ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ-2022: ಈಗ ಟೈಮ್ಸ್‌ ನೌ ಚುನಾವಣೆ ಪೂರ್ವ ಸಮೀಕ್ಷೆಯಲ್ಲಿ ಚುನಾವಣಾ ಜಿದ್ದಾಜಿದ್ದಿಯಲ್ಲಿ ಗೆಲ್ಲೋರು ಯಾರು..?

ನವದೆಹಲಿ: ಉತ್ತರ ಪ್ರದೇಶದ ವಿಧಾನಸಭೆಗೆ ಫೆಬ್ರುವರಿ 7ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮಾರ್ಚ್‌ 10ರಂದು ಮತ ಎಣಿಕೆ ನಡೆಯಲಿದೆ. ಟೈಮ್ಸ್ ನೌ ನಡೆಸಿದ ಒಪಿನಿಯನ್‌ ಪೋಲ್‌ ಸಮೀಕ್ಷೆಯು 403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಬಹುಮತ ಗಳಿಸುವ ನಿರೀಕ್ಷೆಯಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ 2022 ರ ಉತ್ತರ ಪ್ರದೇಶ ಚುನಾವಣೆಯಲ್ಲಿ … Continued

ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಗಡುವು ವಿಸ್ತರಣೆ

ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕವನ್ನು ಮಾರ್ಚ್ 15ರ ವರೆಗೆ ವಿಸ್ತರಿಸಲಾಗಿದೆ. ಮಂಗಳವಾರ ಹೊರಡಿಸಿದ ಸುತ್ತೋಲೆಯಲ್ಲಿ, ಹಣಕಾಸು ಸಚಿವಾಲಯವು 2021-22 ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಗಡುವು ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಹೇಳಿದೆ “ಕೋವಿಡ್‌ನಿಂದಾಗಿ ತೆರಿಗೆದಾರರು ಮತ್ತು ವಿವಿಧ ವರದಿಗಳ ಎಲೆಕ್ಟ್ರಾನಿಕ್ ಫೈಲಿಂಗ್‌ನಲ್ಲಿ ಮಧ್ಯಸ್ಥಗಾರರು ವರದಿ ಮಾಡಿದ ತೊಂದರೆಗಳನ್ನು … Continued

ಉತ್ತರ ಪ್ರದೇಶ ಕಾರ್ಮಿಕ ಸಚಿವರು ಬಿಜೆಪಿ ತೊರೆದ ನಂತರ ಮತ್ತೆ 13 ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರಲಿದ್ದಾರೆ ಎಂದ ಶರದ್ ಪವಾರ್

ಮುಂಬೈ: ಉತ್ತರ ಪ್ರದೇಶದ ಹದಿಮೂರು ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಮಂಗಳವಾರ ಹೇಳಿದ್ದಾರೆ. ಉತ್ತರ ಪ್ರದೇಶದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ಸಚಿವ ಸಂಪುಟಕ್ಕೆ ಮತ್ತು ಆಡಳಿತಾರೂಢ ಬಿಜೆಪಿಗೆ ರಾಜೀನಾಮೆ ನೀಡಿ ಮಂಗಳವಾರ ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ. ಇವರ ಬೆನ್ನಲ್ಲೇ ಉತ್ತರ ಪ್ರದೇಶದ … Continued

ಬೋರ್‌ವೆಲ್‌ ಒಳಗಿಂದ ಬರುತ್ತಿದೆ ಬೆಂಕಿ ಜ್ವಾಲೆಗಳು..! ಈ ಅಚ್ಚರಿ ನೋಡಲು ಜನಸಾಗರ..ವೀಕ್ಷಿಸಿ

ಮೊರೆನಾ (ಮಧ್ಯಪ್ರದೇಶ): ಮೊರೆನಾ ಜಿಲ್ಲೆಯ ಸಬಲ್‌ಗಢ್ ತೆಹಸಿಲ್‌ನ ಬಕಾಸ್‌ಪುರ ಗ್ರಾಮದ ಬೋರ್‌ವೆಲ್‌ನಿಂದ ಬೆಂಕಿ ಹೊರಬರುವುದನ್ನು ಕಂಡು ಸ್ಥಳೀಯ ನಿವಾಸಿಗಳು ಸೋಮವಾರ ಆಶ್ಚರ್ಯಚಕಿತರಾದರು. ಬೋರ್‌ವೆಲ್‌ನಿಂದ ಬೆಂಕಿ ಹೊತ್ತಿ ಬರುತ್ತಿರುವ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಕ್ಕೆ ಆಗಮಿಸಿದರು. ಮಾಹಿತಿ ಪಡೆದ ಆಡಳಿತ ಮತ್ತು ಪೊಲೀಸರ ತಂಡ ಗ್ರಾಮಕ್ಕೆ ಧಾವಿಸಿ ಜನರನ್ನು ನಿಯಂತ್ರಿಸಿದರು. … Continued

