ತಡವಾಗಿ ಬಂದಿದ್ದಕ್ಕೆ ಶಿಕ್ಷಾ ಮಿತ್ರ ಶಿಕ್ಷಕಿಗೆ ಶೂಗಳಿಂದ ಥಳಿಸಿದ ಸರ್ಕಾರಿ ಶಾಲೆಯ ಪ್ರಾಂಶುಪಾಲರು…! ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಲಕ್ನೋ: ಶಾಲೆಗೆ ತಡವಾಗಿ ಬಂದಿದ್ದಕ್ಕೆ ಶಿಕ್ಷಾ ಮಿತ್ರ ಶಿಕ್ಷಕಿಗೆ ಶಾಲಾ ಪ್ರಾಂಶುಪಾಲರು ಶೂಗಳಿಂದ ಥಳಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ವೀಡಿಯೊ ವೈರಲ್ ಆಗಿದೆ. ಖೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಮಹಂಗು ಖೇರಾ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಾ ಮಿತ್ರ ಶಿಕ್ಷಕಿಯನ್ನು ಅಮಾನುಷವಾಗಿ ನಡೆಸಿಕೊಂಡ ಆರೋಪದ ಮೇಲೆ … Continued

ಗುಜರಾತ್ ಗಲಭೆ ಪೂರ್ವಯೋಜಿತ ಎಂಬುದಕ್ಕೆ ಯಾವುದೇ ದಾಖಲೆಯಿಲ್ಲ, ಸುಳ್ಳು ಹೇಳಿಕೆ ನೀಡಿದ ಅಧಿಕಾರಿಗಳು ವಿಚಾರಣೆ ಎದುರಿಸಲಿ: ಸುಪ್ರೀಂ ಕೋರ್ಟ್‌

ನವದೆಹಲಿ: ಗುಜರಾತ್‌ ಹತ್ಯಾಂಕಾಡವು ಪೂರ್ವಯೋಜಿತ ಎಂಬುದಕ್ಕೆ ಒಂದೇ ಒಂದು ಸಣ್ಣ ದಾಖಲೆಯೂ ಇಲ್ಲ ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ ಹೇಳಿದ್ದು, ವಿಶೇಷ ತನಿಖಾ ದಳವು (ಎಸ್‌ಐಟಿ) ಗುಜರಾತ್‌ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಕ್ಲೀನ್‌ಚಿಟ್‌ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿ ವಜಾ ಮಾಡಿದೆ. “2002ರ ಫೆಬ್ರವರಿ 27ರಂದು ನಡೆದ ಗೋಧ್ರಾ ಹತ್ಯಾಕಾಂಡ ಮತ್ತು ನಂತರದ … Continued

26/11 ಮುಂಬೈ ಭಯೋತ್ಪಾದಕ ದಾಳಿಯ ನಿರ್ವಹಣೆ ಮಾಡಿದವನಿಗೆ ಪಾಕಿಸ್ತಾನದಲ್ಲಿ 15 ವರ್ಷಗಳ ಜೈಲು ಶಿಕ್ಷೆ

ನವದೆಹಲಿ: ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಸದಸ್ಯ ಮತ್ತು ಈ ತಿಂಗಳ 26/11 ಮುಂಬೈ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಹೇಳಲಾದ ಸಾಜಿದ್ ಮಿರ್‌ಗೆ ಭಯೋತ್ಪಾದನೆ ಹಣಕಾಸು ಪ್ರಕರಣದಲ್ಲಿ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ನಿಷೇಧಿತ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಕಾರ್ಯಕರ್ತ … Continued

ಭಾರತದಲ್ಲಿ ರಸ್ತೆ ಸುರಕ್ಷತೆಗೆ ದೊಡ್ಡ ಉತ್ತೇಜನ, ವಾಹನಗಳಿಗೆ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ : ಸಚಿವ ನಿತಿನ್ ಗಡ್ಕರಿ ಘೋಷಣೆ

