ಕರ್ನಾಟಕದಲ್ಲಿ ಭಾನುವಾರ ಹೊಸದಾಗಿ 50,210 ಜನರಿಗೆ ಕೊರೊನಾ ಸೋಂಕು…!

ಬೆಂಗಳೂರು: ಕರ್ನಾಟಕದಲ್ಲಿ ಇಂದು, ಭಾನುವಾರ ಹೊಸ ಪ್ರಕರಣ ಅರ್ಧ ಲಕ್ಷ ದಾಟಿದೆ..! ಕಳೆದ 24 ಗಂಟೆಯಲ್ಲಿ ಹೊಸದಾಗಿ 50,210 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಕುರಿತು ಟ್ವಿಟ್ಟರಿನಲ್ಲಿ ಮಾಹಿತಿ ಹಂಚಿಕಿಕೊಂಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಅವರು, ಕಳೆದ 24 ಗಂಟೆಯಲ್ಲಿ ಸೋಂಕಿನಿಂದಾಗಿ ಬೆಂಗಳೂರಿನಲ್ಲಿ 8 ಮಂದಿ ಸೇರಿದಂತೆ ಕರ್ನಾಟಕದಲ್ಲಿ 19 … Continued

ಬೆಂಗಳೂರು: ಈ ಬೆಕ್ಕು ಹುಡುಕಿಕೊಟ್ಟವರಿಗೆ ಸಿಗಲಿದೆ 35,000 ರೂ ಬಹುಮಾ‌ನ…!

ಬೆಂಗಳೂರು: ತಮ್ಮ ಸಾಕು ಪ್ರಾಣಿಗಳು ಸತ್ತಾಗ, ಅವುಗಳು ಕಳೆದುಹೋದರೆ ಮಾಲೀಕರು ಪಡುವ ಪಾಡು ಅಷ್ಟಿಷ್ಟಲ್ಲ. ಆದರೆ ನಗರದಲ್ಲಿ ಬೆಕ್ಕೊಂದನ್ನು ಕಳೆದುಕೊಂಡ ಮಾಲೀಕರೊಬ್ಬರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿ, ಬೆಕ್ಕು ಹುಡುಕಿಕೊಡುವಂತೆ ದೂರು ನೀಡಿದ್ದಾರೆ. ಜೊತೆಗೆ ಹುಡುಕಿಕೊಟ್ಟವರಿಗೆ 35 ಸಾವಿರ ರೂ.ಗಳ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಬೆಂಗಳೂರಿನ ಜಯನಗರದ ರಾಜಣ್ಣ ಲೇಔಟ್ ನಿವಾಸಿ ಮಿಸ್ಬಾ ಶರೀಫ್ ಎಂಬವರು, … Continued

ಮರಕ್ಕೆ ಗುದ್ದಿದ ಬಸ್: ರೈತ-ಭಿಕ್ಷುಕ ಸಾವು

ಕೊರಟಗೆರೆ: ಚಾಲಕನ ಅಜಾಗರೂಕತೆಯಿಂದ ಸಾರಿಗೆ ಬಸ್ ಮರಕ್ಕೆ ಗುದ್ದಿದ ಪರಿಣಾಮ ರೈತ ಹಾಗೂ ಭಿಕ್ಷುಕ ಮೃತಪಟ್ಟು, 10 ಜನ ಗಾಯಗೊಂಡಿರುವ ಘಟನೆ ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಪಂ ವ್ಯಾಪ್ತಿಯ ಕಾಶಾಪುರ ಗ್ರಾಮದ ಮುಖ್ಯರಸ್ತೆಯಲ್ಲಿ ಸಂಭವಿಸಿದೆ. ಭಿಕ್ಷುಕ ಸ್ಥಳದಲ್ಲೇ ಮೃತಪಟ್ಟರೆ ರೈತ ಗೋಪಾಲಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು-ಮಧುಗಿರಿ-ಶಿರಾ ಮಾರ್ಗವಾಗಿ ತಿರುಪತಿಗೆ ತೆರಳುತ್ತಿದ್ದ ಸರ್ಕಾರಿ … Continued

