ಮಹಾರಾಷ್ಟ್ರದ ಜಲಪಾತದಲ್ಲಿ ನೀರು ಕೆಳಗೆ ಬೀಳುವ ಬದಲು ಮೇಲಕ್ಕೆ ಹೋಗುತ್ತಿದೆ: ಈ ದೃಶ್ಯಕ್ಕೆ ಇಂಟರ್ನೆಟ್ ಮಂತ್ರಮುಗ್ಧ | ವೀಕ್ಷಿಸಿ

ಮಳೆಗಾಲವು ಸಸ್ಯ ಮತ್ತು ಪ್ರಾಣಿಗಳನ್ನು ಮತ್ತೆ ಜೀವಂತಗೊಳಿಸುತ್ತದೆ. ಸುರಿಯುವ ಮಳೆಹನಿಗಳು ನಮ್ಮ ಹೃದಯವನ್ನು ಸಂತೋಷದಿಂದ ತುಂಬಿಸುತ್ತವೆ ಮತ್ತು ಪ್ರಪಂಚದ ಕೆಲವು ಸುಂದರವಾದ ದೃಶ್ಯಗಳನ್ನು ಸೃಷ್ಟಿಸುತ್ತವೆ. ಇದಕ್ಕೆ ಮಹಾರಾಷ್ಟ್ರದ ನಾನೇಘಾಟ್‌ನ ವೀಡಿಯೊವೇ ಸಾಕ್ಷಿಯಾಗಿದೆ. ಇದು ಎರಡು ಪರ್ವತಗಳ ನಡುವೆ ಬೀಳುವ ಜಲಪಾತದ ನೀರು ಕೆಳಗೆ ಬೀಳುವ ಬದಲು ಮೇಲಕ್ಕೆ ಹೋಗುವುದನ್ನು ತೋರಿಸುತ್ತದೆ. ನಾನೇಘಾಟ್‌ನಲ್ಲಿ ಮಳೆಯ ಜೊತೆಯ ಗಾಳಿಯು … Continued

ಶಿವಸೇನೆ ಸಂಸದರ ಬೇಡಿಕೆಗೆ ಮಣಿದರೇ ಉದ್ಧವ್: ರಾಷ್ಟ್ರಪತಿ ಹುದ್ದೆಗೆ ದ್ರೌಪದಿ ಮುರ್ಮು ಬೆಂಬಲಿಸುವ ಸಾಧ್ಯತೆ

ಮುಂಬೈ: ಪಕ್ಷದ ಸಂಸದರ ಒತ್ತಡಕ್ಕೆ ಮಣಿದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಶಿವಸೇನಾ ಸಂಸದರು ಸೋಮವಾರ ಠಾಕ್ರೆ ಅವರನ್ನು ಅವರ ಮನೆ ಮಾತೋಶ್ರೀ’ನಲ್ಲಿ ಭೇಟಿಯಾದ ನಂತರ ಮತ್ತು ದ್ರೌಪದಿ ಮುರ್ಮು ಅವರಿಗೆ ಬೆಂಬಲವನ್ನು ಕೋರಿದ ನಂತರ ಈ ಬೆಳವಣಿಗೆ … Continued

ಕೇರಳದ ಆರ್‌ಎಸ್‌ಎಸ್‌ ಕಚೇರಿ ಮೇಲೆ ಬಾಂಬ್‌ ದಾಳಿ

ಕಣ್ಣೂರು (ಕೇರಳ): ಮಂಗಳವಾರ ಬೆಳಗ್ಗೆ ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಚೇರಿ ಮೇಲೆ ಬಾಂಬ್ ದಾಳಿ ನಡೆದಿದೆ. ಘಟನೆಯಲ್ಲಿ ಕಟ್ಟಡದ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆ ಸಮೀಪದಲ್ಲಿಯೇ ಈ ದಾಳಿ ನಡೆದಿದ್ದು, ಬಾಂಬ್ ದಾಳಿಯ ಪರಿಣಾಮವಾಗಿ ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಬಿಜೆಪಿ … Continued

ವಧು ಪ್ರತಿದಿನ ಕಡ್ಡಾಯವಾಗಿ ಸೀರೆ ಧರಿಸಬೇಕು….: ಮದುವೆಯ ಸಮಯದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದ ವಧು-ವರರು…!

