ಕರ್ನಾಟಕದ ಕರಾವಳಿಯಲ್ಲಿ ಇನ್ನೂ ಎರಡು ದಿನ ಭಾರೀ ಮಳೆ: ಕರಾವಳಿಗೆ ಆರೆಂಜ್ ಅಲರ್ಟ್, ಉತ್ತರ ಕರ್ನಾಟಕಕ್ಕೆ ಹಳದಿ​ ಅಲರ್ಟ್​ ಘೋಷಣೆ

ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮಳೆ ಜೋರಾಗಿ ಸುರಿಯುತ್ತಿದ್ದು, ಮಲೆನಾಡಿನಲ್ಲೂ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಇಂದಿನಿಂದ 2 ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಜಿಲ್ಲೆಗಳಲ್ಲಿ ಮಳೆ ಮುಂದುವರೆಯುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಜೋರು ಮಳೆ … Continued

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಮರುನಾಮಕರಣ-ಇನ್ಮುಂದೆ ಹೊಸ ಹೆಸರು: ಸರ್ಕಾರದ ಆದೇಶ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹೆಸರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂದು ಮರುನಾಮಕರಣ ಮಾಡಲಾಗಿದೆ. ಪ್ರಾಥಮಿಕ, ಮತ್ತು ದ್ವಿತೀಯ ಪಿಯು ಶಿಕ್ಷಣ ಇಲಾಖೆ ಒಟ್ಟುಗೂಡಿಸಿ ಮರುನಾಮಕರಣ ಮಾಡಲಾಗಿದೆ. ದೇಶದ ಹಲವು ರಾಜ್ಯಗಳಲ್ಲಿ 1 ನೇ ತರಗತಿಯಿಂದ 12 ನೇ ತರಗತಿ ವರೆಗೂ ಒಂದೇ ಇಲಾಖೆಗೆ ಒಳಪಡುತ್ತಿದೆ. 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿಯೂ … Continued

ಶಿರಸಿ: ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರಗೆ ಶ್ಯಾಮರಾವ್ ದತ್ತಿನಿಧಿ ಪ್ರಶಸ್ತಿ

ಶಿರಸಿ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ನೀಡುವ ಶ್ಯಾಮರಾವ್ ದತ್ತಿನಿಧಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, 2022ನೇ ಸಾಲಿನ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆಯ ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಅವರನ್ನು ಆಯ್ಕೆ ಮಾಡಲಾಗಿದೆ. ಜುಲೈ 1ರಂದು ಶಿರಸಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಆಯ್ಕೆ ಸಮಿತಿಯು … Continued

ಕರ್ನಾಟಕದಲ್ಲಿ ಶುಕ್ರವಾರ 816 ಮಂದಿಗೆ ಕೊರೊನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿದ್ದು, ಸಾವಿನ ಪ್ರಕರಣ ಶೂನ್ಯವಾಗಿದೆ. ಕಳೆದ 24 ಗಂಟೆಯಲ್ಲಿ 816 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೇವೇಳೆ 703 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಇದುವರೆಗೆ 39,19,155 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು 22,527 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. … Continued

ಹಣಕಾಸು ಸಂಸ್ಥೆ ಉದ್ಯೋಗಿಗೆ 35 ಲಕ್ಷ ರೂ. ಪಂಗನಾಮ ಹಾಕಿದ ಸೋಶಿಯಲ್ ಮೀಡಿಯಾ ಗೆಳತಿ…!

ಬೆಂಗಳೂರು: ಸಾಮಾಜಿಕ ಮಾಧ್ಯಮದಲ್ಲಿ ಪರಿಚಿತವಾಗಿದ್ದ ಮಹಿಳೆಯೊಬ್ಬರೊಂದಿಗೆ 45 ವರ್ಷದ ಹಣಕಾಸು ಸಂಸ್ಥೆಯೊಂದರ ಉದ್ಯೋಗಿಯೊಬ್ಬರು ವಂಚನೆಗೊಳಗಾಗಿದ್ದಾರೆ. ನ್ಯಾನ್ಸಿ ವಿಲಿಯಂ ಎಂಬ ಆರೋಪಿ ಗೆಳೆತನವಾದ ನಂತರ ಅನೇಕ ಬಾರಿ ವೀಡಿಯೊ ಕಾಲ್ ಮಾಡಿ, ಭಾರತಕ್ಕೆ ಬಂದು ಜ್ಯೂವೆಲ್ಲರಿ ವ್ಯವಹಾರ ಆರಂಭಿಸುವುದಾಗಿ ಭರವಸೆ ನೀಡಿದ್ದಾಳೆ. ಆಕೆಯನ್ನು ನಂಬಿದ ಹಣಕಾಸು ಕಂಪನಿ ಸಿಬ್ಬಂದಿ 35 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಆಕೆ … Continued

