ಮೆಲ್ಬೋರ್ನ್: ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದ ಕ್ರಿಕೆಟ್ ಅಭ್ಯಾಸದ ವೇಳೆ ಚೆಂಡು ಬಡಿದ ಪರಿಣಾಮ ಬೆನ್ ಆಸ್ಟಿನ್ (17) ಎಂಬ ಯುವ ಕ್ರಿಕೆಟಿಗ ಕುತ್ತಿಗೆಗೆ ಚೆಂಡು ಬಡಿದು ಮೃತಪಟ್ಟಿದ್ದಾರೆ.
ಮಂಗಳವಾರ ಫೆರ್ನ್‌ಟ್ರೀ ಗಲ್ಲಿಯಲ್ಲಿ ಕ್ರಿಕೆಟ್ ನೆಟ್‌ನಲ್ಲಿ ಹೆಲ್ಮೆಟ್ ಧರಿಸಿ ನೆಕ್ ಗಾರ್ಡ್ ಇಲ್ಲದೆ ತರಬೇತಿ ಪಡೆಯುತ್ತಿದ್ದ “ವಾಂಗರ್” ಎಂದು ಕರೆಯಲ್ಪಡುವ 17 ವರ್ಷದ ಬೆನ್ ಆಸ್ಟಿನ್, ಎಸೆದ ಚೆಂಡು ಕುತ್ತಿಗೆಗೆ ಬಡಿದ ನಂತರ ಉಂಟಾದ ಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಫರ್ನ್‌ಟ್ರೀ ಗಲ್ಲಿ (Ferntree Gully)ಯಲ್ಲಿರುವ ಕ್ರಿಕೆಟ್ ನೆಟ್ಸ್‌ನಲ್ಲಿ ಮಂಗಳವಾರ ಸಂಜೆ 5:00 ಗಂಟೆಗೆ (ಸ್ಥಳೀಯ ಸಮಯ) ಈ ಘಟನೆ ನಡೆದಿದೆ. ಅವರು ಹೆಲ್ಮೆಟ್ ಧರಿಸಿದ್ದರೂ, ಕುತ್ತಿಗೆ ಗಾರ್ಡ್ (neck guard) ಧರಿಸಿರಲಿಲ್ಲ.
ತಕ್ಷಣವೇ ತುರ್ತು ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ, ಗಂಭೀರ ಸ್ಥಿತಿಯಲ್ಲಿದ್ದ ಬೆನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಅವರಿಗೆ ಜೀವ ಬೆಂಬಲ ವ್ಯವಸ್ಥೆ (life support) ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಗುರುವಾರ ನಿಧನರಾದರು.
ಬೆನ್ ಅವರ ತಂದೆ ಜೇಸ್ ಆಸ್ಟಿನ್ ಅವರು, ತಮ್ಮ ಮಗನ ಸಾವಿನಿಂದ ಇಡೀ ಕುಟುಂಬವು “ಅತ್ಯಂತ ದುಃಖಿತವಾಗಿದೆ” ಎಂದು ಹೇಳಿದ್ದಾರೆ. “ನಮ್ಮ ಪಾಲಿಗೆ, ಬೆನ್ ಪ್ರೀತಿಯ ಮಗ, ಕೂಪರ್ ಮತ್ತು ಝಾಕ್‌ಗೆ ಪ್ರೀತಿಯ ಸಹೋದರ ಮತ್ತು ನಮ್ಮ ಕುಟುಂಬದ ಹಾಗೂ ಸ್ನೇಹಿತರ ಜೀವನದಲ್ಲಿ ಒಂದು ಪ್ರಜ್ವಲಿಸುವ ಬೆಳಕಾಗಿದ್ದನು. ಈ ದುರಂತ ಬೆನ್ ಅವರನ್ನು ನಮ್ಮಿಂದ ಕಸಿದುಕೊಂಡಿದೆ. ಸ್ನೇಹಿತರೊಂದಿಗೆ ನೆಟ್ಸ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದ ಎಂದು ಜೇಸ್ ಆಸ್ಟಿನ್ ಹೇಳಿದ್ದಾರೆ.
ಈ ಘಟನೆಯ 10 ವರ್ಷಗಳ ಹಿಂದೆ ಫಿಲ್ ಹ್ಯೂಸ್ (Phil Hughes) ಅವರಿಗೆ ಆದ ರೀತಿಯಲ್ಲೇ ಕುತ್ತಿಗೆಗೆ ಚೆಂಡು ಬಡಿದು ಸಾವು ಸಂಭವಿಸಿತ್ತು” ಎಂದು ಕಮ್ಮಿನ್ಸ್ ಅವರು ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ABC)ಗೆ ತಿಳಿಸಿದ್ದಾರೆ.
2014 ರಲ್ಲಿ ಆಸ್ಟ್ರೇಲಿಯಾದ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಅವರು ಶೆಫೀಲ್ಡ್ ಶೀಲ್ಡ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಕುತ್ತಿಗೆಗೆ ಚೆಂಡು ಬಡಿದು ನಿಧನರಾಗಿದ್ದರು. ಅವರ ಸಾವಿನ ನಂತರ ಕ್ರೀಡೆಯಲ್ಲಿ ಸುರಕ್ಷತಾ ಸಾಧನಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