ವೀಡಿಯೊ… | ಕೆನಡಾದಲ್ಲಿ ಖಲಿಸ್ತಾನಿಗಳ ಅಟ್ಟಹಾಸ : ದೀಪಾವಳಿ ಆಚರಿಸುತ್ತಿದ್ದ ಹಿಂದೂಗಳ ಮೇಲೆ ಕಲ್ಲು ತೂರಾಟ

ಕೆನಡಾದಲ್ಲಿ ಖಲಿಸ್ತಾನಿ (Khalistan) ಸಂಘಟನೆಗಳು ದೀಪಾವಳಿ ಆಚರಣೆ ವೇಳೆ ಅಟ್ಟಹಾಸ ಮೆರೆದಿದ್ದಾರೆ.
ಕೆನಡಾದ ಕ್ವಿಬೆಕ್ ಪ್ರಾಂತ್ಯದ ಬ್ರಾಂಪ್ಟನ್ ಬರೋದಲ್ಲಿ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಖಲಿಸ್ತಾನ್ ಪರ ಗುಂಪುಗಳು ಹಿಂದೂಗಳ ಮೇಲೆ ಕಲ್ಲು ತೂರಾಟ ನಡೆಸಿವೆ.
ಖಲಿಸ್ತಾನ್ ಧ್ವಜಗಳನ್ನು ಹೊತ್ತಿದ್ದ ಗುಂಪುಗಳು ದೀಪಾವಳಿಯನ್ನು ಆಚರಿಸುವ ಜನರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಭಾರತೀಯ ಸಮುದಾಯದ ಜನರೊಂದಿಗೆ ಅಗೌರವದಿಂದ ವರ್ತಿಸಿದ್ದಾರೆ. ಅದಾಗ್ಯೂ ಕಲ್ಲು ತೂರಾಟ ನಡೆಸಿದವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಕೆನಡಾ ಪೊಲೀಸ್ ಸಿಬ್ಬಂದಿ ಇದನ್ನು ಹಿಂದೂಗಳು ಮತ್ತು ಸಿಖ್ಖರ ನಡುವಿನ ‘ಆಂತರಿಕ ಹೋರಾಟ’ ಎಂದು ಹೇಳಿದ್ದಾರೆ. ಭಾರತೀಯ ಸರ್ಕಾರಿ ಅಧಿಕಾರಿಯೊಬ್ಬರು, “ಹಬ್ಬ ಹರಿದಿನಗಳಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಸುವುದು ನಿಜಕ್ಕೂ ಆಘಾತಕಾರಿ. ಟ್ರೂಡೊ ಆಡಳಿತವು ಖಲಿಸ್ತಾನಿಗಳ ಪ್ರತಿಯೊಂದು ತಪ್ಪಿಗೂ ಮೂಕ ಪ್ರೇಕ್ಷಕರಾಗಿದೆ. ನಾವು ಅಧಿಕೃತ ಮಾರ್ಗಗಳ ಮೂಲಕ ಈ ವಿಷಯವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಆರೋಪಗಳನ್ನು ಭಾರತವು “ಅಸಂಬದ್ಧ” ಮತ್ತು “ಪ್ರೇರಿತ” ಎಂದು ತಿರಸ್ಕರಿಸಿತು. ಅದರ ನಂತರ ಉಭಯ ದೇಶಗಳ ನಡುವಿನ ಸಂಬಂಧವು ಹದಗೆಟ್ಟಿದೆ.

ಖಲಿಸ್ತಾನಿಗಳಿಂದ 2022 ರಲ್ಲಿ ದೀಪಾವಳಿ ಆಚರಣೆಯ ಮೇಲೆಯೂ ದಾಳಿ ನಡೆದಿತ್ತು….
ಅಕ್ಟೋಬರ್ 2022 ರಲ್ಲಿ, ಮಿಸಿಸೌಗಾದಲ್ಲಿ ಇದೇ ರೀತಿಯ ಘಟನೆ ವರದಿಯಾಗಿತ್ತು. ಈ ಹೋರಾಟದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಖಲಿಸ್ತಾನ್ ಬೆಂಬಲಿಗರ ಗುಂಪು ಭಾರತೀಯರೊಂದಿಗೆ ಘರ್ಷಣೆ ನಡೆಸುತ್ತಿರುವುದು ಕಂಡುಬಂದಿದೆ. ನೂರಾರು ಜನರು ಮುಖಾಮುಖಿ ಮತ್ತು ಘೋಷಣೆ ಕೂಗಿದರು.
ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಜನಸಂದಣಿಯನ್ನು ದೂರವಿಡಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಖಲಿಸ್ತಾನ್ ಜನಾಭಿಪ್ರಾಯ ಬೆಂಬಲಿಗರು ಎಂದು ಕರೆಯಲ್ಪಡುವ ಗುಂಪು ಬ್ಯಾನರ್‌ಗಳನ್ನು ಹಿಡಿದು ‘ರಾಜ್ ಕರೇಗಾ ಖಾಲ್ಸಾ’ ಎಂಬ ಘೋಷಣೆಗಳನ್ನುಕೂಗುತ್ತಿದ್ದರು, ಮತ್ತು ಇತರ ಗುಂಪು ಭಾರತೀಯರು ‘ಖಲಿಸ್ತಾನ್ ಮುರ್ದಾಬಾದ್’ ಘೋಷಣೆಗಳನ್ನು ಕೂಗುತ್ತಿದ್ದರು. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ವೆಸ್ಟ್‌ವುಡ್ ಮಾಲ್‌ನ ಪಾರ್ಕಿಂಗ್ ಸ್ಥಳದಲ್ಲಿ ಪಟಾಕಿಗಳನ್ನು ಸುಡಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement