ಇದು ನನ್ನ ವರ್ಚಸ್ಸು ಹಾಳು ಮಾಡಲು…: 7 ಸರ್ಕಾರಿ ಪಶುವೈದ್ಯರು ಫತೇಪುರ್ ಜಿಲ್ಲಾಧಿಕಾರಿಯ ರೋಗ ಪೀಡಿತ ಗೋವಿನ ಆರೈಕೆಗೆ ನಿಯೋಜನೆ ವಿವಾದದ ನಂತರ ಹೇಳಿಕೆ

ಲಕ್ನೋ: ಫತೇಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಪ್ರಿಯಾ ದುಬೆ ಅವರು ತನ್ನ ಇಮೇಜ್‌ಗೆ ಕಳಂಕ ತರಲು ತಮ್ಮ ಅಸ್ವಸ್ಥ ಹಸುವನ್ನು ಒಳಗೊಂಡ ವಿವಾದ ಮಾಡಲಾಗಿದೆ ಎಂದು ಹೇಳಿದ್ದಾರೆ. ಹಿಂದಿನ ದಿನ, ಅಧಿಕಾರಿಯ ಅನಾರೋಗ್ಯದ ಹಸುವಿನ ಆರೈಕೆಗಾಗಿ ಏಳು ಪಶು ವೈದ್ಯರನ್ನು ತೊಡಗಿಸಿಕೊಂಡ ಸರ್ಕಾರಿ ಆದೇಶವು ವೈರಲ್ ಆಗಿತ್ತು. ಈ ಪತ್ರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, … Continued

ಜಮ್ಮು -ಕಾಶ್ಮೀರದಲ್ಲಿ ಈ ವರ್ಷ 30 ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ 100 ಭಯೋತ್ಪಾದಕರ ಹತ್ಯೆ

ನವದೆಹಲಿ: ಈ ವರ್ಷದ ಮೊದಲ ಆರು ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ, ಅವರಲ್ಲಿ 30 ಭಯೋತ್ಪಾದಕರು ಪಾಕಿಸ್ತಾನದವರು ಎಂದು ಹೇಳಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾನುವಾರ, ಜೂನ್ 12 ರಂದು ಮೂವರು ಲಷ್ಕರ್ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಕೊಂದಿವೆ. ಇದರೊಂದಿಗೆ, ಈ ವರ್ಷ ಇದುವರೆಗೆ ವಿವಿಧ ಕಾರ್ಯಾಚರಣೆಗಳಲ್ಲಿ … Continued

ಪ್ರತಿ ಕೆಜಿ ತೂಕ ಇಳಿಸಿದ್ರೆ 1,000 ಕೋಟಿ ರೂ.ಅಭಿವೃದ್ಧಿ ನಿಧಿ ಭರವಸೆ ನೀಡಿದ ಸಚಿವ ಗಡ್ಕರಿ: 15 ಕೆಜಿ ಇಳಿಸಿಕೊಂಡ ಉಜ್ಜಯಿನಿ ಸಂಸದ

 ಉಜ್ಜಯಿನಿ: ಉಜ್ಜಯಿನಿಯ ಬಿಜೆಪಿ ಸಂಸದ ಅನಿಲ್ ಫಿರೋಜಿಯಾ ಅವರು ತಮ್ಮ ದೇಹದ ತೂಕ ಇಳಿಸಿಕೊಳ್ಳುವ ಕಡೆ ಗಮನ ಹರಿಸಿದ್ದಾರೆ. ಕೇವಲ ಫಿಟ್​ ಆಗಿರಲು ಇವರು ತೂಕ ಇಳಿಸಿಕೊಳ್ಳುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ತೂಕ ಇಳಿಸಿಕೊಳ್ಳುತ್ತಿದ್ದಾರೆ. 50 ವರ್ಷದ ಅನಿಲ್ ಫಿರೋಜಿಯಾ ಕಳೆದ ಫೆಬ್ರವರಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು … Continued

