ಆಘಾತಕಾರಿ..ಬೆಂಗಳೂರಿನಲ್ಲಿ ಸಮುದಾಯಕ್ಕೂ ಹಬ್ಬುತ್ತಿದೆ ಎಂದ ಆರೋಗ್ಯ ಸಚಿವರು…!

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ವೈರಸ್‌ ಸಮುದಾಯಕ್ಕೂ ಹಬ್ಬುತ್ತಿದೆ ಎಂಬ ಆಘಾತಕರ ಮಾಹಿತಿಯನ್ನು ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ ಹೊರ ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೊನಾ ಸೋಂಕು ನಮ್ಮ ನಿರೀಕ್ಷೆಗೂ ಮೀರಿ ಹಬ್ಬುತ್ತಿದೆ. ಇದು ಸಮುದಾಯಕ್ಕೂ ಹಬ್ಬುತ್ತಿದೆ. ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು. … Continued

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ನಿಧನ

ಸಿದ್ದಾಪುರ; ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ , ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಪ್ರಸಿದ್ಧ ಯಕ್ಷಗಾನ ತಾಳಮದ್ದಲೆ ಅರ್ಥಧಾರಿ, ಪ್ರಸಂಗಕರ್ತ,ಅನೇಕ ಕೃತಿಗಳ ರಚನೆಕಾರ ಎಂ. ಎ. ಹೆಗಡೆ (ಮಹಾಬಲೇಶ್ವರ ಅಣ್ಣಪ್ಪ ಹೆಗಡೆ) ಭಾನುವಾರ ನಿಧನರಾದರು. ಅವರಿಗೆ ೭೩ ವರ್ಷ ವಯಸ್ಸಾಗಿತ್ತು. ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇವರು ಸಿದ್ದಾಪುರ ತಾಲೂಕಿನ ಜೋಗಿನಮನೆಯವರು. ೧೯೪೮ ಜುಲೈ … Continued

ಹಂಪಿ ಲೋಕಪಾವನ ಕೊಳಕ್ಕೆ ವಿಷ ಬೆರೆಸಿದ ಕಿಡಿಗೇಡಿಗಳು: ಮೀನುಗಳ ಸಾವು

ಹಂಪಿ:ಹಂಪಿ ಪರಿಸರದ ಪುಣ್ಯಕೊಳವೆಂದೇ ಪ್ರಸಿದ್ಧಿ ಪಡೆದಿರುವ ಲೋಕಪಾವನ ಕೊಳಕ್ಕೆ ಯಾರೋ ಕಿಡಿಗೇಡಿಗಳು ವಿಷ ಹಾಕಿದ ಪರಿಣಾಮ  ಮೀನುಗಳು ಸತ್ತಿವೆ. ಈ ಘಟನೆ ಶುಕ್ರವಾರ ರಾತ್ರಿ ನಡೆದಿದೆ ಎಂದು ಹೇಳಲಾಗಿದೆ. ಹಂಪಿಯ ಐತಿಹಾಸಿಕ ಪ್ರಸಿದ್ಧ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಶ್ರೀ ವಿದ್ಯಾರಣ್ಯ ಮಠದ ಹಿಂಭಾಗಕ್ಕಿರುವ ಈ ಲೋಕಪಾವನ ಕೊಳವು ಮಲೀನಗೊಂಡ ಕಾರಣ ಶ್ರೀಗಳು ಅದನ್ನು ಸ್ವಚ್ಛಗೊಳಿಸಿದ್ದರು. … Continued

ಮಹಿಳಾ ವಿವಿ ಏ.19ರ ಪರೀಕ್ಷೆ ಮುಂದೂಡಿಕೆ

ವಿಜಯಪುರ : ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಏ.19 ರಂದು ನಡೆಯಬೇಕಿದ್ದ ಅಕ್ಕಮಹಾದೇವಿ ಮಹಿಳಾ ವಿವಿಯ ಯುಜಿ, ಪಿಜಿ ಪರೀಕ್ಷೆ ಮುಂದೂಡಲಾಗಿದೆ. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ವಿಶ್ವ ವಿದ್ಯಾಲಯ ಈ ಸಂಬಂಧ ಪ್ರಕಟಣೆ ಹೊರಡಿಸಿದೆ.ಸಾರಿಗೆ ನೌಕರರ ಮುಷ್ಕರದಿಂದಾಗಿ ಬಸ್​ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ … Continued

