ಸಂಸ್ಕೃತ ಎಂಎಯಲ್ಲಿ ಐದು ಚಿನ್ನದ ಪದಕಗಳನ್ನು ಬಾಚಿಕೊಂಡ ಮುಸ್ಲಿಂ ವಿದ್ಯಾರ್ಥಿನಿ..!

ಲಕ್ನೋ ವಿಶ್ವವಿದ್ಯಾನಿಲಯದಲ್ಲಿ (LU) ಮುಸ್ಲಿಂ ಹುಡುಗಿ ಸಂಸ್ಕೃತದಲ್ಲಿ ಎಂಎಯಲ್ಲಿ ಐದು  ಚಿನ್ನದ ಪದಕಗಳನ್ನು ಪಡೆದಿದ್ದಾರೆ. ನವೆಂಬರ್‌ನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಗಜಾಲಾ ಅವರ ಹೆಸರನ್ನು ಘೋಷಿಸಲಾಯಿತು, ಆದರೆ ಕೋವಿಡ್ -19 ಕಾರಣ, ಸಮಾರಂಭದಲ್ಲಿ ಅದನ್ನು ಪ್ರದಾನ ಮಾಡಲು ಸಾಧ್ಯವಾಗಿರಲಿಲ್ಲ.. ಗುರುವಾರ, ಅಧ್ಯಾಪಕರ ಮಟ್ಟದ ಪದಕ ವಿತರಣಾ ಸಮಾರಂಭದಲ್ಲಿ ಡೀನ್ ಆರ್ಟ್ಸ್ ಪ್ರೊ.ಶಶಿ ಶುಕ್ಲಾ ಅವರು ಗಜಾಲಾ … Continued

ಹಿಜಾಬ್ ವಿವಾದ: ‘ಇದನ್ನು ರಾಷ್ಟ್ರೀಯ ವಿಷಯವನ್ನಾಗಿ ಮಾಡಬೇಡಿ’, ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಕರ್ನಾಟಕ ಹೈಕೋರ್ಟ್‌ ನ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಸೂಕ್ತ ಸಮಯದಲ್ಲಿ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕರ್ನಾಟಕದಲ್ಲಿ ಏನಾಗುತ್ತಿದೆ ಮತ್ತು ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದನ್ನು ರಾಷ್ಟ್ರೀಯ ಮಟ್ಟದ ವಿಷಯವನ್ನಾಗಿ … Continued

ಹಿಜಾಬ್ ನಿಷೇಧ: ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ

ನವದೆಹಲಿ: ಕೋರ್ಟ್‌ನಲ್ಲಿ ವಿಷಯ ಬಾಕಿ ಇರುವವರೆಗೆ ವಿದ್ಯಾರ್ಥಿಗಳು ಹಿಜಾಬ್ ಅಥವಾ ಯಾವುದೇ ಧಾರ್ಮಿಕ ಉಡುಗೆ ತೊಡದಂತೆ ನಿರ್ಬಂಧ ಹೇರಿರುವ ಕರ್ನಾಟಕ ಹೈಕೋರ್ಟ್‌ನ ನಿರ್ದೇಶನದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ವರದಿ ಪ್ರಕಾರ, ಮೇಲ್ಮನವಿ ಸಲ್ಲಿಸಿದ ಮಸೀದಿ ಮದಾರೀಸ್ ಮತ್ತು ವಕ್ಫ್ ಸಂಸ್ಥೆಗಳ ಡಾ.ಜೆ.ಹಳ್ಳಿ ಫೆಡರೇಶನ್, ಕರ್ನಾಟಕ … Continued

