ಮೇ 3ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ

ಉಜಿರೆ: ಕರಾವಳಿಯ ಪ್ರಸಿದ್ಧ ಐತಿಹಾಸಿಕ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ 3ರಂದು ಸಂಜೆ 6:40ಕ್ಕೆ ಗೋಧೂಳಿ ಲಗ್ನದಲ್ಲಿ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ಸಾಮೂಹಿಕ ವಿವಾಹದಲ್ಲಿ ಭಾಗ ವಹಿಸಲು ಬಯಸುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಸಾಮೂಹಿಕ ವಿವಾಹದಲ್ಲಿ ಎರಡನೇ ಮದುವೆಗೆ ಅವಕಾಶವಿಲ್ಲ. ವಧುವಿಗೆ ಸೀರೆ, ರವಿಕೆ ಕಣ, ಮಂಗಳಸೂತ್ರ, ವರನಿಗೆ ಧೋತಿ, ಶಾಲು … Continued

ತುಳುವಿಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಸ್ಥಾನಮಾನ : ಸಮಿತಿ ರಚನೆ

ಬೆಂಗಳೂರು: ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಕುರಿತು ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತು ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲಕುಮಾರ ಟ್ವೀಟ್ ಮಾಡಿದ್ದು, ‘ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಸಂಬಂಧ, ಅಧ್ಯಯನ ನಡೆಸಿ ಸೂಕ್ತ ಶಿಫಾರಸ್ಸಿನೊಂದಿಗೆ ವರದಿ ನೀಡಲು ಡಾ. … Continued

ಪ್ರಾಥಮಿಕ ಶಾಲಾ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು: ಹೈಕೋರ್ಟ್ ಆದೇಶ

ಬೆಂಗಳೂರು:15 ಸಾವಿರ ಪದವೀಧರ ಶಾಲಾ ಶಿಕ್ಷಕರ ನೇಮಕಾತಿಗೆ (Teachers Recruitment) 1:1 ತಾತ್ಕಾಲಿಕ ಆಯ್ಕೆ ಪಟ್ಟಿಗೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್, ಈಗ ಆ ಪಟ್ಟಿ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ 1:1 ಅನುಪಾತದಲ್ಲಿ ‘ತಾತ್ಕಾಲಿಕ ಆಯ್ಕೆ’ ಪಟ್ಟಿ ಬಿಡುಗಡೆ ಮಾಡಿತ್ತು. ಆದರೆ, ಇಂದು … Continued

ಖಾಸಗಿ ಬಸ್-ಬೈಕ್‌ ಡಿಕ್ಕಿ: ತಂದೆ-ಮಗಳು ಸಾವು

ತುಮಕೂರು: ಖಾಸಗಿ ಬಸ್ ಬೈಕ್‌ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ತಂದೆ-ಮಗಳು ಮೃತಪಟ್ಟ ಘಟನೆ ಭಾನುವಾರ (ಜನವರಿ 29) ಹೆಬ್ಬೂರಿನ ಬನ್ನಿಮರದಕಟ್ಟೆ ಬಳಿ ಸಂಭವಿಸಿದೆ. ಮೃತರನ್ನು ತಿರುಮಲೇಗೌಡ (50), ಚಂದನ (20) ಎಂದು ಗುರುತಿಸಲಾಗಿದೆ. ಅಪಘಾತದ ಸ್ಥಳದಲ್ಲೇ ತಂದೆ ತಿರುಮಲೇಗೌಡ ಮೃತಪಟ್ಟಿದ್ದು, ಪುತ್ರಿ ಚಂದನಾ ಅವರಿಗೆ ಕುಣಿಗಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮುಕೂರು ಆಸ್ಪತ್ರೆಗೆ ಕರೆದೊಯ್ಯುವಾಗ … Continued

ದೇವರನ್ನು ಒಲಿಸಿಕೊಳ್ಳಲು ತನ್ನ ನಾಲಿಗೆಯನ್ನೇ ಕತ್ತರಿಸಿಕೊಂಡ ಭಕ್ತ…!

ಬಳ್ಳಾರಿ: ದೇವರನ್ನು ಒಲಿಸಿಕೊಳ್ಳಲು ವ್ಯಕ್ತಿಯೊಬ್ಬ (Man) ತನ್ನ ನಾಲಿಗೆಯನ್ನೇ (Tongue) ಕತ್ತರಿಸಿ ದಾನ ಕೊಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ದೇವರನ್ನು ಒಲಿಸಿಕೊಳ್ಳಲು ತನ್ನ ನಾಲಿಗೆಯನ್ನೇ ಕತ್ತರಿಸಿಕೊಂಡಿದ್ದಾನೆ ಎಂದು ಹೇಳಲಾದ ಘಟನೆ ವರದಿಯಾಗಿದೆ. ವೀರೇಶ ಎಂಬಾತ ತನ್ನ ನಾಲಿಗೆಯನ್ನೇ ಕತ್ತರಿಸಿ ದೇವರಿಗೆ ಅರ್ಪಣೆ ಮಾಡಿದ್ದಾನೆ ಎಂದು … Continued

ಬೆಳಗಾವಿ: ಸಕಲ ಸರ್ಕಾರಿ ಗೌರವಗಳೊಂದಿಗೆ ವಾಯುಸೇನೆ ವಿಂಗ್ ಕಮಾಂಡರ್‌ ಹನುಮಂತರಾವ್‌ ಸಾರಥಿ ಅಂತ್ಯಕ್ರಿಯೆ

