ಎಬಿಪಿ-ಸಿವೋಟರ್- ಐಎಎನ್‌ಎಸ್‌ ಸಮೀಕ್ಷೆ: ಉತ್ತರ ಪ್ರದೇಶ ಚುನಾವಣೆಯಲ್ಲಿ 108 ಸ್ಥಾನ ಕಳೆದುಕೊಳ್ಳಲಿರುವ ಬಿಜೆಪಿ..ಆದ್ರೂ ಅಧಿಕಾರಕ್ಕೆ

ನವದೆಹಲಿ: ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಪಕ್ಷವಾಗಿ ಸಮೀಕ್ಷೆಯಲ್ಲಿ ಕಂಡುಬರುತ್ತಿದೆ. ಆದರೆ ಸಮಾಜವಾದಿ ಪಕ್ಷವು ವೇಗವಾಗಿ ತನ್ನ ಬಲ ಹೆಚ್ಚಿಸಿಕೊಳ್ಳುತ್ತಿದ್ದು, ಬಿಜೆಪಿ ಈಗ 108 ಸ್ಥಾನಗಳನ್ನು ಕಳೆದುಕೊಳ್ಳುತ್ತಿದೆ ಎಂದು ಎಬಿಪಿ-ಸಿವೋಟರ್- ಐಎಎನ್‌ಎಸ್‌ ಸಮೀಕ್ಷೆ ಹೇಳಿದೆ. ಆದರೆ ಉತ್ತರಾಖಂಡ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್ ಪ್ರಬಲವಾದ ಪುನರಾಗಮನವನ್ನು ಮಾಡುತ್ತಿದೆ ಎಂದು ಅದು … Continued

ನ.​​16ರಿಂದ ಭಕ್ತರ ದರ್ಶನಕ್ಕೆ ಶಬರಿಮಲೆ ಮುಕ್ತ.. ಪ್ರತಿದಿನ 25 ಸಾವಿರ ಭಕ್ತರಿಗೆ ಮಾತ್ರ ಅವಕಾಶ

ತಿರುವನಂತಪುರಂ(ಕೇರಳ) : ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ನವೆಂಬರ್​ 16ದಿಂದ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ. ಪ್ರತಿದಿನ 25 ಸಾವಿರ ಭಕ್ತಾಧಿಗಳಿಗೆ ದರ್ಶನ ಪಡೆದುಕೊಳ್ಳಲು ಅವಕಾಶ ನೀಡಲಾಗುವುದು ಎಂದು ದೇವಾಲಯದ ಅಧ್ಯಕ್ಷರು ತಿಳಿಸಿದ್ದಾರೆ. ಎರಡು ತಿಂಗಳ ವಾರ್ಷಿಕ ಧಾರ್ಮಿಕ ಯಾತ್ರೆಯ ಅವಧಿ ಆರಂಭಗೊಂಡಿರುವ ಕಾರಣ, ಪ್ರತಿದಿನ 25 ಸಾವಿರ ಭಕ್ತರಿಗೆ … Continued

ಕೇರಳದ ವಯನಾಡ್ ಜಿಲ್ಲೆಯಲ್ಲಿ ನೊರೊ ವೈರಸ್ ಸೋಂಕು ಪತ್ತೆ..!

ವಯನಾಡು : ಕೊರೊನಾ ವೈರಸ್‌ ಸೋಂಕಿನ ಆರ್ಭಟದ ಮಧ್ಯೆಯೇ, ಝಿಕಾ ವೈರಸ್‌ ನಂತರ ಕೇರಳದಲ್ಲಿ ಈಗ ನೊರೊ ವೈರಸ್‌ ಪತ್ತೆಯಾಗಿದೆ. ನೊರೊ ವೈರಸ್‌ (Norovirus) ಪ್ರಕರಣದ ಕೇರಳದಲ್ಲಿ ದೃಢಪಟ್ಟಿದೆ. ವಯನಾಡಿನ ವೈತಿರಿ ಜಿಲ್ಲೆಯ ಪೊಕೋಡ್‌ನಲ್ಲಿರುವ ಪಶುವೈದ್ಯಕೀಯ ಕಾಲೇಜಿನ 13 ವಿದ್ಯಾರ್ಥಿಗಳಲ್ಲಿ ಮಾರಣಾಂತಿಕ ವೈರಸ್‌ ಸೋಂಕು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕೇರಳ ಸರಕಾರ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ … Continued

