ವಿಶ್ವಸಂಸ್ಥೆಯಲ್ಲಿ ಮೋದಿ ನೇತೃತ್ವದ ಯೋಗ ದಿನಾಚರಣೆಯಲ್ಲಿ ಅತೀ ಹೆಚ್ಚು ದೇಶದ ಜನರು ಭಾಗಿ; ಗಿನ್ನೆಸ್ ದಾಖಲೆ ಸ್ಥಾಪನೆ

ನ್ಯೂಯಾರ್ಕ್ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ (ಜೂನ್‌ ೨೧) ಅಂತಾರಾಷ್ಟ್ರೀಯ ಯೋಗದಿನಾಚರಣೆ ವಿಶ್ವಸಂಸ್ಥೆ ಆವರಣದಲ್ಲಿ ನಡೆದಿದೆ. ಬೃಹತ್ ಕಾರ್ಯಕ್ರಮದಲ್ಲಿ ಮೋದಿ ಯೋಗಭ್ಯಾಸ ಮಾಡಿ ಎಲ್ಲರ ಗಮನಸೆಳೆದಿದ್ದಾರೆ. ಈ ಯೋಗದಿನಾಚರಣೆಯಲ್ಲಿ 180 ರಾಷ್ಟ್ರದ ಜನರು ಪಾಲ್ಗೊಳ್ಳುವ ಮೂಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಗಿನ್ನೆಸ್ ದಾಖಲೆ ಪುಟ ಸೇರಿದೆ. ವಿವಿಧ ದೇಶಗಳ ಜನರು ಒಂದೇ ಸಮಯದಲ್ಲಿ … Continued

ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನ ತ್ಯಜಿಸಲು ಮುಂದಾದ ಅಜಿತ ಪವಾರ್ …!

ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಮತ್ತು ಶರದ್ ಪವಾರ್ ಅವರ ಅಣ್ಣನ ಮಗ ಅಜಿತ ಪವಾರ್ ಅವರು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಸ್ಥಾನ ತ್ಯಜಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಬಾರಾಮತಿ ಕ್ಷೇತ್ರದ ಶಾಸಕರಾದ ಅಜಿತ ಪವಾರ್‌ ಅವರು, ಪಕ್ಷಕ್ಕಾಗಿ ದುಡಿಯುತ್ತೇನೆ ಮತ್ತು ನನಗೆ ನೀಡಿದ ಜವಾಬ್ದಾರಿಯನ್ನು ಪೂರೈಸುತ್ತೇನೆ ಎಂದು ಬುಧವಾರ … Continued

ಲಿಂಗ ಬದಲಾಯಿಸುವುದಾಗಿ ನಂಬಿಸಿ ಮಹಿಳೆ ಕೊಂದ ತಾಂತ್ರಿಕ

ಶಹಜಾನಪುರ: ಉತ್ತರ ಪ್ರದೇಶದ ಶಹಜಹಾನಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ಸಲಿಂಗ ಪ್ರೇಮಿಯನ್ನು ಮದುವೆಯಾಗಲು ತಾನು ಲಿಂಗ ಪರಿವರ್ತನೆ ಮಾಡುವುದಾಗಿ ಭರವಸೆ ನೀಡಿ ನಂತರ ತಾಂತ್ರಿಕನು ಆ ಯುವತಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಳನ್ನು ಆರ್‌ಸಿ ಮಿಷನ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಪೂನಂ ಎಂದು ಗುರುತಿಸಲಾಗಿದೆ, ಈಕೆ ಪುವಾಯನ್ ನಿವಾಸಿ ಪ್ರೀತಿ ಎಂಬಾಕೆಯೊಂದಿಗೆ ಸ್ನೇಹ … Continued

ದೇಶದ ಪ್ರಧಾನಿ ಯಾರೆಂದು ಹೇಳಲು ಬಾರದ ವರನ ಕೈಬಿಟ್ಟು ಆತನ ಸಹೋದರನ ಕೈಹಿಡಿದ ನವವಿವಾಹಿತೆ…!

ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮದುವೆ ವೇಳೆ ದೇಶದ ಪ್ರಧಾನಿ ಯಾರು ಕೇಳಿದ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದ ವಧು ತನ್ನ ಮದುವೆಯನ್ನು ಮುರುದಿಕೊಂಡ ಘಟನೆ ವರದಿಯಾಗಿದೆ..! ನಂತರ ವರನ ಕಿರಿಯ ಸಹೋದರನನ್ನು ಮದುವೆಯಾಗಿದ್ದಾಳೆ..!! ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ಸೈದಪುರ ಪೊಲೀಸ್ ಠಾಣೆಯಲ್ಲಿ ಕಳೆದ ಶನಿವಾರ ಈ ವಿಚಿತ್ರ ಘಟನೆ ನಡೆದಿದೆ. … Continued

ಎಂಜಿನಿಯರ್‌ಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಶಾಸಕಿ | ವೀಕ್ಷಿಸಿ

ಮುಂಬೈ : ಮಹಾರಾಷ್ಟ್ರದ ಥಾಣೆಯಲ್ಲಿ ಮಹಿಳಾ ಶಾಸಕಿಯೊಬ್ಬರು ಸಿವಿಲ್‌ ಎಂಜಿನಿಯರ್‌ಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದ್ದು, ವೀಡಿಯೊ ವೈರಲ್ ಆಗಿದೆ. ಥಾಣೆ ಜಿಲ್ಲೆಯ ಮೀರಾ ಭಯಂದರ್‌ನ ಶಾಸಕಿ ಗೀತಾ ಜೈನ್ ಅವರು ಕೆಲವು ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುವ ವಿಚಾರವಾಗಿ ಮುನ್ಸಿಪಲ್ ಕಾರ್ಪೊರೇಷನ್‌ನ ಇಬ್ಬರು ಇಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಥಾಣೆ ಜಿಲ್ಲೆಯ ಮೀರಾ ಭಾಯಂದರ್‌ನ ಶಾಸಕಿ … Continued

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಹಣದಿಂದ ಮಗನ ಮದುವೆ ಮಾಡಿದ್ದೇನೆ, ಮನೆ ಕಟ್ಟಿದ್ದೇನೆ: ಬಿಜೆಪಿ ಸಂಸದನ ಹೇಳಿಕೆ ವೈರಲ್‌…!

ಹೈದರಾಬಾದ್ : ತೆಲಂಗಾಣ ಬಿಜೆಪಿ ಸಂಸದ ಸೋಯಮ್ ಬಾಪು ರಾವ್ ಅವರದ್ದು ಎನ್ನಲಾದ ವೀಡಿಯೊ ಈಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ವೀಡಿಯೊದಲ್ಲಿ ಸೋಯಮ್ ಬಾಪುರಾವ್ ಅವರು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ (ಎಂಪಿಎಲ್‌ಎಡಿ) ಯೋಜನೆಯ ಹಣದಲ್ಲಿ (ಸರ್ಕಾರದ ಹಣ) ಜನಪರ ಅಭಿವೃದ್ಧಿ ಕಾರ್ಯ ಮಾಡುವ ಬದಲು ತನಗಾಗಿ ಮನೆ ನಿರ್ಮಿಸಿಕೊಂಡಿದ್ದೇನೆ ಹಾಗೂ ಮಗನ ಮದುವೆ ಮಾಡಿದ್ದೇನೆ ಎಂದು ಒಪ್ಪಿಕೊಳ್ಳುವ … Continued

ತನ್ನನ್ನು ‘ಮೋದಿ ಅಭಿಮಾನಿ’ ಎಂದು ಕರೆದುಕೊಂಡ ಎಲೋನ್ ಮಸ್ಕ್ : ಭೇಟಿಯ ನಂತರ ಪ್ರಧಾನಿ ಮೋದಿ ಹೊಗಳಿದ ವಿಶ್ವದ ನಂ.1 ಶ್ರೀಮಂತ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನ್ಯೂಯಾರ್ಕ್‌ನಲ್ಲಿ ಟ್ವಿಟರ್ ಸಿಇಒ ಎಲಾನ್ ಮಸ್ಕ್ ಅವರನ್ನು ಭೇಟಿಯಾಗಿದ್ದಾರೆ. ಪ್ರಧಾನಿ ಮೋದಿ ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ನಂತರ, ಎಲೋನ್ ಮಸ್ಕ್ ಅವರು ಭಾರತಕ್ಕೆ ಭೇಟಿ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ. … Continued