ನವದೆಹಲಿ: ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮ – ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (ಭಾರತ್ ಎನ್‌ಸಿಎಪಿ), ಕ್ರ್ಯಾಶ್ ಟೆಸ್ಟ್‌ಗಳಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಭಾರತದಲ್ಲಿನ ಆಟೋಮೊಬೈಲ್‌ಗಳಿಗೆ ‘ಸ್ಟಾರ್ ರೇಟಿಂಗ್‌ಗಳು’ ನೀಡಲಾಗುವ ಕಾರ್ಯವಿಧಾನವನ್ನು ಪ್ರಸ್ತಾಪಿಸಲಾಗಿದೆ. ಕೇಂದ್ರದ ರಸ್ತೆಗಳು ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಸರಣಿ ಟ್ವೀಟ್‌ಗಳಲ್ಲಿ, ಭಾರತ್ ಎನ್‌ಸಿಎಪಿ ಗ್ರಾಹಕ ಕೇಂದ್ರಿತ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, … Continued

ಉದ್ಧವ್‌ ಠಾಕ್ರೆ ಬಣದಿಂದ ಬಂಡಾಯ ಶಾಸಕರ ವಜಾ ಅರ್ಜಿಗೆ ಪ್ರತಿಯಾಗಿ ಉಪಸಭಾಪತಿ ವಿರುದ್ಧ ಶಿಂಧೆ ಬಣದಿಂದ ಅವಿಶ್ವಾಸ ನಿರ್ಣಯ

ಮುಂಬೈ: ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಉದ್ಧವ್ ಠಾಕ್ರೆ ಬಣವು ಉಪ ಸ್ಪೀಕರ್ ನರಹರಿ ಜೀರ್ವಾಲ್ ಅವರಿಗೆ ಮನವಿ ಸಲ್ಲಿಸಿದ ಒಂದು ದಿನದ ನಂತರ, ಏಕಾಂತ್ ಶಿಂಧೆ ಬಣವು ಶುಕ್ರವಾರ ಉಪಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯದ ನೋಟಿಸ್ ನೀಡಿದೆ. ಬುಧವಾರ ನಡೆದ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿದ್ದಕ್ಕಾಗಿ ಏಕನಾಥ್ ಶಿಂಧೆ ಸೇರಿದಂತೆ 12 ಬಂಡಾಯ ಶಾಸಕರ … Continued

ಇಂಟೆಲಿಜೆನ್ಸ್ ಬ್ಯೂರೋದ ನೂತನ ಮುಖ್ಯಸ್ಥರಾಗಿ ತಪನ್ ಕುಮಾರ್ ದೇಕಾ ನೇಮಕ

ನವದೆಹಲಿ: 26/11 ಮುಂಬೈ ದಾಳಿಯ ಸಂದರ್ಭದಲ್ಲಿ ಪ್ರತಿದಾಳಿಗಳ ಉಸ್ತುವಾರಿ ವಹಿಸಿದ್ದ ತಪನ್ ಕುಮಾರ್ ದೇಕಾ ಅವರನ್ನು ಶುಕ್ರವಾರ ಗುಪ್ತಚರ ಬ್ಯೂರೋ (ಐಬಿ) ನಿರ್ದೇಶಕರಾಗಿ ನೇಮಿಸಲಾಯಿತು. ಇದೇವೇಳೆ  ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (R&AW) ಮುಖ್ಯಸ್ಥರಾಗಿರುವ ಸಮಂತ್ ಗೋಯೆಲ್  ಅವರ ಅಧಿಕಾರವನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ. ಸಿಬ್ಬಂದಿ ಸಚಿವಾಲಯ ಹೊರಡಿಸಿದ ಅಧಿಕೃತ ಆದೇಶದ ಪ್ರಕಾರ, IB … Continued

16 ಶಿವಸೇನೆ ಬಂಡಾಯ ಶಾಸಕರಿಗೆ ಮಹಾರಾಷ್ಟ್ರ ಉಪ ಸ್ಪೀಕರ್ ನೋಟಿಸ್ ಕಳುಹಿಸಬಹುದು: ಮೂಲಗಳು

ಮುಂಬೈ: ಮಹಾರಾಷ್ಟ್ರದ ಉಪ ಸ್ಪೀಕರ್ ನರಹರಿ ಜಿರ್ವಾಲ್ ಅವರು 16 ಬಂಡಾಯ ಶಿವಸೇನೆ ಶಾಸಕರಿಗೆ ನಾಳೆ ಅನರ್ಹತೆ ನೋಟಿಸ್ ಕಳುಹಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ಅನರ್ಹತೆಯ ವಿಚಾರಣೆ ನಡೆಯಲಿದ್ದು, ಬಂಡುಕೋರರು ಮುಂಬೈನಲ್ಲಿ ಹಾಜರಿರಬೇಕು ಎಂದು ಮೂಲಗಳು ತಿಳಿಸಿವೆ. ಉಪಸಭಾಪತಿಯವರು ನೋಟಿಸ್ ಕಳುಹಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದರೆ, ಸೇನಾ ನಾಯಕ ಏಕನಾಥ್ ಶಿಂಧೆ ನೇತೃತ್ವದ … Continued