ಭಾರತದಲ್ಲಿ ಹೊಸದಾಗಿ 58,077 ಹೊಸ ಕೋವಿಡ್ ಪ್ರಕರಣಗಳು ದಾಖಲು..ಇದು ನಿನ್ನೆಗಿಂತ 13.4% ಕಡಿಮೆ

ನವದೆಹಲಿ: ಭಾರತವು ಶುಕ್ರವಾರ 58,077 ಹೊಸ ಕೋವಿಡ್ -19 ಸೋಂಕುಗಳನ್ನು ವರದಿ ಮಾಡಿದೆ, ಇದು ನಿನ್ನೆಗಿಂತ 13.4 ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಾಹಿತಿ ಹಂಚಿಕೊಂಡಿದೆ. ಇದು ದೇಶದ ಒಟ್ಟು ಪ್ರಕರಣವನ್ನು 4,25,36,137ಕ್ಕೆ ಒಯ್ದಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 1,50,407 ರೋಗಿಗಳು ಚೇತರಿಸಿಕೊಂಡಿದ್ದಾರೆ.ದೇಶಾದ್ಯಂತ ಒಟ್ಟು 4,13,31,158 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ … Continued

ಹಿಂದೂಗಳಲ್ಲದವರಿಗೆ ದೇವಸ್ಥಾನ ನಿಷೇಧ ಕೋರಿದ್ದ ಅರ್ಜಿ ವಿಚಾರಣೆ: ಮದ್ರಾಸ್ ಹೈಕೋರ್ಟ್ ತೀಕ್ಷ್ಣ ಪ್ರತಿಕ್ರಿಯೆ

ಚಹೆನ್ನೈ: ತಮಿಳುನಾಡಿನ ದೇವಾಲಯಗಳಿಗೆ ಹಿಂದೂಗಳಲ್ಲದವರು ಪ್ರವೇಶ ನೀಡದಂತೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಯ ಸಂದರ್ಭದಲ್ಲಿ ಮದ್ರಾಸ್ ಹೈಕೋರ್ಟ್ ಶುಕ್ರವಾರ ಕೆಲ ತೀಕ್ಷ್ಣ ಅವಲೋಕನಗಳನ್ನು ಮಾಡಿದೆ. ಧರ್ಮದ ಆಧಾರದಲ್ಲಿ ದೇಶ ಒಡೆಯುವ ಯತ್ನಗಳು ನಡೆಯುತ್ತಿವೆ ಎಂಬುದನ್ನು ಇತ್ತೀಚಿನ ಘಟನೆಗಳು ತೋರಿಸುತ್ತಿವೆ ಎಂದು ಮುಖ್ಯ ನ್ಯಾಯಮೂರ್ತಿ ಎಂ. ಎನ್. ಭಂಡಾರಿ … Continued

ಉತ್ತರಪ್ರದೇಶ ಚುನಾವಣೆ: ಮೊದಲ ಹಂತದ ಮತದಾನದಲ್ಲಿ ಸಂಜೆ 6ರ ವರೆಗೆ ಶೇ.59ರಷ್ಟು ಮತದಾನ

ನವದೆಹಲಿ: 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಮೊದಲ ಹಂತದಲ್ಲಿ 11 ಜಿಲ್ಲೆಗಳ 58 ಸ್ಥಾನಗಳಲ್ಲಿ 73 ಮಹಿಳೆಯರು ಸೇರಿದಂತೆ ಒಟ್ಟು 623 ಅಭ್ಯರ್ಥಿಗಳು ಕಣದಲ್ಲಿದ್ದರು. ಗುರುವಾರ ಸಂಜೆ 6 ಗಂಟೆ ವರೆಗೆ ಬಂದ ಮಾಹಿತಿ ಪ್ರಕಾರ ಅಂದಾಜು ಶೇ.58.77ರಷ್ಟು ಮತದಾನವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ತಿಳಿಸಿದೆ. … Continued

ಅಟಲ್ ಸುರಂಗವು ‘10,000 ಅಡಿಗಳ ಮೇಲಿನ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ’: ಪ್ರಮಾಣೀಕರಿಸಿದ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್

