ಪಾಕಿಸ್ತಾನದ ಪ್ರಧಾನಿ ಅಭ್ಯರ್ಥಿಯಾಗಿ ಶೆಹಬಾಜ್ ಷರೀಫ್ ನಾಮನಿರ್ದೇಶನ, ಬಿಲಾವಲ್ ಭುಟ್ಟೋ ವಿದೇಶಾಂಗ ಸಚಿವರಾಗುವ ಸಾಧ್ಯತೆ

ಪಾಕಿಸ್ತಾನದ ARY ನ್ಯೂಸ್‌ನ ವರದಿಯ ಪ್ರಕಾರ, ಪಾಕಿಸ್ತಾನದ ವಿರೋಧ ಪಕ್ಷಗಳು ಭಾನುವಾರ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್‌ನಾಯಕ ಶೆಹಬಾಜ್ ಷರೀಫ್ ಅವರನ್ನು ಪ್ರಧಾನಿ ಚುನಾವಣೆಗೆ ತಮ್ಮ ಜಂಟಿ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿದೆ. ಶನಿವಾರ ತಡರಾತ್ರಿ ಅವಿಶ್ವಾಸ ನಿರ್ಣಯದ ಮೂಲಕ ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ ನಂತರ ನವಾಜ್ ಷರೀಫ್ ಅವರ ಸಹೋದರ ಶೆಹಬಾಜ್ ಷರೀಫ್ … Continued

ಮಧ್ಯರಾತ್ರಿ ವಿಶ್ವಾಸಮತದಲ್ಲಿ ಪಾಕಿಸ್ತಾನ ಪ್ರಧಾನಿ ಹುದ್ದೆಯಿಂದ ಇಮ್ರಾನ್‌ ಖಾನ್‌ ಪದಚ್ಯುತಿ, ಸರ್ಕಾರದ ಪತನ

ಇಸ್ಲಾಮಾಬಾದ್‌: ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರು ತಮ್ಮ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯದಲ್ಲಿ ಸೋಲನುಭವಿಸಿದ್ದಾರೆ. ಶನಿವಾರ ಮಧಯರಾತ್ರಿ ನಂತರ ಅವಿಶ್ವಾಸ ನಿರ್ಣಯದ ಮೇಲಿನ ಮತದಾನದ ಸಂದರ್ಭದಲ್ಲಿ ದೇಶದ ರಾಷ್ಟ್ರೀಯ ಅಸೆಂಬ್ಲಿಯ 174 ಸದಸ್ಯರು ಇಮ್ರಾನ್‌ ಖಾನ್‌ ವಿರುದ್ಧ ಮತಚಲಾಯಿಸಿದ ಕಾರಣ ಹೈ-ಆಕ್ಟೇನ್ ಮಧ್ಯರಾತ್ರಿಯ ನಾಟಕದಲ್ಲಿ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಪದಚ್ಯುತಗೊಂಡರು. ಇಮ್ರಾನ್ … Continued

ನಾಸಾ ಜೊತೆ ಸೇರಿ ನಿಸ್ಸಾನ್ ಎಲೆಕ್ಟ್ರಿಕ್ ವಾಹನಗಳಿಗೆ ಹಗುರ-ತ್ವರಿತ ಚಾರ್ಜ್‌ ಬ್ಯಾಟರಿ ಅಭಿವೃದ್ಧಿಪಡಿಸುತ್ತಿರುವ ನಿಸ್ಸಾನ್‌, ಇದು ಕೆಲವೇ ನಿಮಿಷಗಳಲ್ಲೇ ಪೂರ್ಣ ಚಾರ್ಜ್