ದೆಹಲಿಯಲ್ಲಿ ಉಸಿರುಗಟ್ಟಿಸ್ತಿದೆ ವಾತಾವರಣ : ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರ ಬರುವಂತೆ ಸಲಹೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅತಿಯಾದ ವಾಯು ಮಾಲಿನ್ಯ ಉಂಟಾದ ಹಿನ್ನೆಲೆಯಲ್ಲಿ ಜನರು ತಮ್ಮ ಮನೆಗಳಿಂದ ಹೊರಗೆ ಬರಬೇಡಿ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಸಲಹೆ ನೀಡಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ದೆಹಲಿಯ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ತಮ್ಮ ವಾಹನ ಬಳಕೆಯನ್ನು ಕನಿಷ್ಠ 30 ಪ್ರತಿಶತದಷ್ಟು ಕಡಿತಗೊಳಿಸುವಂತೆ ಸೂಚಿಸಿದೆ. ನಗರದ ನಾಗರಿಕರು … Continued

ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ತನ್ನ ಭುಜದ ಮೇಲೆ ಹೊತ್ತೊಯ್ದು ರಕ್ಷಿಸಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು

ಚೆನ್ನೈ: ನಗರದ ಭೀಕರ ಮಳೆ ಮಧ್ಯೆಯೇ ಎಚ್ಚರ ತಪ್ಪಿದ್ದ ಯುವಕನೊಬ್ಬನನ್ನು ಮಹಿಳಾ ಪೊಲೀಸ್‌ ಇನ್ಸ್ಪೆಕ್ಟರ್‌ ಭುಜದ ಮೇಲೆ ಹೊತೊಯ್ದು ನಂತರ ರಿಕ್ಷಾದಲ್ಲಿ ಹಾಕಿ ಚೆನ್ನೈ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಗುರುವಾರ, ಪೊಲೀಸ್ ಅಧಿಕಾರಿ ರಾಜೇಶ್ವರಿ ಅವರು ಭಾರೀ ಮಳೆಯ ನಡುವೆ ಚೆನ್ನೈನ ಟಿಪಿ ಛತ್ರಂ ಪ್ರದೇಶದ … Continued

ಸಾಮೂಹಿಕ ಅತ್ಯಾಚಾರ ಪ್ರಕರಣ; ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿಗೆ ಜೀವಾವಧಿ ಶಿಕ್ಷೆ ಪ್ರಕಟ

ಲಕ್ನೋ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಸಾದ್​ ಪ್ರಜಾಪತಿ (Gayatri Prajapati) ಹಾಗೂ ಇತರ ಇಬ್ಬರು ಆರೋಪಿಗಳಿಗೆ ಲಕ್ನೋ ವಿಶೇಷ ಕೋರ್ಟ್‌ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಉತ್ತರಪ್ರದೇಶದ ಸಮಾಜವಾದಿ ಪಕ್ಷದ  ಮುಖಂಡ ಹಾಗೂ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಸೇರಿ ಮೂವರು ಅಪರಾಧಿಗಳಿಗೆ ಜೀವಾವಧಿ … Continued

ನೀಟ್‌ ಪ್ರಕರಣ: ಮರುಕವಿದೆ, ಆದರೆ ಇಬ್ಬರಿಗಾಗಿ ಮರುಪರೀಕ್ಷೆ ನಡೆಸಲಾಗದು-ಸುಪ್ರೀಂ ಕೋರ್ಟ್‌

ನವದೆಹಲಿ: ಪರೀಕ್ಷಾ ಕೊಠಡಿ ಮೇಲ್ವಿಚಾರಕರ ಅಜಾಗರೂಕತೆಯಿಂದಾಗಿ ತಮ್ಮ ಪರೀಕ್ಷಾ ಬುಕ್‌ಲೆಟ್‌ ಹಾಗೂ ಒಎಂಆರ್‌ ಉತ್ತರ ಪತ್ರಿಕೆಗಳು ಕಲಬೆರಕೆಯಾಗಿವೆ ಎಂದು ಆರೋಪಿಸಿದ್ದ ಇಬ್ಬರು ವಿದ್ಯಾರ್ಥಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುಪರೀಕ್ಷೆಗೆ ಆದೇಶಿಸಿದ್ದ ಬಾಂಬೆ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಪಕ್ಕಕ್ಕೆ ಸರಿಸಿದೆ. ಈ ಇಬ್ಬರು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಪ್ರಶ್ನೆಪತ್ರಿಕೆಯೊಂದಿಗೆ ಸರಿಯಾಗಿ ಹೊಂದಿಸಲಾಗುವುದು ಎಂದು ಸಾಲಿಸಿಟರ್ ಜನರಲ್‌ … Continued