ವಿಧಾನಸಭೆ ಚುನಾವಣೆ- 2022: ಟೈಮ್ಸ್ ನೌ ಚುನಾವಣಾ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಉತ್ತರಾಖಂಡದಲ್ಲಿ ಗೆಲ್ಲುವ ಕುದುರೆ ಯಾರು..?

ನವದೆಹಲಿ: ಉತ್ತರಾಖಂಡದ ವಿಧಾನಸಭೆ ಚುನಾವಣೆ ಫೆಬ್ರವರಿ 14, 2022 ರಂದು ಒಂದೇ ಹಂತದಲ್ಲಿ ನಡೆಯಲಿದೆ. ಟೈಮ್ಸ್ ನೌ ಒಪಿನಿಯನ್ ಪೋಲ್ ಸಮೀಕ್ಷೆಯು 2022 ರ ಉತ್ತರಾಖಂಡ್ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದೆ. ಉತ್ತರಾಖಂಡ ರಾಜ್ಯ ಒಟ್ಟು 70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಸಮೀಕ್ಷೆಯ ಪ್ರಕಾರ, ಮುಂಬರುವ ಉತ್ತರಾಖಂಡ್ 2022 ರ … Continued

ವಿಧಾನಸಭೆ ಚುನಾವಣೆ-2022: ಟೈಮ್ಸ್ ನೌ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಗೋವಾದಲ್ಲಿ ಯಾರಿಗೆ ಬಹುಮತ?

ನವದೆಹಲಿ: ಗೋವಾ, ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಮಣಿಪುರದ ಚುನಾವಣಾ ದಿನಾಂಕಗಳು ಪ್ರಕಟವಾಗಿದ್ದು, ಫೆಬ್ರುವರಿ ಮೊದಲವಾರದಿಂದ ಚುನಾವಣೆಗಳು ಆರಂಭವಾಗಲಿದ್ದು ಒಟ್ಟು ಏಳು ಹಂತಗಳಲ್ಲಿ ನಡೆಯಲಿವೆ. ಟೈಮ್ಸ್ ನೌ ಚುನಾವಣಾ ಪೂರ್ವ ಒಪಿನಿಯನ್ ಪೋಲ್ ಸಮೀಕ್ಷೆ ನಡೆಸಿದ್ದು, ಅದರ ಪ್ರಕಾರ, ಪ್ರಮೋದ್ ಸಾವಂತ್ ಅವರ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳು 2022 ರಲ್ಲಿ ಗೋವಾ ಚುನಾವಣೆಯಲ್ಲಿ … Continued

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಚುನಾವಣಾ ಪೂರ್ವ ಆಘಾತ: ಸಚಿವ ಸ್ಥಾನಕ್ಕೆ ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆ, ಎಸ್‌ಪಿಗೆ ಸೇರ್ಪಡೆ

ಲಕ್ನೋ: ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಬಿಜೆಪಿಗೆ ಭಾರೀ ಹಿನ್ನಡೆಯಾಗಿದ್ದು, ಯೋಗಿ ಆದಿತ್ಯನಾಥ ಸಂಪುಟಕ್ಕೆ ರಾಜ್ಯ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ನಾನು ಯೋಗಿ ಆದಿತ್ಯನಾಥ ಅವರ ಕ್ಯಾಬಿನೆಟ್‌ನಲ್ಲಿ ಸಂಘರ್ಷದ ಸಿದ್ಧಾಂತ ಮತ್ತು ಸನ್ನಿವೇಶಗಳ ನಡುವೆಯೂ ಸಮರ್ಪಣಾ ಭಾವದಿಂದ ಕೆಲಸ ಮಾಡಿದ್ದೇನೆ. ದಲಿತರು, ಒಬಿಸಿಗಳು, ರೈತರು, ನಿರುದ್ಯೋಗಿ ಯುವಕರು ಮತ್ತು ಸಣ್ಣ … Continued

ತೆಲಂಗಾಣ: ಮಹಂಕಾಳಿ ದೇವಿಯ ಪಾದದ ಬಳಿ ವ್ಯಕ್ತಿಯ ತುಂಡರಿಸಿದ ತಲೆ ಪತ್ತೆ..!

