ಸುರ್ಜೆವಾಲಾ, ಇತರ ಹಿರಿಯ ನಾಯಕರ ಟ್ವಿಟರ್ ಹ್ಯಾಂಡಲ್‌ ಲಾಕ್‌ :ಕೇಂದ್ರದ ವಿರುದ್ಧ ‘ಕೈ’ ನಾಯಕರ ಕಿಡಿ

ನವದೆಹಲಿ: ಟ್ವಿಟರ್ ತನ್ನ ಪಕ್ಷದ ಅಧಿಕೃತ ಹ್ಯಾಂಡಲ್ ಮತ್ತು ಸುಮಾರು ಅರ್ಧ ಡಜನ್ ನಾಯಕರ ಖಾತೆಗಳನ್ನು ಲಾಕ್ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.ರಾಹುಲ್ ಗಾಂಧಿಯವರ ಟ್ವಿಟ್ಟರ್ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ ಬೆನ್ನಲ್ಲೇ ಈ ಆರೋಪ ಕೇಳಿಬಂದಿದೆ. ಕಾಂಗ್ರೆಸ್‌ ಪಕ್ಷದ ಮಾಧ್ಯಮ ಮುಖ್ಯಸ್ಥ ರಣದೀಪ್ ಸುರ್ಜೆವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಅಜಯ್ ಮಾಕನ್, … Continued

ಭಾರತದ ಹೊಸ ಕೊರೊನಾ ಸೋಂಕಿನಲ್ಲಿ ಕೇರಳದ ಪ್ರಮಾಣವೇ ಶೇ 57.05 ರಷ್ಟು…!

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 41,195 ಹೊಸ ಪ್ರಕರಣಗಳು ಮತ್ತು 490 ಸಾವುಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಗುರುವಾರ ಬೆಳಿಗ್ಗೆ 8 ಗಂಟೆಯವರೆಗೆ, ಭಾರತದ ಸಕ್ರಿಯ ಪ್ರಕರಣಗಳು 3,86,351 ಆಗಿತ್ತು. ಕಳೆದ 24 ಗಂಟೆಗಳಲ್ಲಿ, ಸಕ್ರಿಯ ಪ್ರಕರಣಗಳು 2,157 ರಷ್ಟು ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಗರಿಷ್ಠ ಪ್ರಕರಣಗಳನ್ನು … Continued

ತಾಂತ್ರಿಕ ದೋಷದಿಂದ ಇಸ್ರೋ ಜಿಎಸ್​ಎಲ್​ವಿ-ಎಫ್ ​10 ಮಿಷನ್ ಅಪೂರ್ಣ

ಬೆಂಗಳೂರು: ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ಕೇಂದ್ರದಿಂದ ಇಂದು(ಗುರುವಾರ) ಬೆಳಗ್ಗೆ ಉಡಾವಣೆಗೊಂಡ ಜಿಎಸ್​ಎಲ್​ವಿ- ಎಫ್ 10 ರಾಕೆಟ್ ತಾಂತ್ರಿಕ ಕಾರಣದಿಂದ ತನ್ನೊಳಗಿದ್ದ ಉಪಗ್ರಹವನ್ನು ನಿಗದಿತ ಜಾಗಕ್ಕೆ ಸೇರಿಸಲು ವಿಫಲವಾಗಿದೆ. ಇಒಎಸ್‌-3 ಎಂಬ ಭೂ ವೀಕ್ಷಣಾ ಸೆಟಲೈಟನ್ನು ಹೊತ್ತೊಯ್ದಿದ್ದ ರಾಕೆಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇಒಎಸ್‌-3 ಸೆಟಲೈಟ್ ಅನ್ನು ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ನಲ್ಲಿ ಇರಿಸಲು 51.70 … Continued

