ಪುರುಷರ ಮಿದುಳಿನ ಗಣಿತದ ಮಿಥ್ಯೆ..!?: ಗಣಿತದಲ್ಲಿ ಹುಡುಗಿಯರು ಹುಡುಗರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲರೇ? ಯುನೆಸ್ಕೋ ಅಧ್ಯಯನ ಹೇಳಿದ್ದೇನು..?

ನವದೆಹಲಿ: ಗಣಿತ ಮತ್ತು ವಿಜ್ಞಾನದಲ್ಲಿ ಹುಡುಗರು ಜನ್ಮತಃ ಉತ್ತಮರೇ? ಈ ಪ್ರಶ್ನೆಯು ದಶಕಗಳಿಂದ ಬಿಸಿಬಿಸಿಯಾದ ಚರ್ಚೆಗೆ ಕಾರಣವಾಗಿದೆ. ಕೆಲವು ಸಂಶೋಧಕರ ಪ್ರಕಾರ, ಮೆದುಳಿನ ಚಟುವಟಿಕೆ ಮತ್ತು ಹಾರ್ಮೋನುಗಳ ವ್ಯತ್ಯಾಸಗಳು ಪುರುಷರಿಗೆ ಗಣಿತದ ಅಂಚನ್ನು ಮೊದಲಿನಿಂದಲೂ ನೀಡುತ್ತವೆ ಮತ್ತು ಹುಡುಗಿಯರು ಓದುವಿಕೆ ಮತ್ತು ಬರವಣಿಗೆಯ ಕಡೆಗೆ ಹೆಚ್ಚು ನಿರ್ದೇಶಿಸಲ್ಪಡುತ್ತಾರೆ. ಆದರೆ ಗಣಿತ ಮಾಡುವಾಗ ಮಕ್ಕಳ ಮೆದುಳಿನ ಮೇಲೆ … Continued

ಮೇ 5, 6 ರಂದು ಹಾಜರಾಗುವಂತೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ಗೆ ಸಮನ್ಸ್ ನೀಡಿದ ಭೀಮಾ-ಕೋರೆಗಾಂವ್ ತನಿಖಾ ಸಮಿತಿ

ಮುಂಬೈ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಯುದ್ಧ ಸ್ಮಾರಕದಲ್ಲಿ 2018ರ ಜನವರಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಿಕೊಳ್ಳಲು ಮೇ 5 ಮತ್ತು 6ರಂದು ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್‌ಗೆ ಹಾಜರಾಗುವಂತೆ ಕೋರೆಗಾಂವ್-ಭೀಮಾ ವಿಚಾರಣಾ ಆಯೋಗ ಸೂಚಿಸಿದೆ. ಸಮಿತಿಯು ಈ ಹಿಂದೆ 2020 ರಲ್ಲಿ ಪವಾರ್‌ಗೆ ಸಮನ್ಸ್ ನೀಡಿತ್ತು, ಆದರೆ ಕೊರೊನಾ ವೈರಸ್-ಪ್ರೇರಿತ … Continued

ಭಾರತದಲ್ಲಿ 46 ದಿನಗಳ ನಂತರ 3,000 ದಾಟಿದ ದೈನಂದಿನ ಕೊರೊನಾ ಪ್ರಕರಣಗಳ ಸಂಖ್ಯೆ…!

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತವು ಗುರುವಾರ 3,303 ಹೊಸ ಕೋವಿಡ್‌-19 ಪ್ರಕರಣಗಳನ್ನು ವರದಿ ಮಾಡಿದೆ. 46 ದಿನಗಳ ನಂತರ ದೈನಂದಿನ ಪ್ರಕರಣಗಳ ಸಂಖ್ಯೆ 3,000 ದಾಟಿದೆ. ಅದು ಒಟ್ಟು ಸೋಂಕಿತರ ಸಂಖ್ಯೆಯನ್ನು 4,30,68,799 ಕ್ಕೆ ಒಯ್ದಿದೆ, ಸಕ್ರಿಯ ಪ್ರಕರಣಗಳು 16,980 ಕ್ಕೆ ಏರಿದೆ. ಕೋವಿಡ್‌-19 ರ ಸಾವಿನ ಸಂಖ್ಯೆ 5,23,693 ಕ್ಕೆ … Continued

91 ವರ್ಷದ ಪದ್ಮ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಕಲಾವಿದರನ್ನು ಸರ್ಕಾರಿ ಭವನದಿಂದ ಹೊರಹಾಕಿದ ಸರ್ಕಾರ…