ನವದೆಹಲಿ: ಬುಧವಾರ ನವದೆಹಲಿಯಲ್ಲಿ ನಡೆದ ಐತಿಹಾಸಿಕ ಸಮಾರಂಭದಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಅಟಲ್ ಸುರಂಗವನ್ನು ‘10,000 ಅಡಿ ಎತ್ತರದ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ’ ಎಂದು ಪ್ರಮಾಣೀಕರಿಸಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಿಸಿದೆ. ಮನಾಲಿಯನ್ನು ಲಾಹೌಲ್-ಸ್ಪಿತಿಗೆ ಸಂಪರ್ಕಿಸುವ ಈ ಎಂಜಿನಿಯರಿಂಗ್ ಅದ್ಭುತವನ್ನು ನಿರ್ಮಿಸುವಲ್ಲಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ನ ಅನುಕರಣೀಯ ಕಾರ್ಯಕ್ಷಮತೆಯನ್ನು … Continued

ಮಣಿಪುರ ವಿಧಾನಸಭಾ ಚುನಾವಣಾ ದಿನಾಂಕ ಬದಲಾವಣೆ

ನವದೆಹಲಿ: ಚುನಾವಣಾ ಆಯೋಗವು ಮಣಿಪುರ ವಿಧಾನಸಭಾ ಚುನಾವಣೆಯ ಮತದಾನದ ದಿನಾಂಕವನ್ನು ಬದಲಾವಣೆ ಮಾಡಿದೆ. ಮೊದಲ ಹಂತದ ಮತದಾನ ಫೆಬ್ರವರಿ 27ಕ್ಕೆ ಬದಲಾಗಿ ಫೆಬ್ರವರಿ 28ರಂದು ನಡೆಯಲಿದೆ. ಎರಡನೇ ಹಂತದ ಮತದಾನ ಮಾರ್ಚ್ 3ರ ಬದಲು ಮಾರ್ಚ್ 5ರಂದು ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ. ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಮುಂಬರುವ ಚುನಾವಣೆಗೆ ಇಂಫಾಲ್ … Continued

ಲಖಿಂಪುರ ಖೇರಿ ಘಟನೆ: ಕೇಂದ್ರ ಸಚಿವ ಅಜಯ್ ಮಿಶ್ರಾ ಮಗನಿಗೆ ಜಾಮೀನು

ಅಲಹಾಬಾದ್‌: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಕಳೆದ ವರ್ಷ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆ ವೇಳೆ ರೈತರ ಮೇಲೆ ಕಾರು ಹಾಯಿಸಿ ಕೊಂದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ ಅವರ ಮಗ ಆಶೀಶ್ ಮಿಶ್ರಾ ಅವರಿಗೆ ಹೈಕೋರ್ಟ್‌ ಜಾಮೀನು ನೀಡಿದೆ. ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಮುಖ್ಯ ಆರೋಪಿ ಆಶಿಶ್ … Continued

ಯುವಕರಿಗೆ ಸ್ಫೂರ್ತಿ: ಮಾಜಿ ಡಬ್ಲ್ಯುಡಬ್ಲ್ಯುಇ ಸ್ಟಾರ್ ದಿ ಗ್ರೇಟ್ ಖಲಿ ಬಿಜೆಪಿಗೆ ಸೇರ್ಪಡೆ

ನವದೆಹಲಿ: ದಿ ಗ್ರೇಟ್ ಖಲಿ ಎಂದು ಖ್ಯಾತರಾಗಿರುವ ವೃತ್ತಿಪರ ಕುಸ್ತಿಪಟು ಮತ್ತು ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (ಡಬ್ಲ್ಯುಡಬ್ಲ್ಯುಇ) ಸ್ಟಾರ್ ದಿಲೀಪ್ ಸಿಂಗ್ ರಾಣಾ ಗುರುವಾರ ಬಿಜೆಪಿಗೆ ಸೇರಿದ್ದಾರೆ. ಖಲಿ ಅವರು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಗೆ ಮುಂಜಾನೆ ತಲುಪಿದರು ಮತ್ತು ಮಧ್ಯಾಹ್ನ 1 ಗಂಟೆಗೆ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಅವರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು. ದಿ ಗ್ರೇಟ್ … Continued