ತೀವ್ರ ಶಾಖ: ಪಶ್ಚಿಮ ಬಂಗಾಳದ ಧಾರ್ಮಿಕ ಉತ್ಸವದಲ್ಲಿ ಮೂವರ ಸಾವು

ಕೋಲ್ಕತ್ತಾ: ಭಾನುವಾರ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಧಾರ್ಮಿಕ ಉತ್ಸವದಲ್ಲಿ ಪಾಲ್ಗೊಂಡಿದ್ದಾಗ ತೀವ್ರ ಶಾಖದಿಂದಾಗಿ ಮೂವರು ಮೃತಪಟ್ಟಿದ್ದಾರೆ ಮತ್ತು ಹಲವರು ಅಸ್ವಸ್ಥರಾಗಿದ್ದಾರೆ. ಮೃತರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. ಪಾನಿಹಟಿಯಲ್ಲಿರುವ ಇಸ್ಕಾನ್ ದೇವಸ್ಥಾನದಲ್ಲಿ ಪ್ರತಿ ವರ್ಷ ಆಯೋಜಿಸಲಾಗುತ್ತಿದ್ದ ದಂಡ ಮಹೋತ್ಸವದಲ್ಲಿ (ಶಿಕ್ಷಕರ ಹಬ್ಬ) ಈ ಘಟನೆ ನಡೆದಿದೆ. ವಿಪರೀತ ಶಾಖ ಮತ್ತು … Continued

ರಾಜಸ್ಥಾನ ಸಚಿವರ ಪುತ್ರನ ಮೇಲೆ ಅತ್ಯಾಚಾರ ಆರೋಪ ಮಾಡಿದ ಮಹಿಳೆ ಮುಖಕ್ಕೆ ಮಸಿ ಎರಚಿದ ದುಷ್ಕರ್ಮಿಗಳು

ನವದೆಹಲಿ: ರಾಜಸ್ಥಾನ ಸಚಿವರ ಪುತ್ರನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ 23ರ ಹರೆಯದ ಮಹಿಳೆ ಮುಖಕಕ್ಕೆ ಶನಿವಾರ ದೆಹಲಿಯ ರಸ್ತೆಯೊಂದರಲ್ಲಿ ಮಸಿ ಬಳಿಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆದೇಶಿಸಲಾಗಿದೆ ಅಧಿಕಾರಿಗಳು ಹೇಳಿದ್ದಾರೆ. ಆಗ್ನೇಯ ದೆಹಲಿಯಲ್ಲಿ ಮಹಿಳೆ ತನ್ನ ತಾಯಿಯೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ದಾಳಿ ನಡೆದಿದೆ. … Continued

ಕೋವಿಡ್ ತೊಡಕುಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಸೋನಿಯಾ ಗಾಂಧಿ

ನವದೆಹಲಿ: ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೋವಿಡ್ ತೊಡಕುಗಳೊಂದಿಗೆ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ನಿಗಾ ಇರಿಸಲಾಗಿದೆ ಎಂದು ವರದಿಯಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಆಸ್ಪತ್ರೆಯಲ್ಲಿ ನಿಗಾದಲ್ಲಿ ಇರಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ, ಸೋನಿಯಾ ಗಾಂಧಿ … Continued

ಭಯಾನಕ ಘಟನೆ…ವೃದ್ಧೆಯನ್ನು ತುಳಿದು ಸಾಯಿಸಿದ ಆನೆ: ಸಂಜೆ ಅಂತ್ಯಕ್ರಿಯೆ ವೇಳೆ ಮತ್ತೆ ಬಂದು ಚಿತೆಯಿಂದ ಶವ ಹೊರಗೆಳೆದು ವಿರೂಪಗೊಳಿಸಿದ ಆನೆ…!

ಭುವನೇಶ್ವರ : ಭಯಾನಕ ಘಟನೆಯೊಂದರಲ್ಲಿ, ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಹಳ್ಳಿಯೊಂದರಲ್ಲಿ 70 ವರ್ಷದ ಮಹಿಳೆಯೊಬ್ಬರು ಆನೆ ದಾಳಯಿಂದ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಲ್ಲದೆ, ಅಂತ್ಯಕ್ರಿಯೆ ಸಮಯದಲ್ಲಿಯೂ ಮತ್ತೆ ಆಗಮಿಸಿದ ಅದೇ ಕಾಡಾನೆ ದಾಳಿಗೆ ಆಕೆಯ ಶವ ತುತ್ತಾಗಿ ವಿರೂಪಗೊಂಡಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ವೃದ್ಧೆ ಆನೆ ದಾಳಿಯಿಂದ ಸಾವಿಗೀಡಾದ ನಂತರ ವೃದ್ಧೆಯ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆಯುತ್ತಿರುವಾಗ … Continued

ಮಾಜಿ ಚಂಬಲ್ ಡಕಾಯಿತನ ಪತ್ನಿ ಗ್ರಾಪಂಗೆ ಅವಿರೋಧ ಆಯ್ಕೆ…!

