ಇಂದು ಮಧ್ಯಾಹ್ನ 12 ಗಂಟೆಗೆ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಸಿಬಿಎಸ್‌ಇ 10 ನೇ ತರಗತಿ ಫಲಿತಾಂಶವನ್ನು ಇಂದು ಮಧ್ಯಾಹ್ನ 12 ಗಂಟೆಗೆ ಪ್ರಕಟಿಸಲಿದೆ. ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ 2021 ಆಗಸ್ಟ್ 3 ರಂದು (ಇಂದು) ಮಂಡಳಿಯ ಅಧಿಕೃತ ವೆಬ್ ಸೈಟ್ ನಲ್ಲಿ ಮಧ್ಯಾಹ್ನ 12 ಗಂಟೆಗೆ ಘೋಷಿಸಲಾಗುವುದು ಎಂದು ಸಿಬಿಎಸ್ ಇ ತಿಳಿಸಿದೆ. ಪ್ರಾಯೋಗಿಕ … Continued

ಭಾರತದಲ್ಲಿ 30,549 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ (ಮಂಗಳವಾರ ) ಭಾರತವು 30,549 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 422 ಸಾವುಗಳನ್ನು ವರದಿ ಮಾಡಿದೆ. ದೇಶದ ಚೇತರಿಕೆಯ ದರವು ಈಗ 97.38%ರಷ್ಟಿದೆ. ಗರಿಷ್ಠ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿರುವ ಅಗ್ರ ಐದು ರಾಜ್ಯಗಳಲ್ಲಿ ಕೇರಳ 13,984 ಪ್ರಕರಣಗಳು, ಮಹಾರಾಷ್ಟ್ರ 4,869 ಪ್ರಕರಣಗಳು, ತಮಿಳುನಾಡು 1,957 ಪ್ರಕರಣಗಳು, ಆಂಧ್ರ … Continued

ಉತ್ತರ ಪ್ರದೇಶದ ಮಾಜಿ ಸಚಿವರಿಂದ ಆರನೇ ಮದುವೆಗೆ ಪ್ರಯತ್ನ: ಮೂರನೇ ಪತ್ನಿಯಿಂದ ದೂರು ದಾಖಲು..!

ಆಗ್ರಾ: ಉತ್ತರಪ್ರದೇಶದ ಮಾಜಿ ಸಚಿವ ಚೌಧರಿ ಬಶೀರ್ ಆರನೇ ಮದುವೆಯಾಗುವಾಗ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಅವರ ಮೂರನೇ ಪತ್ನಿ ನಗ್ಮಾ ಎಂಬವರು ದಾಖಲಿಸಿದ್ದಾರೆ. ಆಗ್ರಾದ ಮಂಟೋಲಾ ಪೊಲೀಸ್ ಠಾಣೆಯಲ್ಲಿ ನಗ್ಮಾ ಅವರು ಮುಸ್ಲಿಂ ಮಹಿಳೆಯರ ಸೆಕ್ಷನ್ 3 (ಮದುವೆ ಮೇಲಿನ ಹಕ್ಕುಗಳ ರಕ್ಷಣೆ) ಕಾಯ್ದೆ, 2019 ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ … Continued

ಸಂಸದನಾಗಿ ಉಳಿಯುತ್ತೇನೆ: ನಡ್ಡಾ ಭೇಟಿ ನಂತರ ನಿರ್ಧಾರ ಬದಲಿಸಿದ ಬಾಬುಲ್ ಸುಪ್ರಿಯೊ

ದೆಹಲಿ: ರಾಜಕೀಯ ಮತ್ತು ಸಂಸದ ಸ್ಥಾನವನ್ನು ತೊರೆಯುವ ನಿರ್ಧಾರವನ್ನು ಘೋಷಿಸಿದ ಒಂದು ದಿನದ ನಂತರ ಕೇಂದ್ರ ಮಾಜಿ ಸಚಿವ ಬಾಬುಲ್ ಸುಪ್ರಿಯೊ ಈಗ ಮರುಚಿಂತನೆ ನಡೆಸಿದ್ದಾರೆ. ಬಾಲಿವುಡ್-ಗಾಯಕ-ರಾಜಕಾರಣಿಯಾಗಿರುವ ಬಾಬುಲ್ ಸುಪ್ರಿಯೊ ರಾಜಕೀಯವಾಗಿ ಸಕ್ರಿಯರಾಗದೆ ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸುವುದನ್ನು ಮುಂದುವರಿಸುವುದಾಗಿ ಸೋಮವಾರ ಹೇಳಿದ್ದಾರೆ. ಸೋಮವಾರ ಬಿಜೆಪಿ ಮುಖ್ಯಸ್ಥ ಜೆ.ಪಿ ನಡ್ಡಾ ಅವರನ್ನು ಭೇಟಿಯಾದ ನಂತರ ಸುಪ್ರಿಯೋ … Continued

