ದೆಹಲಿ ವಿಮಾನ ನಿಲ್ದಾಣದಲ್ಲಿ 434 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ

ನವದೆಹಲಿ: ಇಂದಿರಾಗಾಂಧಿ ಇಂಟರ್‌ನ್ಯಾಶನಲ್ (ಐಜಿಐ) ಏರ್‌ಪೋರ್ಟ್ ಏರ್ ಕಾರ್ಗೋ ಕಾಂಪ್ಲೆಕ್ಸ್‌ನಲ್ಲಿ 434 ಕೋಟಿ ರೂ.ಮೌಲ್ಯದ 62 ಕೆಜಿ ಹೆರಾಯಿನ್ ಅನ್ನು ಕಂದಾಯ ಗುಪ್ತಚರ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದು ಇಲ್ಲಿಯವರೆಗಿನ ಅತಿದೊಡ್ಡ ವಶಪಡಿಸಿಕೊಳ್ಳುವಿಕೆಯಾಗಿದೆ ಎಂದು ಹಣಕಾಸು ಸಚಿವಾಲಯ ಬುಧವಾರ ತಿಳಿಸಿದೆ. ‘ಕಪ್ಪು ಮತ್ತು ಬಿಳಿ’ ಎಂಬ ಕೋಡ್ ಹೆಸರಿನ ಕಾರ್ಯಾಚರಣೆಯಲ್ಲಿ, ಕಂದಾಯ ಗುಪ್ತಚರ ನಿರ್ದೇಶನಾಲಯವು ಆಮದು ಮಾಡಿದ … Continued

“ಕೆಲಸದತ್ತ ನಿರ್ಲಕ್ಷ್ಯ: ಡಿಜಿಪಿ ಸ್ಥಾನದಿಂದ ತೆರವುಗೊಳಿಸಿದ ಉತ್ತರ ಪ್ರದೇಶ ಸರ್ಕಾರ

ಲಕ್ನೋ: ತಮ್ಮ ಕೆಲಸವನ್ನು ನಿರ್ಲಕ್ಷಿಸಿದ ಕಾರಣಕ್ಕಾಗಿ ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥ ಮುಕುಲ್ ಗೋಯೆಲ್ ಅವರನ್ನು ಬುಧವಾರ ಹುದ್ದೆಯಿಂದ ತೆರವುಗೊಳಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಅವರನ್ನು ನಾಗರಿಕ ರಕ್ಷಣಾ ಇಲಾಖೆಯ ಮಹಾನಿರ್ದೇಶಕ(ಡಿಜಿ)ರನ್ನಾಗಿ ಮಾಡಲಾಗಿದೆ ಎಂದು ಅದು ಹೇಳಿದೆ. ಅಧಿಕೃತ ಕೆಲಸವನ್ನು ನಿರ್ಲಕ್ಷಿಸಿದ ಮತ್ತು ಇಲಾಖಾ ಕಾರ್ಯಗಳಲ್ಲಿ ಆಸಕ್ತಿ ವಹಿಸದ ಕಾರಣಕ್ಕಾಗಿ ಗೋಯೆಲ್ ಅವರನ್ನು ಡಿಜಿಪಿ … Continued

ತಾಜ್ ಮಹಲ್ ನಿರ್ಮಿಸಿದ ಭೂಮಿ ಮೂಲತಃ ಜೈಪುರದ ದೊರೆ ಜೈ ಸಿಂಗ್ ಅವರಿಗೆ ಸೇರಿದ್ದು ಎಂದು ಪ್ರತಿಪಾದಿಸಿದ ರಾಜಮನೆತನದ ದಿಯಾಕುಮಾರಿ

ಜೈಪುರ: ಭಾರತೀಯ ಜನತಾ ಪಕ್ಷದ ಸಂಸದೆ ಮತ್ತು ಜೈಪುರದ ಮಾಜಿ ರಾಜಕುಮಾರಿ ದಿಯಾಕುಮಾರಿ ಅವರು ತಾಜ್ ಮಹಲ್ ನಿರ್ಮಿಸಿದ ಭೂಮಿ ಮೂಲತಃ ತಮ್ಮ ಕುಟುಂಬಕ್ಕೆ ಸೇರಿದ್ದು ಎಂದು ಪ್ರತಿಪಾದಿಸಿದ್ದಾರೆ. ತಾಜ್ ಮಹಲ್ ಅನ್ನು ನಿರ್ಮಿಸಿದ ಭೂಮಿ ಮೂಲತಃ ಜೈಪುರದ ದೊರೆ ಜೈ ಸಿಂಗ್ ಅವರಿಗೆ ಸೇರಿದ್ದು ಮತ್ತು ಇದನ್ನು ಮೊಘಲ್ ಚಕ್ರವರ್ತಿ ಷಹಜಹಾನ್ ಸ್ವಾಧೀನಪಡಿಸಿಕೊಂಡಿದ್ದಾನೆ ಎಂದು … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾರ್ಖಂಡ್ ಗಣಿ ಕಾರ್ಯದರ್ಶಿ ಪೂಜಾ ಸಿಂಘಾಲ್ ಬಂಧಿಸಿದ ಜಾರಿ ನಿರ್ದೇಶನಾಲಯ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರನ್ನು ಜಾರಿ ನಿರ್ದೇಶನಾಲಯ ಬುಧವಾರ ಬಂಧಿಸಿದೆ. ಮನ್ರೆಗಾ (MGNREGA) ನಿಧಿಯ ದುರುಪಯೋಗ ಮತ್ತು ಇತರ ಆರೋಪಗಳಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಗಣಿಗಾರಿಕೆ ಕಾರ್ಯದರ್ಶಿ ರಾಂಚಿಯಲ್ಲಿ ಹಿಂದಿನ ದಿನ ಏಜೆನ್ಸಿಯ ಮುಂದೆ ವಿಚಾರಣೆಗೆ ಹಾಜರಾಗಿದ್ದರು ಎಂದು ಸುದ್ದಿ ಸಂಸ್ಥೆ … Continued

