ಮೆಕ್ಕೆಜೋಳದ ಲಾರಿ ಪಲ್ಟಿ- ಮೂವರು ಸಾವು, ನಾಲ್ವರಿಗೆ ಗಾಯ

ಹಾವೇರಿ: ಮೆಕ್ಕೆಜೋಳ ತುಂಬಿದ್ದ ಲಾರಿ ಪಲ್ಟಿಯಾಗಿ ಮೂವರು ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಹಾವೇರಿ ತಾಲೂಕಿನ ಕೊರಡೂರು ಗ್ರಾಮದ ಬಳಿ ಸಂಭವಿಸಿದೆ. ಮೃತರು ಹಾವೇರಿ ತಾಲೂಕಿನ ಇಚ್ಚಂಗಿ ಗ್ರಾಮದವರು ಎಂದು ಗುರುತಿಸಲಾಗಿದೆ. ಮೆಕ್ಕೆಜೋಳದ ಚೀಲವನ್ನ ಹಂದಿಗನೂರ ಗ್ರಾಮದಿಂದ ಲೋಡ್ ಮಾಡಿಕೊಂಡು ಹೊಸರಿತ್ತಿ ಗ್ರಾಮದ ಕಡೆಗೆ ಬರುತ್ತಿದ್ದ ವೇಳೆ ಲಾರಿ ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ. … Continued

ವಿವಿಗಳಲ್ಲಿ ಸುಗಮ ಪರೀಕ್ಷಾ ವ್ಯವಸ್ಥೆಗೆ ತಂತ್ರಾಂಶ ಅಳವಡಿಕೆ: ಶೈಕ್ಷಣಿಕ ಪ್ರಮಾಣಪತ್ರಗಳ ಪೂರೈಕೆಗೆ `ಇ-ಸಹಮತಿ’ಗೆ ಹಸಿರು ನಿಶಾನೆ

ಬೆಂಗಳೂರು: ಉನ್ನತ ಶಿಕ್ಷಣ ವಲಯದಲ್ಲಿ ಪರೀಕ್ಷಾಂಗವನ್ನು ಸದೃಢಗೊಳಿಸುವ ಪರೀಕ್ಷಾ ತಂತ್ರಾಂಶ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಮಾಣಪತ್ರ ಇತ್ಯಾದಿಗಳನ್ನು ಸುಗಮವಾಗಿ ಒದಗಿಸುವ ನಿಟ್ಟಿನಲ್ಲಿ` ಇ-ಸಹಮತಿ’ ಉಪಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸೋಮವಾರ ಚಾಲನೆ ನೀಡಿದರು. ವಿಧಾನಸೌಧದಲ್ಲಿ ಇದರ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಕಲಿ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳ ದಂಧೆಗೆ ಕಡಿವಾಣ ಬೀಳಲಿದ್ದು, … Continued

ಬಿಜೆಪಿ ನಾಯಕರು ನಮ್ಮ ಜೊತೆ ಸಂಪರ್ಕದಲ್ಲಿರುವುದನ್ನು ನಾವು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ: ಡಿಕೆಶಿ

ಬೆಂಗಳೂರು: ಕೆಲ ಸಚಿವರು ಸೇರಿದಂತೆ ಬಿಜೆಪಿ ಮುಖಂಡರು ಡಿ.ಕೆ.ಶಿವಕುಮಾರ ಅವರ ಸಂಪರ್ಕದಲ್ಲಿದ್ದಾರೆ ಎಂಬ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು, ನಮ್ಮ ಜತೆ ಮಾತನಾಡಿರುವವರ ಬಗ್ಗೆ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಬಿಜೆಪಿ ಹಾಗೂ ಇತರೆ ಪಕ್ಷಗಳ ನಾಯಕರು ನಮ್ಮ ಜೊತೆ ಸಂಪರ್ಕದಲ್ಲಿರುವ ವಿಚಾರವನ್ನು ನಾವು ಬಹಿರಂಗವಾಗಿ … Continued

ಎಲ್ಲ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಿಸಿ ಆದೇಶ: ಸಂಪೂರ್ಣ ವಿವರ ಇಲ್ಲಿದೆ..