ಮೂರನೇ ಅಲೆ ಮುನ್ಸೂಚನೆ ?: ಮೇ 7ರ ನಂತರ ಮೊದಲ ಬಾರಿಗೆ 1ಕ್ಕಿಂತ ಹೆಚ್ಚಾದ ಭಾರತದ ಆರ್-ಮೌಲ್ಯ ..!

ನವದೆಹಲಿ: ಚೆನ್ನೈನಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸ್ ಸಂಶೋಧನೆಗಳ ಪ್ರಕಾರ, ಮೇ 7 ರ ನಂತರ ಭಾರತದಲ್ಲಿ SARS-CoV-2 ನ ‘R’ ಮೌಲ್ಯವು ಮೊದಲ ಬಾರಿಗೆ 1 ದಾಟಿದೆ. ‘ಆರ್’ ಫ್ಯಾಕ್ಟರ್ ಡೇಟಾ ಪಾಯಿಂಟ್ ಒಬ್ಬ ಕೋವಿಡ್ -19 ರೋಗಿಯು ಸರಾಸರಿ ಸೋಂಕಿಗೆ ಒಳಗಾಗುವ ಜನರ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಚೆನ್ನೈನ ಗಣಿತ ವಿಜ್ಞಾನ ಸಂಸ್ಥೆಯ ಕಂಪ್ಯೂಟೇಶನಲ್ … Continued

ಇ-ರುಪಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ: ಡಿಜಿಟಲ್ ಪಾವತಿ ಪರಿಹಾರದ ಬಗ್ಗೆ ಇಲ್ಲಿದೆ ಮಾಹಿತಿ

ಇ-ರುಪಿಯ ಪ್ರಮುಖ ಲಾಭಗಳು *ಸೇವಾ ಪ್ರಾಯೋಜಕರು ಮತ್ತು ಫಲಾನುಭವಿಗಳನ್ನು ಡಿಜಿಟಲ್ ಆಗಿ ಸಂಪರ್ಕಿಸುತ್ತದೆ * ನಗದುರಹಿತ ಮತ್ತು ಸಂಪರ್ಕವಿಲ್ಲದ ಡಿಜಿಟಲ್ ಪಾವತಿ * ವಿವಿಧ ಕಲ್ಯಾಣ ಸೇವೆಗಳ ಸೋರಿಕೆ-ನಿರೋಧಕ ವಿತರಣೆಯನ್ನು ಖಚಿತಪಡಿಸುತ್ತದೆ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಇ-ರುಪಿ (e-RUPI), ಎಲೆಕ್ಟ್ರಾನಿಕ್ ವೋಚರ್ ಆಧಾರಿತ ಡಿಜಿಟಲ್ ಪಾವತಿ ಪರಿಹಾರಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ … Continued

ಅತ್ಯಾಚಾರಿ ಜೊತೆ ಮದುವೆಯಾಗಲು ಅನುಮತಿ ಕೋರಿದ್ದ ಸಂತ್ರಸ್ತೆಯ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

ನವದೆಹಲಿ: ನವದೆಹಲಿ: ಕೇರಳದ ಕೊಟ್ಟಿಯೂರಿನಲ್ಲಿ ಮಹಿಳೆಯೊಬ್ಬರು ತನ್ನ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯನ್ನೇ ಮದುವೆಯಾಗಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಸೋಮವಾರ ವಜಾಗೊಳಿಸಿದೆ. ಈ ಪ್ರಕರಣದಡಿ 20 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಪಾದ್ರಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೂಡ ನ್ಯಾಯಾಲಯವು ವಜಾಗೊಳಿಸಿದೆ. ತನ್ನ ಮೇಲೆ ಅತ್ಯಾಚಾರವೆಸಗಿದ್ದ ಪಾದ್ರಿಯನ್ನು ಮದುವೆಯಾಗಲು ಅನುಮತಿ ನೀಡುವಂತೆ ಸಂತ್ರಸ್ತೆಯೇ … Continued

