ಮಹತ್ವದ ಸುದ್ದಿ.. ರೆಪೋ ದರ, ರಿವರ್ಸ್ ರೆಪೋ ದರ ಯಥಾಸ್ಥಿತಿ ಮುಂದವರಿಸಿದ ಆರ್‌ಬಿಐ

ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಹಣಕಾಸು ನೀತಿ ಪ್ರಕಟಿಸಿದ್ದು, ರೆಪೋದರವನ್ನು ಶೇ 4 ಹಾಗೂ ರಿವರ್ಸ್​ ರೆಪೋ ದರವನ್ನು ಶೇ 3.35ರಲ್ಲಿ ಮುಂದುವರಿಸಲಾಗುತ್ತದೆ ಎಂದು ಹೇಳಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಆರ್ ಬಿಐ ಶೇ.9.5ಕ್ಕೆ ಉಳಿಸಿಕೊಂಡಿದೆ ಎಂದು ದಾಸ್ ಹೇಳಿದರು. ಭಾರತೀಯ … Continued

ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನ ಧ್ವಂಸ; ಪಾಕ್‌ ಉನ್ನತ ರಾಜತಾಂತ್ರಿಕರ ಕರೆಸಿದ ಭಾರತ, ಘಟನೆಗೆ ತೀವ್ರ ಆಕ್ಷೇಪ

ನವದೆಹಲಿ: ಪಾಕಿಸ್ತಾನದ ಚಾರ್ಜ್ ಡಿ ಅಫೇರ್‌ಗಳಿಗೆ ಭಾರತವು ಪಾಕಿಸ್ತಾನದಲ್ಲಿ ನಡೆದ ದೇವಾಲಯದ ಮೇಲಿನ ದಾಳಿ ಕುರಿತು ಸಮನ್ಸ್ ನೀಡಿದೆ. ಧಾರ್ಮಿಕ ಸ್ಥಳಗಳ ಮೇಲೆ ದಾಳಿ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಹಿಂಸಾಚಾರ ಮತ್ತು ಕಿರುಕುಳದ ಘಟನೆಗಳು ಪಾಕಿಸ್ತಾನದಲ್ಲಿ ನಿರಂತರವಾಗಿ ನಡೆಯುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಹೇಳಿದೆ. ಬುಧವಾರ, ಮುಸ್ಲಿಂ ಗುಂಪೊಂದು ಪಾಕಿಸ್ತಾನದ ಪಂಜಾಬ್ … Continued

ಅನಿಲ್ ದೇಶಮುಖ್ ಪ್ರಕರಣದಲ್ಲಿ ಮುಂಬೈ ಪೊಲೀಸರು ಸಹಕರಿಸುತ್ತಿಲ್ಲ, ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ: ಬಾಂಬೆ ಹೈಕೋರ್ಟಿಗೆ ಸಿಬಿಐ

ಮುಂಬೈ: ಹೈಕೋರ್ಟ್ ಸ್ಪಷ್ಟ ಆದೇಶದ ಹೊರತಾಗಿಯೂ ಅನಿಲ್ ದೇಶಮುಖ್ ಪ್ರಕರಣದ ತನಿಖೆಯಲ್ಲಿ ಮಹಾರಾಷ್ಟ್ರ ಸರ್ಕಾರ ಕೇಂದ್ರ ತಮ್ಮ ಜೊತೆ ಸಹಕರಿಸುತ್ತಿಲ್ಲ ಎಂಬ ದೂರಿನೊಂದಿಗೆ ಕೇಂದ್ರೀಯ ತನಿಖಾ ದಳವು ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸಿದೆ. ಎಎಸ್‌ಜಿ ಮೂಲಕ ಸಿಬಿಐ ನ್ಯಾಯಾಲಯದಲ್ಲಿ ಆಪಾದಿಸಿದ್ದು, ಸಹಕಾರ ನೀಡುವ ಬದಲು, ಮುಂಬೈ ಎಸಿಪಿ ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗೆ … Continued

ಲೋಕಸಭೆಯಲ್ಲಿ ಆದಾಯ ತೆರಿಗೆ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಲೋಕಸಭೆಯಲ್ಲಿ ಆದಾಯ ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ, 2021 ಮಂಡಿಸಿದರು. ಇದು ಹಿಂದಿನ ಆದಾಯ ತೆರಿಗೆ ಕಾನೂನನ್ನು ರದ್ದುಗೊಳಿಸಲು ನೆರವಾಗುತ್ತದೆ. ಇದರೊಂದಿಗೆ, ಈ ಮಸೂದೆ ಜಾಗತಿಕ ಕಾರ್ಪೊರೇಟ್ ದೈತ್ಯ ಕಂಪನಿಗಳಾದ ಕೆರ್ನ್ ಎನರ್ಜಿ ಮತ್ತು ವೊಡಾಫೋನ್ ಜೊತೆಗಿನ ವಿವಾದಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಈ ಮಸೂದೆ … Continued