ನಾಡೋಜ ಚೆನ್ನವೀರ ಕಣವಿ ಆರೋಗ್ಯದಲ್ಲಿ ಚೇತರಿಕೆ

ಧಾರವಾಡ: ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ಕವಿ ನಾಡೋಜ ಚೆನ್ನವೀರ ಕಣವಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಧಾರವಾಡದ ಎಸ್ ಡಿಎಂ ಅಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಚೆನ್ನವೀರ ಕಣವಿ ಅವರ ಆರೋಗ್ಯದ ಬಗ್ಗೆ ಎಸ್‌ಡಿಎಂ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಚೆನ್ನವೀರ ಕಣವಿ ಅವರ ರಕ್ತದೊತ್ತಡ ಸಹಜ ಸ್ಥಿತಿಗೆ ಬಂದಿದೆ. … Continued

ಮೊದಲ ಡೋಸ್ 100 % ಸಾಧನೆ ಮಾಡಿದ ದೇಶದ ಮೊದಲ ರಾಜ್ಯ ಕರ್ನಾಟಕ

ಬೆಂಗಳೂರು : ಕೋವಿಡ್ ವಿರುದ್ಧ ಲಸಿಕಾಕರಣದಲ್ಲಿ ಕರ್ನಾಟಕ ರಾಜ್ಯ ಮೋದಲ ಡೋಸ್ ನಲ್ಲಿ 100 % ಸಾಧನೆ ಮಾಡಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿದ್ದಾರೆ. 100 % ಮೊದಲ ಡೋಸ್ ವ್ಯಾಪ್ತಿ ಗುರಿ ಸಾಧಿಸಲು ನಮಗೆ 1 ವರ್ಷ ಮತ್ತು 7 ದಿನಗಳನ್ನು ತೆಗೆದುಕೊಂಡಿತು!, ಕರ್ನಾಟಕ ಈ ಸಾಧನೆ ಮಾಡಿದ ದೇಶದ ಮೊದಲ … Continued

ಪ್ಲಾಸ್ಟಿಕ್ ಅಂಗಡಿಯಲ್ಲಿ ಬೆಂಕಿ ಅವಘಡ: ಇಬ್ಬರು ಸಜೀವ ದಹನ

ವಿಜಯಪುರ: ಪ್ಲಾಸ್ಟಿಕ್ ಅಂಗಡಿಯೊಂದರಲ್ಲಿ ಆಕಸ್ಮಿಕ ಅಗ್ನಿ ಅವಘಡದಲ್ಲಿ ಇಬ್ಬರು ಸಜೀವ ದಹನಗೊಂಡ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ಬಸವನಬಾಗೇವಾಡಿ ಕ್ರಾಸ್ ಬಳಿ ನಡೆದಿದೆ. ತಡರಾತ್ರಿ ಈ ಘಟನೆ ನಡೆದಿದ್ದು, ಅಶೋಕ ದೇಸ್ನೂಯಿ(25), ಲಿಂಬಾರಾಮ ದೇಸ್ನೂಯಿ(35) ಸಜೀವ ದಹನಗೊಂಡವರು ಎಂದು ಗುರುತಿಸಲಾಗಿದೆ. ರಾತ್ರಿ ಅಂಗಡಿಯಲ್ಲೇ ಮಲಗಿದ್ದ ಇವರಿಬ್ಬರು ಸಜೀವ ದಹನವಾಗಿದ್ದಾರೆ. ಈ … Continued