ಇತ್ತೀಚಿನ ದಿನಗಳಲ್ಲಿ ಮದುವೆಗಳು ಸಾಂಪ್ರದಾಯಿಕ ಮತ್ತು ಧಾರ್ಮಿಕ ಆಚರಣೆಗಳಿಂದ ಚಮತ್ಕಾರಿ ವ್ಯವಹಾರಗಳಿಗೆ ಪರಿವರ್ತನೆಯಾಗಿದೆ. ಮೆಟಾವರ್ಸ್ ಅನ್ನು ಪರಿಚಯಿಸುವುದರಿಂದ ಹಿಡಿದು ಮದುವೆಯ ನಂತರ ಪರಸ್ಪರರ ಪಾದಗಳನ್ನು ಸ್ಪರ್ಶಿಸುವವರೆಗೆ, ದಂಪತಿ ಶಾಶ್ವತವಾಗಿ ಒಟ್ಟಿಗೆ ಇರುವ ತಮ್ಮ ಪ್ರತಿಜ್ಞೆಗಳನ್ನು ಪಠಿಸುವಲ್ಲಿ ನವೀನ ವಿಧಾನ ಅನುಸರಿಸುತ್ತಾರೆ. ಈಗ ಅಸ್ಸಾಂನ ಜೋಡಿಯೊಂದು ತಮ್ಮ ಮದುವೆಗೆ ವಿಶಿಷ್ಟವಾದ ಸೇರ್ಪಡೆಯೊಂದಿಗೆ ನೆಟಿಜನ್‌ಗಳ ಗಮನ ಸೆಳೆದಿದ್ದಾರೆ. ಶಾಂತಿ … Continued

ಧರ್ಮಗುರು ಪ್ರಚೋದನಕಾರಿ ಹೇಳಿಕೆ ನಂತರ ಅಜ್ಮೀರ್ ದರ್ಗಾದಲ್ಲಿ ಭಕ್ತರ ಸಂಖ್ಯೆ ಇಳಿಮುಖ, ಮಾರಾಟಗಾರರಿಗೆ ಕೋಟ್ಯಂತರ ರೂ. ನಷ್ಟ..!

ಅಜ್ಮೀರ್: ಅಮಾನತುಗೊಂಡಿರುವ ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ವಿರುದ್ಧ ಧರ್ಮಗುರುಗಳ ಪ್ರಚೋದನಕಾರಿ ಹೇಳಿಕೆಗಳು ಅಜ್ಮೀರ್‌ನಲ್ಲಿ ಭಕ್ತರ ಸಂಖ್ಯೆಯ ಮೇಲೆ ಪರಿಣಾಮ ಬೀರಿದೆ. ಇದು ಅಜ್ಮೀರ್‌ ಸೂಫಿ ದೇಗುಲದ ಸಮೀಪವಿರುವ ಸ್ಥಳೀಯ ಮಾರಾಟಗಾರರು ಮತ್ತು ಹೋಟೆಲ್‌ಗಳ ವ್ಯಾಪಾರದ ಮೇಲೂ ಪರಿಣಾಮ ಬೀರಿದೆ. ಮೌಲ್ವಿ ಹೇಳಿಕೆಗಳು ಈದ್ ವ್ಯವಹಾರದ ಮೇಲೆ ಪರಿಣಾಮ ಬೀರಿವೆ. ಸ್ಥಳೀಯ ಮಾರಾಟಗಾರರು ಈ ಈದ್‌ನಲ್ಲಿ … Continued

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಜುಲೈ 21ರಂದು ವಿಚಾರಣೆಗೆ ಹಾಜರಾಗುವಂತೆ ಸೋನಿಯಾ ಗಾಂಧಿಗೆ ಇಡಿ ಸಮನ್ಸ್

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 21 ರಂದು ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿದೆ. ಸೋನಿಯಾ ಗಾಂಧಿ ಅವರಿಗೆ ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿತ್ತು. ಕೋವಿಡ್‌ ಸೋಂಕಿಗೆ ಒಳಗಾದ ನಂತರ ಜೂನ್‌ನಲ್ಲಿ, ಸಮನ್ಸ್ ಮುಂದೂಡುವಂತೆ ಕೋರಿ ಸೋನಿಯಾ ಗಾಂಧಿ ಮಾಡಿದ್ದ ಲಿಖಿತ ಮನವಿಯನ್ನು … Continued

ಕಾಳಿ ಪೋಸ್ಟರ್ ವಿವಾದ: ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈಗೆ ದೆಹಲಿ ನ್ಯಾಯಾಲಯ ಸಮನ್ಸ್

