ಕುಶಾಲನಗರ: ಕೆಸರಲ್ಲಿ ಸಿಲುಕಿದ್ದ ಕಾಡಾನೆ ರಕ್ಷಣೆ

ಕುಶಾಲನಗರ: ಕೆಸರಿನಲ್ಲಿ ಸಿಲುಕಿದ್ದ 8 ವರ್ಷದ ಕಾಡಾನೆಯೊಂದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ರಕ್ಷಿಸಿದ್ದಾರೆ. ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಪಂಚಾಯತ ವ್ಯಾಪ್ತಿಯ ದಾಸವಾಳ ಗ್ರಾಮದಲ್ಲಿ ಕೆಸರಿನಲ್ಲಿ ಸಿಲುಕಿ ಹೆಣಗಾಡುತ್ತಿದ್ದ ಹೆಣ್ಣು ಕಾಡಾನೆಯನ್ನು ರಕ್ಷಿಸಲಾಗಿದೆ. ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ನೇತೃತ್ವದಲ್ಲಿ ಕಾಡಾನೆ ರಕ್ಷಣೆ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ದುಬಾರೆ ಸಾಕಾನೆ ಶಿಬಿರದ ಲಕ್ಷ್ಮಣ, ಧನಂಜಯ ಮತ್ತು ಅಯ್ಯಪ್ಪ ಆನೆಗಳ ಸಹಾಯ … Continued

ಕರ್ನಾಟಕದ ಪದವಿ ಪೂರ್ವ ಕಾಲೇಜುಗಳಿಗೆ ರಜೆ ವಿಸ್ತರಣೆ ಮಾಡಿ ಆದೇಶ

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಈಗಾಗಲೇ ಪದವಿ ಕಾಲೇಜುಗಳಿಗೆ ರಜೆ ವಿಸ್ತರಣೆ ಮಾಡಲಾಗಿದೆ. ಈಗ ಪದವಿ ಪೂರ್ವ ಕಾಲೇಜುಗಳಿಗೆ ಫೆಬ್ರವರಿ 15ರ ವರೆಗೆ ರಜೆ ವಿಸ್ತರಣೆ ಮಾಡಲಾಗಿದೆ. ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸರ್ಕಾರದ ಉಪ ಕಾರ್ಯದರ್ಶಿ, ಸುತ್ತೋಲೆ ಹೊರಡಿಸಿದ್ದು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ … Continued

ಬೆಂಗಳೂರು: ಐಪಿಎಲ್ ಹರಾಜಿನ ವೇಳೆ ಕುಸಿದು ಬಿದ್ದ ಹರಾಜುದಾರ ಹ್ಯೂ ಎಡ್ಮೀಡ್ಸ್..!

ಬೆಂಗಳೂರು: ಶನಿವಾರ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನ ಮೊದಲ ಸೆಷನ್ ನಡೆಸುತ್ತಿದ್ದಾಗ ಹಿರಿಯ ಹರಾಜುಗಾರ ಹ್ಯೂ ಎಡ್ಮೀಡ್ಸ್ ಏಕಾಏಕಿ ಕುಸಿದುಬಿದ್ದಿದ್ದಾರೆ. ಆದರೆ ವೈದ್ಯಕೀಯ ತಪಾಸಣೆಯ ನಂತರ ಅವರು ಆರೋಗ್ಯ ಉತ್ತಮವಾಗಿದೆ ಎಂದು ಕಂಡುಬಂದಿದೆ. ಅನುಭವಿ ಕ್ರೀಡಾ ನಿರೂಪಕ ಚಾರು ಶರ್ಮಾ ಅವರಿಗೆ ಈವೆಂಟ್‌ನ ಉಳಿದ ಹರಾಜು ಕರ್ತವ್ಯಗಳನ್ನು ಹಸ್ತಾಂತರಿಸಲಾಯಿತು, ಏಕೆಂದರೆ ಎಡ್ಮೀಡ್ಸ್ ಕಡಿಮೆ ರಕ್ತದೊತ್ತಡದ ಕಾರಣದಿಂದ … Continued

ಚುನಾವಣಾ ಸುಧಾರಣೆ ಬಗ್ಗೆ ಮಾತನಾಡುವಾಗ ಸುದ್ದಿಗೊಷ್ಠಿಯಲ್ಲಿ ಕಣ್ಣೀರಿಟ್ಟ ಸ್ಪೀಕರ್ ಕಾಗೇರಿ

ಬೆಂಗಳೂರು: ಚುನಾವಣಾ ಸುಧಾರಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸುವ ವಿಚಾರವಾಗಿ ಮಾತನಾಡುತ್ತಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗಳ ಮುಂದೆ ಭಾವುಕರಾದ ವಿದ್ಯಮಾನ ನಡೆದಿದೆ. ನಾವು ಸೀಮಿತವಾದ ಚೌಕಟ್ಟಿನಲ್ಲಿ ನಮ್ಮನ್ನು ಕಟ್ಟಿ ಹಾಕಿಕೊಂಡಿದ್ದೇವೆ. ಬ್ರಿಟಿಷ್ ಶಿಕ್ಷಣ ಪದ್ಧತಿಯಿಂದಾಗಿ ಜೀವನದ ಕಲ್ಪನೆಗಳು ಇಲ್ಲದಂತಾಗಿದೆ. ಸಾರ್ಥಕತೆಯ ಭಾವವೇ ಇಲ್ಲದಂತಾಗಿದೆ .ಆ ನಂಬಿಕೆಗಳು ಹಾಗೂ ವಿಶ್ವಾಸ ಬರದೇ ಹೋದಲ್ಲಿ ವ್ಯವಸ್ಥೆ ನಡೆಸಲು … Continued

ಹಿಜಾಬ್ ವಿವಾದ; ಉಡುಪಿ ಶಾಸಕರಿಗೆ ವಿದೇಶಗಳಿಂದ ಜೀವ ಬೆದರಿಕೆ ಕರೆಗಳು

ಉಡುಪಿ: ಸ್ಥಳೀಯ ಕೆಲ ನಂಬರ್‌ಗಳಿಂದ ಹಾಗೂ ವಿದೇಶಗಳಿಂದ ನಿರಂತರವಾಗಿ ಇಂಟರ್ನೆಟ್ ಕಾಲ್ ಮಾಡಿ ಕೊಲೆ ಬೆದರಿಕೆ ಹಾಕಲಾಗುತ್ತಿದೆ.ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಈ ಕುರಿತು ಗೃಹಸಚಿವರಿಗೆ ಮೌಖಿಕವಾಗಿ ಮಾಹಿತಿ ನೀಡಿರುವ ರಘುಪತಿ ಭಟ್, ನಿನ್ನನ್ನು ನಾವು ನೋಡಿಕೊಳ್ಳುತ್ತೇವೆ. ನಿನ್ನನ್ನು ಹೇಗೆ ನಿಯಂತ್ರಿಸಬೇಕು ಗೊತ್ತಿದೆ ಎಂದು ವಿದೇಶ ಸ್ಥಳೀಯ ಕೆಲ ನಂಬರ್ ಗಳಿಂದ ನಿರಂತರ ಫೋನ್ … Continued

ಬೆಂಗಳೂರಿನಲ್ಲೂ ಹಿಜಾಬ್ ವಿವಾದ: ಖಾಸಗಿ ಶಾಲೆಯಲ್ಲಿ ಬಿಗುವಿನ ವಾತಾವರಣ

ಬೆಂಗಳೂರು: ಹಿಜಾಬ್ ವಿವಾದ ಈಗ ರಾಜ್ಯ ರಾಜಧಾನಿ ಬೆಂಗಳೂರಿಗೂ ಕಾಲಿಟ್ಟಿದೆ. ಹೈಕೋರ್ಟ್ ಮಧ್ಯಂತರ ಆದೇಶದ ಮಧ್ಯೆಯೂ ಚಂದ್ರಾಲೇಔಟ್ ನ ಸರಕಾರಿ ಶಾಲೆಗೆ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಹಾಗೂ ಹಿಜಾಬ್ ಧರಿಸಿ ಬಂದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರಿನ ಚಂದ್ರಾಲೇಔಟ್ ನಲ್ಲಿರುವಂತ ವಿದ್ಯಾಸಾಗರ್ ಇಂಗ್ಲೀಷ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಇಂದು ಹಿಜಾಬ್ ಧರಿಸಿ ಶಾಲೆಗೆ ಬಂದಿದ್ದಾರೆ. ಮುಖ್ಯ … Continued

ರಿಸೆಪ್ಶನ್ ವೇಳೆಯೇ ಕುಸಿದು ಬಿದ್ದ ಮದುಮಗಳು: ಬ್ರೈನ್ ಡೆಡ್ ಎಂದ ವೈದ್ಯರು, ಅಂಗಾಂಗ ದಾನ ಮಾಡಿದ ಕುಟುಂಬಸ್ಥರು