ಮೂಡಲಗಿ : ಹಳ್ಳದಲ್ಲಿ ಪತ್ತೆಯಾದ ಏಳು ಮೃತ ಭ್ರೂಣಗಳು

ಬೆಳಗಾವಿ: ಜಿಲ್ಲೆಯ ಮೂಡಲಗಿ ಪಟ್ಟಣದೊಳಗೆ ಹರಿದ ಹಳ್ಳದಲ್ಲಿ ಶುಕ್ರವಾರ ಮಧ್ಯಾಹ್ನ, ಸತ್ತ ಏಳು ಭ್ರೂಣಗಳು ‍‍ಪತ್ತೆಯಾಗಿವೆ. ಈ ದೃಶ್ಯ ಕಂಡು ಪಟ್ಟಣದ ಜನ ಬೆಚ್ಚಿಬಿದ್ದಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಹೊರವಲಯದಲ್ಲಿರುವ ಹಳ್ಳಕ್ಕೆ ಕಿರಾತಕರು ಏಳು ಭ್ರೂಣಗಳ ಮೃತದೇಹವನ್ನು ಎಸೆದಿದ್ದಾರೆ. ಐದು ಡಬ್ಬದಲ್ಲಿ ಏಳು ಭ್ರೂಣಗಳನ್ನು ಹಾಕಿ ಹಳ್ಳಕ್ಕೆ ಎಸೆದಿರುವುದು ಪತ್ತೆಯಾಗಿದೆ. ಹಳ್ಳಕ್ಕೆ ಬಟ್ಟೆ ತೊಳೆಯಲು … Continued

ಧಾರವಾಡ : ಸಾಹಿತಿ ಗುರುಲಿಂಗ ಕಾಪಸೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ

ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು ನೀಡುವ ಅನುವಾದ ಪುಸ್ತಕ ಪ್ರಶಸ್ತಿಗೆ ಧಾರವಾಡದ ಹಿರಿಯ ಲೇಖಕ ಡಾ.ಗುರುಲಿಂಗ ಕಾಪಸೆ ಅವರು ಆಯ್ಕೆಯಾಗಿದ್ದಾರೆ. ಡಾ.ಗುರುಲಿಂಗ ಕಾಪಸೆ ಅವರು ಮೂಲ ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ವಿ.ಸ. ಖಾಂಡೇಕರ್ ಅವರ ಅನುವಾದಿತ ಕೃತಿ ‘ಒಂದು ಪುಟದ ಕಥೆ’ ಈ ಸಲದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯು 50 … Continued

ಪುರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಹತ್ಯೆ ಪ್ರಕರಣ: ಪರಾರಿಯಾಗಲು ಯತ್ನಿಸಿದ ಆರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸರು

ಕೋಲಾರ: ಮುಳಬಾಗಲು ಪುರಸಭೆ ಸ್ಥಾಯಿ ಮಂಡಳಿ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ (51) ಹತ್ಯೆ ಪ್ರಕರಣದ ಆರೋಪಿ ಬಾಲಾಜಿ ಸಿಂಗ್ ಅಲಿಯಾಸ್ ಗಬ್ಬರ್ ಸಿಂಗ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕೋಲಾರ-ಮುಳಬಾಗಲು ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಮಾತನಾಡಿ, ಬಲ ಮೊಣಕಾಲಿಗೆ ಗುಂಡು ತಗುಲಿರುವ ಬಾಲಾಜಿ ಸಿಂಗ್ ಕೋಲಾರ ಜಿಲ್ಲಾ ಎಸ್‌ಎನ್‌ಆರ್ … Continued

ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ 243ಕ್ಕೆ ಏರಿಕೆ ಮಾಡಿ ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದ್ದ ಬೆನ್ನಲ್ಲೇ ಚುನಾವಣೆ ತಯಾರಿ ಶುರುವಾಗಿದೆ. ಈಗ ರಾಜ್ಯ ಸರ್ಕಾರದಿಂದ ಬಿಬಿಎಂಪಿಯ ವಾರ್ಡ್‌ಗಳನ್ನು ಮರು ವಿಂಗಡನೆಗೊಳಿಸಿ, 243ಕ್ಕೆ ಏರಿಕೆ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಈ ಕುರಿತು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿಶೇಷ ರಾಜ್ಯಪತ್ರ ಹೊರಡಿಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡುಗಳ ಸಂಖ್ಯೆಯನ್ನು 243 … Continued

ಮಂಗಳೂರು: ಮೂವರು ಮಕ್ಕಳನ್ನು ಬಾವಿಗೆ ನೂಕಿ ಸಾಯಿಸಿದ ತಂದೆ, ಪತ್ನಿಯನ್ನೂ ನೂಕಿ ಹತ್ಯೆಗೆ ಯತ್ನ

ಮಂಗಳೂರು: ತಂದೆಯೊಬ್ಬ ಶಾಲೆ ಮುಗಿಸಿ ಮನೆಗೆ ಬಂದ ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಸಾಯಿಸಿದ ನಂತರ ಹಾಗೂ ಪತ್ನಿಯೊಂದಿಗೆ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಗೆ ಯತ್ನಿಸಿದ ಹೃದಯ ವಿದ್ರಾವಕ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಷಿಕೆರೆ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ. ಮೃತ ಮಕ್ಕಳನ್ನು ರಶ್ಮಿತಾ (13), ಉದಯ (11), ದಕ್ಷಿತ್ … Continued