ಮಿಜೋರಾಂನಲ್ಲಿ ವಶಪಡಿಸಿಕೊಂಡ 2,362 ಕೋಟಿ ರೂ. ಮೌಲ್ಯದ ಡ್ರಗ್ಸ್ ಸುಟ್ಟ ಪೊಲೀಸರು

ಐಜ್ವಾಲ್  : ಜೂನ್ 26 ರಂದು ಬರುವ ಡ್ರಗ್ಸ್ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ಅಂತಾರಾಷ್ಟ್ರೀಯ ದಿನವನ್ನು ಗುರುತಿಸಲು, ಜೂನ್ 24 ರಂದು ಐಜ್ವಾಲ್‌ನ ದಕ್ಷಿಣ ಹೊರವಲಯದಲ್ಲಿರುವ ಟ್ರಿನಿಟಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ 2,362 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಸುಡಲಾಯಿತು. ನಾಶಪಡಿಸಿದ ಡ್ರಗ್ಸ್‌ಗಳಲ್ಲಿ 18.243 ಕೆಜಿ ಹೆರಾಯಿನ್, 753.045 ಕೆಜಿ … Continued

ಅಗ್ನಿಪಥ ಯೋಜನೆಯಡಿ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಿದ ಭಾರತೀಯ ವಾಯುಸೇನೆ

ನವದೆಹಲಿ: ಹಲವಾರು ರಾಜ್ಯಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದ ಒಂದು ವಾರದ ನಂತರ ಅಗ್ನಿಪಥ ಯೋಜನೆಯಡಿ ಭಾರತೀಯ ವಾಯುಪಡೆಯಲ್ಲಿ ನೇಮಕಾತಿ ಪ್ರಕ್ರಿಯೆಯು ನೋಂದಣಿ ವಿಂಡೋ ತೆರೆಯುವುದರೊಂದಿಗೆ ಶುಕ್ರವಾರ ಪ್ರಾರಂಭವಾಯಿತು. #Agniveervayu ಗೆ ಅರ್ಜಿ ಸಲ್ಲಿಸಲು ನೋಂದಣಿ ವಿಂಡೋ ಇಂದು ಬೆಳಿಗ್ಗೆ 10 ರಿಂದ ಕಾರ್ಯನಿರ್ವಹಿಸುತ್ತದೆ” ಎಂದು IAF ಟ್ವಿಟರ್‌ನಲ್ಲಿ ತಿಳಿಸಿದೆ. ಜೂನ್ 14 ರಂದು ಅಗ್ನಿಪಥ ಯೋಜನೆಯನ್ನು … Continued

ಒಡಿಸ್ಸಾ ಹಿರಿಯ ನಟ ರೈಮೋಹನ್ ಪರಿದಾ ಮನೆಯಲ್ಲಿ ಶವವಾಗಿ ಪತ್ತೆ

ಭುವನೇಶ್ವರ: ಒಡಿಯಾದ ಹಿರಿಯ ನಟ ರೈಮೋಹನ್ ಪರಿದಾ (58) ಶುಕ್ರವಾರ, ಜೂನ್ 24 ರಂದು ಭುವನೇಶ್ವರದ ಪ್ರಾಚಿ ವಿಹಾರ್ ಪ್ರದೇಶದಲ್ಲಿನ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ಸಾಕ್ಷ್ಯವು ಆತ್ಮಹತ್ಯೆಯಿಂದ ಸಾವು ಸಂಭವಿಸಿದೆ ಎಂದು ಸೂಚಿಸುತ್ತದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ರಾಯಮೋಹನ್ ಪರಿದಾ ಬೆಳಗ್ಗೆ ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ … Continued