ಪಾಕಿಸ್ತಾನದ ಏಜೆಂಟರೊಂದಿಗೆ ರಕ್ಷಣಾ ರಹಸ್ಯ ಹಂಚಿಕೊಂಡಿದ್ದಕ್ಕೆ ನಾಲ್ವರು ಡಿಆರ್‌ಡಿಒ ಉದ್ಯೋಗಿಗಳ ಬಂಧನ

ಭುವನೇಶ್ವರ: ಪಾಕಿಸ್ತಾನದ ಏಜೆಂಟರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಒಡಿಶಾ ಕರಾವಳಿಯ ಕ್ಷಿಪಣಿ ಪರೀಕ್ಷಾ ಕೇಂದ್ರದಿಂದ ನಾಲ್ವರನ್ನು ಬಂಧಿಸಲಾಗಿದೆ. ಗುಪ್ತಚರ ಮಾಹಿತಿ ಆಧರಿಸಿ, ಐಡಿ (ಪೂರ್ವ ಶ್ರೇಣಿ) ಒಡಿಶಾ ಪೊಲೀಸರ ವಿಶೇಷ ತಂಡವು ಮಂಗಳವಾರ ಚಂಡಿಪುರ ಸಮುದ್ರದಲ್ಲಿರುವ ಡಿಆರ್‌ಡಿಒ ಘಟಕದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನಲ್ಲಿ … Continued

ಹೈದರಾಬಾದ್‌ನಲ್ಲಿ ಬಾಲಕಿ ಅತ್ಯಾಚಾರ-ಕೊಲೆ: ಆರೋಪಿ ಮಾಹಿತಿ ನೀಡಿದರೆ ಪೊಲೀಸರಿಂದ 10 ಲಕ್ಷ ರೂ ಬಹುಮಾನ

ಹೈದರಾಬಾದ್‌: 6 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ ಬಗ್ಗೆ ಮಾಹಿತಿ ನೀಡಿದವರಿಗೆ ಹೈದರಾಬಾದ್ ಪೊಲೀಸರು 10 ಲಕ್ಷ ರೂ.ಗಳ ಬಹುಮಾನ ಘೋಷಿಸಿದ್ದಾರೆ. ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಮಂಗಳವಾರ ಹೇಳಿದ್ದು, ಆರೋಪಿ ಪಲ್ಲಕೊಂಡ ರಾಜು (30) ಬಂಧನಕ್ಕೆ ಕಾರಣವಾಗುವ ಯಾವುದೇ ಮಾಹಿತಿ ಅಥವಾ ಸುಳಿವು ನೀಡುವ ವ್ಯಕ್ತಿಗೆ 10 … Continued

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಖಾಸಗೀಕರಣ ಪ್ರಶ್ನಿಸಿದ್ದ ಮನವಿ ವಜಾ ಮಾಡಿದ ಹೈಕೋರ್ಟ್‌

ಬೆಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗೀಕರಣ ಪ್ರಶ್ನಿಸಿ ವಿಮಾನ ನಿಲ್ದಾಣಗಳ ಉದ್ಯೋಗಿಗಳ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ವಜಾ ಮಾಡಿದೆ. ವಿಮಾನ ನಿಲ್ದಾಣಗಳನ್ನು ಗುತ್ತಿಗೆ ನೀಡುವ ನೀತಿ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಇದರಲ್ಲಿ ನ್ಯಾಯಾಲಯದ ಮಧ್ಯಪ್ರವೇಶದ ಅಗತ್ಯವಿಲ್ಲ ಎಂದು ಹೇಳಿದ್ದ ಕೇರಳ ಹೈಕೋರ್ಟ್‌ ನಿರ್ಧಾರವನ್ನು ಆಧರಿಸಿ ಹಂಗಾಮಿ … Continued

ಮಹಾರಾಷ್ಟ್ರ: ದೋಣಿ ಮಗುಚಿ ಮೂವರು ಸಾವು, ಹಲವರು ನಾಪತ್ತೆ

ಮುಂಬೈ: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ವರದಾ ನದಿಯಲ್ಲಿ ಮಂಗಳವಾರ ದೋಣಿ ಮಗುಚಿ ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ದುರ್ಘನೆಯಲ್ಲಿ ಕನಿಷ್ಠ ಎಂಟು ಜನರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಪೊಲೀಸ್ ತಂಡ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅಪ್ರಾಪ್ತ ಬಾಲಕಿ ಸೇರಿದಂತೆ ಈವರೆಗೆ ಮೂರು ಮೃತದೇಹಗಳನ್ನು ನದಿಯಿಂದ ಹೊರತೆಗೆದಿದೆ ಎಂದು ಅಧಿಕಾರಿಯೊಬ್ಬರು … Continued

