ಅಂಬಲಿ ಹಳಸೀತು ಕಂಬಳಿ ಬೀಸಿತಲೇ ಪರಾಕ್’; ಕಾರಣಿಕ ವಾಣಿ

ವಿಜಯನಗರ : ‘ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್’ ಎಂದು ಕರ್ನಾಟಕದ ವಿಜಯನಗರ ಜಿಲ್ಲೆಯ ಐತಿಹಾಸಿಕ ಶ್ರೀ ಕ್ಷೇತ್ರ ಮೈಲಾರಲಿಂಗೇಶ್ವರ ವಾರ್ಷಿಕೋತ್ಸವದಲ್ಲಿ ಗೊರವಯ್ಯ ರಾಮಪ್ಪಜ್ಜ ಕಾರಣಿಕ  ನುಡಿದಿದ್ದಾರೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಮೈಲಾರಲಿಂಗೇಶ್ವರ ವಾರ್ಷಿಕೋತ್ಸವ ಇಂದು, ಮಂಗಳವಾರ ಅದ್ಧೂರಿಯಾಗಿ ನಡೆಯಿತು. ಗೊರವಯ್ಯ ರಾಮಪ್ಪಜ್ಜ 11 ದಿನಗಳ ಕಾಲ ಉಪವಾಸವಿದ್ದು … Continued

ಚೆನ್ನೈ ಬಂದರಿನಲ್ಲಿ ದೇಶಕ್ಕೆ ಅಕ್ರಮವಾಗಿ ತರುತ್ತಿದ್ದ 114 ಮೆಟ್ರಿಕ್ ಟನ್ ಅಡಿಕೆ ವಶಪಡಿಸಿಕೊಂಡ ಡಿಆರ್‌ಐ

ನವದೆಹಲಿ : ಟ್ಯುಟಿಕೋರಿನ್ ಮತ್ತು ಚೆನ್ನೈ ಬಂದರುಗಳ ಮೂಲಕ ದೇಶಕ್ಕೆ ಅಕ್ರಮವಾಗಿ ಸಾಗಿಸಲಾಗಿದ್ದ 8.61 ಕೋಟಿ ರೂಪಾಯಿ ಮೌಲ್ಯದ 114 ಮೆಟ್ರಿಕ್‌ ಟನ್‌ ಅಡಿಕೆಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ವಶಪಡಿಸಿಕೊಂಡಿದೆ. ಜಬೆಲ್ ಅಲಿ, ದುಬೈ ಮತ್ತು ಸಿಂಗಾಪುರದಿಂದ ಕಂಟೈನರ್‌ಗಳಲ್ಲಿ ಬೃಹತ್ ಪ್ರಮಾಣದಲ್ಲಿ ಅಡಿಕೆಯನ್ನು ಭಾರತಕ್ಕೆ ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬ ನಿರ್ದಿಷ್ಟ ಮಾಹಿತಿಯ ಆಧಾರದ … Continued

ಹೊನ್ನಾವರ: ಕಾಸರಕೋಡ ಇಕೋ ಬೀಚ್ ಬಳಿ ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕಾಸರಕೋಡ ಇಕೋ ಬೀಚ್ ಬಳಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಮೃತವ್ಯಕ್ತಿ ಕುಮಟಾ ತಾಲೂಕಿನ ನಾಡುಮಾಸ್ಕೇರಿ ಮೂಲದ ರಾಮ ನಾಗೇಶ ಗೌಡ (೩೨). ಇವರು ೨೦೧೭ರ ಸಾಲಿನಲ್ಲಿ ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದರು ಎಂದು ಹೇಳಲಾಗಿದೆ. … Continued

ತುಮಕೂರು : ಹೆಚ್ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕ ಉದ್ಘಾಟಿಸಿದ ಪ್ರಧಾನಿ ಮೋದಿ

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ತುಮಕೂರು ಜಿಲ್ಲೆಯ ಜಿಲ್ಲೆಯ ಗುಬ್ಬಿ ತಾಲೂಕು ಬಿದರೆಹಳ್ಳಕಾವಲ್‌ನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್‌ಎಎಲ್) ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಉದ್ಘಾಟಿಸಿದರು ಮತ್ತು ಲಘು ಉಪಯುಕ್ತತೆಯ ಹೆಲಿಕಾಪ್ಟರ್ ಅನ್ನು ಅನಾವರಣಗೊಳಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದರು. ಎಚ್‌ಎಎಲ್‌ನ ಗ್ರೀನ್‌ಫೀಲ್ಡ್ ಹೆಲಿಕಾಪ್ಟರ್ ಕಾರ್ಖಾನೆಯು ಬಿದರೆಹಳ್ಳಕಾವಲ್‌ನಲ್ಲಿ … Continued

ಬೆಂಗಳೂರು: ಭಾರತದ ಇಂಧನ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆದಾರರಿಗೆ ಪ್ರಧಾನಿ ಮೋದಿ ಆಹ್ವಾನ

ಬೆಂಗಳೂರು: ಭಾರತದ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಸಾಧ್ಯತೆಗಳನ್ನು ಅನ್ವೇಷಿಸಲು ಮತ್ತು ಹೂಡಿಕೆಗೆ ಭಾರತವು ವಿಶ್ವದ ಅತ್ಯಂತ ಸೂಕ್ತವಾದ ಸ್ಥಳವಾಗಿರುವುದರಿಂದ ಭಾರತದೊಂದಿಗೆ ತೊಡಗಿಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿದೇಶಿ ಹೂಡಿಕೆದಾರರಿಗೆ ಆಹ್ವಾನಿಸಿದರು. ಇಂದು, ಸೋಮವಾರ ಬೆಂಗಳೂರಿನಲ್ಲಿ ಇಂಡಿಯಾ ಎನರ್ಜಿ ವೀಕ್ (ಐಇಡಬ್ಲ್ಯು) 2023 ಅನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತವು ವೇಗವಾಗಿ … Continued

ಹುಬ್ಬಳ್ಳಿಯಿಂದ ಪುಣೆಗೆ ನೇರ ವಿಮಾನ ಸೇವೆ ಆರಂಭ

ಹುಬ್ಬಳ್ಳಿ: ಹುಬ್ಬಳ್ಳಿಯಿಂದ ದೆಹಲಿಗೆ ನೇರ ವಿಮಾನ ಸೇವೆ ಆರಂಭಗೊಂಡ ಬೆನ್ನಲ್ಲೇ ಇದೀಗ ಹುಬ್ಬಳ್ಳಿಯಿಂದ ಪುಣೆಗೆ ನೇರವಾಗಿ ಸಂಪರ್ಕಿಸುವ ವಿಮಾನ ಸೇವೆ ಆರಂಭವಾಗಿದೆ.‌ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಕ್ಕೆ ಜಲಫಿರಂಗಿಯ ಮೂಲಕ ಸ್ವಾಗತ ನೀಡಲಾಯಿತು. ಮೊದಲ ದಿನವೇ ವಿಮಾನವು ಪ್ರಯಾಣಿಕರಿಂದ ಸಂಪೂರ್ಣ ಭರ್ತಿಯಾಗಿತ್ತು. ಹುಬ್ಬಳ್ಳಿ-ಧಾರವಾಡ ಅವಳಿ ನಗರ ಹಾಗೂ ಇಡೀ ಉತ್ತರ ಕರ್ನಾಟಕ ಭಾಗದ ಜನರಿಗೆ … Continued

ಬೆಳಗಾವಿ ಪಾಲಿಕೆಗೆ ಶೋಭಾ ಸೋಮನಾಚೆ ನೂತನ ಮೇಯರ್‌, ರೇಷ್ಮಾ ಪಾಟೀಲ ಉಪಮೇಯರ್‌

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಗೆ ನೂತನ ಮೇಯರ್ ಹಾಗೂ ಉಪಮೇಯರ್‌ ಅವರನ್ನು ಆಯ್ಕೆ ಮಾಡಲಾಗಿದೆ. ಬೆಳಗಾವಿ ಮಹಾನಗರಪಾಲಿಕೆಗೆ ಶೋಭಾ ಸೋಮನಾಚೆ ಅವರು ನೂತನ ಮೇಯರ್ ಹಾಗೂ ರೇಷ್ಮಾ ಪಾಟೀಲ ಅವರು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಒಂದೂವರೆ ವರ್ಷದ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು. ಆದರೆ, ಕೆಲ ಕಾರಣಗಳಿಂದ ಮೇಯರ್ ಹಾಗೂ ಉಪಮೇಯರ್ … Continued

