ಯುಕೆಜಿ ಓದುತ್ತಿದ್ದ ಮಗುವನ್ನು ಫೇಲ್ ಮಾಡಿದ ಶಾಲೆ.. ! ಮಾಜಿ ಸಚಿವ ಸುರೇಶಕುಮಾರ್​ ಆಕ್ರೋಶ

ಬೆಂಗಳೂರು: ಆನೇಕಲ್‌ ತಾಲೂಕಿನ ಹುಸ್ಕೂರು ಗೇಟ್ ಬಳಿಯ ಶಾಲೆಯೊಂದು ಯುಕೆಜಿ ಓದುತ್ತಿದ್ದ ಮಗುವನ್ನು ಶಿಕ್ಷಣ ಸಂಸ್ಥೆ ಫೇಲ್ ಮಾಡಿ ಈಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಯುಕೆಜಿ ಓದುತ್ತಿದ್ದ ವಿದ್ಯಾರ್ಥಿನಿ ಪುಟಾಣಿ ಬಿ ನಂದಿನಿ ಎಂಬವಳನ್ನು ಸಂಸ್ಥೆ ಅನುತ್ತೀರ್ಣ ಮಾಡಿದ್ದು, ಶಾಲೆಯ ಕ್ರಮಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತು ಮಾಜಿ ಶಿಕ್ಷಣ ಸಚಿವ ಸುರೇಶಕುಮಾರ ಅವರು … Continued

ಕರ್ನಾಟಕದಲ್ಲಿ ₹3,579 ಕೋಟಿ ವೆಚ್ಚದ ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಭೂ ಸಾರಿಗೆ ಸಚಿವಾಲಯ ಒಪ್ಪಿಗೆ

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಬುಧವಾರ ಕರ್ನಾಟಕದಲ್ಲಿ 3,575 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೆಲವು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಯೋಜನೆಗಳಿಗೆ ಮಂಜೂರು ನೀಡಿದ್ದಾರೆ. ಈ ಸಂಬಂಧ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಬುಧವಾರ ಸರಣಿ ಟ್ವೀಟ್‌ ಮಾಡಿದ್ದು, ಮಹಾರಾಷ್ಟ್ರ-ಕರ್ನಾಟಕ ಗಡಿಯ ರಾಷ್ಟ್ರೀಯ ಹೆದ್ದಾರಿ ‘166 ಇ’ಯಲ್ಲಿ ಕನಮಡಿ- ಬಿಜ್ಜೋಡಿ- … Continued

ಭೂಕಂಪ ಪೀಡಿತ ಟರ್ಕಿಯಲ್ಲಿ ಬೆಂಗಳೂರು ಕಂಪನಿಯ ಉದ್ಯೋಗಿ ನಾಪತ್ತೆ: ಕೇಂದ್ರ

ನವದೆಹಲಿ: ಬೆಂಗಳೂರು ಮೂಲದ ಕಂಪನಿಯೊಂದರ ಉದ್ಯೋಗಿಯೊಬ್ಬರು ಭೂಕಂಪ ಪೀಡಿತ ಟರ್ಕಿಯ ಮಾಲತ್ಯದಲ್ಲಿ ನಾಪತ್ತೆಯಾಗಿದ್ದಾರೆ. ಎಂಇಎ ಕಾರ್ಯದರ್ಶಿ (ಪಶ್ಚಿಮ) ಸಂಜಯ್ ವರ್ಮಾ ಅವರು ಬುಧವಾರ ನವದೆಹಲಿಯಲ್ಲಿ ಮಾತನಾಡಿ, ಭಾರತದ ಪ್ರಜೆಯೊಬ್ಬರು ಆಗ್ನೇಯ ಟರ್ಕಿಯಲ್ಲಿರುವ ಮಾಲತ್ಯಕ್ಕೆ ವ್ಯಾಪಾರ ಪ್ರವಾಸದಲ್ಲಿದ್ದರು, ಕಳೆದ ಎರಡು ದಿನಗಳಿಂದ ಅವರು ಪತ್ತೆಯಾಗಿಲ್ಲ, ನಾವು ಅವರ ಕುಟುಂಬ ಮತ್ತು ಬೆಂಗಳೂರಿನಲ್ಲಿರುವ ಕಂಪನಿಯೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದು ವರ್ಮಾ … Continued

ಬನವಾಸಿ: ಫೆಬ್ರವರಿ 25, 26 ಎರಡು ದಿನಗಳ ಕದಂಬೋತ್ಸವ

ಶಿರಸಿ:ಐತಿಹಾಸಿಕ ಬನವಾಸಿಯ ಕದಂಬೋತ್ಸವ ಫೆಬ್ರವರಿ 25 ಹಾಗೂ 26ರಂದು ನಡೆಯಲಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಗರದ ಮಿನಿವಿಧಾನಸೌದದಲ್ಲಿ ಕದಂಬೋತ್ಸವ ಪೂರ್ವಭಾವಿ ಸಭೆ ಬಳಿಕ ಮಾತನಾಡಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರು, ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಕದಂಬೋತ್ಸವ ಸ್ಥಗಿತಗೊಳಿಸಲಾಗಿತ್ತು. ಈ ವರ್ಷ ಕದಂಬೋತ್ಸವ ನಡೆಸಲು … Continued

ಶಿಕ್ಷಣಕ್ಕಾಗಿ ಬೆಳಕು ಯೋಜನೆ ಕರ್ಣಾಟಕ ಬ್ಯಾಂಕ್‌ ದೃಷ್ಟಿಯಲ್ಲಿ ಖರ್ಚಲ್ಲ, ಸಮಾಜಮುಖಿ ಬದ್ಧತೆಗೆ ವಿನಿಯೋಗ : ಮಹಾಬಲೇಶ್ವರ ಎಂ.ಎಸ್.

ಶಿರಸಿ: ಲಾಭದಲ್ಲಿ ಸಮಾಜಕ್ಕೆ ಒಂದಂಶ ಅರ್ಪಿಸಬೇಕು ಎಂಬ ನಿಟ್ಟಿನಲ್ಲಿ ಕರ್ಣಾಟಕ ಬ್ಯಾಂಕ್ ಸೇವೆ ಸಲ್ಲಿಸುತ್ತಿದ್ದು, ಅದರ ಭಾಗವಾಗಿ ಶಿಕ್ಷಣಕ್ಕಾಗಿ ಬೆಳಕು ಎಂಬ ಯೋಜನೆ ಸೆಲ್ಕೋದ ಜೊತೆಗೆ ಅನುಷ್ಠಾನವಾಗುತ್ತಿದೆ. ಇದು ಅಕ್ಷರಶಃ ಮಕ್ಕಳ ಓದಿಗೆ, ಶೈಕ್ಷಣಿಕ ಬೆಳವಣಿಗೆಗೆ ನೆರವಾಗಿದೆ ಎಂಬ ಸಮಾಧಾನವಿದೆ. ಬ್ಯಾಂಕ್‌ನ ದೃಷ್ಟಿಯಲ್ಲಿ ಇದು ಖರ್ಚಲ್ಲ, ಸಮಾಜದ ಬದ್ಧತೆಯ ದೃಷ್ಟಿಯಲ್ಲಿ ವಿನಿಯೋಗ ಎಂದು ಕರ್ಣಾಟಕ ಬ್ಯಾಂಕ್‌ನ … Continued

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರಗೆ ಇ.ಡಿ. ಸಮನ್ಸ್, ಮಗಳಿಗೆ ಸಿಬಿಐ ನೋಟಿಸ್

ಶಿವಮೊಗ್ಗ: ಫೆಬ್ರವರಿ 22 ರಂದು ತನ್ನ ಮುಂದೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್ ನೀಡಿದೆ ಎಂದು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ ಬುಧವಾರ ಹೇಳಿದ್ದಾರೆ, ಸಿಬಿಐ ತನ್ನ ಪುತ್ರಿ ಐಶ್ವರ್ಯಾ ಶಿವಕುಮಾರ್‌ಗೆ ನೋಟಿಸ್ ಜಾರಿ ಮಾಡಿದೆ ಎಂದು ಅವರು ಹೇಳಿದರು. ಶಿವಮೊಗ್ಗದಲ್ಲಿ ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, … Continued

ಧಾರವಾಡ: ಗರ್ಭಿಣಿಯ ಚೆಕ್​ಅಪ್​ ವೇಳೆ ವೈದ್ಯಕೀಯ ನಿರ್ಲಕ್ಷ್ಯ ತೋರಿದ ವೈದ್ಯೆಗೆ ₹ 11.10 ಲಕ್ಷ ಪರಿಹಾರ ನೀಡಲು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ

ಧಾರವಾಡ: ಶಿಶುವಿನ ಅಂಗವೈಕಲ್ಯದ ಬಗ್ಗೆ ತಿಳಿಸದೆ ವೈದ್ಯಕೀಯ ನಿರ್ಲಕ್ಷ್ಯ ಮಾಡಿದ ಕಾರಣಕ್ಕೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವೈದ್ಯೆಯೊಬ್ಬರಿಗೆ 11,10,000 ರೂ.ಗಳ ದಂಡ ವಿಧಿಸಿದೆ. ಇಲ್ಲಿನ ಶ್ರೀನಗರ ಭಾವಿಕಟ್ಟಿ ಪ್ಲಾಟ ನಿವಾಸಿ ಪರಶುರಾಮ ಘಾಟಗೆ ಎಂಬವರು ತಮ್ಮ ಪತ್ನಿ ಗರ್ಭವತಿಯಾದ 3ನೇ ತಿಂಗಳಿಂದ 9ನೇ ತಿಂಗಳಿನ ವರೆಗೆ ಧಾರವಾಡದ ಮಾಳಮಡ್ಡಿ ನರ್ಸಿಂಗ್ ಹೋಂನ … Continued

ಬ್ರಾಹ್ಮಣ ಸಮುದಾಯದ ಬಗ್ಗೆ ನನಗೆ ಗೌರವವಿದೆ, ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಹಣ ನೀಡಿದ್ದೇನೆ: ಗೋಕರ್ಣದಲ್ಲಿ ಅರ್ಚಕರ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಎಚ್‌ಡಿಕೆ

ಗೋಕರ್ಣ: ನಾನು ಬ್ರಾಹ್ಮಣ ಸಮುದಾಯದ ವಿರೋಧಿಯಲ್ಲ,ನಾನು ಅಂತಹ ಹೇಳಿಕೆ ನೀಡಿಲ್ಲ ಎಂದು ಮಾಜಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಸ್ಪಷ್ಟನೆ ನೀಡಿದ್ದಾರೆ. ಬ್ರಾಹ್ಮಣ ಸಮುದಾಯದ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಹೇಳಿಕೆಯಿಂದ ವಿವಾದ ಭಿಗಿಲೆದ್ದಿದ್ದು, ಇಂದು, ಬುಧವಾರ ಉತ್ತರಕನ್ನಡ ಜಿಲ್ಲೆಯ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ಹಂತದ ಪಂಚರತ್ನ ರಥಯಾತ್ರೆ ಪ್ರಾರಂಭಿಸುವ ಮುನ್ನ ಗೋಕರ್ಣದಲ್ಲಿರುವ … Continued

2022ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದಿಂದ 2.75 ಕೋಟಿ ಮಂದಿ ಪ್ರಯಾಣ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಹೊಸ ದಾಖಲೆ ಬರೆದಿದೆ. 2022 ರಲ್ಲಿ ಇಲ್ಲಿಂದ 2.75 ಕೋಟಿ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ..! 2022 ರಲ್ಲಿ ವಿಮಾನ ನಿಲ್ದಾಣವು ದೇಶೀಯ ವಲಯದಲ್ಲಿ 85 ಪ್ರತಿಶತದಷ್ಟು ಚೇತರಿಕೆ ಕಂಡಿದ್ದು, ಅಂತಾರಾಷ್ಟ್ರೀಯ ವಲಯದಲ್ಲಿ 65 ಪ್ರತಿಶತದಷ್ಟು ಚೇತರಿಕೆ ಕಂಡಿದೆ. 2019 ರ ವರ್ಷಕ್ಕೆ ಹೋಲಿಸಿದರೆ 2022 ರಲ್ಲಿ ಬೆಂಗಳೂರು … Continued

ಜೆಡಿಎಸ್ ಶಾಸಕ ಭೋಜೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಎಚ್ಚರಿಕೆ

ಹುಬ್ಬಳ್ಳಿ : ಕೇಂದ್ರ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್.ಎಂ.ಸಿ) ಸದಸ್ಯರನ್ನಾಗಿ ನೇಮಿಸಲು ಶಿವಮೊಗ್ಗದ ವೈದ್ಯರೊಬ್ಬರಿಂದ ಪ್ರಲ್ಹಾದ್ ಜೋಶಿ ಅವರ ಕಚೇರಿಯಲ್ಲಿ ಲಂಚ ಪಡೆಯಲಾಗಿತ್ತು ಎಂಬ ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯ ಭೋಜೆ ಗೌಡ ಅವರು ವಿರುದ್ಧ ಗುಡುಗಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ. ಈ … Continued