ಕೋಲ್ಕತ್ತಾ: ಬಿಜೆಪಿ ಸಂಸದ ಅರ್ಜುನ್​ ಸಿಂಗ್​ ಮನೆ ಮೇಲೆ ಎರಡನೇ ಸಲ ಬಾಂಬ್​ ದಾಳಿ..!

ಕೋಲ್ಕತ್ತಾ: ಕೋಲ್ಕತ್ತಾ ಸಮೀಪದ ಬಿಜೆಪಿ ಸಂಸದ ಅರ್ಜುನ್ ಸಿಂಗ್ ನಿವಾಸದ ಮೇಲೆ ಮಂಗಳವಾರ ಮತ್ತೊಮ್ಮೆ ಬಾಂಬ್ ದಾಳಿ ನಡೆಸಲಾಗಿದೆ. ಮೊದಲ ಘಟನೆ ನಡೆದು ಒಂದು ವಾರದ ನಂತರ ಮತ್ತೆ ಈ ಘಟನೆ ನಡೆದಿದೆ. ಮಂಗಳವಾರ ಬೆಳಗ್ಗೆ 8;30 ರ ಸುಮಾರಿಗೆ ಅವರ ಮನೆಯ ಹಿಂಭಾಗದಲ್ಲಿ ಕಚ್ಚಾ ಬಾಂಬ್‌ ಎಸೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು … Continued

ಮಾನನಷ್ಟ ಪ್ರಕರಣ: ವಿಚಾರಣೆಗೆ ಹಾಜರಾಗದಿದ್ದರೆ ಬಂಧನ ವಾರೆಂಟ್ ಹೊರಡಿಸಬೇಕಾದೀತು- ಕಂಗನಾಗೆ ಮುಂಬೈ ನ್ಯಾಯಾಲಯ ಎಚ್ಚರಿಕೆ

ಮುಂಬೈ ಪ್ರಸಿದ್ಧ ಚಲನಚಿತ್ರ ಸಾಹಿತಿ ಜಾವೇದ್‌ ಅಖ್ತರ್‌ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆ ನಡೆಸಿದ ಮುಂಬೈನ ನ್ಯಾಯಾಲಯವೊಂದು ಮುಂದಿನ ವಿಚಾರಣೆಯ ವೇಳೆಗೆ ಬಾಲಿವುಡ್‌ ನಟಿ ಕಂಗನಾ ರನೌತ್‌ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ಅವರ ವಿರುದ್ಧ ಬಂಧನ ವಾರೆಂಟ್‌ ಹೊರಡಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ ಎಮದು ಬಾರ್‌ ಎಂಡ್‌ ಬೆಂಚ್‌ ವರದಿ ಮಾಡಿದೆ. ಕಂಗನಾ … Continued

ದೆಹಲಿ ಗಡಿಗಳಲ್ಲಿ ರೈತರ ಪ್ರತಿಭಟನೆ: ಕೇಂದ್ರ, ರಾಜ್ಯಗಳಿಂದ ವರದಿ ಕೇಳಿದ ಎನ್‌ಎಚ್‌ಆರ್‌ಸಿ

ನವದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯಿಂದ ವಾಣಿಜ್ಯ ಚಟುವಟಿಕೆಗಳು ಹಾಗೂ ಜನರ ಸಂಚಾರದ ಮೇಲಾಗುತ್ತಿರುವ ಪರಿಣಾಮಗಳ ಕುರಿತು ವರದಿ ಪಡೆಯಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಮುಂದಾಗಿದೆ. ಈ ಸಂಬಂಧ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ, ದೆಹಲಿ, ರಾಜಸ್ಥಾನ, ಹರಿಯಾಣ ಹಾಗೂ ಉತ್ತರ ಪ್ರದೇಶ ರಾಜ್ಯ … Continued