ರಾಜ್ಯದಲ್ಲಿ ಶನಿವಾರ ಕೊರೊನಾ ಸೋಂಕು ಇಳಿಮುಖ

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ಆರ್ಭಟ ಇಂದು, ಶನಿವಾರ ಸ್ವಲ್ಪ ಕಡಿಮೆಯಾಗಿದ್ದು ಕಳೆದ 24 ಗಂಟೆಯಲ್ಲಿ 42,470 ಹೊಸ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 34,67,472ಕ್ಕೆ ಏರಿಕೆಯಾಗಿದೆ. ಇದೇ ಸಮಯದಲ್ಲಿ ರಾಜ್ಯದಲ್ಲಿ 26 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಒಟ್ಟಾರೆ ಸಾವಿನ ಸಂಖ್ಯೆ 38,563ಕ್ಕೆ ಏರಿಕೆಯಾಗಿದೆ.ರಾಜ್ಯದಲ್ಲಿ ಇಂದು 35,140 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. … Continued

ಧಾರವಾಡ ನಗರ -ಗ್ರಾಮೀಣ, ಹುಬ್ಬಳ್ಳಿ ನಗರ- ಗ್ರಾಮೀಣ ತಾಲೂಕಿನಾದ್ಯಂತ ಜನವರಿ 24 ರಿಂದ 1ರಿಂದ 8ನೇ ತರಗತಿ ಪುನಾರಂಭಕ್ಕೆ ಜಿಲ್ಲಾಧಿಕಾರಿ ಆದೇಶ

ಧಾರವಾಡ: ಜನವರಿ 24 ರಿಂದ ಧಾರವಾಡ ನಗರ ಮತ್ತು ಗ್ರಾಮೀಣ ಹಾಗೂ ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಾಲೂಕಿನಾದ್ಯಂತದ ಶಾಲೆಗಳ 1 ರಿಂದ 8 ನೇ ತರಗತಿಗಳನ್ನು ಪುನರ್ ಆರಂಭಿಸಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಮಾಡಿದ್ದಾರೆ. ಹಾಗೂ ಈ ಮೊದಲಿನ ಶಾಲೆ ಬಂದ್‌ ಮಾಡುವ ಆದೇಶ ಹಿಂಪಡೆದಿದ್ದಾರೆ. ಸರ್ಕಾರದ ಪರಿಷಕೃತ ಆದೇಶದ ಹಿನ್ನೆಲೆಯಲ್ಲಿ ಸಾಂಕ್ರಾಮಿಕ … Continued

ಹಾಲಿನ ದರ, ವಿದ್ಯುತ್‌ ದರ ಏರಿಕೆ ಸದ್ಯಕ್ಕಿಲ್ಲ; ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್, ನೀರು ಮತ್ತು ಹಾಲಿನ ದರ ಏರಿಕೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನ ಆರ್‌ಟಿ ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುತ್, ನೀರು, ಹಾಲಿನ ದರ ಏರಿಕೆ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು … Continued

ಉಡುಪಿಯ ಕಾಂಗ್ರೆಸ್ ನಾಯಕಿಗೆ ಚಾಕು ಇರಿತ

ಉಡುಪಿ: ಕಾಪು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೀನಾ ಡಿಸೋಜಾ ಅವರಿಗೆ ವ್ಯಕ್ತಿಯೋರ್ವ ಚೂರಿಯಿಂದ ಇರಿದು ಹಲ್ಲೆ ಮಾಡಿದ್ದಾನೆ. ಕಳೆದ ರಾತ್ರಿ ಮನೆ ಪಕ್ಕದಲ್ಲಿ ರೀನಾ ಡಿಸೋಜಾ ತನ್ನ ಗೆಳತಿ ಜೊತೆ ಮಾತನಾಡುತ್ತಿದ್ದಾಗ, ಕುಡಿತದ ಚಟ ಹೊಂದಿದ್ದ ನೆರೆಮನೆಯ ಸುಮಾರು 45 ವರ್ಷದ ವ್ಯಕ್ತಿ ಕ್ಷುಲ್ಲಕ ಕಾರಣಕ್ಕೆ ಜಗಳಕ್ಕಿಳಿದಿದ್ದಾನೆ. ಮಾತಿನ ಚಕಮಕಿ ನಡೆಯುವ ಸಂದರ್ಭದಲ್ಲಿ … Continued