ನವದೆಹಲಿ: 91 ವರ್ಷ ವಯಸ್ಸಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಒಡಿಸ್ಸಿ ನರ್ತಕ ಗುರು ಮಾಯಾಧರ್ ರಾವುತ್‌ ಅವರಿಂದ ಪ್ರಾರಂಭಿಸಿ, 2014 ರಲ್ಲಿ ರದ್ದುಗೊಂಡ ಸರ್ಕಾರಿ ವಸತಿಗಳಿಂದ ಪ್ರಖ್ಯಾತ ಕಲಾವಿದರನ್ನು ಹೊರಹಾಕುವ ಪ್ರಕ್ರಿಯೆಗಳನ್ನು ಕೇಂದ್ರವು ಮಂಗಳವಾರ ಪ್ರಾರಂಭಿಸಿತು. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು 2020 ರಲ್ಲಿ ಮನೆಗಳನ್ನು ಖಾಲಿ ಮಾಡುವಂತೆ ಕಲಾವಿದರಿಗೆ ನೋಟಿಸ್ ನೀಡಿದ … Continued

ಉತ್ತರ ಪ್ರದೇಶದಲ್ಲಿ 6 ಸಾವಿರ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ತೆರವು, 30 ಸಾವಿರ ಧ್ವನಿವರ್ಧಕಗಳ ಶಬ್ದಗಳಿಗೆ ಮಿತಿ

ಲಕ್ನೋ: ಉತ್ತರ ಪ್ರದೇಶದಲ್ಲಿ ಸುಮಾರು ಆರು ಸಾವಿರ ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ. ಇತರ 30 ಸಾವಿರ ಧ್ವನಿವರ್ಧಕಗಳ ಶಬ್ದಗಳನ್ನು ಮಿತಿಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ. ಉತ್ತರ ಪ್ರದೇಶ ರಾಜ್ಯಾದ್ಯಂತ ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸುವ ಮತ್ತು ಶಬ್ದಗಳಲ್ಲಿ ಮಿತಿಗೊಳಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಕಾನೂನು … Continued

ಕೋವಿಡ್‌ ಲಸಿಕೆ ಎರಡನೇ ಡೋಸ್-ಮುನ್ನೆಚ್ಚರಿಕೆ ಡೋಸ್ ನಡುವಿನ ಅಂತರ ಆರು ತಿಂಗಳಿಗೆ ಇಳಿಕೆ ಸಾಧ್ಯತೆ

ನವದೆಹಲಿ: ಕೋವಿಡ್-19 ಲಸಿಕೆಯ ಎರಡನೇ ಡೋಸ್ ಮತ್ತು ಮುನ್ನೆಚ್ಚರಿಕೆಯ ಡೋಸ್ ನಡುವಿನ ಅಂತರವನ್ನು ಸರ್ಕಾರವು ಪ್ರಸ್ತುತ ಒಂಬತ್ತು ತಿಂಗಳಿಂದ ಆರು ತಿಂಗಳವರೆಗೆ ಕಡಿಮೆ ಮಾಡುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ. ಏಪ್ರಿಲ್ 29 ರಂದು ಸಭೆ ನಡೆಸಲಿರುವ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ) ಈ ಅಂತರವನ್ನು ಕಡಿಮೆ ಮಾಡುವ ಕುರಿತು ಶಿಫಾರಸು … Continued

ಕೇಂದ್ರೀಯ ವಿದ್ಯಾಲಯಗಳ ಪ್ರವೇಶಕ್ಕೆ ಇದ್ದ ಸಂಸದರು, ಜಿಲ್ಲಾಧಿಕಾರಿಗಳ ಕೋಟಾ ರದ್ದುಗೊಳಿಸಿದ ಕೇಂದ್ರ

ನವದೆಹಲಿ: ಕೇಂದ್ರೀಯ ವಿದ್ಯಾಲಯ ಸಂಘಟನೆ (ಕೆವಿಎಸ್) ಹೊರಡಿಸಿದ ಇತ್ತೀಚಿನ ಸುತ್ತೋಲೆ ಪ್ರಕಾರ, ಶಿಕ್ಷಣ ಸಚಿವಾಲಯವು ಕೇಂದ್ರೀಯ ವಿದ್ಯಾಲಯಗಳಿಗೆ ಪ್ರವೇಶಕ್ಕಾಗಿ ಸಂಸದ (ಸಂಸತ್‌ ಸದಸ್ಯರು) ಮತ್ತು ಜಿಲ್ಲಾಧಿಕಾರಿ (ಡಿಎಂ) ಸೇರಿದಂತೆ ಹಲವಾರು ವಿಭಾಗಗಳಲ್ಲಿನ ಕೋಟಾಗಳನ್ನು ರದ್ದುಗೊಳಿಸಿದೆ. ಈ ಹಿಂದೆ, ಕೇಂದ್ರೀಯ ವಿದ್ಯಾಲಯ ಸಂಘಟನೆ (ಕೆವಿಎಸ್) ದೇಶಾದ್ಯಂತ ಕೇಂದ್ರೀಯ ವಿದ್ಯಾಲಯದ ಶಾಲೆಗಳಿಗೆ ಪ್ರವೇಶಕ್ಕಾಗಿ ಸಂಸದರ ಕೋಟಾ ಸೇರಿದಂತೆ ಎಲ್ಲಾ … Continued

