ಕ್ಯಾನ್ಸರಿಗೆ ರಾಮಬಾಣ..?!-ಶಬ್ದ ತರಂಗದಿಂದ ಭಾಗಶಃ ನಾಶವಾದ ಕ್ಯಾನ್ಸರ್‌ ಗಡ್ಡೆಗಳು ಮತ್ತೆ ಮರುಕಳಿಸುವುದಿಲ್ಲ: ಅಧ್ಯಯನ

ವಾಷಿಂಗ್ಟನ್: ಮಿಚಿಗನ್ ವಿಶ್ವವಿದ್ಯಾಲಯವು ಆಕ್ರಮಣಶೀಲವಲ್ಲದ ಧ್ವನಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ, ಇದು ಇಲಿಗಳಲ್ಲಿನ ಯಕೃತ್ತಿನ ಗಡ್ಡೆಗಳನ್ನು ಒಡೆಯುತ್ತದೆ, ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ ಮತ್ತು ಮತ್ತಷ್ಟು ಹರಡುವುದನ್ನು ತಡೆಯಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಸಂಶೋಧಕರ ಪ್ರಕಾರ, ಈ ಬೆಳವಣಿಗೆಯು ಮಾನವರಲ್ಲಿ ಸುಧಾರಿತ ಕ್ಯಾನ್ಸರ್ ಫಲಿತಾಂಶಗಳಿಗೆ ಕಾರಣವಾಗಬಹುದು. ಯಕೃತ್ತಿನ ಗಡ್ಡೆಯ ಪರಿಮಾಣದ ಶೇಕಡಾ 50 ರಿಂದ 75 ರಷ್ಟು ಮಾತ್ರ … Continued

ಪಾಕಿಸ್ತಾನ: 37 ಸದಸ್ಯರ ಸಂಪುಟ ಪ್ರಮಾಣ ವಚನ ಸ್ವೀಕಾರ, ಸದ್ಯಕ್ಕೆ ಹೊರಗುಳಿದ ಬಿಲಾವಲ್ ಭುಟ್ಟೊ

ನವದೆಹಲಿ: ಮುಂದಿನ ವಿದೇಶಾಂಗ ಸಚಿವ ಎಂದು ಬಿಂಬಿಸಲಾಗಿದ್ದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಸಂಪುಟ ಸೇರದಿರಲು ನಿರ್ಧರಿಸಿದ್ದಾರೆ. ನಂತರದ ದಿನಗಳಲ್ಲಿ ಭುಟ್ಟೊ ಸಂಪುಟ ಸೇರಬಹುದು ಎಂದು ತಿಳಿದು ಬಂದಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸಂಪುಟದಲ್ಲಿ ಮೂವತ್ತೊಂದು ಕ್ಯಾಬಿನೆಟ್‌ ಮಂತ್ರಿಗಳು, ಮೂವರು ರಾಜ್ಯ ಸಚಿವರು ಮತ್ತು ಮೂವರು … Continued

ಕಾಬೂಲ್ ಹೈಸ್ಕೂಲ್‌ನಲ್ಲಿ ಸರಣೀ ಸ್ಫೋಟ: ಕನಿಷ್ಠ 6 ಮಂದಿ ಸಾವು, ಹಲವರಿಗೆ ಗಾಯ

ಕಾಬೂಲ್‌ : ಅಫ್ಘಾನಿಸ್ತಾನದ ಭದ್ರತಾ ಮತ್ತು ಆರೋಗ್ಯ ಅಧಿಕಾರಿಗಳ ಪ್ರಕಾರ, ಮಂಗಳವಾರ ಪಶ್ಚಿಮ ಕಾಬೂಲ್‌ನ ಪ್ರೌಢಶಾಲೆಯೊಂದರಲ್ಲಿ ಮೂರು ಸ್ಫೋಟಗಳು ಸಂಭವಿಸಿವೆ, ಹಲವಾರು ಜನರು ಮೃತಪಟ್ಟಿದ್ದಾರೆ. ಕನಿಷ್ಠ 6 ಜನರು ಮೃತಪಟ್ಟಿದ್ದಾರೆ, ಡಜನ್ಗಟ್ಟಲೆ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ಆತಂಕವಿದೆ. ನೆರೆಹೊರೆಯಲ್ಲಿರುವ ಅನೇಕ ನಿವಾಸಿಗಳು ಶಿಯಾ ಹಜಾರಾ ಸಮುದಾಯಕ್ಕೆ ಸೇರಿದ್ದಾರೆ, ಇಸ್ಲಾಮಿಕ್ ಸ್ಟೇಟ್ ಸೇರಿದಂತೆ ಸುನ್ನಿ … Continued

ತಪ್ಪುಗಳು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಯ್ತು ಎಂದು ಒಪ್ಪಿಕೊಂಡ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ

ಕೊಲಂಬೊ: ದಶಕಗಳಲ್ಲೇ ದೇಶದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾದ ತಪ್ಪುಗಳನ್ನು ಶ್ರೀಲಂಕಾ ಅಧ್ಯಕ್ಷರು ಸೋಮವಾರ ಒಪ್ಪಿಕೊಂಡಿದ್ದಾರೆ ಮತ್ತು ಅವುಗಳನ್ನು ಸರಿಪಡಿಸುವ ವಾಗ್ದಾನ ಮಾಡಿದ್ದಾರೆ. ದೇಶದ ಭೀಕರ ಆರ್ಥಿಕ ಸ್ಥಿತಿಯಿಂದ ಉಂಟಾಗಿರುವ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸಲು ಅವರು ಮತ್ತು ಅವರ ಪ್ರಬಲ ಕುಟುಂಬ ಪ್ರಯತ್ನಿಸುತ್ತಿರುವಾಗ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ಸೋಮವಾರ ನೇಮಿಸಿದ 17 ಹೊಸ … Continued

ಪಾಕಿಸ್ತಾನದಲ್ಲಿ ಕಲ್ಲಿದ್ದಲು ಖರೀದಿಗೆ ಹಣದ ಕೊರತೆ :ಅನಿಲ ಕೊರತೆ ನಡುವೆ ಮನೆಗಳು-ಉದ್ಯಮಗಳಿಗೆ ವಿದ್ಯುತ್ ಕಡಿತದ ಬರೆ

ನವದೆಹಲಿ: ಹಣದ ಕೊರತೆಯಿರುವ ದೇಶವು ತನ್ನ ವಿದ್ಯುತ್ ಸ್ಥಾವರಗಳಿಗೆ ಸಾಗರೋತ್ತರದಿಂದ ಕಲ್ಲಿದ್ದಲು ಅಥವಾ ನೈಸರ್ಗಿಕ ಅನಿಲವನ್ನು ಖರೀದಿಸಲು ಶಕ್ತವಾಗದ ಕಾರಣ ಪಾಕಿಸ್ತಾನವು ಮನೆಗಳು ಮತ್ತು ಉದ್ಯಮಗಳಿಗೆ ವಿದ್ಯುತ್ ಕಡಿತಗೊಳಿಸುತ್ತಿದೆ. ಉಕ್ರೇನ್‌ನಲ್ಲಿನ ಯುದ್ಧವು ಪೂರೈಕೆ ಕೊರತೆ ಉಲ್ಬಣಗೊಳಿಸಿದ್ದರಿಂದ ದ್ರವೀಕೃತ ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲಿನ ಬೆಲೆಗಳು ಕಳೆದ ತಿಂಗಳು ದಾಖಲೆ ಮಟ್ಟಕ್ಕೆ ಏರಿದ ನಂತರ ಪಾಕಿಸ್ತಾನವು ಸ್ಪಾಟ್ … Continued

ಶಾಂಘೈನಲ್ಲಿ ಕಠಿಣ ಲಾಕ್‌ಡೌನ್‌ನಿಂದಾಗಿ ಆಹಾರಕ್ಕಾಗಿ ಡ್ರೋನ್‌ ಬಳಸಿ ಮೀನು ಹಿಡಿಯುವ ಅಪಾರ್ಟ್‌ಮೆಂಟ್‌ ಜನರು…! ವೀಕ್ಷಿಸಿ

ಚೀನಾದಲ್ಲಿ ಕೋವಿಡ್ ಸೋಂಕಿನ ತಾಜಾ ಅಲೆಯ ಭಾರೀ ಹರಡುವಿಕೆಯ ಮಧ್ಯೆ, ಚೀನಾ ಸರ್ಕಾರವು ತನ್ನ ದೊಡ್ಡ ನಗರಗಳಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್ ನಿರ್ಬಂಧಗಳನ್ನು ವಿಧಿಸಿದೆ. ಕಟ್ಟುನಿಟ್ಟಿನ ನಿರ್ಬಂಧದಿಂದಾಗಿ ಶಾಂಘೈನ ಸುಮಾರು 2.5 ಕೋಟಿ ಜನರು ತಮ್ಮ ಮನೆಗಳೊಳಗೆ ಅಕ್ಷರಶಃ ಬಂಧಿಯಾಗಿದ್ದಾರೆ. ಮತ್ತು ಅವರು ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಈ ಕಠಿಣ ಸಮಯಗಳ ಮಧ್ಯೆ, ಜನರು ಆಹಾರ ಅಥವಾ ಅವಶ್ಯಕ … Continued

ನಮ್ಮ ತಾಳ್ಮೆ ಪರೀಕ್ಷಿಸಬೇಡಿ: ಪಾಕಿಸ್ತಾನಕ್ಕೆ ಗಂಭೀರ ಎಚ್ಚರಿಕೆ ಕೊಟ್ಟ ತಾಲಿಬಾನ್

ಕಾಬೂಲ್: ತಾಲಿಬಾನ್ ಆಫ್ಘಾನಿಸ್ತಾನದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಪಾಕಿಸ್ತಾನಕ್ಕೆ ಈಗ ಸ್ವತಃ ತಾಲಿಬಾನ್ ಸರ್ಕಾರ ಎಚ್ಚರಿಕೆ ನೀಡಿದೆ. ಇತ್ತೀಚೆಗೆ ಅಫ್ಘಾನಿಸ್ತಾನದ ಮೇಲೆ ಹಲವಾರು ಬಾರಿ ವೈಮಾನಿಕ ದಾಳಿ ನಡೆಸಿರುವ ಪಾಕ್​ಗೆ ತಾಲಿಬಾನ್ ಸರ್ಕಾರ ಗಂಭೀರ ಎಚ್ಚರಿಕೆ ನೀಡಿದೆ. ಇದೇ ರೀತಿ ದಾಳಿ ಮುಂದುವರೆಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು … Continued

