ನಗದು ದೊರೆತಿಲ್ಲ, ಇದು ನನ್ನನ್ನು ಸಿಲುಕಿಸಲು ಪಿತೂರಿ: ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ ವರ್ಮಾ

ನವದೆಹಲಿ: ಬೆಂಕಿ ಆಕಸ್ಮಿಕಕ್ಕೆ ತುತ್ತಾದ ದೆಹಲಿಯ ತಮ್ಮ ಮನೆಯಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ ಎಂಬ ಆರೋಪ ತಮ್ಮ ಮೇಲೆ ಸುಳ್ಳು ಆಪಾದನೆ ಮತ್ತು ಅಪಪ್ರಚಾರದ ಪಿತೂರಿಯ ಭಾಗ ಎಂದು ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ ವರ್ಮಾ ಹೇಳಿದ್ದಾರೆ.
ತನಿಖೆಗಾಗಿ ವಿವಿಧ ಹೈಕೋರ್ಟ್‌ಗಳ ಮೂವರು ನ್ಯಾಯಮೂರ್ತಿಗಳನ್ನು ನೇಮಿಸಲಾಗಿದ್ದು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸಲ್ಲಿಸಿದ ವರದಿ ಬಿಡುಗಡೆ ಮಾಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ಪ್ರತಿಕ್ರಿಯೆಯೆಯ್ನೂ ಪ್ರಕಟಿಸಿದೆ.
ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಅವರಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ನ್ಯಾಯಮೂರ್ತಿ ವರ್ಮಾ ಅವರು, ʼಬೆಂಕಿ ಕಾಣಿಸಿಕೊಂಡಿದ್ದು ಮುಖ್ಯ ನಿವಾಸದ ಕಟ್ಟಡದಲ್ಲಿ ಅಲ್ಲ. ಬಳಕೆಯಲ್ಲಿಲ್ಲದ ಗೃಹೋಪಯೋಗಿ ವಸ್ತುಗಳನ್ನು ಇಡಲಾಗುತ್ತಿದ್ದ ಮನೆಯ ಆವರಣದಲ್ಲಿರುವ ಔಟ್‌ಹೌಸ್‌ನಲ್ಲಿ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ 14 ರ ಸಂಜೆ ನ್ಯಾಯಮೂರ್ತಿ ವರ್ಮಾ ಅವರ ಮನೆಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿತ್ತು. ಬೆಂಕಿ ನಂದಿಸಲು ಹೋದ ಅಗ್ನಿಶಾಮಕ ಸಿಬ್ಬಂದಿಗೆ ಅವರ ಮನೆಯಲ್ಲಿ ಅಪಾರ ಪ್ರಮಾಣದ ನಗದು ದೊರೆತಿದೆ ಎಂಬ ಆರೋಪ ಕೇಳಿ ಬಂದಿತ್ತು.
ಆರೋಪಗಳ ಬಗ್ಗೆ ಸಿಜೆಐ ಆಂತರಿಕ ತನಿಖೆ ಕೂಡ ಪ್ರಾರಂಭಿಸಿದರು, ಅದರ ಪ್ರಕಾರ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಅವರು ನ್ಯಾ. ವರ್ಮಾ ಅವರಿಂದ ವಿವರಣೆ ಕೇಳಿದ್ದರು.
ನಾನು ಅಥವಾ ನನ್ನ ಕುಟುಂಬದ ಸದಸ್ಯರು ಆ ಸ್ಟೋರ್ ರೂಂನಲ್ಲಿ ಯಾವುದೇ ಹಣವನ್ನು ಇಟ್ಟಿಲ್ಲ ಎಂದು ನಿಸ್ಸಂದಿಗ್ಧವಾಗಿ ಹೇಳುತ್ತೇನೆ. ಜೊತೆಗೆ ದೊರೆತಿದೆ ಎನ್ನಲಾದ ನಗದು ನಮಗೆ ಸೇರಿದ್ದು ಎಂಬ ವಾದವನ್ನು ಬಲವಾಗಿ ಖಂಡಿಸುತ್ತೇನೆ ಎಂದು ನ್ಯಾಯಮೂರ್ತಿ ವರ್ಮಾ ಹೇಳಿದ್ದಾರೆ.

