ಇಂಡೋನೇಷ್ಯಾದ ಜಾವಾದಲ್ಲಿ ಭೂಕಂಪ : ಕನಿಷ್ಠ 162 ಸಾವು, 700 ಮಂದಿಗೆ ಗಾಯ

ಸಿಯಾಂಜೂರ್ (ಇಂಡೋನೇಷ್ಯಾ) : ಇಂಡೋನೇಷ್ಯಾದ ಮುಖ್ಯ ದ್ವೀಪ ಜಾವಾದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 162 ಜನರು ಸಾವಿಗೀಡಾಗಿದ್ದಾರೆ ಮತ್ತು 700  ಜನರು ಗಾಯಗೊಂಡಿದ್ದಾರೆ. ಭಯಭೀತರಾದ ನಿವಾಸಿಗಳು ರಸ್ತೆಗೆ ಓಡಿಹೋದರು, ಕೆಲವರು ಭಗ್ನಾವಶೇಷಗಳಡಿ ಸಿಲುಕಿದರು. ಸತ್ತವರಲ್ಲಿ ಹೆಚ್ಚಿನವರು ಸಾರ್ವಜನಿಕ ಶಾಲಾ ವಿದ್ಯಾರ್ಥಿಗಳಾಗಿದ್ದು, ಭೂಕಂಪದಿಂದ ಶಾಲಾ ಕಟ್ಟಡ ಕುಸಿದು ಬಿದ್ದಾಗ ಹಲವಾರು ವಿದ್ಯಾರ್ಥಿಗಳು ಇಸ್ಲಾಮಿಕ್ ಶಾಲೆಗಳಲ್ಲಿ … Continued

ಧಾರವಾಡ ಜೆಎಸ್‌ಎಸ್‌ನಿಂದ ವಿಶಿಷ್ಟ ದಾಖಲೆ…: ಡಾ.ವೀರೇಂದ್ರ ಹೆಗ್ಗಡೆ 75ನೇ ಜನ್ಮದಿನಕ್ಕೆ 200 ಮಕ್ಕಳಿಂದ ಏಕಕಾಲಕ್ಕೆ ಗಿಟಾರ್‌ ವಾದನ: ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾದಿಂದ ಪ್ರಮಾಣಪತ್ರ

ಧಾರವಾಡ: ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆ ಅವರ 75ನೇ ಜನ್ಮದಿನದ ಪ್ರಯುಕ್ತ ಧಾರವಾಡದ ವಿದ್ಯಾಗಿರಿಯ ಜೆಎಸ್‌ಎಸ್‌ ಸೆಂಟ್ರಲ್ ಶಾಲೆಯ 200 ಮಕ್ಕಳು ಏಕಕಾಲದಲ್ಲಿ ಗಿಠಾರ್‌ ನುಡಿಸುವ ಮೂಲಕ ಅವರಿಗೆ ಸಂಗೀತ ಸುಧೆಯ ಮೂಲಕ ಜನ್ಮದಿನಕ್ಕೆ ಶುಭಾಷಯ ತಿಳಿಸಿದ್ದರು. ಈ ಶುಭಕೋರಿದ ಸಂದರ್ಭವು ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾದಲ್ಲಿ ದಾಖಲಾಗಿತ್ತು. ಅದರ ಪ್ರಮಾಣ ಪತ್ರವನ್ನು ಜೆ.ಎಸ್.ಎಸ್ ಬಯಲು … Continued

ಮೊರ್ಬಿ ಸೇತುವೆ ಕುಸಿತ ಭಾರೀ ದೊಡ್ಡ ದುರಂತ ಎಂದ ಸುಪ್ರೀಂ ಕೋರ್ಟ್‌: ನಿಯಮಿತ ವಿಚಾರಣೆ ನಡೆಸಲು ಗುಜರಾತ್ ಹೈಕೋರ್ಟ್‌ಗೆ ಸೂಚನೆ

ನವದೆಹಲಿ: ಗುಜರಾತ್‌ನಲ್ಲಿ ಮೊರ್ಬಿ ಸೇತುವೆ ಕುಸಿದು 135 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಇದನ್ನು ಭಾರೀ ದುರಂತ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಈಗಾಗಲೇ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ನಡೆಸುತ್ತಿರುವ ಗುಜರಾತ್ ಹೈಕೋರ್ಟ್ ನಿಯಮಿತವಾಗಿ ವಿಚಾರಣೆ ನಡೆಸಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಮತ್ತು ನ್ಯಾಯಮೂರ್ತಿ … Continued