ಹೈದರಾಬಾದ್‌: ತೆಲಂಗಾಣದ ನಲ್ಗೊಂಡ ಜಿಲ್ಲೆಯ ಗೊಲ್ಲಪಲ್ಲಿ ಗ್ರಾಮದ ಹೊರವಲಯದಲ್ಲಿರುವ ಮೆಟ್ಟು ಮಹಾಂಕಾಳಿ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ಕಾಳಿಮಾತೆಯ ಮೂರ್ತಿಯ ಪಾದದ ಬುಡದಲ್ಲಿ ತುಂಡರಿಸಿದ ತಲೆಯೊಂದು ಪತ್ತೆಯಾಗಿದೆ…! ಶಿರಚ್ಛೇದಿತ ತಲೆಯು ಕಾಳಿಮಾತಾ ವಿಗ್ರಹದ ಪಾದದ ಬಳಿ ಪತ್ತೆಯಾಗಿದ್ದು, ಇದು ಹೈದರಾಬಾದ್‌-ನಾಗಾರ್ಜುನ ಸಾಗರ ಹೆದ್ದಾರಿ ಪಕ್ಕದಲ್ಲೇ ಇದೆ. ಇದು ನರಬಲಿ ಎಂಬ ಅನುಮಾನಕ್ಕೆ ಕಾರಣವಾಗಿದೆ. ಆದರೆ ಈ ಬಗ್ಗೆ … Continued

ಕೊಚ್ಚಿ ವಿಮಾನ ನಿಲ್ದಾಣ ರಸ್ತೆ ದಾಟಿದ ಹೆಬ್ಬಾವು…ಅದು ರಸ್ತೆ ದಾಟುವವರೆಗೆ ಸಂಚಾರ ಸ್ಥಗಿತ…ದೃಶ್ಯ ವಿಡಿಯೊದಲ್ಲಿ ಸೆರೆ

ಕೊಚ್ಚಿ: ಕೊಚ್ಚಿಯ ಕಲಮಸ್ಸೆರಿಯ ಜನನಿಬಿಡ ಸೀಪೋರ್ಟ್-ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾನುವಾರ ರಾತ್ರಿ ಬೃಹತ್ ಹೆಬ್ಬಾವು ಕಾಣಿಸಿಕೊಂಡಿದ್ದು, ಇದರಿಂದ ಸ್ವಲ್ಪ ಸಮಯ ಸಂಚಾರ ಸ್ಥಗಿತಗೊಂಡಿದೆ. ಸುಮಾರು ಎರಡು ಮೀಟರಿಗೂ ಹೆಚ್ಚು ಉದ್ದದ ಇಂಡಿಯನ್ ರಾಕ್ ಹೆಬ್ಬಾವು ರಾತ್ರಿ 11.10ರ ಸುಮಾರಿಗೆ ಕೆಎಸ್‌ಇಬಿ ಕಚೇರಿಯ ಸಮೀಪವಿರುವ ವಾಹನದ ದಟ್ಟಣೆಯ ಪ್ರದೇಶದಲ್ಲಿ ನಿಧಾನವಾಗಿ ಸಾಗಿತು. ನೋಡುಗರು ಮತ್ತು ದಾರಿಹೋಕರು ಹಾವಿನ … Continued

ಲತಾ ಮಂಗೇಶ್ಕರಗೆ ಕೋವಿಡ್ ಸೋಂಕು, ಮುಂಬೈ ಆಸ್ಪತ್ರೆಗೆ ದಾಖಲು

ಮುಂಬೈ: ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರು ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ. 92 ವರ್ಷದ ಲತಾ ಮಂಗೇಶ್ಕರ್ ಅವರನ್ನು ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ. ಆದರೆ ರೋಗದ ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದಾರೆ ಎಂದು … Continued