ಜಪಾನಿನ ವಾಹನ ತಯಾರಕ ನಿಸ್ಸಾನ್ ಕಂಪನಿಯು ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಜೊತೆಗೆ ಹಗುರವಾದ, ಸುರಕ್ಷಿತವಾದ ಮತ್ತು ತ್ವರಿತವಾಗಿ ಚಾರ್ಜ್ ಮಾಡಬಹುದಾದ ಎಲೆಕ್ಟ್ರಿಕ್ ವಾಹನಗಳಿಗೆ (EVs) ಬ್ಯಾಟರಿಗಳನ್ನು ತಯಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಆಲ್-ಸಾಲಿಡ್-ಸ್ಟೇಟ್ ಬ್ಯಾಟರಿಯು ಪ್ರಸ್ತುತ ಬಳಸಲಾಗುವ ಲಿಥಿಯಂ-ಐಯಾನ್ ಬ್ಯಾಟರಿಗಳಿಗೆ ಬದಲಿಯಾಗಿದೆ. ಇದನ್ನು 15 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಮತ್ತು … Continued

ಚೀನಾದ ಶೂನ್ಯ-ಕೋವಿಡ್‌ ವಿಧಾನ ಪ್ರಶ್ನಿಸಿದ ಶಾಂಘೈ ಆಸ್ಪತ್ರೆಯಲ್ಲಿ ವಯಸ್ಸಾದ ರೋಗಿಗಳ ಸಾವುಗಳು

ಶಾಂಘೈನಲ್ಲಿ ವಯಸ್ಸಾದ ರೋಗಿಗಳ ಆಸ್ಪತ್ರೆಯಲ್ಲಿ ಸಂಭವಿಸಿದ ಸಾವಿನ ಸರಣಿಯು 2.6 ಕೋಟಿ ಜನರಿರುವ ನಗರದಲ್ಲಿ ಏಕಾಏಕಿ ಉಲ್ಬಣಗೊಳ್ಳುತ್ತಿರುವ ಮಧ್ಯೆ ಶೂನ್ಯ-ಕೋವಿಡ್‌ ವಿಧಾನವು ಚೀನಾದ ಮೊಂಡುತನದ ಅನ್ವೇಷಣೆಯ ಅಪಾಯಕಾರಿ ಪರಿಣಾಮಗಳನ್ನು ಒತ್ತಿಹೇಳುತ್ತಿದೆ. ಶಾಂಘೈ ಡೊಂಘೈ ಹಿರಿಯ ಆರೈಕೆ ಆಸ್ಪತ್ರೆಯಲ್ಲಿ ಹಲವಾರು ರೋಗಿಗಳು ಮೃತಪಟ್ಟಿದ್ದಾರೆ ಎಂದು ರೋಗಿಗಳ ಸಂಬಂಧಿಕರು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ. ವೈರಸ್‌ನ ಸಂಪರ್ಕಕ್ಕೆ ಬಂದ ಕೇರ್‌ಟೇಕರ್‌ಗಳನ್ನು … Continued

ಪರಮಾಣು-ಸಾಮರ್ಥ್ಯದ ಶಾಹೀನ್-III ಕ್ಷಿಪಣಿ ಪರೀಕ್ಷಿಸಿದ ಪಾಕಿಸ್ತಾನ…ವೀಕ್ಷಿಸಿ

ಪಾಕಿಸ್ತಾನವು ತನ್ನ ಪರಮಾಣು ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿ ಶಹೀನ್-III ಅನ್ನು ಪರೀಕ್ಷಿಸಿದೆ, ಇದು 2,750 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ ಎಂದು ಪಾಕಿಸ್ತಾನ ಮಿಲಿಟರಿಯ ಪ್ರಚಾರ ಅಂಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ISPR) ಹೇಳಿದೆ. ಶಾಹೀನ್-III, ಮೊಬೈಲ್, ಘನ-ಇಂಧನದ ವೇದಿಕೆ, ಪಾಕಿಸ್ತಾನದ ಎಲ್ಲ ಬ್ಯಾಲಿಸ್ಟಿಕ್ ಕ್ಷಿಪಣಿ ವ್ಯವಸ್ಥೆಗಳಲ್ಲಿ ಅತ್ಯಂತ ದೀರ್ಘವಾದ ಪರಿಣಾಮಕಾರಿ ವ್ಯಾಪ್ತಿಯನ್ನು ಹೊಂದಿದೆ. ಪರೀಕ್ಷಾ ಹಾರಾಟವು … Continued

