ಕ್ರಿಕೆಟ್‌ ಪಂದ್ಯ | ಸಿಕ್ಸರ್‌ ಹೊಡೆದ ತಕ್ಷಣ ಪಿಚ್‌ ಮೇಲೆ ಕುಸಿದುಬಿದ್ದು ಬ್ಯಾಟರ್‌ ಸಾವು : ದೃಶ್ಯ ವೀಡಿಯೊದಲ್ಲಿ ಸೆರೆ

ಕ್ರಿಕೆಟ್ ಪಂದ್ಯವೊಂದರಲ್ಲಿ ಸಿಕ್ಸರ್ ಹೊಡೆದ ತಕ್ಷಣ ಬ್ಯಾಟ್ಸ್‌ಮನ್ ಸಾವಿಗೀಡಾದ ಹೃದಯವಿದ್ರಾವಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಪಂಜಾಬಿನ ಫಿರೋಜ್‌ಪುರದಲ್ಲಿ ನಡೆದ ಕ್ರಿಕೆಟ್ ಪಂದ್ಯದ ಸಮಯದಲ್ಲಿ, ಬ್ಯಾಟರ್‌ ಸಿಕ್ಸರ್‌ ಹೊಡೆದ ನಂತರ ಇದ್ದಕ್ಕಿದ್ದಂತೆ ಮೈದಾನದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಫಿರೋಜ್‌ಪುರದ ಡಿಎವಿ (DAV) ಶಾಲಾ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ಆಡುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ವೀಡಿಯೊದಲ್ಲಿ ಬ್ಯಾಟ್ಸ್‌ಮನ್ ಬೌಲಿಂಗ್‌ನಲ್ಲಿ ಸಿಕ್ಸರ್‌ ಹೊಡೆಯುವುದನ್ನು ತೋರಿಸಲಾಗಿದೆ. ಆದರೆ ಸಿಕ್ಸರ್‌ ಹೊಡೆದ ನಂತರ ಪಿಚ್‌ನಲ್ಲಿ ನಡೆದುಕೊಂಡು ಹೋದ ಬ್ಯಾಟರ್‌ ಪಿಚ್‌ ಮಧ್ಯಕ್ಕೆ ನಡೆದು ಬರುತ್ತಿದ್ದಂತೆ, ಮೊಣಕಾಲುಗಳ ಮೇಲೆ ಕುಳಿತಿದ್ದು, ತೀವ್ರ ಅಸ್ವಸ್ಥತೆ ಅನುಭವಿಸಿದರು. ಕೆಲವೇ ಕ್ಷಣದ ನಂತರ ಅವರು ಕೆಳಕ್ಕೆ ಕುದಿಬಿದ್ದು ಪ್ರಜ್ಞೆ ತಪ್ಪಿದ್ದಾರೆ.

ಇದನ್ನು ನೋಡಿ ತಕ್ಷಣವೇ ಓಡಿಬಂದ ಇತರ ಆಟಗಾರರು ಸಿಪಿಆರ್ ಮಾಡಲು ಪ್ರಯತ್ನಿಸಿದರು. ಆದರೂ ಅವರು ಅವರು ಚೇತರಿಸಿಕೊಳ್ಳಲಿಲ್ಲ ಮತ್ತು ಅವರು ಹೃದಯಾಘಾತದಿಂದ ತಕ್ಷಣವೇ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಬ್ಯಾಟರ್‌ ಫಿರೋಜಪುರದ ಹರ್ಜೀತ್ ಸಿಂಗ್ ಎಂದು ಗುರುತಿಸಲಾಗಿದೆ. ಹೃದಯಾಘಾತಕ್ಕೂ ಮುನ್ನ ಹರ್ಜೀತ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದು 49 ರನ್ ಕಲೆಹಾಕಿದ್ದರು. ಅದರೆ ಅವರ ಅರ್ಧಶತಕವನ್ನು ಪೂರೈಸುವ ಮುನ್ನವೇ ಹೃದಯಾಘಾತವಾಗಿ ಕುಸಿದುಬಿದ್ದಿದ್ದಾರೆ.

2024 ರಲ್ಲಿ ಇದೇ ರೀತಿಯ ಘಟನೆಯಲ್ಲಿ, ಪುಣೆಯ ಗರ್ವಾರೆ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ಆಡುವಾಗ 35 ವರ್ಷದ ಕ್ರಿಕೆಟಿಗ ಹೃದಯಾಘಾತದಿಂದ ನಿಧನರಾಗಿದ್ದರು. ಇಮ್ರಾನ್ ಪಟೇಲ್ ಎಂಬ ಆಟಗಾರ ಆರಂಭಿಕ ಆಟಗಾರನಾಗಿ ಬ್ಯಾಟಿಂಗ್ ಮಾಡಲು ಬಂದರು ಮತ್ತು ಮೈದಾನದಲ್ಲಿ ಸ್ವಲ್ಪ ಸಮಯ ಕಳೆದ ನಂತರ ಎದೆ ಮತ್ತು ತೋಳಿನ ನೋವಿನಿಂದ ತೊಂದರೆ ಅನುಭವಿಸಿದರು.
ಅವರು ಈ ವಿಷಯದ ಬಗ್ಗೆ ಮೈದಾನದಲ್ಲಿರುವ ಅಂಪೈರ್‌ಗಳಿಗೆ ಮಾಹಿತಿ ನೀಡಿದರು ಮತ್ತು ಮೈದಾನದಿಂದ ಹೊರಹೋಗಲು ಅನುಮತಿ ನೀಡಲಾಯಿತು. ಆದಾಗ್ಯೂ, ಪೆವಿಲಿಯನ್‌ಗೆ ಹಿಂತಿರುಗುವಾಗ, ಇಮ್ರಾನ್ ಕುಸಿದು ಬಿದ್ದಿದ್ದರು. ಇಮ್ರಾನ್ ಕುಸಿದು ಬೀಳುತ್ತಿದ್ದಂತೆ, ಮೈದಾನದಲ್ಲಿದ್ದ ಇತರ ಆಟಗಾರರು ಅವರ ಕಡೆಗೆ ಧಾವಿಸಿದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರ ಮೌಲ್ಯಮಾಪನದ ನಂತರ, ಇಮ್ರಾನ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಪ್ರಮುಖ ಸುದ್ದಿ :-   ಖ್ಯಾತ ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ; ಬೈಕ್‌ನಲ್ಲಿ ಬಂದಿದ್ದ ಮೂವರು ಆರೋಪಿಗಳು ಪರಾರಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement