ಜೊಯಿಡಾ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ, ಜಾನಪದ ಭಂಡಾರ ಮಹಾದೇವ ವೇಳಿಪ ನಿಧನ

ಕಾರವಾರ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ, ಜನಪದ ಕಲಾವಿದ ಮಹಾದೇವ ವೇಳಿಪ (90) ನಿಧನರಾಗಿದ್ದಾರೆ. ಇವರು ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ನಾಗೋಡಾ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕಾರ್ಟೋಳಿ ಗ್ರಾಮದವರು. ಅವರ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಜನಪದ ಕಲೆ ಹಾಗೂ ಪರಿಸರ ರಕ್ಷಣೆಗೆ ಜಾನಪದ ರಾಜ್ಯ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ … Continued

ಕೆಪಿಎಸ್‌ಸಿ 2011ರ ಅಭ್ಯರ್ಥಿಗಳ ಸಕ್ರಮಕ್ಕೆ ಕಾನೂನು ತರಲು ಸಚಿವ ಸಂಪುಟ ನಿರ್ಧಾರ

ಬೆಂಗಳೂರು: 2011 ರ ಕೆಪಿಎಸ್‌ಸಿ 362 ಪ್ರೊಬೆಷನರಿ ಅಭ್ಯರ್ಥಿಗಳ ಆಯ್ಕೆಯನ್ನು ಸಕ್ರಮಗೊಳಿಸಲು ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರ ಅಸಿಂಧುಗೊಂಡಿರುವ ಅಭ್ಯರ್ಥಿಗಳ ನೇಮಕ ಮಾಡಿಕೊಳ್ಳಲು ಕರ್ನಾಟಕ ನಾಗರೀಕ ಸೇವೆಗಳು (2011ರ ಗೆಜೆಟ್‌ ಪ್ರೊಬೆಷನರಿ ನೇಮಕಾತಿ … Continued

ಭಗವಾ ಧ್ವಜ ಭವಿಷ್ಯದಲ್ಲಿ ರಾಷ್ಟ್ರಧ್ವಜ ಆಗಬಹುದು: ಸಚಿವ ಈಶ್ವರಪ್ಪ

ಬೆಂಗಳೂರು: ‘ಭಗವಾಧ್ವಜ’ (ಕೇಸರಿ ಧ್ವಜ) ಭವಿಷ್ಯದಲ್ಲಿ ರಾಷ್ಟ್ರಧ್ವಜ ಆಗಲೂ ಬಹುದು ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಬುಧವಾರ ಹೇಳಿದ್ದಾರೆ. ಆದರೆ, ತ್ರಿವರ್ಣ ಧ್ವಜ ಈಗ ರಾಷ್ಟ್ರಧ್ವಜವಾಗಿದ್ದು, ಅದನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದ್ದಾರೆ. ನೂರಾರು ವರ್ಷಗಳ ಹಿಂದೆ ಶ್ರೀರಾಮಚಂದ್ರ ಮತ್ತು ಮಾರುತಿಯ ರಥಗಳ … Continued

ಕಂಪನಿ ವಿಲೀನ, ವಿಭಜನೆ ಮುದ್ರಾಂಕ ಶುಲ್ಕಕ್ಕೆ 25 ಕೋಟಿ ರೂ.ಗಳ ಮಿತಿ ನಿಗದಿ ತಿದ್ದುಪಡಿ ವಿಧೇಯಕಕ್ಕೆ ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು: ಕಂಪನಿಗಳ ವಿಲೀನ ಇಲ್ಲವೇ ವಿಭಜನೆಯಾದಾಗ ವಿಧಿಸುವ ಮುದ್ರಾಂಕ ಶುಲ್ಕ ಮೊತ್ತಕ್ಕೆ 25 ಕೋಟಿ ರೂ. ಮಿತಿ ನಿಗದಿ ಪಡಿಸುವ ಕರ್ನಾಟಕ ಮುದ್ರಾಂಕ ತಿದ್ದುಪಡಿ ವಿಧೇಯಕಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ. ಕಂಪನಿಗಳು ವಿಲೀನವಾದರೆ ಇಲ್ಲವೇ ವಿಭಜನೆಯಾದರೆ ದರ ಮೌಲ್ಯ (ವ್ಯಾಲ್ಯೂವೇಷನ್‌) ಇಲ್ಲವೇ ಷೇರ್‌ ಹೋಲ್ಡಿಂಗ್‌ ಮೌಲ್ಯದ ಆಧಾರದ ಮೇಲೆ ಮುದ್ರಾಂಕ … Continued

