ಬೆಳಗಾವಿ: ಗಾಳಿಪಟ ಹಾರಿಸುವಾಗ ದುರ್ಘಟನೆ, ಕಟ್ಟಡದಿಂದ ಬಿದ್ದು ಬಾಲಕ ಸಾವು

ಬೆಳಗಾವಿ : ಇಲ್ಲಿಯ ಉಜ್ವಲ ನಗರದ ಎರಡನೇ ಕ್ರಾಸ್ ತಿರಂಗಾ ಕಾಲೊನಿಯ ಅರ್ಮಾನ್ ದಫೇದಾರ್ (11) ಎಂಬ ಬಾಲಕ ಗಾಳಿಪಟ ಹಾರಿಸುವಾಗ ಆಯತಪ್ಪಿ ಕಟ್ಟಡದ ಮೇಲಿಂದ ಬಿದ್ದು ಮೃತಪಟ್ಟ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಈತ ನಿನ್ನೆ ಬುಧವಾರ,ಅಶೋಕ ನಗರದ ತಮ್ಮ ಸಂಬಂಧಿಕರ ಮನೆಗೆ ಕುಟುಂಬಸ್ಥರ ಜೊತೆಗೆ ಬಂದಿದ್ದ. ತಿಂಡಿ ತಿಂದು ತನ್ನ ಅಣ್ಣನ ಜೊತೆಗೆ … Continued

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಅಕ್ಟೋಬರ್ 7ರಂದು ಹಾಜರಾಗುವುದಕ್ಕೆ ವಿನಾಯಿತಿ ಕೋರಿದ್ದ ಡಿ.ಕೆ. ಶಿವಕುಮಾರ ಮನವಿ ತಿರಸ್ಕರಿಸಿದ ಇ.ಡಿ.

ಮೈಸೂರು: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅಕ್ಟೋಬರ್ 7 ರಂದು ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ.) ಮುಂದೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಮಾಡಿದ ಮನವಿಯನ್ನು ಜಾರಿ ನಿರ್ದೇಶನಾಲಯ ತಿರಸ್ಕರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರಗುರುವಾರ ಹೇಳಿದ್ದಾರೆ. ತಮ್ಮ ಪಕ್ಷದ ನಾಯಕರ ಜೊತೆ ಮಾತನಾಡಿದ ನಂತರ ಇ.ಡಿ. ಮುಂದೆ ಹಾಜರಾಗಬೇಕೇ ಅಥವಾ ಬೇಡವೇ … Continued

ಉದ್ಯಮಿ, ಶಾಸಕ ಅರವಿಂದ ಬೆಲ್ಲದ ಚಿಕ್ಕಪ್ಪ ಶಿವಣ್ಣ ಬೆಲ್ಲದ ನಿಧನ

ಧಾರವಾಡ: ಉದ್ಯಮಿ ಹಾಗೂ ಶಾಸಕ ಅರವಿಂದ ಬೆಲ್ಲದ ಅವರ ಚಿಕ್ಕಪ್ಪ ಶಿವಣ್ಣ ಬೆಲ್ಲದ (81) ಇಂದು, ಗುರುವಾರ ಬೆಳಗಿನ ಜಾವ ನಿಧನರಾದರು. ಅವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಹಿರಿಯ ಸಹೋದರ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಬುಧವಾರ ಶಿವಣ್ಣ ಬೆಲ್ಲದ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ … Continued

ನಾಗರಹೊಳೆಯಲ್ಲಿ ಸಫಾರಿ ವೇಳೆ ಗಾಯಗೊಂಡ ಮರಿ ಆನೆ ನರಳಾಟ ಕಂಡು ಮರುಗಿದ ರಾಹುಲ್ ಗಾಂಧಿ: ಸಿಎಂ ಬೊಮ್ಮಾಯಿಗೆ ಪತ್ರ

ಬೆಂಗಳೂರು: ಕರ್ನಾಟಕದಲ್ಲಿ ಭಾರತ ಜೋಡೊ ಯಾತ್ರೆ ಪ್ರಾರಂಭವಾಗಿ 5 ದಿನಗಳು ಕಳೆದಿವೆ. ದಸರಾ ಹಬ್ಬದ ಆಯುಧ ಪೂಜೆ ಹಾಗೂ ವಿಜಯದಶಮಿ ನಿಮಿತ್ತ ಯಾತ್ರೆಗೆ ಎರಡು ದಿನಗಳ ಬಿಡುವು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಬMದಿರುವ ತಾಯಿ ಸೋನಿಯಾ ಗಾಂಧಿ ಜೊತೆ ರಾಹುಲ್​ ಗಾಂಧಿ ನಾಗರಹೊಳೆ ಹುಲಿ ಸಂರಕ್ಷಿತ ಅಭಯಾರಣ್ಯ ಸಫಾರಿ ಮಾಡಿದ್ದಾರೆ.ಸಫಾರಿ ವೇಳೆ ಅವರು ಮರಿಯಾನೆಯೊಂದಕ್ಕೆ … Continued