ಭೋಪಾಲ್: ಮಾಜಿ ಡಕಾಯಿತ ಮಲ್ಖಾನ್ ಸಿಂಗ್ ಅವರ ಪತ್ನಿ ಮಧ್ಯಪ್ರದೇಶದ ಗುನಾ ಜಿಲ್ಲೆಯ ಸುಂಗಯಾಯಿ ಗ್ರಾಮದ ಸರಪಂಚ್ ಆಗಿ ಆಯ್ಕೆಯಾಗಿದ್ದಾರೆ. ಮಧ್ಯಪ್ರದೇಶದ ಪಂಚಾಯತ್ ಚುನಾವಣೆಗಳು ಜೂನ್ 25 ರಿಂದ ಮೂರು ಹಂತಗಳಲ್ಲಿ ನಡೆಯಲಿದ್ದರೂ, ಸಿಂಗ್ ಅವರ ಪತ್ನಿ ಲಲಿತಾ ರಜಪೂತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚಂಬಲ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಮಾಜಿ ಡಕಾಯಿತ ಮಲ್ಖಾನ್ ಸಿಂಗ್ ಭಾರತದ ಡಕಾಯಿತ … Continued

ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಜಮ್ಮು-ಕಾಶ್ಮೀರ ಪೊಲೀಸರು

ಶ್ರೀನಗರ: ಭಾನುವಾರ (ಜೂನ್ 12) ಪುಲ್ವಾಮಾ ಜಿಲ್ಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾಗೆ ಸಂಬಂಧಿಸಿದ ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಶನಿವಾರ ರಾತ್ರಿ ಆರಂಭವಾದ ಕಾರ್ಯಾಚರಣೆಯು ಪುಲ್ವಾಮಾ ಜಿಲ್ಲೆಯ ದ್ರಾಬ್ಗಾಮ್ ಪ್ರದೇಶದಲ್ಲಿ ಸುಮಾರು 12 ಗಂಟೆಗಳ ನಂತರ ಕೊನೆಗೊಂಡಿತು. ಎನ್‌ಕೌಂಟರ್‌ನಲ್ಲಿ ಹತರಾದ ಮೂವರು ಉಗ್ರರನ್ನು ಜುನೈದ್ ಶೀರ್ಗೋಜ್ರಿ, ಫಾಜಿಲ್ ನಜೀರ್ ಭಟ್ ಮತ್ತು … Continued

ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆ ನಂತರ ಹಿಂಸಾಚಾರ: ಉತ್ತರ ಪ್ರದೇಶದ ಎರಡು ನಗರಗಳಲ್ಲಿ ದುಷ್ಕರ್ಮಿಗಳ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ

ಸಹರಾನ್‌ಪುರ (ಉತ್ತರ ಪ್ರದೇಶ): ಈಗ ಅಮಾನತುಗೊಂಡಿರುವ ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆಗಳನ್ನು ಖಂಡಿಸಿ ನಡೆದ ಹಿಂಸಾಚಾರದ ನಂತರ, ಉತ್ತರ ಪ್ರದೇಶದ ಸಹರಾನ್‌ಪುರದ ಪೊಲೀಸರು ಭಾರಿ ಪೊಲೀಸ್ ಉಪಸ್ಥಿತಿಯಲ್ಲಿ ಬುಲ್ಡೋಜರ್‌ಗಳೊಂದಿಗೆ ಎರಡು ಮನೆಗಳನ್ನು ಧ್ವಂಸಗೊಳಿಸಿದ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಶಾಂತಿ ಮತ್ತು ಸಾಮಾಜಿಕ ಸೌಹಾರ್ದತೆಗೆ ಭಂಗ ತಂದ ಆರೋಪಿಗಳನ್ನು … Continued