ಪ್ರತಿದಿನ 15 ಲಕ್ಷ ಕೋವಿಡ್ ಪ್ರಕರಣ, ಯುರೋಪ್‌ನಲ್ಲಿ ಹೊಸ ಅಲೆ: ವಿಶ್ವಸಂಸ್ಥೆ ಮುಖ್ಯಸ್ಥರ ಎಚ್ಚರಿಕೆ

ನ್ಯೂಯಾರ್ಕ್‌: ಸರಾಸರಿ ನಾಲ್ಕು ವರ್ಷಗಳಿಗೆ ಒಮ್ಮೆಯಂತೆ ಹೊಸ ಕೊರೊನಾ ವೈರಸ್ ರೂಪಾಂತರಗಳು ಸೃಷ್ಟಿಯಾಗುತ್ತಿದ್ದು, ಸಾಂಕ್ರಾಮಿಕ ಮುಗಿದು ಹೋಗಿದೆ ಎಂದು ಅಂದುಕೊಳ್ಳಬೇಡಿ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಎಚ್ಚರಿಕೆ ನೀಡಿದ್ದಾರೆ. ಗವಿ ಕೋವ್ಯಾಕ್ಸ್ ಅಡ್ವಾನ್ಸ್ ಮಾರ್ಕೆಟ್ ಕಮಿಟ್‌ಮೆಂಟ್ ಸಮಿಟ್ 2022ರಲ್ಲಿ ‘ಒಂದು ಜಗತ್ತು ರಕ್ಷಿಸಲ್ಪಟ್ಟಿದೆ- ಕೋವಿಡ್ ಅನ್ನು ತಡೆಯೋಣ’ ಎಂಬ ವಿಚಾರದಡಿ ವಿಡಿಯೋ ಸಂದೇಶ … Continued

ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಹಾಜರಾಗದಂತೆ ಹಾಲಿವುಡ್‌ ನಟ ವಿಲ್ ಸ್ಮಿತ್‌ಗೆ 10 ವರ್ಷ ನಿಷೇಧ

ಲಾಸ್ ಏಂಜಲೀಸ್ : ಅಕಾಡೆಮಿ ಅವಾರ್ಡ್ಸ್‌ನಲ್ಲಿ ಕ್ರಿಸ್ ರಾಕ್‌ಗೆ ಕಪಾಳಮೋಕ್ಷ ಮಾಡಿದ ನಂತರ 10 ವರ್ಷಗಳ ಕಾಲ ಆಸ್ಕರ್ ಅಥವಾ ಇತರ ಯಾವುದೇ ಅಕಾಡೆಮಿ ಕಾರ್ಯಕ್ರಮಕ್ಕೆ ಹಾಜರಾಗದಂತೆ ವಿಲ್ ಸ್ಮಿತ್ ಅವರ ಮೇಲೆ ಮೋಷನ್ ಪಿಕ್ಚರ್ ಅಕಾಡೆಮಿ ಶುಕ್ರವಾರ ನಿಷೇಧಿಸಿದೆ. ಸ್ಮಿತ್ ಅವರ ಕ್ರಮಗಳಿಗೆ ಪ್ರತಿಕ್ರಿಯೆಯನ್ನು ಚರ್ಚಿಸಲು ಅಕಾಡೆಮಿಯ ಆಡಳಿತ ಮಂಡಳಿಯ ಸಭೆಯ ನಂತರ ಈ … Continued

ರಷ್ಯಾ ಸೈನಿಕರಿಂದ ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳುತ್ತಿರುವ ಉಕ್ರೇನಿಯನ್ ಯುವತಿಯರು: ಅಧಿಕಾರಿ

