ಫ್ರಾನ್ಸ್ ಅಧ್ಯಕ್ಷರಾಗಿ ಮರು ಆಯ್ಕೆಯಾದ ಇಮ್ಯಾನುಯೆಲ್ ಮ್ಯಾಕ್ರನ್ ಅಭಿನಂದಿಸಿದ ಪ್ರಧಾನಿ ಮೋದಿ

ನವದೆಹಲಿ: ಫ್ರಾನ್ಸ್ ಅಧ್ಯಕ್ಷರಾಗಿ ಪುನರಾಯ್ಕೆಯಾಗಿರುವ ಇಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಪ್ರಧಾನಿ ಮೋದಿ ಸೋಮವಾರ ಬೆಳಿಗ್ಗೆ ಅಭಿನಂದಿಸಿದ್ದಾರೆ. ತಮ್ಮ ಟ್ವೀಟ್‌ನಲ್ಲಿ, “ಫ್ರಾನ್ಸ್ ಅಧ್ಯಕ್ಷರಾಗಿ ಮರು ಆಯ್ಕೆಯಾದ ನನ್ನ ಸ್ನೇಹಿತ ಇಮ್ಯಾನುಯೆಲ್ ಮ್ಯಾಕ್ರಾನ್ ಅವರಿಗೆ ಅಭಿನಂದನೆಗಳು. ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಗಾಢಗೊಳಿಸಲು ಒಟ್ಟಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ” ಎಂದು ಪ್ರಧಾನಿ ಮೋದಿ ಟ್ವಟ್ಟರಿನಲ್ಲಿ ಬರೆದಿದ್ದಾರೆ. … Continued

ಪಂಜಾಬ್‌ನಲ್ಲಿ ಅಫ್ಘಾನಿಸ್ತಾನದಿಂದ ಬಂದ್‌ ಟ್ರಕ್‌ನಲ್ಲಿ 700 ಕೋಟಿ ರೂ.ಗಳ ಮೌಲ್ಯದ ಹೆರಾಯಿನ್ ಪತ್ತೆ

ಅಮೃತಸರ: ಕಸ್ಟಮ್ ಅಧಿಕಾರಿಗಳು ಭಾನುವಾರ ಅಮೃತಸರದಲ್ಲಿ ಪಾಕಿಸ್ತಾನ ಚೆಕ್ ಪೋಸ್ಟ್ ಮೂಲಕ ಅಫ್ಘಾನಿಸ್ತಾನದಿಂದ ಬರುತ್ತಿದ್ದ ಟ್ರಕ್‌ನಿಂದ 700 ಕೋಟಿ ರೂಪಾಯಿ ಮೌಲ್ಯದ 102 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ. ದೆಹಲಿ ಮೂಲದ ಆಮದುದಾರರಿಂದ ಅಫ್ಘಾನಿಸ್ತಾನದಿಂದ ಆಮದು ಮಾಡಿಕೊಳ್ಳಲಾದ ಲೈಕೋರೈಸ್ ರೂಟ್ಸ್ (ಮುಲೇಥಿ) ರವಾನೆಯಲ್ಲಿ ಔಷಧಗಳನ್ನು ಮರೆಮಾಡಿ ತರಲಾಗುತ್ತಿತ್ತು. ಜೂನ್ 2019 ರ ನಂತರ ಅಮೃತಸರ ಕಸ್ಟಮ್ಸ್ … Continued

ಕಾಶ್ಮೀರದ ಪುಲ್ವಾಮಾದಲ್ಲಿ ಎನ್‌ಕೌಂಟರ್‌ನಲ್ಲಿ ಲಷ್ಕರ್ ಉಪ ಕಮಾಂಡರ್ ಸೇರಿದಂತೆ 3 ಉಗ್ರರ ಹೊಡೆದುರುಳಿಸಿದ ಭದ್ರತಾ ಪಡೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಾನುವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಉಪ ಕಮಾಂಡರ್ ಸೇರಿದಂತೆ ಮೂವರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪಿನ ಉಪ ಕಮಾಂಡರ್ ಅನ್ನು ಆರಿಫ್ ಹಜಾರ್ ಅಲಿಯಾಸ್ ರೆಹಾನ್ ಎಂದು ಗುರುತಿಸಲಾಗಿದ್ದು, ಹತ್ಯೆಗೀಡಾದ ಇತರ ಇಬ್ಬರು ಉಗ್ರರ … Continued

ಎಂಎಫ್ ಹುಸೇನ್ ಪೇಂಟಿಂಗ್ ಅನ್ನು ರಾಣಾ ಕಪೂರ್‌ಗೆ ಮಾರಾಟ ಮಾಡಿರುವುದನ್ನು ಖಚಿತಪಡಿಸಿ: ಪ್ರಿಯಾಂಕಾ ಗಾಂಧಿ ಬರೆದ ಹಳೆಯ ಪತ್ರ ಹಂಚಿಕೊಂಡ ಬಿಜೆಪಿ ನಾಯಕ