ಕೇರಳದಲ್ಲಿ 80 ಕ್ಕೂ ಹೆಚ್ಚು ಮಕ್ಕಳಿಗೆ ಟೊಮೆಟೊ ಜ್ವರದ ಸೋಂಕು..!

ನವದೆಹಲಿ: ಕೇರಳ ಮಕ್ಕಳಲ್ಲಿ ನಿಗೂಢವಾದ ಟೊಮೆಟೊ ಫ್ಲ್ಯೂ ಕಾಣಿಸಿಕೊಂಡಿದ್ದು ಆತಂಕ ಸೃಷ್ಟಿಸಿದೆ. ಈವರೆಗೂ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ 82 ಪ್ರಕರಣಗಳು ವರದಿಯಾಗಿವೆ. ರಾಜ್ಯದ ದಕ್ಷಿಣ ಭಾಗವಾದ ಆರ್ಯಂಕಾವು, ಅಂಚಲ್ ಮತ್ತು ನೆಡುವತ್ತೂರ್ನಲ್ಲೂ ಪ್ರಕರಣಗಳು ವರದಿಯಾಗಿವೆ. ತಮಿಳುನಾಡು-ಕೇರಳ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಜ್ವರ, ದದ್ದುಗಳು ಮತ್ತು ಇತರ ಕಾಯಿಲೆಗಳೊಂದಿಗೆ ಕೊಯಮತ್ತೂರ ಪ್ರವೇಶಿಸುವವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅಂತಾರಾಜ್ಯ ಪ್ರಯಾಣದ … Continued

ದೇಶದ್ರೋಹ ಪ್ರಕರಣ: IPC ಸೆಕ್ಷನ್ 124A ತಡೆಹಿಡಿಯುವಂತೆ ಸುಪ್ರೀಂಕೋರ್ಟ್ ಆದೇಶ, ಹೊಸ ಪ್ರಕರಣ ದಾಖಲಿಸದಂತೆ ಕೇಂದ್ರ- ರಾಜ್ಯಗಳಿಗೆ ಸೂಚನೆ

ನವದೆಹಲಿ: ಕೇಂದ್ರ ಸರ್ಕಾರ ಕಾನೂನಿನ ಮರುಪರಿಶೀಲನಾ ಪ್ರಕ್ರಿಯೆ ಪೂರ್ಣವಾಗುವ ವರೆಗೆ ಸೆಕ್ಷನ್ 124ಎ ಬಳಕೆಯನ್ನು ತಡೆಹಿಡಿಯುವಂತೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ನಿರ್ದೇಶಿಸಿತು. ಜೊತೆಗೆ ಮರುಪರಿಶೀಲನಾ ಪ್ರಕ್ರಿಯೆ ಪೂರ್ಣವಾಗುವವರೆಗೆ ಈ ಕಾನೂನಿನಡಿ ಬಾಕಿ ಉಳಿದಿರುವ ಎಲ್ಲಾ ವಿಚಾರಣೆಗಳಿಗೆ ಸುಪ್ರೀಂ ಕೋರ್ಟ್‌ … Continued