ಆ ನಗದು ನಮ್ಮ ಬಳಿ ಇದೆ ಅಥವಾ ಸಂಗ್ರಹಿಸಿದ್ದೇವೆ ಎಂಬ ಕಲ್ಪನೆಯೇ ಸಂಪೂರ್ಣ ಅಸಂಬದ್ಧ. ಸಿಬ್ಬಂದಿ ವಸತಿ ಗೃಹದ ಬಳಿ ಅಥವಾ ಮುಕ್ತವಾಗಿ ಪ್ರವೇಶಿಸಬಹುದಾದ ಸ್ಟೋರ್‌ ರೂಂನಲ್ಲಿ ಹಣ ಸಂಗ್ರಹಿಸಿಡಲಾಗಿದೆ ಎಂಬ ಆರೋಪ ನಂಬಲರ್ಹವಾದುದಲ್ಲ. ಔಟ್‌ ಹೌಸ್‌ ನನ್ನ ಮನೆಯಿಂದ ಸಂಪೂರ್ಣ ಬೇರೆ ಇರುವ ಕೋಣೆ. ಜೊತೆಗೆ ಔಟ್‌ ಹೌಸ್‌ ಮತ್ತು ನನ್ನ ವಾಸಸ್ಥಳವನ್ನು ಪ್ರತ್ಯೇಕಿಸುವ ಕಾಂಪೌಂಡ್‌ ಇದೆ.
ಮಾರ್ಚ್ 14 ರಂದು ರಾತ್ರಿ ಬೆಂಕಿ ಕಾಣಿಸಿಕೊಂಡಾಗ ತಾವು ಮತ್ತು ತಮ್ಮ ಪತ್ನಿ ಮನೆಯಲ್ಲಿ ಇರಲಿಲ್ಲ, ಮತ್ತು ತಮ್ಮ ಮಗಳು ಮತ್ತು ವಯಸ್ಸಾದ ತಾಯಿ ಮಾತ್ರ ಅಲ್ಲಿದ್ದರು ಎಂದು ನ್ಯಾಯಮೂರ್ತಿ ವರ್ಮಾ ಹೇಳಿದ್ದಾರೆ. ತಮ್ಮ ಪುತ್ರಿ ಹಾಗೂ ಖಾಸಗಿ ಕಾರ್ಯದರ್ಶಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಬಳಕೆಯಾಗದ ಪೀಠೋಪಕರಣಗಳು, ಬಾಟಲಿಗಳು, ಪಾತ್ರೆಗಳು, ಹಾಸಿಗೆಗಳು, ಬಳಸಿದ ಕಾರ್ಪೆಟ್‌ಗಳು, ಹಳೆಯ ಸ್ಪೀಕರ್‌ಗಳು, ಗಾರ್ಡನ್ ಉಪಕರಣಗಳು ಮತ್ತು ಸಿಪಿಡಬ್ಲ್ಯೂಡಿ ವಸ್ತುಗಳನ್ನು ಸಂಗ್ರಹಿಸಲು ಈ ಕೊಠಡಿಯನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ಈ ಕೊಠಡಿಗೆ ಬೀಗ ಹಾಕಿರುವುದಿಲ್ಲ. ಮತ್ತು ಅಧಿಕೃತ ಮುಂಭಾಗದ ಗೇಟ್‌ನಿಂದ ಮತ್ತು ಸಿಬ್ಬಂದಿ ಕ್ವಾರ್ಟರ್ಸ್ಗಳ ಹಿಂಬಾಗಿಲಿನಿಂದ ಪ್ರವೇಶಿಸಬಹುದು ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿ ಹೋಟೆಲ್‌ನಲ್ಲಿ ಅಗ್ನಿ ಅವಘಡ : 21 ಮಂದಿ ಸಾವು ; ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಧುಮುಕಿದ ಇಬ್ಬರು ಮಹಿಳೆಯರು

ಸ್ಥಳದಲ್ಲಿ ಹಾಜರಿದ್ದ ಯಾರಿಗೂ ನಗದು ಪತ್ತೆಯಾಗಿಲ್ಲ. ಪತ್ತೆಯಾದ ಅಥವಾ ಮುಟ್ಟುಗೋಲು ಹಾಕಿಕೊಂಡ ಸುಟ್ಟು ಹೋದ ನೋಟನ್ನು ಯಾರೂ ಪ್ರದರ್ಶಿಸಿಲ್ಲ.ಪೊಲೀಸ್ ಆಯುಕ್ತರು ಹಂಚಿಕೊಂಡ ವೀಡಿಯೊವನ್ನು ನೋಡಿ ಆಘಾತಕ್ಕೊಳಗಾಗಿದ್ದೇನೆ ಏಕೆಂದರೆ ಅದರಲ್ಲಿ ಚಿತ್ರಿಸಲಾದ ವೀಡಿಯೊ ತಾವು ನೋಡಿದ ಜಾಗದಂತೆ ಕಂಡುಬರುತ್ತಿಲ್ಲ. ಬೆಂಕಿ ಅವಘಡ ಸಂಭವಿಸಿದ ನಂತರ ಸ್ಥಳಕ್ಕೆ ಭೇಟಿ ನೀಡಿದ ಮೊದಲ ವ್ಯಕ್ತಿಗಳಲ್ಲಿ ರಿಜಿಸ್ಟ್ರಾರ್ ಹಾಗೂ ಕಾರ್ಯದರ್ಶಿ ಇದ್ದು ಅವರ ವರದಿಯಲ್ಲಿ ಸ್ಥಳದಲ್ಲಿ ನಗದು ದೊರೆತ ಬಗ್ಗೆ ಉಲ್ಲೇಖವಿಲ್ಲ. ದೆಹಲಿ ಹೈಕೋರ್ಟ್‌ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಪಿಪಿಎಸ್‌ ನಾನು ಮತ್ತು ನನ್ನ ಪೊಲೀಸ್‌ ಅಧಿಕಾರಿ ದಹನಗೊಂಡ ಕೊಠಡಿ ಪರಿಶೀಲಿಸಿದಾಗ ಯಾವುದೇ ನೋಟು ಪತ್ತೆಯಾಗಿಲ್ಲ. ನನಗೆ ನೀಡಲಾದ ವರದಿಯಿಂದಲೂ ಇದು ದೃಢೀಕೃತವಾಗಿದೆ ಎಂದು ನ್ಯಾಯಮೂರ್ತಿ ವರ್ಮಾ ಹೇಳಿದ್ದಾರೆ.