ಮಲಯಾಳಂ ನಟ ವಿಜಯ್ ಬಾಬು ಮೇಲೆ ಅತ್ಯಾಚಾರ ಪ್ರಕರಣ ದಾಖಲು, ಇದು ಸುಳ್ಳು ಆರೋಪ ಎಂದ ನಟ

ಮಲಯಾಳಂ ನಟ ವಿಜಯ್ ಬಾಬು ಅವರ ಮೇಲೆ ಅತ್ಯಾಚಾರದ ಪ್ರಕರಣ ದಾಖಲಾಗಿದ್ದು, ಮಹಿಳೆಯೊಬ್ಬರು ನಟ, ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ವಿಜಯ್ ಬಾಬು ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ತನ್ನ ಮೇಲೆ ಸುಳ್ಳು ಆರೋಪ ಮಾಡಿದ “ಅವಳನ್ನು ಸುಲಭವಾಗಿ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಫೇಸ್‌ಬುಕ್ ಲೈವ್‌ನಲ್ಲಿ ದೂರುದಾರರ ಹೆಸರನ್ನು ಬಹಿರಂಗಪಡಿಸಿದ್ದಕ್ಕಾಗಿ ವಿಜಯ … Continued

ಕೇಂದ್ರದ ಅಬಕಾರಿ ಸುಂಕ ಕಡಿತ ಮಾಡಿದ್ರೂ ಕೆಲವು ರಾಜ್ಯಗಳು ಪೆಟ್ರೋಲ್, ಡೀಸೆಲ್ ಮೇಲಿನ ಸ್ಥಳೀಯ ತೆರಿಗೆ ಕಡಿಮೆ ಮಾಡಿಲ್ಲ: ಪ್ರಧಾನಿ ಮೋದಿ

ನವದೆಹಲಿ: ಕಳೆದ ನವೆಂಬರ್‌ನಲ್ಲಿ ಕೇಂದ್ರವು ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದರೂ ಕೆಲವು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಕಡಿಮೆ ಮಾಡದೆ “ಅನ್ಯಾಯ” ಮಾಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದ ಮೋದಿ, ಜಾಗತಿಕ ಪರಿಸ್ಥಿತಿಯಿಂದಾಗಿ ಜನರು ಎದುರಿಸುತ್ತಿರುವ ಸವಾಲುಗಳ ಪ್ರತ್ಯೇಕ ವಿಷಯವನ್ನು ಈ … Continued

ನವಜಾತ ಮೊಮ್ಮಗಳನ್ನು ಮನೆಗೆ ಕರೆತರಲು ಹೆಲಿಕಾಪ್ಟರ್ ಬಾಡಿಗೆಗೆ ತಂದ ರೈತ..!

ಪುಣೆ: ಮೊಮ್ಮಗಳ ಜನನದಿಂದ ಹರ್ಷಗೊಂಡ ಮಹಾರಾಷ್ಟ್ರದ ಪುಣೆ ಜಿಲ್ಲೆಯ ರೈತನೊಬ್ಬ ಮೊಮ್ಮಗಳನ್ನು ಮಂಗಳವಾರ ಮನೆಗೆ ಕರೆತರಲು ಹೆಲಿಕಾಪ್ಟರ್‌ ಅನ್ನು ಬಾಡಿಗೆಗೆ ತಂದಿದ್ದಾರೆ…! ಪುಣೆಯ ಹೊರವಲಯದಲ್ಲಿರುವ ಬಾಲೆವಾಡಿ ಪ್ರದೇಶದ ನಿವಾಸಿ ಅಜಿತ್ ಪಾಂಡುರಂಗ ಬಲ್ವಾಡ್ಕರ್ ಸುದ್ದಿಗಾರರೊಂದಿಗೆ ಮಾತನಾಡಿ, ಕುಟುಂಬದ ಹೊಸ ಸದಸ್ಯಳಾದ ಕ್ರುಶಿಕಾ ಅವಳಿಗೆ ಭವ್ಯವಾದ ಸ್ವಾಗತವನ್ನು ನೀಡಲು ಅವಳನ್ನು ಹೆಲಿಕಾಪ್ಟರಿನಲ್ಲಿ ಕರೆತರಲು ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ. … Continued