38 ಸಂಶೋಧನಾ ಸಂಸ್ಥೆಗಳ ಒಕ್ಕೂಟ ಸಿಎಸ್‌ಐಆರ್‌ನ ಮೊದಲ ಮಹಿಳಾ ಮಹಾನಿರ್ದೇಶಕರಾಗಿ ತಿರುನಲ್ವೇಲಿಯ ನಲ್ಲತಂಬಿ ಕಲೈಸೆಲ್ವಿ ನೇಮಕ

ನವದೆಹಲಿ: ಹಿರಿಯ ವಿಜ್ಞಾನಿ ನಲ್ಲತಂಬಿ ಕಲೈಸೆಲ್ವಿ ಅವರು ದೇಶದಾದ್ಯಂತ 38 ಸಂಶೋಧನಾ ಸಂಸ್ಥೆಗಳ ಒಕ್ಕೂಟವಾದ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‌ಐಆರ್) ನ ಮೊದಲ ಮಹಿಳಾ ಮಹಾನಿರ್ದೇಶಕರಾಗಿ ನೇಮಕವಾಗಿದ್ದಾರೆ. ಅವರು ಏಪ್ರಿಲ್‌ನಲ್ಲಿ ನಿವೃತ್ತಿ ಹೊಂದಿದ ಶೇಖರ್ ಮಾಂಡೆ ಅವರ ಉತ್ತರಾಧಿಕಾರಿಯಾಗಿದ್ದಾರೆ. ಮಾಂಡೆ ಅವರ ನಿವೃತ್ತಿಯ ನಂತರ ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ರಾಜೇಶ್ … Continued

ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸ್‌ ಪೇದೆಗೆ ಥಳಿಸಿದ ಗುಂಪು: ಓರ್ವನ ಬಂಧನ | ವೀಕ್ಷಿಸಿ

ನವದೆಹಲಿ: ಪೊಲೀಸ್ ಠಾಣೆಯೊಳಗೆ ಪೊಲೀಸರನ್ನು ಗುಂಪೊಂದು ಥಳಿಸುತ್ತಿರುವ ವಿಡಿಯೋ ವೈರಲ್ ಆದ ಪ್ರಕರಣದಲ್ಲಿ ದೆಹಲಿ ಪೊಲೀಸರು ಶನಿವಾರ ಒಬ್ಬನನ್ನು ಬಂಧಿಸಿದ್ದಾರೆ. ದೆಹಲಿ ಪೊಲೀಸರ ಪ್ರಕಾರ, ಬಂಧಿತ ವ್ಯಕ್ತಿ ಸತೀಶ್ ಕುಮಾರ್ (29) ಆನಂದ್ ವಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾರ್ಕರ್ಡೂಮಾ ನಿವಾಸಿ. ಸತೀಶ್ ವೃತ್ತಿಯಲ್ಲಿ ವಕೀಲರು. 10-12 ಜನರ ಗುಂಪೊಂದು ಪೊಲೀಸ್ ಸಿಬ್ಬಂದಿಯನ್ನು ಸುತ್ತುವರೆದು ಥಳಿಸಿತು … Continued

ಸೇನೆಯ ಮುಂಚೂಣಿ ಪಡೆಗಳಲ್ಲಿ 5G ತಂತ್ರಜ್ಞಾನ ಅಳವಡಿಕೆ

ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ವೇಗವಾಗಿ ಬದಲಾಗುತ್ತಿರುವ ತಾಂತ್ರಿಕ ಬದಲಾವಣೆಗಳನ್ನು ಬಳಸಿಕೊಳ್ಳಲು ಭಾರತೀಯ ಸೇನೆ ಮುಂದಾಗಿದ್ದು, ಈಗ ಅದು 5G ತಂತ್ರಜ್ಞಾನ ಅಳವಡಿಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಸೇನೆಯ ಮೂರು ವಿಭಾಗಗಳು ಅಧ್ಯಯನದ ಅಂತಿಮ ವರದಿಗಳನ್ನು ವಿಶ್ಲೇಷಿಸುತ್ತಿರುವಾಗ, ಭಾರತೀಯ ಸೇನೆಯು ಈ ಬಗ್ಗೆ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ರಕ್ಷಣಾ ಸೇವೆಗಳಲ್ಲಿ 5G ಅನುಷ್ಠಾನದ ಕುರಿತು ಜಂಟಿ ಸೇವೆಗಳ ಅಧ್ಯಯನವನ್ನು … Continued