ವೈವಾಹಿಕ ಅತ್ಯಾಚಾರ ಅಪರಾಧೀಕರಿಸಲು ಕೋರಿದ ಮನವಿ: ವಿಭಜಿತ ತೀರ್ಪು ನೀಡಿದ ದೆಹಲಿ ಹೈಕೋರ್ಟ್

ನವದೆಹಲಿ: ವೈವಾಹಿಕ ಅತ್ಯಾಚಾರ ಪ್ರಕರಣದ ತೀರ್ಪಿನಲ್ಲಿ ಐಪಿಸಿ ಸೆಕ್ಷನ್‌ 375 ಬಿಯ ಸಿಂಧುತ್ವ ಕುರಿತಂತೆ ದೆಹಲಿ ಹೈಕೋರ್ಟ್‌ ವಿಭಾಗೀಯ ಪೀಠ ಬುಧವಾರ ಭಿನ್ನ ತೀರ್ಪು ನೀಡಿದೆ. ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ರಾಜೀವ್ ಶಕ್ಧರ್ ಮತ್ತು ಸಿ ಹರಿ ಶಂಕರ್ ಅವರು ತಮ್ಮ ತೀರ್ಪಿನಲ್ಲಿ ಭಿನ್ನ ನಿಲುವು ವ್ಯಕ್ತಪಡಿಸಿದರು. ವೈವಾಹಿಕ ಅತ್ಯಾಚಾರ ಸಂವಿಧಾನದ ಉಲ್ಲಂಘನೆ ಎಂದು ನ್ಯಾ. … Continued

ಅಸನಿ ಚಂಡಮಾರುತ: ಆಂಧ್ರ ಪ್ರದೇಶದ ಸಮುದ್ರ ತೀರಕ್ಕೆ ತೇಲಿ ಬಂದ ನಿಗೂಢ ಚಿನ್ನದ ಬಣ್ಣದ ರಥ….! ವೀಕ್ಷಿಸಿ

ಶ್ರೀಕಾಕುಳಂ(ಆಂಧ್ರಪ್ರದೇಶ) ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅಸನಿ ಚಂಡಮಾರುತ ಈಗಾಗಲೇ ಆಂಧ್ರಪ್ರದೇಶಕ್ಕೆ ಲಗ್ಗೆ ಹಾಕಿದ್ದು, ತನ್ನ ಆರ್ಭಟ ಶುರು ಮಾಡಿದೆ. ಇದರ ಮಧ್ಯೆ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಚಿನ್ನದ ಬಣ್ಣ ಹೋಲಿಕೆಯ ರಥವೊಂದು ಸಮುದ್ರದಲ್ಲಿ ತೇಲಿ ಬಂದಿದೆ. ಯಾವುದೇ ಪೌರಾಣಿಕ ಕಥೆಯಂತೆ ತೋರುವಂತಹ ಸನ್ನಿವೇಶದಂತೆ ನಿಗೂಢ ಚಿನ್ನದ ಬಣ್ಣದ ರಥವೊಂದು ಮಂಗಳವಾರ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಸುನ್ನಪಲ್ಲಿ ಸಮುದ್ರ … Continued

ಗೋವಾ ಪ್ರವಾಸದ ವೇಳೆ ಅಮಿತ್ ಶಾಗೆ 850 ರೂ. ಮೌಲ್ಯದ ನೀರಿನ ಬಾಟಲಿ ನೀಡಲಾಗಿತ್ತು: ಗೋವಾ ಸಚಿವ

ಪಣಜಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಗೋವಾ ಪ್ರವಾಸದ ವೇಳೆ 850 ರೂಪಾಯಿ ಮೌಲ್ಯದ ಮಿನರಲ್ ವಾಟರ್ ಬಾಟಲಿಯನ್ನು ನೀಡಲಾಗಿದ್ದು, ಪಣಜಿಯಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಪಟ್ಟಣದಿಂದ ಅದನ್ನು ತರಿಸಲಾಗಿದೆ ಎಂದು ರಾಜ್ಯ ಕೃಷಿ ಸಚಿವ ರವಿ ನಾಯ್ಕ್ ಮಂಗಳವಾರ ಹೇಳಿದ್ದಾರೆ. ನಾಯ್ಕ್ ಅವರು ಗೋವಾದಲ್ಲಿ ಮಳೆನೀರು ಕೊಯ್ಲಿಗಾಗಿ ಬಲವಾದ ಪ್ರತಿಪಾದನೆ ಮಾಡುವಾಗ … Continued

87ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ತೇರ್ಗಡೆಯಾದ ಹರಿಯಾಣದ ಮಾಜಿ ಸಿಎಂ ಓಂ ಪ್ರಕಾಶ್ ಚೌತಾಲಾ..!

ಚಂಡೀಗಡ: ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎಂಬ ಗಾದೆಯನ್ನು ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ ಅವರು ಸಾಬೀತುಪಡಿಸಿದ್ದಾರೆ. ಅನುಭವಿ ರಾಜಕಾರಣಿ ತನ್ನ 87 ನೇ ವಯಸ್ಸಿನಲ್ಲಿ ತನ್ನ 10ನೇ ತರಗತಿ ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ಉತ್ತೀರ್ಣರಾಗಿದ್ದಾರೆ ಮತ್ತು ಅದು ಕೂಡ ಮೊದಲ ಶ್ರೇಣಿಯಲ್ಲಿ…! ರಾಜ್ಯ ಶಿಕ್ಷಣ ಇಲಾಖೆಯು ಮಂಗಳವಾರ ಬೆಳಗ್ಗೆ ಮಾರ್ಕ್‌ಶೀಟ್ … Continued