ಮುಂಬೈ ವಿಮಾನ ನಿಲ್ದಾಣಕ್ಕೆ ಅದಾನಿ ವಿಮಾನ ನಿಲ್ದಾಣ ಹೆಸರಿಸುವ ಬೋರ್ಡ್‌ ಕಿತ್ತಸೆದ ಶಿವಸೇನಾ ಕಾರ್ಯಕರ್ತರು

ಮುಂಬೈ: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಿದ್ದನ್ನು ವಿರೋಧಿಸಿದ ಶಿವಸೇನಾ ಕಾರ್ಯಕರ್ತರು ಆ ನಾಮಫಲವನ್ನು ಕಿತ್ತು ಹಾಕಿದ್ದಾರೆ. ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಮಹಾ ವಿಕಾಸ ಅಘಾಡಿ ಮೈತ್ರಿಕೂಟದ ಅಂಗಪಕ್ಷವಾದ ಶಿವಸೇನೆ, ಮುಂಬೈ ವಿಮಾನ ನಿಲ್ದಾಣದ ಮೇಲ್ವಿಚಾರಣೆ ಅದಾನಿ ಸಮೂಹಕ್ಕೆ ಒಳಪಟ್ಟ ನಂತರದಲ್ಲಿ ನಂತರ ಮುಂಬೈ … Continued

ಕಾಲ್ಬೆರಳುಗಳಿಂದ ದ್ವಿತೀಯ ಪಿಯು ಪರೀಕ್ಷೆ ಬರೆದು ಶೇ.70% ಅಂಕ ಪಡೆದ ಉತ್ತರ ಪ್ರದೇಶದ ವಿದ್ಯಾರ್ಥಿ..!

ಲಕ್ನೋ: ಲಕ್ನೋದ  ವಿದ್ಯಾರ್ಥಿಯೊಬ್ಬ ತನ್ನ ಪಾದಗಳಿಂದ ಪರೀಕ್ಷೆಗಳನ್ನು ಬರೆದರು ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 70 ಅಂಕಗಳನ್ನು ಗಳಿಸಿದ್ದಾನೆ.. ಕ್ರಿಯೇಟಿವ್‌ ಕಾನ್ವೆಂಟ್ ಕಾಲೇಜಿನ ತುಷಾರ್ ವಿಶ್ವಕರ್ಮ ಸಾಟಿಯಿಲ್ಲದ ಚೈತನ್ಯ ಮತ್ತು ಸಾಟಿಯಿಲ್ಲದ ಮನೋಭಾವಕ್ಕೊಂದು ಉದಾಹರಣೆಯಾಗಿದೆ. ಜನ್ಮತಃ ಈ ವಿದ್ಯಾರ್ಥಿಯ ಎರಡೂ ಕೈಗಳು ಕಾರ್ಯನಿರ್ವಹಿಸುವುದಿಲ್ಲ, ಆದರೆ ಆತ ಅದನ್ನು ಎಂದಿಗೂ ಒಂದು ಕೊರತೆಯೆಂದು ಪರಿಗಣಿಸಲಿಲ್ಲ. ನನ್ನ … Continued

ವಾಣಿಜ್ಯ ಬಳಕೆ ಅನಿಲ ಸಿಲಿಂಡರ್ ದರ ಹೆಚ್ಚಳ..!

ನವದೆಹಲಿ:   ಅನಿಲ ಬಳಕೆದಾರರಿಗೆ ಸರಕಾರ ಮತ್ತೆ ಶಾಕ್ ನೀಡಿದ್ದು ಈ ಬಾರಿ ವಾಣಿಜ್ಯ ಬಳಕೆ  ಅನಿಲ ಸಿಲಿಂಡರ್ ದರ ಹೆಚ್ಚಳ ಮಾಡಲಾಗಿದೆ. ಆದರೆ, ಗೃಹ ಬಳಕೆ ಸಿಲಿಂಡರ್ ದರ ಹೆಚ್ಚಳ ಮಾಡಿಲ್ಲ. ಪ್ರತಿ ತಿಂಗಳ ಮೊದಲ ದಿನ ಸಾಮಾನ್ಯವಾಗಿ ತೈಲಕಂಪನಿಗಳು ಅಡುಗೆ ಅನಿಲ ದರ ಪರಿಷ್ಕರಿಸುತ್ತವೆ. ೧೯ ಕೆಜಿಯ ವಾಣಿಜ್ಯ ಬಳಕೆಯ ಎಲ್.ಪಿ.ಜಿ. ಸಿಲಿಂಡರ್ ದರವನ್ನು … Continued