ಹಿಜಾಬ್ ನಿಷೇಧ: ಕರ್ನಾಟಕ ಹೈಕೋರ್ಟ್‌ನ ಪೂರ್ಣ ಪೀಠದಿಂದ ನಾಳೆ ಮಧ್ಯಾಹ್ನ ಅರ್ಜಿಗಳ ವಿಚಾರಣೆ

ಬೆಂಗಳೂರು: ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ನೇತೃತ್ವದ ಕರ್ನಾಟಕ ಹೈಕೋರ್ಟ್‌ನ ಪೂರ್ಣ ಪೀಠ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆಎಂ ಖಾಜಿ ಅವರನ್ನೊಳಗೊಂಡ ಪೀಠವು ಕರ್ನಾಟಕ ಕೆಲವು ಕಾಲೇಜುಗಳು ಹಿಜಾಬ್ ಧರಿಸುವುದನ್ನು ನಿಷೇಧಿಸುವುದರ ವಿರುದ್ಧ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಲಿದೆ. ಪ್ರಕರಣ ನಾಳೆ, ಗುರುವಾರ ಮಧ್ಯಾಹ್ನ 2:30ಕ್ಕೆ ವಿಚಾರಣೆಗೆ … Continued

ಕರ್ನಾಟಕದಲ್ಲಿ ಹೊಸದಾಗಿ 5,339 ಕೊರೊನಾ ಸೋಂಕು ದಾಖಲು, 48 ಸಾವು

ಬೆಂಗಳೂರು: ಕರ್ನಾಟಕದಲ್ಲಿ ಇಂದು, ಬುಧವಾರ ಹೊಸದಾಗಿ 5,339 ಸೋಂಕು ದಾಖಲಾಗಿದೆ. ಇದೇವೇಳೆ ರಾಜ್ಯದಲ್ಲಿ 48 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 16,749 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 60,956 ರಷ್ಟಿದೆ. ಪಾಸಿಟಿವಿಟಿ ರೇಟ್ 4.14%ಕ್ಕೆ ಇಳಿದಿದೆ. ಕೋವಿಡ್-19 ಮರಣ ಪ್ರಮಾಣ ಶೇ.0.89% ರಷ್ಟಿದೆ. ಬೆಂಗಳೂರಿನಲ್ಲಿ ಒಟ್ಟು 2,161 … Continued

ಹಿಜಾಬ್‌ ಅರ್ಜಿ ಹೈಕೋರ್ಟ್‌ ವಿಸ್ತೃತ ಪೀಠಕ್ಕೆ ಉಲ್ಲೇಖ: ಶಾಲಾ ಸಮವಸ್ತ್ರ ಸುತ್ತೋಲೆ ಬಗ್ಗೆ ಶಿಕ್ಷಣ ಸಚಿವರ ಸ್ಪಷ್ಟನೆ

ಬೆಂಗಳೂರು : ವಿದ್ಯಾರ್ಥಿಗಳಿಗೆ ಮಧ್ಯಂತರ  ಪರಿಹಾರ ಒದಗಿಸಲು ಹೈಕೋರ್ಟ್‌ ಯಾವುದೇ ಆದೇಶ ಹೊರಡಿಸದ ಕಾರಣ, ಸರ್ಕಾರದ ಅಧಿಸೂಚನೆ (ಡ್ರೆಸ್ ಕೋಡ್ʼಗೆ ಸಂಬಂಧಿಸಿದಂತೆ) ಜಾರಿಯಲ್ಲಿರುತ್ತದೆ. ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಸಮವಸ್ತ್ರ ಕಡ್ಡಾಯ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೈಕೋರ್ಟಿನಿಂದ ತೀರ್ಪು ಪ್ರಕಟವಾದ ತಕ್ಷಣ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ … Continued

ದಾಂಡೇಲಿ: ಮೊಸಳೆ ಹೊತ್ತೊಯ್ದಿದ್ದ ಯುವಕ ಶವವಾಗಿ ಪತ್ತೆ

ಕಾರವಾರ: ಜಿಲ್ಲೆಯ ದಾಂಡೇಲಿಯಲ್ಲಿ ಮನೆಯ ಹತ್ತಿರದ ಕಾಳಿನದಿ ದಂಡೆ ಬಳಿ ಕೈಕಾಲು ತೊಳೆಯುತ್ತಿದ್ದಾಗ ಮೊಸಳೆ ಎಳೆದುಕೊಂಡು ಹೋಗಿದ್ದ ವ್ಯಕ್ತಿಯ ಶವಪತ್ತೆಯಾಗಿದೆ. 23 ವರ್ಷದ ಅರ್ಷದ್ ಖಾನ್ ಎಂಬಾತ ಫ್ಯಾಬ್ರಿಕೇಶನ್ ಕೆಲಸ ಮಾಡುತ್ತಿದ್ದು, ದಾಂಡೇಲಿಯ ಪಟೇಲ್ ನಗರದ ನಿವಾಸಿಯಾಗಿದ್ದ ಈತ ಸೋಮವಾರದಂದು ಮನೆಯ ಹತ್ತಿರದಲ್ಲಿರುವ ಕಾಳಿ ನದಿಯ ಸಮೀಪ ಕೈ ಕಾಲು ತೊಳೆಯಲು ಹೋಗಿದ್ದಾಗ ಫೆ. 7ರಂದು … Continued

ಹಿಜಾಬ್-ಕೇಸರಿ ಶಾಲು ಶಾಲಾ-ಕಾಲೇಜುಗಳಿಗೆ ತರುವುದು ಬೇಡ, ಅದಕ್ಕಿಂತ ಶಿಕ್ಷಣ ದೊಡ್ಡದು ಎಂದ ಮಾಜಿ ಸಚಿವ ವಿಶ್ವನಾಥ

ಮೈಸೂರು: ಹಿಜಾಬ್-ಕೇಸರಿ ಶಾಲು ಧರಿಸುವ ವಿಚಾರದಲ್ಲಿ ಕಲ್ಲು ತೂರಿ ಗಲಾಟೆ ಮಾಡಿದವರನ್ನು ಪತ್ತೆ ಹಚ್ಚಿ ಬಂಧಿಸುವುದನ್ನು ಬಿಟ್ಟು ಶಾಲಾ-ಕಾಲೇಜುಗಳಿಗೆ ರಜೆ ಕೊಟ್ಟಿದ್ದು ತಪ್ಪು ಎಂದು ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಡಳಿತ ಮತ್ತು ವಿರೋಧ ಪಕ್ಷಗಳಿಂದ ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. … Continued

ಹಿಜಾಬ್‌ ವಿವಾದ: ಬೆಂಗಳೂರಲ್ಲಿ ಫೆಬ್ರವರಿ 22ರ ವರಗೆ ಶಾಲಾ -ಕಾಲೇಜು ಸುತ್ತ ನಿಷೇಧಾಜ್ಞೆ ಜಾರಿ

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ವಿವಾದ ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮುಂದಿನ ಎರಡು ವಾರಗಳ ವರೆಗೆ ನಗರದಲ್ಲಿ ಶಾಲಾ ಕಾಲೇಜು ಸುತ್ತ ಸೆಕ್ಷನ್ 144 ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಗರದ ಶಾಲಾ-ಕಾಲೇಜುಗಳ ಸುತ್ತಮುತ್ತ ಯಾವುದೇ ರೀತಿಯ ಗುಂಪು ಅಥವಾ ಆಂದೋಲನ ನಿರ್ಬಂಧಿಸಲು ಫೆ.22 ರ ತನಕ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಕಮಲ್ … Continued