26/11 ಮುಂಬೈ ಭಯೋತ್ಪಾದಕ ದಾಳಿ ಆರೋಪಿ ಸಾಜಿದ್ ಮಿರ್ ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ವಿಶ್ವಸಂಸ್ಥೆಯಲ್ಲಿನ ಪ್ರಸ್ತಾಪ ತಡೆದ ಚೀನಾ

ನವದೆಹಲಿ: 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಾಜಿದ್ ಮಿರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ವಿಶ್ವಸಂಸ್ಥೆಯಲ್ಲಿ ಭಾರತ ಮತ್ತು ಅಮೆರಿಕ ಮಾಡಿದ ಪ್ರಸ್ತಾಪವನ್ನು ಚೀನಾ ಮಂಗಳವಾರ ತಡೆಹಿಡಿದಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267ರ ಅಲ್ ಖೈದಾ ನಿರ್ಬಂಧಗಳ ಸಮಿತಿಯಡಿಯಲ್ಲಿ ಜಾಗತಿಕ ಭಯೋತ್ಪಾದಕ ಎಂದು ಮಿರ್‌ನನ್ನು ಕಪ್ಪುಪಟ್ಟಿಗೆ ಸೇರಿಸಲು ಮತ್ತು … Continued

470 ವಿಮಾನಗಳ ಖರೀದಿಗೆ ಏರ್‌ಬಸ್, ಬೋಯಿಂಗ್‌ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಏರ್ ಇಂಡಿಯಾ

ನವದೆಹಲಿ: ಏರ್ ಇಂಡಿಯಾ ಮಂಗಳವಾರ ಏರ್‌ಬಸ್ ಮತ್ತು ಬೋಯಿಂಗ್‌ನೊಂದಿಗೆ 470 ವಿಮಾನಗಳನ್ನು ಖರೀದಿಗೆ ಅಂದಾಜು $70 ಬಿಲಿಯನ್‌ ಒಪ್ಪಂದಗಳಿಗೆ ಸಹಿ ಹಾಕಿದೆ. ಟಾಟಾ ಗ್ರೂಪ್ ಒಡೆತನದ ಏರ್‌ಲೈನ್ ಈ ವರ್ಷದ ಫೆಬ್ರವರಿಯಲ್ಲಿ ಬೃಹತ್‌ ವಿಮಾನಗಳು ಸೇರಿದಂತೆ 470 ವಿಮಾನಗಳನ್ನು ಖರೀದಿಸುವುದಾಗಿ ಘೋಷಿಸಿತ್ತು. ಸಂಸ್ಥೆಯ ಆರ್ಡರ್‌ಗಳಲ್ಲಿ 34 A350-1000, 6 A350-900, 20 ಬೋಯಿಂಗ್ 787 ಡ್ರೀಮ್‌ಲೈನರ್‌ಗಳು … Continued

ಅಪರಿಚಿತ ಸ್ಪ್ಯಾಮ್ ಕರೆಗಳಿಂದ ರಕ್ಷಣೆ ಪಡೆಯಲು ಹೊಸ ಫೀಚರ್‌ ಪರಿಚಯಿಸಿದ ವಾಟ್ಸಾಪ್

ಅಪರಿಚಿತರ ಅನಾಮಿಕ ಸ್ಪ್ಯಾಮ್‌ ಕರೆಗಳಿಂದ ರಕ್ಷಣೆ ಪಡೆಯಲು ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದರಿಂದ ವಾಟ್ಸಾಪ್‌ ಬಳಕೆದಾರರು ಒಳಬರುವ ಅಪರಿಚಿತ ಕರೆಗಳು ಬಾರದಂತೆ ತಡೆಯಬಹುದಾಗಿದೆ. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಮಂಗಳವಾರ ಇದನ್ನು ಘೋಷಿಸಿದ್ದಾರೆ. ಸೆಟ್ಟಿಂಗ್‌ಗಳಲ್ಲಿ ಈ ವೈಶಿಷ್ಟ್ಯವನ್ನು ಆನ್ ಮಾಡುವ ಮೂಲಕ WhatsApp ಬಳಕೆದಾರರು ಈಗ ಅಪರಿಚಿತ ಕರೆಗಳು ಅಥವಾ ಸ್ಪ್ಯಾಮ್ ಕರೆಗಳನ್ನು ತಡೆಯಲು … Continued