೆಶಿ ತಮಗೆ ಅನ್ಯಾಯ ಮಾಡುತ್ತಿದ್ದು, ಸಿದ್ದರಾಮಯ್ಯ ಜೊತೆಗೂಡಿ ದೆಹಲಿಯ ಹೈಕಮಾಂಡ್ … Continued

ನೌಕರಿ ಭರವಸೆ ನೀಡಿ ಯುವತಿ ಮೇಲೆ ಸಚಿವರಿಂದ ಲೈಂಗಿಕ ದೌರ್ಜನ್ಯವೋ ಅಥವಾ ಬ್ಲ್ಯಾಕ್‌ಮೇಲೋ..?

ಬೆಂಗಳೂರು: ರಾಜ್ಯದ ಜಲಸಂಪನ್ಮೂಲ ಸಚಿವ ಹಾಗೂ ಪ್ರಬಾವಿ ರಾಜಕಾರಣಿ ರಮೇಶ್ ಜಾರಕಿಹೊಳಿ ರಾಸಲೀಲೆ ನಡೆಸಿದ್ದಾರೆ ಎನ್ನಲಾದ ಸಿಡಿ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುತ್ತಿದೆ. ಯುವತಿಗೆ ಕೆಪಿಟಿಸಿಎಲ್ ನಲ್ಲಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿ ಸಚಿವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಎಂಬುವವರು ಈ … Continued

ಸಿಡಿ ಇದ್ದರೆ ಬಿಡುಗಡೆ ಮಾಡ್ಲಿ: ಯೋಗೀಶ್ವರಗೆ ಎಚ್‌ಡಿಕೆ ಸವಾಲು

ರಾಮನಗರ : ಸಚಿವ ಸಿ.ಪಿ‌.ಯೋಗೇಶ್ವರ್ ಮಟ್ಟಕ್ಕೆ ನಾನು ಇಳಿಯಲಾರೆ. ಅವರ ಬಳಿ ಅದೇನೋ ಸಿಡಿ ಇದ್ದರೆ ನಾಳೆಯೇ ಬಿಡುಗಡೆ ಮಾಡಲಿ. ಚನ್ನಪಟ್ಟಣ ಇಲ್ಲ ಎಲ್ಲಾದರೂ ಬರಲಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ಮಾಡುವುದು ಅವರೊಬ್ಬರಿಗೇ ಅಲ್ಲ, ನನಗೂ ಗೊತ್ತಿದೆ. ಸಚಿವ ಯೋಗೀಶ್ವರ್ ಹೇಳಿರುವಂತ ಆ ಸವಾಲನ್ನ … Continued

ಜೆಡಿಎಸ್‌ಗೆ ಮಧು ಬಂಗಾರಪ್ಪ ಗುಡ್‌ ಬೈ..?

ಶಿವಮೊಗ್ಗ: ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಅವರು ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದ್ದ ಬೆನ್ನಲ್ಲೇ ಇದಕ್ಕೆ ಇದಕ್ಕೆ ಪುಷ್ಟಿನೀಡುವಂತೆ ಮುಂಬರುವ ಜಿಲ್ಲಾ ಪಂಚಾಯ್ತಿ ಚುನಾವಣೆಯ ಒಳಗೆ ಈ ಕುರಿತು ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಕಲ್ಲಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಜನ್ಮದಿನದ ನಿಮಿತ್ತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ … Continued

ಜೆಡಿಎಸ್‌ ನಂಬಿಕೆಗೆ ಅರ್ಹ ಪಕ್ಷವಲ್ಲ

ಮೈಸೂರು : ಜೆಡಿಎಸ್ ಗೆ ಶಕ್ತಿ ತುಂಬಿದರೆ ನಮಗೇ ಮಾರಕ, ಯಾಕೆಂದರೆ ಜೆಡಿಎಸ್ ಯಾವುದೇ ಕಾರಣಕ್ಕೂಪೂರ್ಣ ನಂಬಿಕೆ ಇಡುವ ಪಕ್ಷವಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜೆಡಿಎಸ್ ಅನ್ನು ಯಾವುದೇ ಕಾರಣಕ್ಕೂ ನಂಬುವಂತಿಲ್ಲ. ಬಿಜೆಪಿ ಪ್ರಬಲವಾಗಿ ಕಟ್ಟಬೇಕು. ಅದೇ ನನ್ನ ಉದ್ದೇಶ.ಈ ವಿಚಾರವನ್ನು ನಾನು ಪಕ್ಷದ ವರಿಷ್ಠರ … Continued