ಸ್ವದೇಶಿ ನಿರ್ಮಿತ ಡಿಆರ್‌ಡಿಒ ಕ್ಷಿಪಣಿ ಪರೀಕ್ಷೆ ಯಶಸ್ವಿ

ಬಾಲಸೋರ್ : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಸ್ವದೇಶಿ ತಂತ್ರಜ್ಞಾನ ನಿರ್ಮಿತ ಅತ್ಯಾಧುನಿ ಕ್ಷಿಪಣಿ ಉಡಾವಣೆ ಪರೀಕ್ಷೆ ಯಶಸ್ವಿಯಾಗಿದೆ. ಇದರೊಂದಿಗೆ ದೇಶದ ರಕ್ಷಣಾ ಇಲಾಖೆಗೆ ಮತ್ತೊಂದು ಪ್ರಬಲ ಅಸ್ತ್ರ ಸೇರ್ಪಡೆಯಾಗಿದೆ. ಒಡಿಶಾದ ಬಾಲಸೋರ್ ಜಿಲ್ಲೆಯ ಕರಾವಳಿ ಪ್ರದೇಶದ ಅಬ್ದುಲ್ ಕಲಾಂ ದ್ವೀಪದಲ್ಲಿ ಬುಧವಾರ ಬೆಳಗ್ಗೆ ೧೦.೫೫ರಲ್ಲಿ ಈ ಪ್ರಯೋಗ ನಡೆಸಲಾಗಿದ್ದು, ದೇಶೀಯ ಎಂಜಿನ್‌ನೊಂದಿಗೆ … Continued

ದರೋಡೆ ಪ್ರಕರಣದಲ್ಲಿ ರಾಜಸ್ಥಾನದ ಮೂವರು ಪೊಲೀಸ್ ಪೇದೆಗಳ ಅಮಾನತು

ಜೈಪುರ: ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್‌ ಪೇದೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮೂವರಲ್ಲಿ ಒಬ್ಬರು ಸಂತ್ರಸ್ತನನ್ನು ಸಮಸ್ಯೆ ಇತ್ಯರ್ಥಪಡಿಸುವಂತೆ ಒತ್ತಾಯಿಸಿದ್ದರು. ದೂರುದಾರನನ್ನು ದರೋಡೆ ಮಾಡಿದ ಕಾನ್ ಸ್ಟೇಬಲ್ ಮತ್ತು ಇನ್ನಿಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಲಾಗಿದೆ. ಅಲ್ವಾರ್ ಎಸ್ಪಿ ತೇಜಸ್ವಿನಿ ಗೌತಮ್ ಅವರು ಒಬ್ಬ ರಾಹುಲ್ ಮೇವ್ … Continued

ಜುಲೈನಲ್ಲಿ ಕೇರಳ ಸರ್ಕಾರ ಕೇಳಿದ್ದಕ್ಕಿಂತ ಶೇ.60ರಷ್ಟು ಹೆಚ್ಚುವರಿ ಕೊವಿಡ್-19 ಲಸಿಕೆ ಪೂರೈಕೆ: ಹೈಕೋರ್ಟಿಗೆ ಕೇಂದ್ರ ಸರ್ಕಾರ ಮಾಹಿತಿ

ತಿರುವನಂತಪುರಂ: ಭಾರತದಲ್ಲಿ ಅತಿಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ಕೇರಳ ರಾಜ್ಯವೊಂದರಲ್ಲೇ ವರದಿಯಾಗುತ್ತಿರುವುದರಿಂದ ಸಾಂಕ್ರಾಮಿಕ ರೋಗ ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಲಸಿಕೆ ಪೂರೈಕೆ ವೇಗ ಹೆಚ್ಚಿಸಲಾಗುತ್ತಿದೆ. ರಾಜ್ಯ ಸರ್ಕಾರ ಕೇಳಿದ್ದಕ್ಕಿಂತ ಶೇ.60ರಷ್ಟು ಹೆಚ್ಚುವರಿ ಲಸಿಕೆಯನ್ನು ಕೇಂದ್ರ ಸರ್ಕಾರದಿಂದ ಪೂರೈಸಲಾಗಿದೆ ಎಂದು ಕೇಂದ್ರ ಸರ್ಕಾರ ಕೇರಳ ಹೈಕೋರ್ಟಿಗೆ ತಿಳಿಸಿದೆ. ದರ ಜಾಗತೀಕರಣ ಮತ್ತು ರಾಷ್ಟ್ರೀಯ ಕೊವಿಡ್-19 ಲಸಿಕೆ … Continued

ಹಿಮಾಚಲ ಪ್ರದೇಶ: ಕಿನ್ನೌರ್ನಲ್ಲಿ ಭೂಕುಸಿತದಿಂದ 10 ಜನರು ಸಾವು, 14 ಜನರ ರಕ್ಷಣೆ, 50ಕ್ಕೂ ಹೆಚ್ಚು ಸಿಲುಕಿರುವ ಶಂಕೆ

ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭಾರೀ ಭೂಕುಸಿತದಿಂದ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಅವಶೇಷಗಳಲ್ಲಿ ಸಿಲುಕಿರುವ ಶಂಕೆ ಇದೆ. ಈವರೆಗೆ 14 ಜನರನ್ನು ರಕ್ಷಿಸಲಾಗಿದೆ. “ಕಿನ್ನೌರ್ ಜಿಲ್ಲೆಯ ನುಗುಲಸರಿ ಪ್ರದೇಶದಲ್ಲಿ ಭೂಕುಸಿತದಿಂದಾಗಿ 50-60 ಜನರು ಅವಶೇಷಗಳಲ್ಲಿ ಸಿಲುಕಿಕೊಂಡಿರಬಹುದು” ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ … Continued

ಒಬಿಸಿ ಮಸೂದೆ-2021 ರಾಜ್ಯಸಭೆಯಲ್ಲೂ ಅಂಗೀಕಾರ

ನವದೆಹಲಿ: ಮಂಗಳವಾರ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ಸಂವಿಧಾನದ 127ನೇ ತಿದ್ದುಪಡಿ ಮಸೂದೆ ಇಂದು (ಬುಧವಾರ) ರಾಜ್ಯಸಭೆಯಲ್ಲಿಯೂ ಅಂಗೀಕಾರವಾಗಿದೆ. ರಾಜ್ಯಸಭಾ ಸದನದಲ್ಲಿ 187 ಮತಗಳ ಬೆಂಬಲದೊಂದಿಗೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಎರಡೂ ಸದನಗಳಲ್ಲಿ ಒಬಿಸಿ ಸೇರ್ಪಡೆಗೆ ಜಾತಿಗಳನ್ನು ಸೇರಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡುವ ಮಸೂದೆ ಅಂಗೀಕಾರವಾದಂತಾಗಿದೆ. ಭಾರತದಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸುವ ಅಧಿಕಾರವನ್ನು … Continued

ಸಾಮಾನ್ಯ ವಿಮಾ ಮಸೂದೆಗೆ ರಾಜ್ಯಸಭೆ ಅನುಮೋದನೆ

ನವದೆಹಲಿ: ಸಾಮಾನ್ಯ ವಿಮಾ ತಿದ್ದುಪಡಿ ಮಸೂದೆಗೆ (General Insurance Bill) ರಾಜ್ಯಸಭೆ ಬುಧವಾರ ಅಂಗೀಕಾರ ನೀಡಿತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಸೂದೆ ಮಂಡಿಸಿದರು. ಆದರೆ ಪ್ರತಿಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದರು. ಗದ್ದಲದ ಮಧ್ಯೆಯೇ ಹಣಕಾಸು ಸಚಿವರು ಮೂಸದೆಯ ಮಂಡನೆ ಪರವಾಗಿ ಮಾತನಾಡಲು ಆರಂಭಿಸಿದರು.ಆಗ ಸದನದ ಬಾವಿಗಿಳಿದ ಪ್ರತಿಪಕ್ಷಗಳು ಸದಸ್ಯರು ಏರುದನಿಯಲ್ಲಿ ವಿರೋಧ ವ್ಯಕ್ತಪಡಿಸಿದರು. … Continued

ಕಾಶ್ಮೀರದಲ್ಲಿ ಪಂಡಿತರಿಗೆ ಸೇರಿದ್ದ 9 ಆಸ್ತಿಗಳು ಮಾಲೀಕರಿಗೆ ಹಸ್ತಾಂತರ

ಶ್ರೀನಗರ: ಭಯೋತ್ಪಾದಕರ ದಾಳಿಯಿಂದ ಕಾಶ್ಮೀರದಿಂದ ಬೇರೆಡೆಗೆ ವಲಸೆ ಹೋಗಿದ್ದ ಕಾಶ್ಮೀರ ಪಂಡಿತರಿಗೆ ಸೇರಿದ್ದ 9 ಆಸ್ತಿಗಳನ್ನು ಮೂಲ ಮಾಲೀಕರಿಗೆ ಹಸ್ತಾಂತರ ಮಾಡಲಾಗಿದೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ. ಭಯೋತ್ಪಾದಕ ಚಟುವಟಿಕೆಗಳಿಂದ ಕಾಶ್ಮೀರದಿಂದ ವಲಸೆ ಹೋಗಿದ್ದ ಹಿಂದೂಗಳನ್ನು ಮರಳಿ ಕರೆತರಲು ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ … Continued