ನವದೆಹಲಿ: ಬಿಜೆಪಿ ರಾಷ್ಟ್ರೀಯ ವಕ್ತಾರ ಆರ್‌.ಪಿ. ಸಿಂಗ್ ಭಾನುವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬರೆದಿರುವ ಪತ್ರವನ್ನು ಹಂಚಿಕೊಂಡಿದ್ದು, ರಾಣಾ ಕಪೂರ್ ಅವರು ಎಂಎಫ್ ಹುಸೇನ್ ಪೇಂಟಿಂಗ್ ಅನ್ನು 2 ಕೋಟಿ ರೂ.ಗೆ ಖರೀದಿಸಿದ್ದಾರೆಯೇ ಎಂಬುದನ್ನು ಖಚಿತಪಡಿಸುತ್ತದೆ. ಟ್ವಿಟರ್‌ನಲ್ಲಿ, ಸಿಂಗ್ ಅವರು ಪ್ರಿಯಾಂಕಾ ಗಾಂಧಿಯವರ ಸಹಿ ಇರುವ ಪತ್ರವನ್ನು ಹಂಚಿಕೊಂಡಿದ್ದಾರೆ, ಎಂಎಫ್ ಹುಸೇನ್ ಅವರು ಚಿತ್ರಿಸಿದ … Continued

ಪದೇ ಪದೇ ಬೆಂಕಿ ಅವಘಡ: 1,441 ಇ-ಸ್ಕೂಟರ್‌ಗಳನ್ನು ಹಿಂಪಡೆದ ಓಲಾ

ನವದೆಹಲಿ: ಇ-ಬೈಕ್‌ಗಳಿಗೆ ಬೆಂಕಿ ಹೊತ್ತಿಕೊಂಡ ಘಟನೆಗಳ ಹಿನ್ನೆಲೆಯಲ್ಲಿ ಕಂಪನಿಯು ತನ್ನ 1,441 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಹಿಂಪಡೆಯುತ್ತಿದೆ ಎಂದು ಓಲಾ ಎಲೆಕ್ಟ್ರಿಕ್ ಭಾನುವಾರ ಪ್ರಕಟಿಸಿದೆ. ಈ ಸ್ಕೂಟರ್‌ಗಳನ್ನು ಇಂಜಿನಿಯರ್‌ಗಳು ಪರಿಶೀಲಿಸುತ್ತಾರೆ ಎಂದು ಅದು ಹೇಳಿದೆ. ಮಾರ್ಚ್ 26 ರಂದು ಪುಣೆಯಲ್ಲಿ ಸಂಭವಿಸಿದ ಬೆಂಕಿ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಓಲಾ ಹೇಳಿಕೆಯಲ್ಲಿ ತಿಳಿಸಿದೆ. ಓಲಾದ … Continued

ಆತ್ಮರಕ್ಷಣೆಗಾಗಿ ಬಾಟಲಿಗಳು, ಬಾಣಗಳನ್ನು ಸಂಗ್ರಹಿಸಿಟ್ಟುಕೊಳ್ಳಿ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್

ಲಕ್ನೋ: ಗುಂಪು ದಾಳಿಯ ಸಂದರ್ಭದಲ್ಲಿ ಜನರು ತಮ್ಮ ಮನೆಗಳಲ್ಲಿ ಬಾಟಲಿಗಳು ಮತ್ತು ಬಾಣಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಕೇಳಿಕೊಂಡಿದ್ದಾರೆ. ಯಾಕೆಂದರೆ ಪೊಲೀಸರು ಅವರನ್ನು ರಕ್ಷಿಸುವುದಿಲ್ಲ ಮತ್ತು ಆದ್ದರಿಂದ ಅವರು ಸಿದ್ಧರಾಗಿರಬೇಕು ಎಂದು ಹೇಳಿದ್ದಾರೆ. ವಿವಾದಾತ್ಮಕ ಹೇಳಿಕೆಗಳಿಂದ ಆಗಾಗ್ಗೆ ಸುದ್ದಿಯಲ್ಲಿರುವ ಉನ್ನಾವೊ ಸಂಸದ ಫೇಸ್‌ಬುಕ್‌ನಲ್ಲಿ, ಈ ಜನಸಮೂಹವು ನಿಮ್ಮ ಬೀದಿ, … Continued

ಆಂಧ್ರದಲ್ಲಿ ಮತ್ತೊಂದು ಇವಿ ಬೈಕ್ ಬ್ಯಾಟರಿ ಸ್ಫೋಟ: ವ್ಯಕ್ತಿ ಸಾವು, ಪತ್ನಿಗೆ ಗಾಯ

ಅಮರಾವತಿ: ಮೂರು ದಿನಗಳ ಹಿಂದೆ ನೆರೆಯ ತೆಲಂಗಾಣದ ನಿಜಾಮಾಬಾದ್ ಪಟ್ಟಣದಲ್ಲಿ ವಿದ್ಯುತ್ ವಾಹನದ ಬ್ಯಾಟರಿ ಸ್ಫೋಟಗೊಂಡು 80 ವರ್ಷದ ವ್ಯಕ್ತಿ ಸಾವಿಗೀಡಾದ ಘಟನೆ ಮಾಸುವ ಮುನ್ನವೇ ಆಂಧ್ರದಲ್ಲಿ ಮತ್ತೊಂದು ಇವಿ ಬೈಕ್ ಬ್ಯಾಟರಿ ಸ್ಫೋಟಗೊಂಡು ವ್ಯಕ್ತಿ ಸಾವಿಗೀಡಾದ ಘಟನೆ ವರದಿಯಾಗಿದೆ. ಮಲಗುವ ಕೋಣೆಯಲ್ಲಿ ಹೊಸ ಎಲೆಕ್ಟ್ರಿಕ್ ಬೈಕ್‌ನ ಬ್ಯಾಟರಿ ಸ್ಫೋಟಗೊಂಡು 40 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾದ … Continued

ಹನುಮಾನ್ ಚಾಲೀಸಾ ವಿವಾದ: ರವಿ, ನವನೀತ್ ರಾಣಾ ವಿರುದ್ಧ ದೇಶದ್ರೋಹ ಆರೋಪ, ನ್ಯಾಯಾಂಗ ಬಂಧನ

ಮುಂಬೈ: ಮುಂಬೈ ನ್ಯಾಯಾಲಯವು ಭಾನುವಾರ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ಅವರನ್ನು ಮೇ 6ರ ವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಮನೆ ಮುಂದೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ “ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಿದ” ಆರೋಪದ ಮೇಲೆ ದಂಪತಿಯನ್ನು ನಿನ್ನೆ ಸಂಜೆ … Continued

ಜಮ್ಮು -ಕಾಶ್ಮೀರದಲ್ಲಿ ಪ್ರಧಾನಿ ಮೋದಿಯವರ ಸಮಾವೇಶ ನಡೆಯುವ ಸ್ಥಳದ ಸಮೀಪದಲ್ಲಿ ಸ್ಫೋಟ: ವರದಿ

ಜಮ್ಮು -ಕಾಶ್ಮೀರದಲ್ಲಿ ಪ್ರಧಾನಿ ಮೋದಿಯವರ ಸಮಾವೇಶ ನಡೆಯುವ ಸ್ಥಳದಿಂದ 12 ಕಿಮೀ ದೂರದಲ್ಲಿ ಸ್ಫೋಟ: ವರದಿ ಜಮ್ಮು: ಭಾನುವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿ ನಡೆಯುವ ಸ್ಥಳದಿಂದ 12 ಕಿಮೀ ದೂರದ ಮೈದಾನದಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಜಮ್ಮು ಜಿಲ್ಲೆಯ ಲಾಲಿಯಾನ ಗ್ರಾಮದಲ್ಲಿ ಸ್ಫೋಟ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ … Continued

ಗ್ರಾಹಕರಿಗೆ ಎಸ್‌ಬಿಐ ಮುನ್ನೆಚ್ಚರಿಕೆ: ಈ ಸಂಖ್ಯೆಗಳಿಂದ ಫೋನ್‌ ಕರೆ-ಮೆಸೇಜ್‌ ಬಂದರೆ ಪ್ರತಿಕ್ರಿಯೆ ನೀಡಲು ಹೋಗಬೇಡಿ

ನವದೆಹಲಿ: ಹಣ ವಂಚನೆ ಬಗೆಗಿನ ಇತ್ತೀಚಿನ ಎಚ್ಚರಿಕೆಯಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗೆ ಎರಡು ಸಂಖ್ಯೆಗಳಿಂದ ಫೋನ್‌ ಕರೆಗಳನ್ನು ತೆಗೆದುಕೊಳ್ಳದಂತೆ ಎಚ್ಚರಿಕೆ ನೀಡಿದೆ. KYC (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಹೆಸರಿನಲ್ಲಿ “ಈ ಲಿಂಕ್ ಅನ್ನು ಕ್ಲಿಕ್ ಮಾಡಿ” ಎಂದು ವಂಚಕರು ಬಳಕೆದಾರರನ್ನು ಮನವೊಲಿಸುತ್ತಿದ್ದಾರೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಟ್ವೀಟ್ … Continued