ಕರ್ನಾಟಕದಲ್ಲಿ ದೈನಂದಿನ ಪ್ರಕರಣಗಳಲ್ಲಿ ಮತ್ತೆ ಜಂಪ್‌… ಮುಂಬೈ-ಪುಣೆ ಸ್ಥಿತಿಯತ್ತ ಬೆಂಗಳೂರು..!!

ಬೆಂಗಳೂರು: ಕೇವಲ 24 ಗಂಟೆಗಳ ಅವಧಿಯಲ್ಲಿ 17,489 ಹೊಸ ಪ್ರಕರಣಗಳನ್ನು ದಾಖಲಿಸುವ ಮೂಲಕ ಕರ್ನಾಟಕವು ತನ್ನ ಏಕದಿನ ಗರಿಷ್ಠ ಕೊರೊನಾ ವೈರಸ್ ಸ್ಪೈಕ್ ದಾಖಲಿಸಿದೆ. ಶನಿವಾರದ ಪ್ರಕರಣವೂ ಸೇರಿ ಒಟ್ಟು ಸೋಂಕಿತರ ಸಂಖ್ಯೆ ಸೇರಿ ಒಟ್ಟು ಸೋಂಕಿತರ ಸಂಖ್ಯೆ 11,41,998ಕ್ಕೆ ತಲುಪಿದ್ದರೆ, ಸಕ್ರಿಯ ಪ್ರಕರಣಗಳು 1,19,160 ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಬುಲೆಟಿನ್ ತಿಳಿಸಿದೆ. … Continued

ಕೊರೊನಾ ಹೆಚ್ಚಳ: ಸರ್ಕಾರಿ ಇಲಾಖೆಗಳ ಸಭೆಗೆ ಸದ್ಯಕ್ಕೆ ಬ್ರೇಕ್‌..!

ಬೆಂಗಳೂರು: ಕೋವಿಡ್ 2ನೇ ಅಲೆ ಹಿಂದೆಂದಿಗಿಂತಲೂ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಒಂದೆರಡು ತಿಂಗಳ ಅವಧಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಭೆ ನಡೆಸುವುದನ್ನು ನಿಯಂತ್ರಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸೂಚಿಸಿದ್ದಾರೆ. ಸಭೆ ನಡೆಸುವುದು ಅನಿವಾರ್ಯವಾದಲ್ಲಿ ಅಧಿಕಾರಿಗಳು ಅಥವಾ ಸಭೆಯಲ್ಲಿ ಪಾಲ್ಗೊಳ್ಳುವವರು ಸಾಕಷ್ಟು ಆರೋಗ್ಯಯುತ ಸಾಮಾಜಿಕ ಅಂತರವಿರುವಂತೆ ಸಭೆ ನಡೆಸಬೇಕು ಹಾಗೂ ವಿಡಿಯೋ … Continued

ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಬೇಡಿ: ಸರ್ಕಾರಕ್ಕೆ ಬಿಜೆಪಿ ಶಾಸಕ ರಘುಪತಿ ಭಟ್ ಮನವಿ

ಉಡುಪಿ: ಕೋವಿಡ್ ಪರಿಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಗಳಿಗೆ ಅಡ್ಡಿ ಪಡಿಸಬೇಡಿ. ಧಾರ್ಮಿಕ ಕೇಂದ್ರಗಳೇ ಹೆಚ್ಚಿರುವ ಜಿಲ್ಲೆ ಉಡುಪಿ. ಜನರ ಧಾರ್ಮಿಕ ಭಾವನೆಗಳಿಗೆ ಅಡ್ಡಿ ಮಾಡಬೇಡಿ” ಎಂದು ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಶನಿವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ಕೋಲ, ನೇಮೋತ್ಸವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳಿಗೆ ಮುಹೂರ್ತ ನಿಗದಿಯಾಗಿ ಜನ ತಯಾರಿ … Continued

ಬೆಳಗಾವಿ ಉಪಚುನಾವಣೆ: ಪಿಪಿಇ ಕಿಟ್‌ ಧರಿಸಿಯೇ ಮತ ಚಲಾವಣೆ..!