ದೇವೇಂದ್ರಪ್ಪ, ಆಪ್ತನ ಮನೆ ಮೇಲೆ ಎಸಿಬಿ ದಾಳಿ

ಬೆಂಗಳೂರು: ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದು ನೌಕರಿಯಿಂದ ಅಮಾನತುಗೊಂಡಿರುವ ಬಿಬಿಎಂಪಿ ನಗರ ಯೋಜನೆ ವಿಭಾಗದ ಸಹಾಯಕ ಅಭಿಯಂತರ ದೇವೇಂದ್ರಪ್ಪ ಆಪ್ತರ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. . ದೇವೇಂದ್ರಪ್ಪ ಅವರ ಆಪ್ತ ಶ್ರೀನಿವಾಸ ಮೂರ್ತಿ ಅವರ ಅಲಸೂರು ಗುಪ್ತ ಲೇ ಔಟ್‍ನಲ್ಲಿರುವ ನಿವಾಸದ ಮೇಲೆ ಹಾಗೂ ದೇವೇಂದ್ರಪ್ಪ ಅವರ ಅಮೃತನಗರದ ಸಿ ಸೆಕ್ಟರ್ ಮನೆ … Continued

ಅಪಘಾತದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಚಿಟ್ಟಾಣಿಗೆ ಗಂಭೀರ ಗಾಯ

ಹೊನ್ನಾವರ: ರಸ್ತೆ ಅಪಘಾತದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕರೆದೊಯ್ಯಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಡಿನಬಾಳದಲ್ಲಿ ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿಯಾಗಿ ಅವರಿಗೆ ಗಂಭೀರ ಗಾಯಗಳಾಗಿದ್ದು, ಹೊನ್ನಾವರದಲ್ಲಿ ಚಿಕಿತ್ಸೆ ಕೊಡಿಸಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕರೆದೊಯ್ಯಲಾಗಿದೆ. ಅವರ ಮುಖದ ಭಾಗಕ್ಕೆ ಸ್ವಲ ಗಾಯಗಳಾಗಿದ್ದು … Continued

ಅರ್ಚಕ ನೌಕರಿ ಬ್ರಾಹ್ಮಣರಿಗೆ ಮೀಸಲಿಡಬೇಕು

ಮೈಸೂರು: ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಿಗೆ ರಾಜ್ಯ ಸರ್ಕಾರವು ಸಮಾಜದ ಎಲ್ಲಾ ವರ್ಗದ ಜನರನ್ನು ಅರ್ಚಕರನ್ನಾಗಿ ನೇಮಿಸುತ್ತಿದೆ, ಸರ್ಕಾರ ಹೀಗೆ ಮಾಡದೇ ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಅರ್ಚಕ ಉದ್ಯೋಗವನ್ನು ಮೀಸಲಿಡಬೇಕು ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಜಿ ತಿಳಿಸಿದ್ದಾರೆ. ಮೈಸೂರಿನ ಖಾಸಗಿ ಸಭಾಂಗಣದಲ್ಲಿ ಜಿಲ್ಲಾ ಮತ್ತು ನಗರ ಬ್ರಾಹ್ಮಣ ಸಂಘ … Continued

ಭಯವಿಲ್ಲದೆ ಕೋವಿಡ್‌ ಲಸಿಕೆ ಪಡೆಯಿರಿ: ಸಚಿವ ಸುಧಾಕರ

ಶಿರಸಿ: ಮೂರನೇ ಹಂತದ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿದ್ದು, ಯಾವುದೇ ವದಂತಿಗಳಿಗೆ ಕಿವಿಗೊಡದೆ ವಿಶ್ವಾಸದಿಂದ ಲಸಿಕೆ ಪಡೆಯಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಶಿರಸಿಯಲ್ಲಿ ಕೋವಿಡ್ ಲಸಿಕೆ ಅಭಿಯಾನದ ೩ನೇ ಹಂತಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೊದಲ ಹಂತದ ಕೋವಿಡ್ ಲಸಿಕೆ ಬೆಂಗಳೂರು, ಎರಡನೇ ಹಂತದ ಲಸಿಕೆ ಹೈದರಾಬಾದ್ ಕರ್ನಾಟಕ ಹಾಗೂ … Continued

ಮೈಸೂರು ಮಹಾಪೌರ ಚುನಾವಣಾ ಮೈತ್ರಿ ಗೊಂದಲ ಸಣ್ಣ ವಿಚಾರ: ಡಿಕೆಶಿ

ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಚುನಾವಣಾ ಮೈತ್ರಿ ಗೊಂದಲ ಸಣ್ಣ ವಿಚಾರವಾಗಿದ್ದು, ಇದನ್ನು ಪಕ್ಷದೊಳಗೆ ಬಗೆಹರಿಸಿಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು. ಸಿದ್ದರಾಮಯ್ಯ ಅವರು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲ ಅವರ ಪುತ್ರನ ಮದುವೆಗೆ ದೆಹಲಿಗೆ ಹೋಗಿದ್ದಾರೆ. ನಾನೂ ಹೋಗಬೇಕಿತ್ತು. ಆದರೆ ಮನೆಯಲ್ಲಿ ಕೆಲಸ ಇದ್ದುದರಿಂದ ಹೋಗಲು ಸಾಧ್ಯವಾಗಲಿಲ್ಲ ಎಂದರು. ಮೈಸೂರು ಮಹಪೌರ ಚುನಾವಣೆ … Continued