750 ವಿದ್ಯಾರ್ಥಿನಿಯರು ನಿರ್ಮಿಸಿದ ಉಪಗ್ರಹ ಹೊತ್ತ ಅತ್ಯಂತ ಚಿಕ್ಕ ರಾಕೆಟ್​ SSLV-D1 ಉಡಾವಣೆ ಮಾಡಿದ ಇಸ್ರೋ | ವೀಕ್ಷಿಸಿ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಭಾನುವಾರ ಬೆಳಿಗ್ಗೆ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಭೂ ವೀಕ್ಷಣಾ ಉಪಗ್ರಹ ಹಾಗೂ ವಿದ್ಯಾರ್ಥಿ ಉಪಗ್ರಹ ಹೊತ್ತೊಯ್ಯುವ ತನ್ನ ಚಿಕ್ಕ ರಾಕೆಟ್ ಎಸ್‌ಎಸ್‌ಎಲ್‌ವಿ-ಡಿ 1 ಉಡಾವಣೆ ಮಾಡಿದೆ.. ಎಸ್‌ಎಸ್‌ಎಲ್‌ವಿ-ಡಿ1 ಎಲ್ಲಾ ಹಂತಗಳಲ್ಲಿ ನಿರೀಕ್ಷೆಯಂತೆ ಕಾರ್ಯನಿರ್ವಹಿಸಿದೆ. ಕಾರ್ಯಾಚರಣೆಯ ಟರ್ಮಿನಲ್ ಹಂತದಲ್ಲಿ, ಕೆಲವು ಡೇಟಾ ನಷ್ಟ ಸಂಭವಿಸುತ್ತಿದೆ. ಸ್ಥಿರ ಕಕ್ಷೆಯನ್ನು … Continued

ದೈತ್ಯ ಹೆಬ್ಬಾವಿನ ವಿರುದ್ಧ ಧೈರ್ಯದಿಂದ ಹೋರಾಡಿ ತಮ್ಮ ಪ್ರೀತಿಯ ನಾಯಿ ರಕ್ಷಿಸಿದ ಮೂವರು ಪುಟ್ಟ ಬಾಲಕರು | ಈ ದೃಶ್ಯ ವೀಕ್ಷಿಸಿ

ಪ್ರಪಂಚದಾದ್ಯಂತ ಜನರು ತಮ್ಮ ಸಾಕುಪ್ರಾಣಿಗಳಿಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕಾಪಾಡಿದ ಹಲವಾರು ಉದಾಹರಣೆಗಳಿವೆ. ತಮ್ಮ ಮುದ್ದಿನ ನಾಯಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಈ ಹುಡುಗರಾದ ಪ್ರೀತಿಗೆ ಯಾವುದೇ ಮಿತಿಯಿಲ್ಲ. ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಭಯಾನಕ ವೀಡಿಯೊ ಕ್ಲಿಪ್‌ನಲ್ಲಿ, ಮೂವರು ಹುಡುಗರು ತಮ್ಮ ನಾಯಿಮರಿಯನ್ನು ಉಳಿಸಲು ದೈತ್ಯ ಹೆಬ್ಬಾವಿನ ವಿರುದ್ಧ ಹೋರಾಡಿದ್ದಾರೆ. ಈ ಘಟನೆಯ ಸ್ಥಳ ತಿಳಿದಿಲ್ಲ ಆದರೆ … Continued

ಯಮುನಾ ನದಿಗೆ ತ್ಯಾಜ್ಯ: ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಿಂದ ಎನ್‌ಜಿಟಿ ನೋಯ್ಡಾ ಪ್ರಾಧಿಕಾರಕ್ಕೆ 100 ಕೋಟಿ ರೂ., ಡಿಜೆಬಿಗೆ 50 ಕೋಟಿ ರೂ.ದಂಡ

ನವದೆಹಲಿ: ಯಮುನಾ ನದಿಯಲ್ಲಿ ಮಾಲಿನ್ಯಕ್ಕೆ ಕಾರಣವಾಗುವ ಸಂಸ್ಕರಿಸದ ಒಳಚರಂಡಿ ತ್ಯಾಜ್ಯವನ್ನು ಚರಂಡಿಗೆ ಬಿಡುವುದನ್ನು ನಿಯಂತ್ರಿಸುವಲ್ಲಿ ವಿಫಲವಾದ ಕಾರಣ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನ್ಯೂ ಓಖ್ಲಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಮೇಲೆ 100 ಕೋಟಿ ರೂಪಾಯಿ ದಂಡ ವಿಧಿಸಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ಪೀಠವು ದೆಹಲಿ ಜಲ … Continued

ಕಾಮನ್‌ವೆಲ್ತ್ ಗೇಮ್ಸ್ -2022: ಕುಸ್ತಿಯಲ್ಲಿ ಪಾಕಿಸ್ತಾನದ ಷರೀಫ್‌ರನ್ನು ಸೋಲಿಸಿ ಚೆನ್ನ ಗೆದ್ದ ಭಾರತದ ನವೀನ್

ಶನಿವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022 ರ ಪುರುಷರ 74 ಕೆಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದ ಫೈನಲ್‌ನಲ್ಲಿ ನವೀನ್ ಪಾಕಿಸ್ತಾನದ ಮುಹಮ್ಮದ್ ಷರೀಫ್ ತಾಹಿರ್ ಅವರನ್ನು 9-0 ಅಂತರದಿಂದ ಸೋಲಿಸಿ ಕುಸ್ತಿಯಲ್ಲಿ ಭಾರತದ ಆರನೇ ಚಿನ್ನವನ್ನು ಗೆದ್ದುಕೊಂಡಿದ್ದಾರೆ. ನವೀನ್ (74 ಕೆಜಿ) ಅವರ ಪಯಣ ನೈಜೀರಿಯಾದ ಓಗ್ಬೊನ್ನಾ ಇಮ್ಯಾನುಯೆಲ್ ಜಾನ್, ಸಿಂಗಾಪುರದ ಹಾಂಗ್ ಯೋವ್ … Continued

ಕಾಮನ್‌ವೆಲ್ತ್‌ ಕ್ರೀಡಾಕೂಟ-2022: ಮಹಿಳೆಯರ ಕುಸ್ತಿಯಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ ತಂದುಕೊಟ್ಟ ವಿನೇಶ್ ಫೋಗಟ್‌

ನವದೆಹಲಿ: ಶನಿವಾರ, ಆಗಸ್ಟ್ 6 ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಅವರು ತಮ್ಮ ಸತತ ಮೂರನೇ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕವನ್ನು ಗೆದ್ದರು. ವಿನೇಶ್ ಫೋಗಟ್ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಚಿನ್ನವನ್ನು ಗೆದ್ದುಕೊಂಡರು, ನಾರ್ಡಿಕ್ ಸಿಸ್ಟಮ್‌ನಲ್ಲಿ ತಮ್ಮ ಅಂತಿಮ ರೌಂಡ್-ರಾಬಿನ್ ಬೌಟ್‌ನಲ್ಲಿ ಶ್ರೀಲಂಕಾದ ಚಮೋದ್ಯಾ ಕೇಶಾನಿ ಮಧುರವ್ಲಾಗೆ ಅವರನ್ನು … Continued

ಕಾಮನ್ ವೆಲ್ತ್  ಕ್ರೀಡಾಕೂಟ : ಭಾರತದ ವನಿತೆಯರ ಕ್ರಿಕೆಟ್‌ ತಂಡ ಫೈನಲ್‌ಗೆ

ಬರ್ಮಿಂಗ್ ಹ್ಯಾಮ್ : ಇಂಗ್ಲೆಂಡ್‌ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರು ಕಾಮನ್ ವೆಲ್ತ್  ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಫೈನಲ್ ಪ್ರವೇಶಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಬಲಾಢ್ಯ ಇಂಗ್ಲೆಂಡ್ ವಿರುದ್ಧ ಭಾರತ 4 ರನ್ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿದೆ. 165 ರನ್ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 160 … Continued

ತಮಿಳುನಾಡು ಚಲನಚಿತ್ರ ನಿರ್ಮಾಪಕರು, ಹಣಕಾಸುದಾರರ ಮೇಲೆ ಆದಾಯ ತೆರಿಗೆ ದಾಳಿಯಲ್ಲಿ 200 ಕೋಟಿ ರೂ.ಗಳ ಕಪ್ಪು ಹಣ ಪತ್ತೆ: ಸಿಬಿಡಿಟಿ

ನವದೆಹಲಿ: ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ ತಮಿಳುನಾಡಿನ ಕೆಲವು ಚಲನಚಿತ್ರ ನಿರ್ಮಾಪಕರು, ವಿತರಕರು ಮತ್ತು ಹಣಕಾಸುದಾರರ ಮೇಲೆ ದಾಳಿ ನಡೆಸಿದ ನಂತರ 200 ಕೋಟಿ ರೂ.ಗೂ ಹೆಚ್ಚು “ಬಹಿರಂಗಪಡಿಸದ” ಆದಾಯವನ್ನು ಪತ್ತೆಹಚ್ಚಿದೆ ಎಂದು ಸಿಬಿಡಿಟಿ (CBDT) ಶನಿವಾರ ತಿಳಿಸಿದೆ. ಆಗಸ್ಟ್ 2 ರಂದು ಶೋಧ ನಡೆಸಲಾಯಿತು ಮತ್ತು ಚೆನ್ನೈ, ಮಧುರೈ, ಕೊಯಮತ್ತೂರು ಮತ್ತು ವೆಲ್ಲೂರ್‌ನಲ್ಲಿ ಒಳಗೊಂಡ … Continued