ಒಡಿಸ್ಸಾದಲ್ಲಿ ಭಾರೀ ಮಳೆಗೆ ನದಿಗೆ ಉರುಳಿದ ಗೂಡ್ಸ್‌ ರೈಲು

ಭುವನೇಶ್ವರ : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗೂಡ್ಸ್‌ ರೈಲಿನ ಆರು ಬೋಗಿಗಳು ಹಳಿ ತಪ್ಪಿ ನದಿಗೆ ಉರುಳಿದ ಘಟನೆ ಒಡಿಶಾದಲ್ಲಿ ನಡೆದಿದೆ. ಈಸ್ಟ್ ಕೋಸ್ಟ್ ರೈಲ್ವೇಸ್ ನ ಅಂಗುಲ್-ತಲ್ಚರ್ ರಸ್ತೆ ಮಾರ್ಗದಲ್ಲಿ ಚಲಿಸುತ್ತಿರುವ ಗೂಡ್ಸ್ ರೈಲಿನ ಕನಿಷ್ಠ ಆರು ಬೋಗಿಗಳು ಮಂಗಳವಾರ ಮುಂಜಾನೆ ಹಳಿ ತಪ್ಪಿ ನದಿಗೆ ಬಿದ್ದಿವೆ ಎಂದು ಅಧಿಕಾರಿಗಳು … Continued

ಅತ್ಯಾಚಾರ ಪ್ರಕರಣದಲ್ಲಿ ಎಲ್‌ಜೆಪಿ ಸಂಸದ ಪ್ರಿನ್ಸ್ ರಾಜ್ ವಿರುದ್ಧ ಎಫ್‌ಐಆರ್‌ ದಾಖಲಿಸಿದ ದೆಹಲಿ ಪೊಲೀಸರು

ನವದೆಹಲಿ: ಚಿರಾಗ್ ಪಾಸ್ವಾನ್ ಅವರ ಸೋದರ ಸಂಬಂಧಿ ಲೋಕ ಜನಶಕ್ತಿ ಪಕ್ಷದ (ಎಲ್ ಜೆಪಿ) ಸಂಸದ ಪ್ರಿನ್ಸ್‌ ರಾಜ್ ಅವರ ವಿರುದ್ಧ ಮಹಿಳೆಯೊಬ್ಬಳು ದೆಹಲಿಯಲ್ಲಿ ಅತ್ಯಚಾರದ ಪ್ರಕರಣ ದಾಖಲಿಸಿದ್ದಾರೆ. ಎಲ್‌ಜೆಪಿ ಕಾರ್ಯಕರ್ತೆಯಾಗಿರುವ ಮಹಿಳೆ, ಬಿಹಾರದ ಸಮಸ್ಟಿಪುರದ ಸಂಸದ ಪ್ರಿನ್ಸ್‌ ರಾಜ್ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಮೂರು ತಿಂಗಳ ಹಿಂದೆ … Continued

ಮೊಹಾಲಿ ಮನೆಯಲ್ಲಿ ಶವವಾಗಿ ಪತ್ತೆಯಾದ ರಾಷ್ಟ್ರಮಟ್ಟದ ಶೂಟರ್

ಚಂಡೀಗಢ : ಅಂತಾರಾಷ್ಟ್ರೀಯ ಶೂಟರ್‌ ನಮನ್‌ವೀರ್ ಸಿಂಗ್‌ ಬ್ರಾರ್‌ ನಿಗೂಢವಾಗಿ ಸಾವಿಗೀಡಾಗಿದ್ದಾರೆ. ದೇಹಕ್ಕೆ ಗುಂಡು ತಗುಲಿ ಮೃತಪಟ್ಟಿದ್ದು ಶಂಕೆ ವ್ಯಕ್ತವಾಗಿದ್ದು,ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 28 ವರ್ಷದ ಶೂಟರ್‌ ನಮನ್‌ ವೀರ್‌ ಸಿಂಗ್‌ ಬ್ರಾರ್‌ ಅವರು ಸೋಮವಾರ ಬೆಳಗ್ಗೆ ಮೊಹಾಲಿಯಲ್ಲಿರುವ ತಮ್ಮ ಮನೆಯಲ್ಲಿ ಸಾವಿಗೀಡಾಗಿದ್ದು,ತಮ್ಮ ತಲೆಗೆ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು … Continued