ತಪಾಸಣೆ ಬಳಿಕ ದೆಹಲಿ ಹೈಕೋರ್ಟ್‌ ಸೂಚನೆಯಂತೆ ದಹನಗೊಂಡ ಕೊಠಡಿಯನ್ನು ಯಥಾಸ್ಥಿತಿಯಲ್ಲಿ ಇಡಲಾಗಿದೆ. ನನ್ನ ಮಗಳು, ಪೊಲೀಸ್ ಆಯುಕ್ತರು ಅಥವಾ ಮನೆಯ ಸಿಬ್ಬಂದಿಗೆ ಈ ಸುಟ್ಟುಹೋದ ನೋಟುಗಳ ಚೀಲಗಳನ್ನು ತೋರಿಸಲಾಗಿಲ್ಲ ಎಂದು ನಾವು ಸ್ಪಷ್ಟವಾಗಿ ಹೇಳುತ್ತೇವೆ. ಮನೆಯ ಸ್ಟೋರ್‌ ರೂಮಿನಲ್ಲಿ ಹಣ ಇಡಲಾಗುತ್ತದೆ ಎಂಬ ಆರೋಪ ಸಮ್ಮತವಾದದು ಎಂಬ ಬಗ್ಗೆ ನನಗೆ ಅಚ್ಚರಿ ಇದೆ. ಇದು ನನ್ನ ಮೇಲೆ ಸುಳ್ಳು ಆರೋಪ ಹೊರಿಸಲು ಮತ್ತು ಅಪಪ್ರಚಾರ ಮಾಡಲು ನಡೆಸಲಾದ ಪಿತೂರಿ ಎಂಬುದು ಸ್ಪಷ್ಟ. ಇದು ಇತ್ತೀಚಿನ ದಿನಗಳಲ್ಲಿ ನಡೆಯುತ್ತ ಬಂದಿರುವ ಘಟನೆಗಳ ಭಾಗ. ಡಿಸೆಂಬರ್ 2024ರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಪಿತೂರಿಯ ಸುಳಿವು ನೀಡುತ್ತಿವೆ ಎಂದು ಅವರು ಹೇಳಿದ್ದಾರೆ.
ಸುಟ್ಟ ರೂಪದಲ್ಲಿ ಕರೆನ್ಸಿ ನೋಡಿರುವುದಾಗಿ ನಮ್ಮ ಮನೆಯಲ್ಲಿ ಇರುವವರು ಮಾಹಿತಿ ನೀಡಿಲ್ಲ. ಅಲ್ಲದೆ ಪೊಲೀಸರು ನಗದು ದೊರೆತ ಬಗ್ಗೆ ಅಥವಾ ಅದನ್ನು ಅವರು ವಶಪಡಿಸಿಕೊಂಡ ಬಗ್ಗೆಯಾಗಲಿ ತಮಗೆ ತಿಳಿಸಿಲ್ಲ. ನಾನು ಮತ್ತು ನನ್ನ ಕುಟುಂಬ ನಡೆಸುವ ಹಣದ ವಹಿವಾಟುಗಳಿಗೆ ದಾಖಲೆ ಇರುತ್ತದೆ. ಈ ಘಟನೆ ನ್ಯಾಯಮೂರ್ತಿಯಾಗಿ ತಾನು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ರೂಪಿಸಿಕೊಂಡಿರುವ ವರ್ಚಸ್ಸಿಗೆ ತೀವ್ರ ಧಕ್ಕೆ ತಂದಿದೆ. ಆದ್ದರಿಂದ ನ್ಯಾಯಮೂರ್ತಿಯಾಗಿ ನನ್ನ ಕಾರ್ಯವೈಖರಿಯ ಬಗ್ಗೆ ತನಿಖೆ ನಡೆಸಬೇಕು ಎಂದು ನನ್ನ ಕೋರಿಕೆ ಎಂದು ನ್ಯಾಯಮೂರ್ತಿ ಯಶವಂತ ವರ್ಮಾ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ ಪ್ರಮಾಣ ವಚನ, 13 ಸಚಿವರಿಂದಲೂ ಪ್ರಮಾಣವಚನ ಸ್ವೀಕಾರ

2.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement