ಜಿಪಂ-ತಾಪಂ ಚುನಾವಣೆ: ಮೇ 17ರಂದು ರಾಜ್ಯ ಚುನಾವಣಾ ಆಯೋಗದ ಮನವಿ ಆಲಿಸಲಿರುವ ಹೈಕೋರ್ಟ್‌

ಬೆಂಗಳೂರು: ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಜಿಲ್ಲಾ ಪಂಚಾಯತ ಮತ್ತು ತಾಲ್ಲೂಕು ಪಂಚಾಯತ ಚುನಾವಣೆಗಳನ್ನು ನಡೆಸುವ ಕುರಿತು ಸಲ್ಲಿಸಿರುವ ಮನವಿಯನ್ನು ಕರ್ನಾಟಕ ಹೈಕೋರ್ಟ್ ಮೇ 17 ರಂದು ವಿಚಾರಣೆ ನಡೆಸಲಿದೆ. ಈ ಸ್ಥಳೀಯ ಸಂಸ್ಥೆಗಳಿಗೆ ತಕ್ಷಣವೇ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು (ಎಸ್‌ಇಸಿ) ನ್ಯಾಯಮೂರ್ತಿಗಳಾದ ಬಿ.ಎಂ. ಶ್ಯಾಂಪ್ರಸಾದ್ … Continued

ಹೊನ್ನಾವರ: ಲಾರಿ ಡಿಕ್ಕಿ ಹೊಡೆದು ಪಾದಾಚಾರಿ ಸ್ಥಳದಲ್ಲೇ ಸಾವು

ಹೊನ್ನಾವರ:ಪಟ್ಟಣದ ಗೇರುಸೊಪ್ಪ ವೃತ್ತದ ಬಳಿ ಲಾರಿ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ  ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ ಶನಿವಾರ ರಾತ್ರಿ ನಡೆದ ಬಗ್ಗೆ ವರದಿಯಾಗಿದೆ. ಮೃತನನ್ನು ಕೂಲಿಕಾರ್ಮಿಕ ಪಟ್ಟಣದ ಚರ್ಚ್ ರೋಡ್ ನಿವಾಸಿಯಾದ ಸುಬ್ರಾಯ ಮಂಜು ಅಂಬಿಗ (45) ಎಂದು ಗುರುತಿಸಲಾಗಿದೆ. ಹೊನ್ನಾವರದಿಂದ ಕುಮಟಾ ಕಡೆಗೆ ಅ ಬರುತ್ತಿದ್ದ … Continued

ಕರ್ನಾಟಕದಲ್ಲಿ ಇಂದಿನಿಂದ 3 ದಿನ ಗುಡುಗು ಸಹಿತ ಮಳೆ ಮುನ್ಸೂಚನೆ

ಬೆಂಗಳೂರು: ಕರ್ನಾಟಕದಲ್ಲಿ ಇಂದಿನಿಂದ (ಭಾನುವಾರ) ಮಳೆ ಮೂರು ದಿನಗಳ ಕಾಲ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಮೇ 17ರ ವರೆಗೆ ರಾಜ್ಯಾದ್ಯಂತ ಮಳೆಯಾಗಲಿದ್ದು, ಅಸಾನಿ ಚಂಡಮಾರು ದುರ್ಬಲಗೊಂಡಿದ್ದರೂ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಹಿನ್ನೆಲೆಯಲ್ಲಿ ಕರಾವಳಿ ಕರ್ನಾಟಕ ಮತ್ತು ಒಳನಾಡಿನಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ … Continued

ಬಾಗಲಕೋಟೆ: ವಕೀಲೆ ಮೇಲೆ ಮಾರಣಾಂತಿಕ ಹಲ್ಲೆ

ಬಾಗಲಕೋಟೆಯಲ್ಲಿ ಮನೆ ಮಾಲೀಕತ್ವದ ವಿವಾದವೊಂದು ಕೈಮೀರಿ, ವಕೀಲೆ ಸಂಗೀತಾ ಶಿಕ್ಕೇರಿ ಎಂಬುವರ ಮೇಲೆ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ಮಾರಣಾಂತಿಕ ಹಲ್ಲೆ ನಡೆಸಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ರಾಜಕೀಯ ಪಕ್ಷವೊಂದರ ಮುಖಂಡ ರಾಜು ನಾಯ್ಕರ್‌ ಬೆಂಬಲಿಗ ಮಹಾಂತೇಶ ಚೊಳಚಗುಡ್ಡ ಎಂಬಾತ ಸಂಗೀತಾ ಅವರನ್ನು ಮನಸೋಇಚ್ಛೆ ಥಳಿಸಿದ್ದಾನೆ. ಸಂಗೀತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಗೀತಾ ಅವರ … Continued

ಕುಮಟಾ: ತಡರಾತ್ರಿ ಕಾರಿನಲ್ಲಿ ಬಂದು ರಥಬೀದಿಯಲ್ಲಿದ್ದ ದನ ಕದ್ದೊಯ್ದ ಗೋ ಕಳ್ಳರು-ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕುಮಟಾ: ತಡರಾತ್ರಿ ಕಾರಿನಲ್ಲಿ ಬಂದವರು ರಸ್ತೆಯಲ್ಲಿ ಮಲಗಿದ್ದ ಗೋವುನ್ನು ತುಂಬಿಕೊಂಡು ಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿರುವುದ ಬೆಳಕಿಗೆ ಬಂದಿದೆ.ಈ ಘಟನೆಯ ವೀಡಿಯೊ ವೈರಲ್‌ ಆಗಿದ್ದು, ರಾತ್ರಿ 1 ಗಂಟೆ ವೇಳೆಗೆ ಕುಮಟಾ ಪಟ್ಟಣದ ರಥಬೀದಿಯ ಶ್ರೀ ಆಂಜನೇಯ ದೇವಸ್ಥಾನದ ಬಳಿ ಸಂಚರಿಸಿದ ಸ್ವಿಫ್ಟ್ ಡಿಸೈರ್ ಕಾರು ರಸ್ತೆಯಲ್ಲಿ ಗೋವುಗಳು ಮಲಗಿದ್ದಲ್ಲಿ ನಿಂತಿದೆ. … Continued

ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌: 2021-22ನೇ ಸಾಲಿನ ಬಸ್‌ ಪಾಸ್‌ ತೋರಿಸಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಲು ಅವಕಾಶ

ಬೆಂಗಳೂರು: ರಾಜ್ಯಾದ್ಯಂತ ಶಾಲೆಗಳು ಮೇ 16ರಿಂದ ಆರಂಭಗೊಳ್ಳಲಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಶಾಲಾ-ಕಾಲೇಜುಗಳಿಗೆ ತೆರಳಲು ಈ ಹಿಂದೆ ಕೆಎಸ್‌ಆರ್‌ಟಿಸಿ ( KSRTC ) ನೀಡಿರುವ ವಿದ್ಯಾರ್ಥಿ ಬಸ್ ಪಾಸ್ ತೋರಿಸಿಕೊಂಡು, ತಮ್ಮ ನಿಗಮದ ಬಸ್ ಗಳಲ್ಲಿ ಸಂಚರಿಸಬಹುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು, ದಿನಾಂಕ 16-05-2022ರಿಂದ ಶಾಲೆ-ಕಾಲೇಜುಗಳ ಭೌತಿಕ … Continued

ಯಡಿಯೂರಪ್ಪ ಪುತ್ರ ವಿಜಯೇಂದ್ರ ಮೇಲ್ಮನೆಗೆ ಪ್ರವೇಶ? ವಿಧಾನ ಪರಿಷತ್‌ ಸ್ಥಾನಕ್ಕೆ ಬಿಜೆಪಿ ಕೋರ್‌ ಕಮಿಟಿ ಶಿಫಾರಸು…

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಹಸರನ್ನು ಕೋರ್ ಕಮಿಟಿ ಸಭೆಯಲ್ಲಿ ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ. ಮಲ್ಲೇಶ್ವರಂನ ಜಗನ್ನಾಥ ಭವನದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮೇಲ್ಮನೆಗೆ ವಿಜಯೇಂದ್ರ ಕಣಕ್ಕಿಳಿಸುವ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ನಾಯಕರು ಗಂಭೀರ ಚಿಂತನೆ ನಡೆಸಿದ್ದು, ಇಪತ್ತು ಅಭಿರ್ಥಿಗಳ ಹೆಸರನ್ನು ಶಿಫಾರಸು ಮಾಡಲು … Continued

ಕರ್ನಾಟಕದಿಂದ ರಾಜ್ಯ ಸಭೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೆಸರು ಫೈನಲ್‌

ಬೆಂಗಳೂರು: ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆ ಮತ್ತು ರಾಜ್ಯ ಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ನಡೆದಿದ್ದು, ರಾಜ್ಯ ದಿಂದ ರಾಜ್ಯ ಸಭೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೆಸರನ್ನು ಅಂತಿಮಗೊಳಿಸಲಾಗಿದೆ.ಎಂದು ತಿಳಿದುಬಂದಿದೆ. ಹಣಕಾಸು ಸಚಿವರಾಗಿರುವ ಹಿನ್ನೆಲೆಯಲ್ಲಿ ಮತ್ತೊಂದು ಅವಧಿಗೆ ಕರ್ನಾಟಕದಿಂದಲೇ ರಾಜ್ಯಸಭೆಗೆ ನಿರ್ಮಲಾ ಸೀತಾರಾಮನ್ ಅವರನ್ನು ಮರು ಆಯ್ಕೆ ಮಾಡಲು … Continued

ಆಸಿಡ್ ದಾಳಿ ಸಂತ್ರಸ್ತರಿಗೆ ನಿವೇಶನ, 5 ಲಕ್ಷ ರೂ.ನೆರವು: ಬೊಮ್ಮಾಯಿ

ಬೆಂಗಳೂರು: ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತರಿಗೆ ನಿವೇಶನ ಮತ್ತು ಮನೆಗಳನ್ನು ವಿತರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಲಿದ್ದು, ಸ್ವಯಂ ಉದ್ಯೋಗ ಯೋಜನೆಯಡಿ 5 ಲಕ್ಷ ರೂ.ವರೆಗೆ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಹೇಳಿದ್ದಾರೆ. ಕಂದಾಯ ಇಲಾಖೆ ಆರಂಭಿಸಿರುವ ‘ಹಲೋ ರೆವಿನ್ಯೂ ಮಿನಿಸ್ಟರ್-72 ಗಂಟೆಗಳಲ್ಲಿ ಮನೆ ಬಾಗಿಲಿಗೆ ಪಿಂಚಣಿ’ ಎಂಬ ಸಹಾಯವಾಣಿಗೆ ಚಾಲನೆ … Continued

ಪಿಎಸ್ಐ ಹಗರಣ: ನೇಮಕಾತಿ ವಿಭಾಗದ ಡಿವೈಎಸ್ಪಿ ಬಂಧನ

ಬೆಂಗಳೂರು: ಪ್ರಮುಖ ಬೆಳವಣಿಗೆಯೊಂದರಲ್ಲಿ, ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಶಾಂತಕುಮಾರ್ ಅವರನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಶುಕ್ರವಾರ ಬಂಧಿಸಿದೆ. ಅವರು ನೇಮಕಾತಿ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿದ್ದಾರೆ ಎಂದು ಹೇಳಲಾಗುತ್ತದೆ ಎಂದು ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌.ಕಾಮ್‌ ವರದಿ ಮಾಡಿದೆ. ಮೂಲಗಳ ಪ್ರಕಾರ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ … Continued