ಕೋಲಾರ: ಮದುವೆಯಾಗಬೇಕಿದ್ದ ಯುವತಿಯೊಬ್ಬಳ ಜೀವನದಲ್ಲಿ ವಿಧಿ ಆಟವಾಡಿದೆ. ತನ್ನ ಮದುವೆಯ ಆರತಕ್ಷತೆಯಲ್ಲೇ ಮದುಮಗಳು ಕುಸಿದು ಬಿದ್ದು ತೀವ್ರ ಅಸ್ವಸ್ಥಳಾಗಿದ್ದಾಳೆ. ತಕ್ಷಣವೇ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವೈದ್ಯರು ಮದುಮಗಳ ಬ್ರೈನ್ ಡೆಡ್ (brain dead) ಆಗಿದೆ ಎಂದು ಘೋಷಣೆ ಮಾಡಿದ್ದಾರೆ. ಈ ಹೃದಯವಿದ್ರಾವಕ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ. ಚೈತ್ರಾ (26) ಬ್ರೈನ್ ಡೆಡ್ … Continued

ಬಾಗಲಕೋಟೆ ಜಿಲ್ಲೆ ಸರ್ಕಾರಿ ಶಾಲೆಯಲ್ಲಿ ನಮಾಜ್ ಮಾಡಿದ ವಿದ್ಯಾರ್ಥಿಗಳು…!?

ಬಾಗಲಕೋಟೆ: ರಾಜ್ಯದಲ್ಲಿ ಹಿಜಾಬ್ ವಿವಾದದ ಮಧ್ಯೆಯೇ ರಾಜ್ಯದ ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡುತ್ತಿರುವ ಘಟನೆಗಳು ವರದಿಯಾಗಿವೆ. ದಕ್ಷಿಣ ಕನ್ನಡದ ಕಡಬ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ನಮಾಜ್‌ ಮಾಡಿದ ಬೆನ್ನಲ್ಲೇ ಈಗ ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡಿದ ವಿಡಿಯೋ ಸದ್ಯ ಸೋಶಿಯಲ್ … Continued

ಸೇತುವೆ ಮೇಲಿನಿಂದ ಕೆಳಗುರುಳಿ ಸರ್ವೀಸ್ ರಸ್ತೆಗೆ ಬಿದ್ದ ಬಸ್: ಇಬ್ಬರು ಸಾವು, ಹಲವರಿಗೆ ಗಾಯ

ಹಾವೇರಿ: ಖಾಸಗಿ ಬಸ್ಸೊಂದು ಪಲ್ಟಿಯಾಗಿ ಸೇತುವೆ ಮೇಲಿಂದ ಸರ್ವೀಸ್ ರಸ್ತೆಗೆ ಬಿದ್ದಿದ್ದರಿಂದ ಇಬ್ಬರು ಮೃತಪಟ್ಟ ಘಟನೆ ತಾಲೂಕಿನ ದೇವಗಿರಿ ಸಮೀಪದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಡೆದಿದೆ. ಬೆಂಗಳೂರಿನಿಂದ ಗೋಕಾಕ್​​ ಗೆ ಸಂಚರಿಸುತ್ತಿದ್ದ ​ ಬಸ್ ಪಲ್ಟಿಯಾಗಿದ್ದು, ಚಾಲಕ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಅಲ್ಲದೆ ಹದಿನೈದು ಜನರಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಬಳಿ … Continued

ಜಾರಕಿಹೊಳಿ ಸಿಡಿ. ಪ್ರಕರಣ: ಎಸ್‌ಐಟಿ ರಚನೆ ಪ್ರಶ್ನಿಸಿ ಸಂತ್ರಸ್ತೆಯಿಂದ ಸುಪ್ರೀಂಕೋರ್ಟಿಗೆ ಅರ್ಜಿ

ನವದೆಹಲಿ : ಸಿ.ಡಿ. ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಕ್ಲೀನ್‌ ಚಿಟ್‌ ನೀಡಿದ್ದ ವಿಶೇಷ ತನಿಖಾ ತಂಡದ (ಎಸ್‌ಐಟಿ) ರಚನೆಯನ್ನು ಪ್ರಶ್ನಿಸಿ ಅತ್ಯಾಚಾರ ಆರೋಪ ಮಾಡಿದ್ದ ಯುವತಿ ಈಗ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಮೇಲ್ಮನವಿಯ ವಿಚಾರಣೆಯು ಫೆಬ್ರುವರಿ 14ರಂದು ವಿಚಾರಣೆಗೆ ಬರಲಿದೆ. ‘ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆ ಇದೆ’ ಎಂದು ತಿಳಿಸಿದ್ದ ಎಸ್‌ಐಟಿಯು … Continued