ನವದೆಹಲಿ: ದೆಹಲಿ ನ್ಯಾಯಾಲಯವು ಕೆನಡಾ ಮೂಲದ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಮತ್ತು ಇತರರಿಗೆ ಸಾಕ್ಷ್ಯಚಿತ್ರ `ಕಾಳಿ’ಯ ವಿವಾದಾತ್ಮಕ ಪೋಸ್ಟರ್‌ಗೆ ಸಂಬಂಧಿಸಿದ ಮನವಿಯ ಮೇಲೆ ಸಮನ್ಸ್ ಜಾರಿಗೊಳಿಸಿದೆ ಮತ್ತು ಆಗಸ್ಟ್ 6 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿದೆ. ಪ್ರತಿವಾದಿಗಳು ಕಾಳಿ ದೇವಿಯನ್ನು ಪೋಸ್ಟರ್ ಮತ್ತು ವಿಡಿಯೋದಲ್ಲಿ ಚಿತ್ರಿಸಿದ ರೀತಿಯಲ್ಲಿ ಚಿತ್ರಿಸದಂತೆ ಮಧ್ಯಂತರ ತಡೆಯಾಜ್ಞೆ ಕೋರಿದ್ದಾರೆ. … Continued

ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಬೆಂಬಲಿಸಿ ಏಕೆಂದರೆ…: ಉದ್ಧವ್ ಠಾಕ್ರೆ ಒತ್ತಾಯಿಸಿದ 16 ಶಿವಸೇನಾ ಸಂಸದರು…!

ನವದೆಹಲಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಇಂದು, ಸೋಮವಾರ ಮುಂಬೈನಲ್ಲಿ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಶಿವಸೇನೆಯ 16 ಸಂಸದರು, ಪಕ್ಷವು ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ…! ದ್ರೌಪದಿ ಮುರ್ಮು “ಬುಡಕಟ್ಟು ಮಹಿಳೆ ಮತ್ತು ಅದಕ್ಕಾಗಿಯೇ ಅವರಿಗೆ ಮತ ಹಾಕಬೇಕು” ಎಂದು ಎಲ್ಲಾ 16 ಸಂಸದರು ಒಪ್ಪಿಕೊಂಡಿದ್ದಾರೆ ಎಂದು … Continued

ವಯಸ್ಸು ಕೇವಲ ಒಂದು ಸಂಖ್ಯೆ: ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದ 94 ವರ್ಷದ ಭಗವಾನಿ ದೇವಿ…!

ಟಂಪೆರೆ (ಫಿನ್‌ಲ್ಯಾಂಡ್): ಭಾರತದ 94 ವರ್ಷದ ಓಟಗಾರ್ತಿ ಭಗವಾನಿ ದೇವಿ ಅವರು ಟಂಪೆರೆಯಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 100 ಮೀ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 24.74 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರುವ ಭಗವಾನಿ ದೇವಿ ಶಾಟ್‌ಪುಟ್‌ನಲ್ಲಿ ಭಗವಾನಿ ಕಂಚಿನ ಪದಕ ಪಡೆದಿದ್ದಾರೆ. ಭಾರತದ 94 ವರ್ಷದ ಭಗವಾನಿದೇವಿ ಅವರು ವಯಸ್ಸು … Continued

ನೂತನ ಸಂಸತ್ ಕಟ್ಟಡದ ಮೇಲೆ ರಾಷ್ಟ್ರೀಯ ಲಾಂಛನ ಅನಾವರಣಗೊಳಿಸಿದ ಪ್ರಧಾನಿ ಮೋದಿ

ನವದೆಹಲಿ: ನೂತನ ಸಂಸತ್ ಭವನದ ಛಾವಣಿಯ ಮೇಲೆ ಹಾಕಲಾಗಿರುವ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅನಾವರಣಗೊಳಿಸಿದರು. ಲಾಂಛನವು ಒಟ್ಟು 9,500 ಕೆಜಿ ತೂಕದ ಕಂಚಿನಿಂದ ಮಾಡಲ್ಪಟ್ಟಿದೆ ಮತ್ತು 6.5 ಮೀಟರ್ ಎತ್ತರವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಸತ್ತಿನ ನೂತನ ಕಟ್ಟಡದ ಕೇಂದ್ರ ದ್ವಾರದ ಮೇಲ್ಭಾಗದಲ್ಲಿ ಇದನ್ನು ಹಾಕಲಾಗಿದೆ ಮತ್ತು ಲಾಂಛನವನ್ನು ಬೆಂಬಲಿಸಲು ಸುಮಾರು … Continued