ಐಎಂಎಫ್‌ನಿಂದ ಸಾಲ ಸಿಗುವವರೆಗೂ ನಮಗೆ ಹಣಕಾಸು ನೆರವು ನೀಡಿ: ಶ್ರೀಲಂಕಾದಿಂದ ಭಾರತಕ್ಕೆ ಮನವಿ

ಕೊಲಂಬೊ(ಶ್ರೀಲಂಕಾ): ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾ ಈಗ ಸಹಾಯಕ್ಕಾಗಿ ಭಾರತಕ್ಕೆ ಮನವಿ ಮಾಡಿದೆ. ಈಗ ಆರ್ಥಿಕ ಸಂಕಷ್ಟದಿಂದ ಹೊರಬರಲು ಭಾರತದ ನೆರವು ಅತ್ಯಗತ್ಯ ಎಂದು ಅರಿತಿರುವ ಶ್ರೀಲಂಕಾ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್​​) ಸಾಲ ಸಿಗುವವರೆಗೆ ಶ್ರೀಲಂಕಾಕ್ಕೆ ಹಣಕಾಸು ನೆರವು ನೀಡುವಂತೆ ಮನವಿ ಮಾಡಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಶ್ರೀಲಂಕಾಗೆ ಸಾಲ ನೆರವು ನೀಡಲು … Continued

ಕುಮಟಾ: ಅದ್ಧೂರಿಯಾಗಿ ನಡೆದ ಬಾಡದ ಶ್ರೀಕಾಂಚಿಕಾ ಪರಮೇಶ್ವರಿ ದೇವಿಯ ರಥೋತ್ಸವ

ಕುಮಟಾ;ಉತ್ತರ ಕನ್ನಡ ಜಿಲ್ಲೆಯ ಹೆಸರುವಾಸಿ ಜಾತ್ರೆಗಳಲ್ಲೊಂದಾದ ಬಾಡದ ಶ್ರೀಕಾಂಚಿಕಾ ಪರಮೇಶ್ವರಿ ದೇವಿಯ ರಥೋತ್ಸವು ಶನಿವಾರ ನಡೆಯಿತು. ಇದು ಪ್ರತಿವರ್ಷ ಚೈತ್ರ ಶುದ್ಧ ಹುಣ್ಣಿಮೆ ದಿನದಂದು ನಡೆಯುತ್ತದೆ.ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ರಥೋತ್ಸವ ಸ್ಥಗಿತವಾಗಿತ್ತು.ಈ ವರ್ಷ ಯಾವುದೇ ಆತಂಕವಿಲ್ಲದೆ ರಥೋತ್ಸವ ಅದ್ಧೂರಿಯಾಗಿ ಸಂಪನ್ನವಾಯಿತು. ಸಾವಿರಾರು ಜನರು ರಥೋತ್ಸವದಲ್ಲಿ ಭಾಗವಹಿಸಿ ಶ್ರೀದೇವಿಗೆ ವಿವಿಧ ಹರಕೆ ಪೂಜೆಯನ್ನು ನೆರವೇರಿಸಿದರು. … Continued

ಅಫ್ಘಾನಿಸ್ತಾನದ ಖೋಸ್ಟ್, ಕುನಾರ್ ಪ್ರಾಂತ್ಯದ ಮೇಲೆ ಪಾಕಿಸ್ತಾನದ ವೈಮಾನಿಕ ದಾಳಿ: ಕನಿಷ್ಠ 30 ಮಂದಿ ಸಾವು

ನವದೆಹಲಿ: ಏಪ್ರಿಲ್ 15 ರ ಶುಕ್ರವಾರ ರಾತ್ರಿ ಅಫ್ಘಾನಿಸ್ತಾನದ ಖೋಸ್ಟ್ ಪ್ರಾಂತ್ಯದ ಮೇಲೆ ಪಾಕಿಸ್ತಾನಿ ವಿಮಾನಗಳು ವೈಮಾನಿಕ ದಾಳಿ ನಡೆಸಿದ ನಂತರ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30 ಜನರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನದ ಸ್ಥಳೀಯ ಅಧಿಕಾರಿಗಳು ಶನಿವಾರ ಖಚಿತಪಡಿಸಿದ್ದಾರೆ. ಅಫ್ಘಾನಿಸ್ತಾನದ ಸ್ಥಳೀಯ ಅಧಿಕಾರಿಗಳು ಶುಕ್ರವಾರ ರಾತ್ರಿ, ಏಪ್ರಿಲ್ 15 ರಂದು ಅಫ್ಘಾನಿಸ್ತಾನದ ಖೋಸ್ಟ್ ಪ್ರಾಂತ್ಯದ … Continued