1947ರ ಸ್ವಾತಂತ್ರ್ಯ ಭಿಕ್ಷೆ ಹೇಳಿಕೆ: ಕಂಗನಾ ರಣಾವತ್‌ಗೆ ನೀಡಲಾದ ಪದ್ಮಶ್ರೀ ಹಿಂಪಡೆಯಲು ಹೆಚ್ಚುತ್ತಿರುವ ಒತ್ತಾಯದ ಕೂಗು

ನವದೆಹಲಿ: 1947ರಲ್ಲಿ ಭಾರತದ ಸ್ವಾತಂತ್ರ್ಯವನ್ನು ಭಿಕ್ಷೆ ಎಂದು ಕರೆಯುವ ಮೂಲಕ ವಿವಾದ ಸೃಷ್ಟಿಸಿರುವ ನಂತರ ನಟಿ ಕಂಗನಾ ರಣಾವತ್ ಅವರಿಗೆ ನೀಡಲಾದ ಪದ್ಮಶ್ರೀ ಪುರಸ್ಕಾರವನ್ನು ಸರ್ಕಾರ ವಾಪಸ್‌ ತೆಗೆದುಕೊಳ್ಳಬೇಕು ಎಂದು ವಿವಿಧ ಪಕ್ಷಗಳ ನಾಯಕರು ಒತ್ತಾಯಿಸಿದರು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ 2014 ರ ನಂತರವೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದು ಕಂಗನಾ … Continued

ಕಾಶ್ಮೀರ ಕಣಿವೆಯಲ್ಲಿ ಮೂವರು ಭಯೋತ್ಪಕರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಎರಡು ಎನ್‌ಕೌಂಟರ್‌ಗಳಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದು ಹಾಕಿವೆ. ಶ್ರೀನಗರದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಮುಜಾಹಿದ್ದೀನ್ ಗಜ್ವಾತುಲ್ ಹಿಂದ್‌ಗೆ ಸೇರಿದ ಪುಲ್ವಾಮಾದ ಅಮೀರ್ ರಿಯಾಜ್ ಎಂದು ಗುರುತಿಸಲಾದ ಒಬ್ಬ ಭಯೋತ್ಪಾದಕನನ್ನು ಸೇನೆ ಕೊಂದು ಹಾಕಿದೆ. ಈತ ಲೆಥ್‌ಪೋರಾ ಭಯೋತ್ಪಾದಕ ದಾಳಿಯ ಆರೋಪಿಗಳಲ್ಲಿ ಒಬ್ಬನ … Continued

ಕೋವಿಡ್‌ ಲಸಿಕೆ ತೆಗೆದುಕೊಂಡ್ರೆ ರೆಫ್ರಿಜರೇಟರ್‌, ವಾಷಿಂಗ್‌ ಮಶಿನ್‌, ಎಲ್‌ಇಡಿ ಟಿವಿ ಬಹುಮಾನದ ಭಾಗ್ಯ..!

ಚಂದ್ರಾಪುರ: ಕೋವಿಡ್ -19 ವಿರುದ್ಧ ಹೆಚ್ಚು ಹೆಚ್ಚು ಜನರು ಲಸಿಕೆ ಹಾಕಿಸಿಕೊಳ್ಳಲು ಪ್ರೋತ್ಸಾಹಿಸುವ ಪ್ರಯತ್ನದ ಅಂಗವಾಗಿ ಮಹಾರಾಷ್ಟ್ರದ ಚಂದ್ರಾಪುರ್ ಮುನ್ಸಿಪಲ್ ಕಾರ್ಪೊರೇಶನ್ ಲಸಿಕೆ ತೆಗೆದುಕೊಂಡವರಿಗೆ ಬಂಪರ್ ಲಕ್ಕಿ ಡ್ರಾ ಘೋಷಿಸಿದೆ. ಇದು ಎಲ್ಇಡಿ ಟಿವಿಗಳು, ರೆಫ್ರಿಜರೇಟರ್‌ಗಳಿಂದ ಹಿಡಿದು ವಾಷಿಂಗ್ ಮೆಷಿನ್‌ಗಳ ವರೆಗಿನ ಬಹುಮಾನಗಳನ್ನು ಒಳಗೊಂಡಿದೆ..! ನವೆಂಬರ್ 12 ರಿಂದ 24ರ ವರೆಗೆ ಲಸಿಕೆ ಹಾಕಿಸಿಕೊಳ್ಳಲು ಲಸಿಕೆ … Continued