ಬೆಳಗಾವಿ: ವಾಯುಪಡೆಯ ಯುದ್ಧ ವಿಮಾನಗಳ ಪತನ ವೇಳೆ ಹುತಾತ್ಮರಾದ ಪೈಲಟ್ ವಿಂಗ್ ಕಮಾಂಡರ್‌ ಬೆಳಗಾವಿಯ ಗಣೇಶಪುರದ ಹನುಮಂತರಾವ್ ರೇವಣಸಿದ್ದಪ್ಪ ಸಾರಥಿ ಅವರಿಗೆ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಮೃತ ಯೋಧನ ಪಾರ್ಥೀವ ಶರೀರವನ್ನು ಸೇನೆಯ‌ ವಿಶೇಷ ವಿಮಾನದ ಮೂಲಕ ಭಾನುವಾರ ಮಧ್ಯಾಹ್ನ 12:30 ಗಂಟೆಗೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ತರಲಾಯಿತು. ಸೇನೆಯಿಂದ ಗಾಳಿಯಲ್ಲಿ ಗುಂಡು ಹಾರಿಸಿ … Continued

ಕಾರ್ಯಕ್ರಮದ ವೇಳೆ ಕುಸಿದುಬಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ

ದಾವಣಗೆರೆ: ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾಗಿರುವ ಘಟನೆ ಭಾನುವಾರ ದಾವಣಗೆರೆಯ ಹರಿಹರದ ಕಾರ್ಯಕ್ರಮದ ವೇಳೆ ನಡೆದಿದೆ. ಬರಗೂರು ರಾಮಚಂದ್ರಪ್ಪ ಅವರು ಕಾರ್ಯಕ್ರಮ ಮುಗಿಸಿ ಪೋಸ್ಟರ್‌ ಒದನ್ನು ಉದ್ಘಾಟಿಸಲು ತೆರಳಿದ ವೇಳೆ ಅವರು ಅಸ್ವಸ್ಥರಾಗಿ ಕುಸಿದು ಕುಳಿತಿದ್ದಾರೆ ಎಂದು ಹೇಳಲಾಗಿದೆ. ತಕ್ಷಣವೇ ಅವರನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ರಾಮಚಂದ್ರಪ್ಪ ಆರೋಗ್ಯದಲ್ಲಿ ಚೇತರಿಕೆ … Continued

ಮೂವರು ಮಕ್ಕಳನ್ನು ನೀರಿನ ಸಂಪ್‌ ಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

ವಿಜಯಪುರ : ಜಿಲ್ಲೆಯ ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದ ಸಮೀಪ ವಿಠ್ಠಲವಾಡಿ ತಾಂಡಾದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮೂವರು ಮಕ್ಕಳನ್ನು ನೀರಿನ ಸಂಪ್‌ಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಇಂದು, ಭಾನುವಾರ ಬೆಳಗ್ಗೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆ (ತಾಯಿ)ಯನ್ನು ಗೀತಾ ರಾಮು ಚೌವ್ಹಾಣ (32), ಹಾಗೂ ಮಕ್ಕಳನ್ನು ಸೃಷ್ಟಿ (6) … Continued

ಅಂಚೆ ಇಲಾಖೆಯಿಂದ 40,889 ಹುದ್ದೆಗಳಿಗೆ ಅರ್ಜಿ ಆಹ್ವಾನ : ಕರ್ನಾಟಕದಲ್ಲೂ 3036 ಹುದ್ದೆಗಳಿಗೆ ನೇಮಕ: ಎಸ್‌ಎಸ್‌ಎಲ್‌ಸಿ ಆದವರು ಅರ್ಜಿ ಅರ್ಜಿ ಸಲ್ಲಿಸಬಹುದು

ಭಾರತೀಯ ಪೋಸ್ಟ್ ಗ್ರಾಮೀಣ ಡಾಕ್‌ ಸೇವಕ (ಜಿಡಿಎಸ್) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ದೇಶಾದ್ಯಂತ ಒಟ್ಟು 40,889 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕದಲ್ಲಿ 3036 ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ (www.indiapostgdsonline.gov.in) ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳ ಮಾಹಿತಿ ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ), ಅಸಿಸ್ಟೆಂಟ್ ಬ್ರಾಂಚ್ … Continued

ಕನ್ನಡದ ಹಿರಿಯ ನಟ ಮನದೀಪ್ ರಾಯ್ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಮನ​ದೀಪ್ ರಾಯ್(Mandeep Roy) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಕಾವಲ್​ಭೈರಸಂಧ್ರದ ನಿವಾಸದಲ್ಲಿ ರಾತ್ರಿ 1:45ರ ಸುಮಾರಿಗೆ ಅವರಿಗೆ ಹೃದಯಾಘಾತವಾಗಿತ್ತು. ಕಳೆದ ಡಿಸೆಂಬರ್​ನಲ್ಲಿ ಇವರಿಗೆ ಹೃದಯಾಘಾತವಾಗಿ ಬೆಂಗಳೂರಿನ ಶೇಷಾದ್ರಿಪುರದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ರು. ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾದರೂ ಆಗಾಗ್ಗೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು, ಭಾನುವಾರ … Continued