ಮೈ ಜುಂ ಎನ್ನುವ ವೀಡಿಯೊ: ಅತ್ಯಂತ ಅಪಾಯಕಾರಿ ಪರ್ವತ ಪ್ರದೇಶದಲ್ಲಿ ಕಡಿದಾದ ರಸ್ತೆಯಲ್ಲಿ ಹೋಗುತ್ತಿರುವ ಬಸ್‌: ವೀಕ್ಷಿಸಿ

ಆರ್‌ಪಿಜಿ (RPG) ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಸ್ಫೂರ್ತಿದಾಯಕ, ಚಿಂತನೆ-ಪ್ರಚೋದಕ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಈಗ ನವೆಂಬರ್ 20 ರಂದು ಕೈಗಾರಿಕೋದ್ಯಮಿ ಹಿಮಾಚಲ ಪ್ರದೇಶದ ಅತ್ಯಂತ ಅಪಾಯಕಾರಿ ಪರ್ವತ ಪ್ರದೇಶದ ರಸ್ತೆಯಲ್ಲಿ ಬಸ್ ಹೋಗುತ್ತಿರುವ ಮೈ ಜುಂ ಎನ್ನುವ ವೀಡಿಯೊವೊಂದನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. 51 ಸೆಕೆಂಡುಗಳ ಕ್ಲಿಪ್‌ನಲ್ಲಿ, ಅತ್ಯಂತ ಕಿರಿದಾದ ಮತ್ತು ಅಪಾಯಕಾರಿ ರಸ್ತೆಯಲ್ಲಿ ಬಸ್ ಚಲಿಸುವುದನ್ನು … Continued

ಧಾರ್ಮಿಕ ಮೆರವಣಿಗೆಗೆ ನುಗ್ಗಿದ ಟ್ರಕ್‌: ಮಕ್ಕಳು ಸೇರಿ ಕನಿಷ್ಠ 12 ಮಂದಿ ಸಾವು

ಹಾಜಿಪುರ: ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಭಾನುವಾರ ಜನಸಮೂಹದ ಮೇಲೆ ವೇಗವಾಗಿ ಬಂದ ಟ್ರಕ್ ನುಗ್ಗಿದ ಪರಿಣಾಮ ಹಲವಾರು ಮಕ್ಕಳು ಸೇರಿದಂತೆ ಕನಿಷ್ಠ 12 ಜನರು ಸಾವಿಗೀಡಾಗಿದ್ದಾರೆ. ವೈಶಾಲಿ ಜಿಲ್ಲೆಯ ಮೆಹನಾರ್ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಅಪಘಾತದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಗೊಂಡವರಿಗೆ … Continued

ರಕ್ಷಣಾ ಸಾಮರ್ಥ್ಯ ಹೆಚ್ಚಿಸಲು 62,000ಕ್ಕೂ ಹೆಚ್ಚು ಬುಲೆಟ್ ಪ್ರೂಫ್ ಜಾಕೆಟ್‌ಗಳ ಖರೀದಿಗೆ ಟೆಂಡರ್‌ ಕರೆದ ಸೇನೆ

ನವದೆಹಲಿ: ಭಾರತದಲ್ಲಿ ಭಯೋತ್ಪಾದಕರು ಬಳಸುತ್ತಿರುವ ಸ್ಟೀಲ್ ಕೋರ್ ಬುಲೆಟ್‌ಗಳ ಅಪಾಯದ ಮಧ್ಯೆ ಭಾರತೀಯ ಸೇನೆಯು ತನ್ನ ಮುಂಚೂಣಿ ಪಡೆಗೆ 62,500 ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು (ಬಿಪಿಜೆ) ಪಡೆಯಲು ಟೆಂಡರ್‌ ಕರೆದಿದೆ. ರಕ್ಷಣಾ ಸಚಿವಾಲಯವು ಮೇಕ್-ಇನ್-ಇಂಡಿಯಾ ಉಪಕ್ರಮದ ಅಡಿಯಲ್ಲಿ ಜಾಕೆಟ್‌ಗಳಿಗೆ ಸಾಮಾನ್ಯ ಮಾರ್ಗದಲ್ಲಿ 47,627 ಜಾಕೆಟ್‌ಗಳಿಗೆ ಟೆಂಡರ್‌ಗಳನ್ನು ನೀಡಿದೆ ಮತ್ತು ಇನ್ನೊಂದು ತುರ್ತು ಖರೀದಿ ಪ್ರಕ್ರಿಯೆಗಳ ಅಡಿಯಲ್ಲಿ … Continued

ಪುಣೆ: ಹೆದ್ದಾರಿಯ ನವಲೆ ಸೇತುವೆಯಲ್ಲಿ ಭಾರಿ ಅಪಘಾತ; 48 ವಾಹನಗಳಿಗೆ ಹಾನಿ | ವೀಕ್ಷಿಸಿ

ಪುಣೆ: ಪುಣೆ-ಬೆಂಗಳೂರು ಹೆದ್ದಾರಿಯ ಪುಣೆ ಬಳಿಯ ನವಲೆ ಸೇತುವೆಯಲ್ಲಿ 48 ವಾಹನಗಳ ದೊಡ್ಡ ಸರಣಿ ಅಪಘಾತ ಸಂಭವಿಸಿದೆ. ಸ್ಥಳೀಯ ಅಧಿಕಾರಿಗಳು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಪುಣೆ ಅಗ್ನಿಶಾಮಕ ದಳ ಮತ್ತು ಪುಣೆ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (ಪಿಎಂಆರ್‌ಡಿಎ) ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿವೆ ಎಂದು ಪುಣೆ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. … Continued

ಶ್ರದ್ಧಾ ಕೊಲೆ ಪ್ರಕರಣ : ತಲೆಬುರುಡೆಯ ಭಾಗ, ಮೂಳೆಗಳನ್ನು ಪತ್ತೆ ಹಚ್ಚಿದ ಪೊಲೀಸರು, ಡಿಎನ್ಎ ಪರೀಕ್ಷೆಗೆ ರವಾನೆ

ನವದೆಹಲಿ: 27 ವರ್ಷದ ಶ್ರದ್ಧಾ ವಾಕರ್‌ ಅವರನ್ನು ಆಕೆಯ ಲಿವ್‌ ಇನ್‌ ಬಾಯ್‌ಫ್ರೆಂಡ್‌ ಅಫ್ತಾಬ್‌ ಅಮೀನ್‌ ಪೂನಾವಾಲಾ ಭೀಕರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ದೆಹಲಿ ಪೊಲೀಸರು ಮೆಹ್ರೌಲಿ ಅರಣ್ಯದಿಂದ ಹೆಚ್ಚಿನ ಮಾನವ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ. ತಲೆಬುರುಡೆಯ ಬುಡ, ಶಿರಚ್ಛೇದಿತ ದವಡೆ ಮತ್ತು ಹೆಚ್ಚಿನ ಮೂಳೆಗಳು ಇಂದು, ಭಾನುವಾರ ಪತ್ತೆಯಾಗಿವೆ. ಶ್ರದ್ಧಾ ಅವರ ತಂದೆಯ ಡಿಎನ್‌ಎ ಮಾದರಿಗಳೊಂದಿಗೆ … Continued

ಮಂಗಳೂರು ಸ್ಫೋಟದ ಶಂಕಿತ ಆರೋಪಿ ಗುರುತು ಪತ್ತೆ : ಆರೋಪಿ ಮೇಲೆ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು

ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಸ್ಫೋಟ ಸಂಭವಿಸಿದ ಒಂದು ದಿನದ ನಂತರ, ಸ್ಫೋಟದ ಶಂಕಿತನನ್ನು ಮೊಹಮ್ಮದ್ ಶಾರಿಕ್ ಎಂದು ಪೊಲೀಸರು ಗುರುತಿಸಿದ್ದಾರೆ.ಶಾರಿಕ್ ಈ ಹಿಂದೆ ಮಂಗಳೂರಿನಲ್ಲಿ ಗೋಡೆಗಳ ಮೇಲೆ ಗೀಚುಬರಹಕ್ಕಾಗಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಅವರ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದ. ಅಷ್ಟೇ ಅಲ್ಲ ಭಯೋತ್ಪಾದನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ … Continued

ಗುಜರಾತ್‌ ಚುನಾವಣೆ : 7 ನಾಯಕರನ್ನು ಪಕ್ಷದಿಂದ ಅಮಾನತುಗೊಳಿಸಿದ ಬಿಜೆಪಿ

ಗಾಂಧಿನಗರ: ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ನಿರಾಕರಿಸಿದ ನಂತರ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಭಾರತೀಯ ಜನತಾ ಪಕ್ಷ (ಬಿಜೆಪಿ) ಶಿಸ್ತು ಕ್ರಮ ಕೈಗೊಂಡು ಪಕ್ಷದ ಏಳು ಮುಖಂಡರನ್ನು ಬಿಜೆಪಿ ಅಮಾನತುಗೊಳಿಸಿದೆ. ಎಲ್ಲಾ ಏಳು ಅಭ್ಯರ್ಥಿಗಳು ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಟಿಕೆಟ್ ಬಯಸಿದ್ದರು. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಕ್ಕಾಗಿ ಈ ಶಾಸಕರನ್ನು … Continued