ಕರ್ನಾಟಕ, ಅಲಹಾಬಾದ್, ಮದ್ರಾಸ್ ಹೈಕೋರ್ಟ್‌ಗಳಿಗೆ 13 ಹೆಚ್ಚುವರಿ ನ್ಯಾಯಾಧೀಶರ ನೇಮಕ

ನವದೆಹಲಿ: ಕರ್ನಾಟಕ ಹೈಕೋರ್ಟ್, ಅಲಹಾಬಾದ್ ಹೈಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್ ಈ ಮೂರು ಹೈಕೋರ್ಟ್‌ಗಳಿಗೆ ಹೆಚ್ಚುವರಿ ನ್ಯಾಯಾಧೀಶರಾಗಿ ಹದಿಮೂರು ನ್ಯಾಯಾಧೀಶರನ್ನು ನೇಮಕ ಮಾಡಲು ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಹೈಕೋರ್ಟ್‌ನಲ್ಲಿ ವಿಜಯಕುಮಾರ್ ಆದಗೌಡ ಪಾಟೀಲ್ ಮತ್ತು ರಾಜೇಶ್ ರೈ ಕಲ್ಲಂಗಲ್ಲ ಅವರನ್ನು ಹೆಚ್ಚುವರಿ ನ್ಯಾಯಾಧೀಶರಾಗಿ ಎರಡು ವರ್ಷಗಳ ಕಾಲ ಸರ್ಕಾರ ನೇಮಿಸಿದೆ. ಸೈಯದ್ … Continued

ಇಂಧನ ಉತ್ಪಾದನೆ-ವಿತರಣೆಯಲ್ಲಿ ವಿಶ್ವದ ಪ್ರಮುಖ ಶಕ್ತಿಗಳ ಪೈಕಿ ಭಾರತವೂ ಒಂದು: ಪ್ರಧಾನಿ ಮೋದಿ

ಬೆಂಗಳೂರು: ಇಂಧನ ಉತ್ಪಾದನೆ ಮತ್ತು ವಿತರಣೆಯಲ್ಲಿ ಭಾರತವು ವಿಶ್ವದ ಅತ್ಯಂತ ಮುಂದುವರಿದ ಶಕ್ತಿಗಳ ಪೈಕಿ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಇಂಡಿಯನ್ ಎನರ್ಜಿ ವೀಕ್-2023 ಉದ್ಘಾಟಿಸಿ ಮಾತನಾಡಿದ ಅವರು, ಗ್ರೀನ್ ಹೈಡ್ರೋಜನ್ ಕ್ಷೇತ್ರದಲ್ಲಿ ಭಾರತವು ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ. 2030ರಲ್ಲಿ 4 ಎಂಎಂಟಿ ಯಷ್ಟು ಗ್ರೀನ್ ಹೈಡ್ರೋಜನ್ ಉತ್ಪಾದಿಸುತ್ತೇವೆ. … Continued

ಖ್ಯಾತ ಚಿತ್ರಕಲಾವಿದ ಬಿ.ಕೆ.ಎಸ್‌. ವರ್ಮ ಇನ್ನಿಲ್ಲ

ಬೆಂಗಳೂರು: ಖ್ಯಾತ ಪೇಂಟಿಂಗ್‌ ಕಲಾವಿದ ಬಿ.ಕೆ.ಎಸ್‌. ವರ್ಮ ಹೃದಯಾಘಾತದಿಂದ ಇಂದು, ಸೋಮವಾರ ಬೆಳಿಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಇವರು ಪತ್ನಿ ಶಾಂತ ವರ್ಮ ಹಾಗೂ ಮೂರು ಮಕ್ಕಳನ್ನು ಅಗಲಿದ್ದಾರೆ. ರವಿವರ್ಮನ ಕಲಾಕೃತಿಗಳಿಂದ ಪ್ರೇರಣೆ ಪಡೆದಿದ್ದ ಅವರು ತೈಲವರ್ಣದಲ್ಲಿ ಚಿತ್ರ ಬಿಡಿಸುತ್ತಿದ್ದರು. ಕನ್ನಡ ತಾಯಿ ಭುವನೇಶ್ವರಿ, ಭಾರತಮಾತೆ, ಪೂಜೆಯಲ್ಲಿ ಮೈಮರೆತ … Continued