ಅಕ್ರಮ ಹಣ ವರ್ಗಾವಣೆ ಪ್ರಕರಣ : ರಿಯಲ್ ಎಸ್ಟೇಟ್ ಸಂಸ್ಥೆ ಸೂಪರ್‌ಟೆಕ್‌ ಅಧ್ಯಕ್ಷನ ಬಂಧನ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಲ್ ಎಸ್ಟೇಟ್ ಕಂಪನಿ ಸೂಪರ್‌ಟೆಕ್‌ನ ಅಧ್ಯಕ್ಷ ಆರ್‌.ಕೆ. ಅರೋರಾ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ ಎಂದು ವರದಿಯಾಗಿದೆ. ವರದಿ ಪ್ರಕಾರ, ಮಂಗಳವಾರ ನಡೆದ ಮೂರನೇ ಸುತ್ತಿನ ವಿಚಾರಣೆಯ ನಂತರ ಅರೋರಾ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. … Continued

ಕ್ಯಾಮರಾದಲ್ಲಿ ಕಂಡ ಐವರು ದರೋಡೆಕೋರರನ್ನು ಹಿಡಿಯಲು 1,600 ಮಂದಿಯನ್ನು ವಶಕ್ಕೆ ಪಡೆದ ದೆಹಲಿ ಪೊಲೀಸರು…!

ನವದೆಹಲಿ: ಪ್ರಗತಿ ಮೈದಾನದ ಸುರಂಗ ಮಾರ್ಗದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ರಾತ್ರಿ ಗಸ್ತಿನಲ್ಲಿ ಸುಮಾರು 1,600 ಜನರನ್ನು ಕರೆದೊಯ್ದು ವಿಚಾರಣೆ ನಡೆಸಿದ್ದು, ಅಂತಿಮವಾಗಿ ಈ ₹ 2 ಲಕ್ಷ ದರೋಡೆಗೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚಾಂಡಿ ಚೌಕ್ ಮೂಲದ ಓಮಿಯಾ ಎಂಟರ್‌ಪ್ರೈಸಸ್‌ನ ಡೆಲಿವರಿ ಏಜೆಂಟ್ ಪಟೇಲ್ ಸಜನಕುಮಾರ … Continued

ಭಾರತದಲ್ಲಿ 3 ವರ್ಷಗಳಲ್ಲಿ 10,000 ಕೋಟಿ ರೂ. ಹೂಡಿಕೆ ಮಾಡಲಿರುವ ಲುಲು ಗ್ರೂಪ್ : 50,000 ಜನರಿಗೆ ಉದ್ಯೋಗ ಸೃಷ್ಟಿ ಗುರಿ

ಹೈದರಾಬಾದ್ : ಯುಎಇ ಮೂಲದ ಲುಲು ಗ್ರೂಪ್ ಮುಂದಿನ ಮೂರು ವರ್ಷಗಳಲ್ಲಿ ಭಾರತದಲ್ಲಿ 10,000 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ ಮತ್ತು ಯುಎಇ ಮೂಲದ ಸಂಘಟಿತ ಸಂಸ್ಥೆಯು ಈಗಾಗಲೇ ದೇಶದಲ್ಲಿ 20,000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಿದೆ ಎಂದು ಲುಲು ಅಧ್ಯಕ್ಷ ಯೂಸುಫ್ ಅಲಿ ಹೇಳಿದ್ದಾರೆ. . ಭಾರತದಲ್ಲಿ 50,000 ಜನರಿಗೆ ಉದ್ಯೋಗ ನೀಡುವುದು … Continued

‘ನೀವು ದೇಶವಾಸಿಗಳು ಬುದ್ಧಿ ಇಲ್ಲದವರು ಎಂದು ಪರಿಗಣಿಸುತ್ತೀರಾ? : ಆದಿಪುರುಷ’ ಸಿನೆಮಾ ನಿರ್ಮಾಪಕರ ತರಾಟೆಗೆ ತೆಗೆದುಕೊಂಡ ಅಲಹಾಬಾದ್ ಹೈಕೋರ್ಟ್

