ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಕಡಲತೀರದಲ್ಲಿ ನಡೆದ ಅಪರೂಪದ ವಿದ್ಯಮಾನದಲ್ಲಿ, ಇಬ್ಬರು ಯುವಕರು ದಡಕ್ಕೆ ಕೊಚ್ಚಿ ಬಂದಿದ್ದ ಡಾಲ್ಫಿನ್ನ ಜೀವವನ್ನು ಉಳಿಸುವ ಮೂಲಕ ಗಮನ ಸೆಳೆದಿದ್ದಾರೆ.
ಗೋಕರ್ಣದ ಕರಾವಳಿಯಲ್ಲಿರುವ ಸೂರ್ಯ ರೆಸಾರ್ಟ್ ಬಳಿ ಕಡಲತೀರಕ್ಕೆ , ಸುಮಾರು ಐದರಿಂದ ಆರು ಅಡಿ ಉದ್ದದ ಡಾಲ್ಫಿನ್ ಮೀನು ಬಂದಿತ್ತು, ಅದು ನೀರಿನ ಮೇಲೆ ಬಂದ ನಂತರ ಪುನಃ ನೀರಿಗೆ ಹೋಗಲು ಕಷ್ಟಪಡುತ್ತಿತ್ತು. ಅಲೆಗಳ ಒತ್ತಡ ಮತ್ತು ದಡಕ್ಕೆ ಬಂದ ನಂತರ ಉಸಿರಾಟದ ತೊಂದರೆಯನ್ನು ಎದುರಿಸುತ್ತಿತ್ತು.
ಇದನ್ನು ನೋಡಿದ ರೆಸಾರ್ಟ್ ಮಾಲೀಕರಾದ ಯಶವಂತ ಮಹಾಬಲೇಶ್ವರ ಗೌಡ ಮತ್ತು ಮಧು ಗೌಡ ಮಾನವೀಯತೆ ತೋರಿದರು. ಇವರಿಬ್ಬರು ಮೀನಿಗೆ ಸಹಾಯ ಮಾಡಲು ಮುಂದಾದರು. ಸ್ಥಳದಲ್ಲಿದ್ದ ಇತರರ ಸಹಾಯದಿಂದ, ಅವರು ಡಾಲ್ಫಿನ್ ಅನ್ನು ಆಳವಾದ ನೀರಿಗೆ ಯಶಸ್ವಿಯಾಗಿ ತಳ್ಳಿ ಅದನ್ನು ಪಾರು ಮಾಡಿದರು. ಕಡಲತೀರದಲ್ಲಿ ಜಮಾಯಿಸಿದ್ದ ಜನಸಮೂಹ ಯುವಕರ ಪ್ರಯತ್ನವನ್ನು ಶ್ಲಾಘಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