ಇ-ವೇ ಬಿಲ್‌: ಆಗಸ್ಟ್‌ 15ರಿಂದ ರಿಟರ್ನ್ಸ್‌ ಸಲ್ಲಿಕೆ ಕಡ್ಡಾಯ

  ನವದೆಹಲಿ: ಈ ವರ್ಷದ ಜೂನ್‌ವರೆಗೆ ಸತತ ಎರಡು ತಿಂಗಳಿಂದ ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಸದಿದ್ದರೆ ಆಗಸ್ಟ್‌ 15ರ ನಂತರ ಇ-ವೇ ಬಿಲ್‌ ಸೃಷ್ಟಿಸಲು ಸಾಧ್ಯವಾಗುವುದಿಲ್ಲ ಎಂದು ಜಿಎಸ್‌ಟಿಎನ್‌ (ಜಿಎಸ್‌ಟಿ ನೆಟ್‌ವರ್ಕ್) ಹೇಳಿದೆ. ಬಾಕಿ ಇರುವ ಜಿಎಸ್‌ಟಿ ರಿಟರ್ನ್‌ಗಳನ್ನು ತೆರಿಗೆ ಪಾವತಿದಾರರು ಆಗಸ್ಟ್‌ನಲ್ಲಿ ಸಲ್ಲಿಸುವ ನಿರೀಕ್ಷೆ ಇರುವುದರಿಂದ, ಸರಕು ಮತ್ತು ಸೇವಾ ತೆರಿಗೆ ಸಂಗ್ರಹವನ್ನು ಹೆಚ್ಚಿಸಲು ಈ … Continued

ಹೆಲಿಕಾಪ್ಟರ್ ನಲ್ಲಿ ಏರ್‌ಲಿಫ್ಟ್‌ ಮಾಡಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿದ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ರಕ್ಷಣೆ

ಭೋಪಾಲ್: ಪ್ರವಾಹದಲ್ಲಿ ಸಿಲುಕಿದ್ದ ಮಧ್ಯಪ್ರದೇಶದ ಗೃಹ ಸಚಿವರಾದ ನರೋತ್ತಮ ಮಿಶ್ರಾ ಅವರನ್ನು ಭಾರತೀಯ ವಾಯು ಸೇನೆಯವರು ಹೆಲಿಕಾಪ್ಟರ್ ಮೂಲಕ ಏರ್‌ಲಿಫ್ಟ್‌ ಮಾಡಿ ರಕ್ಷಿಸಿದ್ದಾರೆ. ಮಿಶ್ರಾ ಅವರು ಸಿಕ್ಕಿಬಿದ್ದ ಜನರಿಗೆ ಸಹಾಯ ಮಾಡಲು ಹೋದ ದಾಟಿಯಾ ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮದಲ್ಲಿ ಸಿಲುಕಿಕೊಂಡರು. ಶಿವಪುರಿ, ಶಿಯೋಪುರ್, ಗ್ವಾಲಿಯರ್ ಮತ್ತು ಡಾಟಿಯಾ ಜಿಲ್ಲೆಗಳು ಮಧ್ಯಪ್ರದೇಶದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಜಿಲ್ಲೆಗಳು. … Continued

ಚಾಲ್ತಿ ಖಾತೆಗಳ ವರ್ಗಾವಣೆ ಗಡುವು ಅಕ್ಟೋಬರ್ 31ರ ವರೆಗೆ ವಿಸ್ತರಿಸಿದ ಆರ್‌ಬಿಐ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬುಧವಾರ ಬ್ಯಾಂಕ್ ಗಳಿಗೆ ಕರೆಂಟ್ ಅಕೌಂಟ್ ಮತ್ತು ಓವರ್ ಡ್ರಾಫ್ಟ್ ಸೌಲಭ್ಯಗಳ ಮಾರ್ಗಸೂಚಿಗಳನ್ನು ಅನುಸರಿಸಲು ಅಕ್ಟೋಬರ್ 31 ರವರೆಗೆ ಕಾಲಾವಕಾಶ ನೀಡಿದೆ. ಪ್ರಸ್ತಾವಿತ ನಿಯಮಗಳನ್ನು ಬದಲಾಯಿಸುವ ಯಾವುದೇ ಮನಸ್ಥಿತಿಯಲ್ಲಿಲ್ಲ ಎಂದು ಕೇಂದ್ರ ಬ್ಯಾಂಕ್ ಸೂಚಿಸಿದೆ, ಆದರೆ ಸುಗಮ ಅನುಷ್ಠಾನಕ್ಕಾಗಿ ಟೈಮ್‌ಲೈನ್ ವಿಸ್ತರಿಸಲು ಮಾತ್ರ ಅವಕಾಶ ನೀಡುತ್ತದೆ. ಆರಂಭಿಕ … Continued

ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡಿನಲ್ಲಿ ಅಣ್ಣಾಮಲೈ ಉಪವಾಸ

ತಂಜಾವೂರು: ಕರ್ನಾಟಕದ ಮೇಕೆದಾಟು ಆಣೆಕಟ್ಟು ಯೋಜನೆಯನ್ನು ವಿರೋಧಿಸಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ನೇತೃತ್ವದಲ್ಲಿ ರೈತರು ತಂಜಾವೂರಿನಲ್ಲಿ ಇಂದು ಒಂದು ದಿನದ ಉಪವಾಸ ಸತ್ಯಗ್ರಹ ನಡೆಸಿದರು. ರೈತರೊಂದಿಗೆ ಎತ್ತಿನಗಾಡಿಯಲ್ಲಿ ನಿರಶನ ಸ್ಥಳಕ್ಕೆ ಆಗಮಿಸಿದರು. ನಿರಶನದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದು ಇದು ನ್ಯಾಯಸಮ್ಮತವಲ್ಲ. ಕರ್ನಾಟಕ ಸರ್ಕಾರವು ಈ ಯೋಜನೆಯನ್ನು … Continued

ಭಾರತಕ್ಕೆ ಮತ್ತೊಂದು ರಜತ ಪದಕ: ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರವಿಕುಮಾರ ದಹಿಯಾ

ಟೋಕಿಯೋ: ಟೋಕಿಯೊ ಒಲಿಂಪಿಕ್ಸ್ ಕುಸ್ತಿಯ ಪುರುಷರ 57 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ 23 ವರ್ಷದ ರವಿ ದಹಿಯಾ ಬೆಳ್ಳಿಯನ್ನು ಗೆದ್ದಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಎರಡನೇ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ. ಎರಡು ಬಾರಿ ವಿಶ್ವಚಾಂಪಿಯನ್ ರಷ್ಯಾದ ಚೌರ್ ಉಗುವೆವ್ ವಿರುದ್ಧ 4-7 ಅಂಕಗಳಿಂದ ರವಿ ದಹಿಯಾ ಸೋತು ಎರಡನೇ ಸ್ಥಾನ ಪಡೆದರು. … Continued

ಫ್ಲಿಪ್‌ಕಾರ್ಟಿಗೆ 10,600 ಕೋಟಿ ರೂ. ಫೆಮಾ ಕಾಂಟ್ರಾವೆನ್ಶನ್ ನೋಟಿಸ್ ನೀಡಿದ ಇಡಿ..!

ನವದೆಹಲಿ: ವಿದೇಶಿ ವಿನಿಯಮ ನಿಯಮ (FEMA) ಉಲ್ಲಂಘನೆ ಆರೋಪದಡಿ ವಿಶ್ವದ ಅತಿದೊಡ್ಡ ಆನ್ ಲೈನ್ ಮಾರಾಟ ಸಂಸ್ಥೆ ಫ್ಲಿಪ್ ಕಾರ್ಟ್ ಗೆ ಇಡಿ ನೊಟೀಸ್ ಜಾರಿ ಮಾಡಿದೆ. ಮಾತ್ರವಲ್ಲ 10,600-ಕೋಟಿ ರೂ.ಗಳ ದಂಡ ವಿಧಿಸುವ ಎಚ್ಚರಿಕೆ ನೀಡಿದೆ. ಫ್ಲಿಪ್ ಕಾರ್ಟ್ ನ ಸಂಸ್ಥಾಪಕ ಹಾಗೂ ಇತರೇ 9 ಜನರಿಗೆ ಇಡಿ ನೊಟೀಸ್ ಜಾರಿ ಮಾಡಿದ್ದು, ವಿದೇಶಿ … Continued