ಲಕ್ನೋ: ‘ಆದಿಪುರುಷ’ ಚಿತ್ರದ ಸಂಭಾಷಣೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಪ್ರೇಕ್ಷಕರನ್ನು ಕೆರಳಿಸಿರುವ ಕುರಿತು ಅಲಹಾಬಾದ್ ಹೈಕೋರ್ಟ್ ಇಂದು, ಮಂಗಳವಾರ ನಿರ್ಮಾಪಕರನ್ನು ತರಾಟೆಗೆ ತೆಗೆದುಕೊಂಡಿದೆ. ಈ ಪ್ರಕರಣದಲ್ಲಿ ಸಹ ಲೇಖಕ ಮನೋಜ ಮುಂತಶಿರ್ ಶುಕ್ಲಾ ಅವರನ್ನು ಕಕ್ಷಿದಾರರನ್ನಾಗಿ ಮಾಡುವಂತೆ ನ್ಯಾಯಾಲಯ ಸೂಚಿಸಿದೆ ಹಾಗೂ ಒಂದು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ. … Continued

‘ಪ್ರಧಾನಿ ಮೋದಿ ನನ್ನ 15ನೇ ಮಗ… ಅವರಿಗೆ ನನ್ನ 25 ಎಕರೆ ಭೂಮಿ ಬರೆದುಕೊಡುತ್ತೇನೆ ಎಂದ ಈ ಶತಾಯುಷಿ ಅಜ್ಜಿ…!

ಭೋಪಾಲ: ‘ಮೋದಿ ನನ್ನ 15ನೇ ಮಗ… ನಾನು ಅವರಿಗೆ 25 ಎಕರೆ ಜಮೀನು ಬರೆದುಕೊಡುತ್ತೇನೆ’…. ಮಧ್ಯಪ್ರದೇಶದ 100 ವರ್ಷದ ಅಜ್ಜಿ ಪ್ರಧಾನಿ ಮೋದಿಗೆ 25 ಎಕರೆ ಭೂಮಿಯನ್ನು ದಾನ ಮಾಡುವುದಾಗಿ ಘೋಷಿಸಿದ್ದಾಳೆ. ರಾಜಗಢ ಜಿಲ್ಲೆಯ ಹರಿಪುರ ಗ್ರಾಮದ ಮಂಗಿಬಾಯಿ ತನ್ವರ್ ಎಂಬ ವೃದ್ಧೆಯೇ ಹೀಗೆ ಘೋಷಿಸಿದ್ದಾಳೆ. ಅಜ್ಜಿಗೆ 14 ಮಕ್ಕಳಿದ್ದಾರೆ. ಆದರೆ ತಾನು ಮೋದಿಯನ್ನು ತನ್ನ … Continued

“ದೇಶವು 2 ಕಾನೂನುಗಳ ಮೇಲೆ ಹೇಗೆ ನಡೆಯಲು ಸಾಧ್ಯ? : ಏಕರೂಪ ನಾಗರಿಕ ಸಂಹಿತೆಗಾಗಿ ಬಲವಾದ ಪ್ರತಿಪಾದನೆ ಮಾಡಿದ ಪ್ರಧಾನಿ ಮೋದಿ

ಭೋಪಾಲ: ವಿರೋಧ ಪಕ್ಷಗಳು ಮತ ಬ್ಯಾಂಕ್ ರಾಜಕಾರಣ ಮಾಡುತ್ತಿವೆ ಎಂದು ಮಂಗಳವಾರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಏಕರೂಪ ನಾಗರಿಕ ಸಂಹಿತೆ (Uniform Civil Code) ಹೆಸರಿನಲ್ಲಿ ಜನರನ್ನು ಕೆರಳಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಭೋಪಾಲದಲ್ಲಿ “ಮೇರಾ ಬೂತ್ ಸಬ್ಸೆ ಮಜ್‌ಬೂತ್” ಅಭಿಯಾನದ ಅಡಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತೀಯ ಜನತಾ … Continued

‘ಇದು ಸ್ವೀಕಾರಾರ್ಹವಲ್ಲ’: ಅಮೆರಿಕದಲ್ಲಿ ಪ್ರಧಾನಿ ಮೋದಿ ಪ್ರಶ್ನಿಸಿದ ಪತ್ರಕರ್ತಳಿಗೆ ಆನ್‌ಲೈನ್‌ ಕಿರುಕುಳದ ಕುರಿತು ಶ್ವೇತಭವನದ ಪ್ರತಿಕ್ರಿಯೆ