ಬೆಳಗಾವಿ :ಕೆಎಂಎಫ್ ನಿರ್ದೇಶಕ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಪುತ್ರ ಅಮರನಾಥ ಜಾರಕಿಹೊಳಿ ಕೊರೊನಾ ಸೋಂಕಿನ ಮಧ್ಯೆಯೂ ಮತದಾನ ಮಾಡಿದ್ದಾರೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಶನಿವಾರ ಗೋಕಾಕ ಆಸ್ಪತ್ರೆಯಿಂದ ಅಂಬ್ಯುಲೆನ್ಸ್ನಲ್ಲಿ ಪಿಪಿಇ ಕಿಟ್‌ ಧರಿಸಿ ಬಂದು ಗೋಕಾಕನಲ್ಲಿ ಮತ ಹಾಕಿದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪುತ್ರ ಅಮರನಾಥ್ ಜಾರಕಿಹೊಳಿ ಅವರಿಗೆ ಶನಿವಾರ … Continued

ಕೋವಿಡ್ ನಿಯಮ ಉಲ್ಲಂಘಿಸಿ ಜಾತ್ರೆ ; 18 ಜನರ ವಿರುದ್ಧ ಪ್ರಕರಣ ದಾಖಲು

ಧಾರವಾಡ:  ಕೊರೊನಾ ನಿಯಮ ಉಲ್ಲಂಘಿಸಿ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಕೂಬಿಹಾಳ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ಆಚರಿಸಿದ ಆರೋಪದ  ಮೇರೆಗೆ 18 ಜನರ ಮೇಲೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಶನಿವಾರ (ಏ.17) ಪ್ರಕರಣ ದಾಖಲಾಗಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಏ.3ರಿಂದ  ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಚರಿಸಬಾರದು ಎಂದು  ಜಿಲ್ಲಾಧಿಕಾರಿಗಳು ನಿಷೇದಾಜ್ಞೆ ಜಾರಿ … Continued

ಮಹತ್ವದ ನಿರ್ಧಾರ.. ಕರ್ನಾಟಕದಲ್ಲಿ ಇನ್ಮುಂದೆ ಜಾತ್ರೆಗೆ ಅವಕಾಶವಿಲ್ಲ, ಮದುವೆ-ಸಮಾರಂಭಗಳಿಗೆ ಪಾಸ್‌ ಕಡ್ಡಾಯ..

ಬೆಂಗಳೂರು: ಸೋಂಕು ಹೆಚ್ಚಳದ ಕಾರಣ ಇನ್ಮುಂದೆ ರಾಜ್ಯದಲ್ಲಿ ಯಾವುದೇ ಜಾತ್ರೆಗಳಿಗೆ ಅವಕಾಶವಿಲ್ಲ. ಜಾತ್ರೆಗಳು ನಡೆದರೆ ಆಯಾ ಜಿಲ್ಲಾಧಿಕಾರಿಗಳನ್ನೇ ಹೊಣೆಯಾಗಿಸುತ್ತೇವೆ ಎಂದು ಕಂದಾಯ ಸಚಿವ ಆರ್​ ಅಶೋಕ್​ ಹೇಳಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣ ಸಂಬಂಧ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಶನಿವಾರ ನಡೆದ ಸಭೆಯ ನಂತರ ಮಾತನಾಡಿದ ಅವರು, ಸೋಂಕು ಹೆಚ್ಚಳ ಹಿನ್ನಲೆ ಯಾವುದೇ ಕಾರಣಕ್ಕೂ ಜಾತ್ರೆಗಳಿಗೆ ಅವಕಾಶವಿಲ್ಲ. … Continued