ಕೀವ್‌ (ಉಕ್ರೇನ್)‌ : ರಾಜಧಾನಿ ಕೀವ್‌ನಿಂದ ಸುಮಾರು 50 ಮೈಲುಗಳಷ್ಟು ದೂರದಲ್ಲಿರುವ ಉಕ್ರೇನಿಯನ್ ಪಟ್ಟಣವಾದ ಇವಾನ್‌ಕಿವ್‌ನಲ್ಲಿ, ಯುವತಿಯರು ರಷ್ಯಾದ ಸೈನಿಕರಿಂದ ಅತ್ಯಾಚಾರಕ್ಕೊಳಗಾಗುವುದನ್ನು ತಪ್ಪಿಸಿಕೊಳ್ಳಲು ತಮ್ಮ ಕೂದಲನ್ನು ಕತ್ತರಿಸಿಕೊಳ್ಳುತ್ತಿದ್ದಾರೆ..! ತಾವು ಆಕರ್ಷಕವಾಗಿ ಕಾಣದಿರುವಂತೆ ಮಾಡಲು ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸಿ ರಷ್ಯಾದ ಸೈನಿಕರಿಂದ ಅತ್ಯಾಚಾರಕ್ಕೊಳಗಾಗುವುದನ್ನು ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಉಪ ಮೇಯರ್ ಮರಿನಾ ಬೆಸ್ಚಾಸ್ಟ್ನಾ ಹೇಳಿದ್ದಾರೆ. ಮಾರ್ಚ್ … Continued

ಪಾಕಿಸ್ತಾನವು ಭಾರತದಿಂದ ಸ್ವಾಭಿಮಾನ ಕಲಿಯಬೇಕು, ಯಾವುದೇ ಸೂಪರ್ ಪವರ್ ದೆಹಲಿಗೆ ಷರತ್ತುಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ: ಭಾರತ ಹಾಡಿಹೊಗಳಿದ ಇಮ್ರಾನ್ ಖಾನ್

ಇಸ್ಲಾಮಾಬಾದ್‌: ಯಾವುದೇ ಸೂಪರ್ ಪವರ್ ರಾಷ್ಟ್ರವೂ ಭಾರತಕ್ಕೆ ಷರತ್ತುಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಜನರ ಹಿತಾಸಕ್ತಿಗಳನ್ನು ಉಲ್ಲೇಖಿಸಿ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಯಾವುದೇ ದೇಶದ ಪರವಾಗಿ ನಿಲ್ಲಲು ಭಾರತದ ನಿರಾಕರಿಸಿದಾಗಲೂ ಯಾವುದೇ ದೇಶವು ಭಾರತದ ವಿರುದ್ಧ ನಿಲ್ಲಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಯುರೋಪಿಯನ್‌ ಒಕ್ಕೂಟದ ರಾಜತಾಂತ್ರಿಕರು ಪಾಕಿಸ್ತಾನ ರಷ್ಯಾದ ವಿರುದ್ಧ … Continued

ಉಕ್ರೇನ್ ರೈಲು ನಿಲ್ದಾಣದ ಮೇಲೆ ರಾಕೆಟ್ ದಾಳಿ: 35 ಜನರು ಸಾವು, 100 ಮಂದಿಗೆ ಗಾಯ

ನವದೆಹಲಿ: ಪೂರ್ವ ಉಕ್ರೇನ್‌ನ ನಗರವಾದ ಕ್ರಾಮಾಟೋರ್ಸ್ಕ್‌ನಲ್ಲಿರುವ ರೈಲು ನಿಲ್ದಾಣದ ಮೇಲೆ ಈ ಶುಕ್ರವಾರ ನಡೆದ ರಾಕೆಟ್ ದಾಳಿಯಲ್ಲಿ ಕನಿಷ್ಠ 35 ಜನರು ಸಾವಿಗೀಡಾಗಿದ್ದಾರೆ ಮತ್ತು 100 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳಿ ತಿಳಿಸಿವೆ. ಅಲ್ಲಿ ನೂರಾರು ಜನರು ಈ ಪ್ರದೇಶವನ್ನು ತೊರೆಯಲು ರೈಲಿಗಾಗಿ ಕಾಯುತ್ತಿದ್ದರು. ನಿಲ್ದಾಣದಲ್ಲಿ ರಾಕೆಟ್ ದಾಳಿಯ ನಂತರ 30 ಕ್ಕೂ ಹೆಚ್ಚು ಜನರು … Continued