ನವದೆಹಲಿ: ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆ ಕೇಳಿದ ಪತ್ರಕರ್ತರಿಗೆ ಆನ್‌ಲೈನ್‌ನಲ್ಲಿ ಕಿರುಕುಳ ನೀಡಿರುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅಮೆರಿಕದ ಶ್ವೇತಭವನ ಸೋಮವಾರ ಹೇಳಿದೆ. ವಾಲ್ ಸ್ಟ್ರೀಟ್ ಜರ್ನಲ್‌ನ ಪತ್ರಕರ್ತೆ ಸಬ್ರಿನಾ ಸಿದ್ದಿಕಿ ಅವರು, ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರೊಂದಿಗೆ ಪ್ರಧಾನಿ ಮೋದಿಯವರ ಜಂಟಿ … Continued

ಏಕದಿನ ಕ್ರಿಕೆಟ್‌ ವಿಶ್ವಕಪ್ -2023ರ ವೇಳಾಪಟ್ಟಿ ಬಿಡುಗಡೆ; ಯಾವ ಸ್ಥಳದಲ್ಲಿ ಯಾವಾಗ ನಡೆಯುತ್ತದೆ..? ಸಂಪೂರ್ಣ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

ಏಕದಿನ ವಿಶ್ವಕಪ್ -2023 ಭಾರತದಲ್ಲಿ ಅಕ್ಟೋಬರ್‌ನಿಂದ ನವೆಂಬರ್‌ ವರೆಗೆ ನಡೆಯಲಿದ್ದು, ಏಕದಿನ ವಿಶ್ವಕಪ್ -2023 ಟೂರ್ನಿಯ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಪಂದ್ಯಾವಳಿ ಅಕ್ಟೋಬರ್ 5ರಿಂದ ನವೆಂಬರ್ 19ರ ವರೆಗೆನಡೆಯಲಿದೆ. ನವೆಂಬರ್ 19ರಂದು ಅಹಮದಾಬಾದ್ ಕ್ರೀಡಾಂಗಣದಲ್ಲಿ ಅಂತಿಮ ಪಂದ್ಯ ನಿಗದಿಯಾಗಿದೆ. ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಹಣಾಹಣಿ ನಡೆಯಲಿದೆ. … Continued

ಬೆಳ್ಳಂಬೆಳಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ವಾಂಟೆಡ್ ಕ್ರಿಮಿನಲ್ ಹತ್ಯೆ

ಲಕ್ನೋ: ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಇಂದು, ಮಂಗಳವಾರ (ಜೂನ್‌ 27) ನಡೆದ ಎನ್‌ಕೌಂಟರ್‌ನಲ್ಲಿ ವಾಂಟೆಡ್ ಕ್ರಿಮಿನಲ್ ಒಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪಾತಕಿಯನ್ನು ಗುಫ್ರಾನ್ ಎಂದು ಗುರುತಿಸಲಾಗಿದ್ದು, ಈತ ಅನೇಕ ಕೊಲೆ-ಸುಲಿಗೆಗಳು ಮತ್ತು ಡಕಾಯಿತಿ ಪ್ರಕರಣಗಳಲ್ಲಿ ಬೇಕಾಗಿದ್ದ. ಉತ್ತರ ಪ್ರದೇಶ ಪೊಲೀಸರ ಪ್ರಕಾರ, ಮಂಗಳವಾರ ಬೆಳಿಗ್ಗೆ 5:00 ಗಂಟೆಯ ಸುಮಾರಿಗೆ ವಿಶೇಷ ಕಾರ್ಯಪಡೆ ತಂಡವು … Continued

ʼಹೆಚ್ಚಿನ ಪಿಂಚಣಿʼಗೆ ಅರ್ಜಿ ಸಲ್ಲಿಸಲು ಗಡುವು ವಿಸ್ತರಣೆ ಮಾಡಿದ ಇಪಿಎಫ್‌ಒ

ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (EPFO) ‘ಹೆಚ್ಚಿನ ಪಿಂಚಣಿ’ ಯೋಜನೆಗೆ (Higher Pension) ನೋಂದಾಯಿಸಿಕೊಳ್ಳಲು ವಿಧಿಸಿದ್ದ ಜೂನ್ 26ರ ಗಡುವನ್ನು ಜುಲೈ 11ಕ್ಕೆ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಮೊದಲು ಮಾರ್ಚ್ 3, ಮೇ 3 ಮತ್ತು ಜೂನ್ 26ನೇ ತಾರೀಖುಗಳನ್ನು ಈ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ದಿನಾಂಕ ವಿಸ್ತರಿಸಿತ್ತು. ಪಿಂಚಣಿ ಪಡೆಯುವ ವಿಚಾರದಲ್ಲಿ … Continued