ಬೆಂಗಳೂರು: ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 28 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ವರೆಗೆ ಈ ಕೆಳಕಂಡಂತ ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ … Continued

ಹೈಕಮಾಂಡ್‌ ಜೊತೆ ಚರ್ಚೆಯಾದ ನಂತರವೇ ಸಚಿವ ಸಂಪುಟ ವಿಸ್ತರಣೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಬಿಜೆಪಿ ಹೈಕಮಾಂಡ್‌ ಸೂಚಿಸಿದಾಗ ರಾಜ್ಯದಲ್ಲಿ ಸಂಪುಟ ವಿಸ್ತರಣೆ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದು, ಸದ್ಯವೇ ಸಂಪುಟ ವಿಸ್ತರಣೆಯಿಲ್ಲ ಎಂಬ ಸುಳಿವು ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ವಿಚಾರದಲ್ಲಿಯೂ ಗೊಂದಲ ಇಲ್ಲವೇ ಇಲ್ಲ. ಸಂಪುಟದಲ್ಲಿ ನಾಲ್ಕು ಸ್ಥಾನ ಖಾಲಿ ಇರುವಾಗ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆಗಳು ಸಹಜ. ಆದರೆ ಪಕ್ಷದ … Continued

ಲಸಿಕೆ ಬೇಡವೆಂದು ಮನೆ ಏರಿ ಕುಳಿತಿದ್ದ ಯುವಕ.. ಮನವೊಲಿಸಿದ ತಹಶೀಲ್ದಾರ..!

ಚಿತ್ರದುರ್ಗ: ಕೊರೊನಾ ಲಸಿಕೆ ಬೇಡವೆಂದು ಮನೆ ಏರಿ ಕುಳಿತಿದ್ದ ಯುವಕನೊಬ್ಬನ ಮನವೊಲಿಸಿ ಕೊರೊನಾ ಲಸಿಕೆ ನೀಡುವಲ್ಲಿ ಚಳ್ಳಕೆರೆ ತಹಶೀಲ್ದಾರ್ ಯಶಸ್ವಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್. ದೇವರಹಳ್ಳಿ ಗ್ರಾಮದಲ್ಲಿ ಇಂದು, ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ … Continued

ನೀವೂ ಗೆಲ್ಲಬಹುದು ಕೃತಿ ಬಿಡುಗಡೆ- ಮಕ್ಕಳಲ್ಲಿ ಚೈತನ್ಯ ಬಿತ್ತುವ ಕೃತಿ : ಪ್ರಕಾಶ ಕಡಮೆ

ಹುಬ್ಬಳ್ಳಿ :ಹದಿಹರೆಯದವರ ಕನಸು ಮತ್ತು ಕನವರಿಕೆಗೆ ಇಂಬು ಕೊಡುತ್ತಲೇ ಅವರನ್ನು ಕೀಳರಿಮೆಯಿಂದ ಹೊರ ತರುವ ಪ್ರಯತ್ನದಲ್ಲಿ ನೀವೂ ಗೆಲ್ಲಬಹುದು ಕೃತಿಯ ಮೂಲಕ ಲೇಖಕರು ಮಾಡಿದ್ದಾರೆ ಎಂದು ಹಿರಿಯ ಸಾಹಿತಿ ಪ್ರಕಾಶ ಕಡಮೆ ಹೇಳಿದರು. ಅವರು ಭಾನುವಾರ ಪುಸ್ತಕ ಬಳಗದ ವತಿಯಿಂದ ಏರ್ಪಡಿಸಿದ್ದ ಲೇಖಕಿ- ಶಿಕ್ಷಕಿ ಕವಿತಾ ಹೆಗಡೆ ಅಭಯಂ ಅವರ ನೀವೂ ಗೆಲ್ಲಬಹುದು ಎಂಬ ಕೃತಿಯನ್ನು … Continued

ಮದುವೆ ಆಗುವಂತೆ ಒತ್ತಾಯಿಸಿ ನಾದಿನಿಯನ್ನೇ ಕಿಡ್ನಾಪ್ ಮಾಡಿದ ಅಕ್ಕನ ಗಂಡ…!

ಬೆಂಗಳೂರು: ಬಾವನಿಂದಲೇ ನಾದಿನಿ ಅಪಹರಣವಾದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದ ವರದಿಯಾಗಿದೆ. ದೇವರಾಜ್ ಸೇರಿ ಮೂವರನ್ನು ಬಂಧಿಸಲಾಗಿದೆ. ಬೆಂಗಳೂರಿನ ಕೊಡುಗೆಹಳ್ಳಿಯಲ್ಲಿ ಈ ಘಟನೆ ನಡೆದಿದೆ. ದೇವರಾಜ್ ಎಂಬಾತ ಅಪಹರಿಸಿದ ಯುವತಿಯ ಅಕ್ಕನನ್ನು ಮದುವೆಯಾಗಿದ್ದ. ನಂತರ ತಂಗಿಯನ್ನು ಮದುವೆ ಆಗುವಂತೆ ಒತ್ತಾಯಿಸಿದ್ದ. ಆದರೆ ನಾದಿನಿ ಬಾವನ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಕುಪಿತಗೊಂಡ ದೇವರಾಜ್ ಯುವತಿಯನ್ನು ಅಪಹರಿಸಿ … Continued

ಹಾವೇರಿ: ಹಿರಿಯ ಪತ್ರಕರ್ತ ಜಿ.ಎಂ.ಕುಲಕರ್ಣಿ ನಿಧನ

ಹಾವೇರಿ: ಕವಿ ಹಾಗೂ ಪತ್ರಕರ್ತ, ನಗರದ ಜಿ.ಎಂ.ಕುಲಕರ್ಣಿ(58) ತೀವ್ರ ಅನಾರೋಗ್ಯದಿಂದ ಭಾನುವಾರ ನಿಧನವಾಗಿದ್ದಾರೆ. ಕುಲಕರ್ಣಿ ಅವರಿಗೆ ಹೃದಯದಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ತಮ್ಮ ಸಿಂಚನ ಪ್ರಕಾಶನದ ಮೂಲಕ ಅನೇಕ ಲೇಖಕರ ಪುಸ್ತಕ ಪ್ರಕಟಿಸಿದ್ದಾರೆ. ಅಲ್ಲದೆ, ಅವರು ‘ಕತ್ತಲಲ್ಲಿ … Continued

ಶಾಲೆಯಲ್ಲಿ ನಮಾಜ್ ಮಾಡಲು ಅವಕಾಶ: ತನಿಖೆಗೆ ಕೋಲಾರ ಜಿಲ್ಲಾಧಿಕಾರಿ ಆದೇಶ

ಕೋಲಾರ: ಮುಸ್ಲಿಂ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ನಮಾಜ್ ಮಾಡಲು ಅವಕಾಶ ನೀಡಿದ ಶಾಲೆ ವಿರುದ್ಧ ಕೋಲಾರ ಜಿಲ್ಲಾಧಿಕಾರಿ ಉಮೇಶಕುಮಾರ ತನಿಖೆಗೆ ಆದೇಶಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೂ ಆಗಿರುವ ಉಮೇಶಕುಮಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಅವರಿಂದ ವಿವರವಾದ ವರದಿ ಕೇಳಿದ್ದಾರೆ ಎನ್ನಲಾಗುತ್ತಿದೆ. ಮುಳಬಾಗಿಲು ನಗರದ ಸೋಮೇಶ್ವರಪಾಳ್ಯದ ಶ್ರೀಬಳೆಚಂಗಪ್ಪ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ … Continued