ಯಲ್ಲಾಪುರ ಅರೆಬೈಲ್‌ ಘಟ್ಟದಲ್ಲಿ ಸಿನಿಮೀಯ ರೀತಿಯಲ್ಲಿ ಕಾರು ಅಡ್ಡಗಟ್ಟಿ 2 ಕೋಟಿ ರೂ.ಗಳಿಗೂ ಹೆಚ್ಚು ಹಣ ದರೋಡೆ ..!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಸ್ವಿಫ್ಟ್ ಕಾರು ಸಮೇತ ಕಾರಿನಲ್ಲಿದ್ದ ಕೋಟ್ಯಾಂತರ ರೂ ಹಣವನ್ನು ದರೋಡೆ ಮಾಡಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಡ್ಡಗಟ್ಟಿ 2 ಕೋಟಿ ರೂ.ಗಳಿಗೂ ಹೆಚ್ಚು ಹಣ ದೋಚಿಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ. ಅಕ್ಟೋಬರ್ 1ರ ಶನಿವಾರ ರಾತ್ರಿ ಘಟ್ಟದ ನಿರ್ಜನ ಪ್ರದೇಶದಲ್ಲಿ ಈ ಘಟನೆ … Continued

ರಾಜ್ಯದ 9 ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು: ರಾಜ್ಯದ ಹಲವೆಡೆ ಮುಂದಿನ ಐದು ದಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದ್ದು, ಆಂಧ್ರಪ್ರದೇಶ ಕರಾವಳಿ ಪ್ರದೇಶದ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದ ರಾಜ್ಯದ 9 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹೇಳಲಾಗಿದೆ. ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರ್ಗಿ, ಕೊಪ್ಪಳ, ರಾಯಚೂರು, … Continued

ರಾಜ್ಯ ಸಾರಿಗೆ ಸಂಸ್ಥೆ ಟಿಕೆಟ್‌ನಲ್ಲಿ ಜೈ ಮಹಾರಾಷ್ಟ್ರ ಎಂದು ಮೊಹರು..! ಏನಿದರ ಹಕೀಕತ್‌..?

ಗದಗ: ಜಿಲ್ಲೆಯಲ್ಲಿ ಕೆಎಸ್​​ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಜನರು ಟಿಕೆಟ್​ ನೋಡಿ ಶಾಕ್​ ಆಗಿದ್ದಾರೆ. ಡಂಬಳ ಮಾರ್ಗವಾಗಿ ಸಂಚರಿಸುವ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಬಲ್ಲಿ ಪ್ರಯಾಣಿಕರಿಗೆ ಜೈ ಮಹಾರಾಷ್ಟ್ರ ಎಂಬ ಮೊಹರಿನ ಟಿಕೆಟ್ ಹಂಚಲಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಟಿಕೆಟ್‌ನ ರೋಲ್‌ನಲ್ಲಿ ಮಹಾರಾಷ್ಟ್ರ ರಾಜ್ಯ ಮೊಹರು … Continued

ಪಿಎಸ್‌ಐ ಹಗರಣದಲ್ಲಿ ಮಾಜಿ ಸಿಎಂ ಮಗನ ಕೈವಾಡದ ಆರೋಪ ; ನ್ಯಾಯಾಂಗ ತನಿಖೆಗೆ ದಿನೇಶ​ ಗುಂಡೂರಾವ್ ಆಗ್ರಹ

ಬೆಂಗಳೂರು: ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಹರೆಕೆಯ ಕುರಿ. ಈ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಪುತ್ರನ ಕೈವಾಡವಿದೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ದಿನೇಶ ಗುಂಡೂರಾವ್, ಯತ್ನಾಳ್ ಆರೋಪ ಗಮನಿಸಿದರೆ ಪಿಎಸ್‍ಐ ಹಗರಣದಲ್ಲಿ ಬಂಧಿತರಾಗಿರುವ ಅಮೃತ್ ಪೌಲ್ ಹರಕೆಯ ಕುರಿಯಂತೆ ಭಾಸವಾಗುತ್ತಿದೆ. ಈ … Continued

ಅಡಕೆ ಬೆಳೆಗೆ `ಎಲೆ ಚುಕ್ಕೆ’ ರೋಗ : ರಾಜ್ಯ ಸರ್ಕಾರದಿಂದ ರೈತರಿಗೆ ಉಚಿತ ಔಷಧಿ ವಿತರಣೆ

ಬೆಂಗಳೂರು : ಅಡಕೆ ಬೆಳೆಗೆ ಬಾಧಿಸಿರುವ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಹಾನಿಗೊಳಗಾದ ಅಡಿಕೆ ತೋಟಗಳಿಗೆ ಔಷಧಗಳ ಮೊದಲನೇ ಸಿಂಪರಣೆಗಾಗಿ ರೈತರಿಗೆ ಉಚಿತವಾಗಿ ಸಸ್ಯ ಸಂರಕ್ಷಣಾ ಔಷಧಗಳನ್ನು ವಿತರಿಸಲು ತೀರ್ಮಾನಿಸಿದೆ. ರಾಜ್ಯದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ ಹಾಗೂ ಕೊಡಗು … Continued

ಕಾಂಗ್ರೆಸ್‌ ಮುಖ್ಯ ವಕ್ತಾರ ಸ್ಥಾನಕ್ಕೆ ವಿ.ಆರ್ ಸುದರ್ಶನ ರಾಜೀನಾಮೆ

ಬೆಂಗಳೂರು: ಕೆಪಿಸಿಸಿ ಮುಖ್ಯ ವಕ್ತಾರ ಸ್ಥಾನಕ್ಕೆ ವಿ.ಆರ್ ಸುದರ್ಶನ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ​ ಅವರಿಗೆ ಕಳುಹಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪರವಾಗಿ ಪ್ರಚಾರ ಮಾಡಲು ಸುದರ್ಶನ ತಮ್ಮ ಕೆಪಿಸಿಸಿ ಮುಖ್ಯ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷದ ಪ್ರಮುಖ … Continued